Search
  • Follow NativePlanet
Share
» »ದೆವ್ವಗಳ ವಾಸಸ್ಥಾನ ಈ ಟಾಪ್ 10 ಭಾರತೀಯ ರಸ್ತೆಗಳು....

ದೆವ್ವಗಳ ವಾಸಸ್ಥಾನ ಈ ಟಾಪ್ 10 ಭಾರತೀಯ ರಸ್ತೆಗಳು....

ದೆವ್ವಗಳ ಅಸ್ತಿತ್ವವಿದೆಯೇ ಎಂದು ಸಂಶಯ ಯಾರಿಗಾದರೂ ಮೂಡುವಂತಹದು. ಆದರೆ ನಮ್ಮ ಪವಿತ್ರವಾದ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿಯೂ ಕೂಡ ದೆವ್ವಗಳ ಬಗ್ಗೆ ಉಲ್ಲೇಖವಿರುವುದನ್ನು ಕಾಣಬಹುದಾಗಿದೆ. ಆದರೆ ಇಂದಿಗೂ ಕೂಡ ದೆವ್ವಗಳು ಇದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಪ್ರೆಶ್ನೆಗಳು ಹಾಗು ಅನುಮಾನಗಳು ಇವೆ. ಆದರೆ ನಮ್ಮ ಭಾರತೀಯ ರಸ್ತೆಯಲ್ಲಿ ಕೆಲವು ದೆವ್ವಗಳು ಜನರನ್ನು ಭಯಭ್ರಾಂತಿಯನ್ನಾಗಿ ಮಾಡುತ್ತಿವೆ ಎಂದು ಗುರುತಿಸಲಾಗುತ್ತಿದೆ.

ನಮ್ಮ ದೇಶದಲ್ಲಿ ಯಾವ ರಹದಾರಿಗಳಲ್ಲಿ ದೆವ್ವಗಳು ಇವೆ ಮತ್ತು ಅದರ ಹಿಂದಿರುವ ಕಥೆಗಳು ಏನು? ಎಂಬುದನ್ನು ಸಂಪೂರ್ಣವಾದ ಮಾಹಿತಿಯನ್ನು ಲೇಖನದ ಮೂಲಕ ತಿಳಿದುಕೊಳ್ಳೋಣ.

ಕಲ್ಕಾ ಸಿಮ್ಲಾ ರೈಲ್ವೆ ಸುರಂಗ

ಕಲ್ಕಾ ಸಿಮ್ಲಾ ರೈಲ್ವೆ ಸುರಂಗ

ಒಂದು ಕಾಲದಲ್ಲಿ ಕಲ್ಕಾ ಮತ್ತು ಸಿಮ್ಲಾ ಮಧ್ಯೆ ಒಂದು ಪ್ರದೇಶದಲ್ಲಿ ರೈಲ್ವೆ ಸುರಂಗ ನಿರ್ಮಾಣ ಮಾಡಲಾಯಿತು. ಆ ನಿರ್ಮಾಣದ ಸಮಯದಲ್ಲಿ ಕೆಲವು ಕಾರ್ಮಿಕರ ಕೈಯಲ್ಲಿ ಕಲೋನೆಲ್ ಬರೋಗ್ ಎಂಬ ವ್ಯಕ್ತಿಯಿಂದ ಸುರಂಗದ ಕೆಲಸವನ್ನು ಪ್ರಾರಂಭ ಮಾಡಿದರು. ಆದರೆ ಆತನ ಬುದ್ಧಿವಂತಿಕೆಗೆ ಸುರಂಗ ಮಾರ್ಗದ ಕೆಲಸವು ಪೂರ್ತಿಯಾಗಲಿಲ್ಲ. ಹೀಗೆ ಹಲವಾರು ಕಾರಣಗಳಿಂದ ಅಲ್ಲಿನ ಕಾರ್ಮಿಕರು ಬರೋಗ್‍ನನ್ನು ಧ್ವೇಷಿಸಲು ಪ್ರಾರಂಭಿಸಿದರು.

ಇದನ್ನು ತಡೆದುಕೊಳ್ಳಲಾರದ ಬರೋಗ್ ಆ ಸುರಂಗ ನಿರ್ಮಾಣದಲ್ಲಿಯೇ ಬೆಂಕಿ ಹಚ್ಚಿಕೊಂಡು ಮೃತನಾಗುತ್ತಾನೆ. ತದನಂತರ ಆತನ ದೇಹವನ್ನು ಅಲ್ಲಿಯೇ ಸಮಾಧಿ ಮಾಡುತ್ತಾರೆ. ಅಂದಿನಿಂದ ಇಂದಿನವೆರೆವಿಗೂ ಆತನ ಆತ್ಮ ಅಲ್ಲಿಯೇ ತಿರುಗುತ್ತಾ ಇದೆ ಹೇಳಲಾಗುತ್ತಿದೆ. ಅದೇನೆ ಆಗಲಿ ಆ ಶಿಮ್ಲಾದಲ್ಲಿನ ಸುರಂಗ ಮಾರ್ಗದ ಬಳಿ ತೆರಳುವಾಗ ಜಾಗ್ರತೆಯಿಂದ ಇರಿ.

Picture credit: DailyMotion

ಟೂ ಲೈನ್ ಈಸ್ಟ್ ಕೋಸ್ಟ್ ರಹದಾರಿ

ಟೂ ಲೈನ್ ಈಸ್ಟ್ ಕೋಸ್ಟ್ ರಹದಾರಿ

ಈ ರಹದಾರಿಯ ಮೂಖಾಂತರ ಪ್ರಯಾಣಿಸುವವರು ಆ ದಿನವೆಲ್ಲಾ ಸಂತೋಷವಾಗಿ ಇರುತ್ತಾರಂತೆ ಆದರೆ ಅವರಿಗೆ ಕತ್ತಲು ಅವರಿಸುವವರೆವಿಗೂ ಗೊತ್ತಾಗುವುದಿಲ್ಲವಂತೆ ಆ ರಸ್ತೆಯ ಮಹತ್ವ. ಕೆಲವು ಮಂದಿ ಆ ರಸ್ತೆ ಮೇಲೆ ಪ್ರಯಾಣಿಸಿದ ಡ್ರೈವರ್ ಮತ್ತು ಪ್ರಾಯಾಣಿಕರ ಕಥೆಗಳ ಪ್ರಕಾರ ಅರ್ಥ ರಾತ್ರಿಯ ಸಮಯದಲ್ಲಿ ಬಿಳಿ ಬಣ್ಣದ ಸೀರೆಯನ್ನು ಧರಿಸಿರುವ ಒಬ್ಬ ಮಹಿಳೆಯು ರಹದಾರಿಯ ಮಧ್ಯೆಭಾಗದಲ್ಲಿ ಕಾಣಿಸಿಕೊಳ್ಳುತ್ತಾಳಂತೆ. ಅದರೆ ಆ ರಸ್ತೆಯಲ್ಲಿ ಹಲವಾರು ರಸ್ತೆ ಅಪಘಾತಗಳಾಗಿವೆ ಎಂದು ಹೇಳುತ್ತಾರೆ.

Picture credit: hourdose

ಢೆಲ್ಲಿ ಕಂಟಾನ್‍ಮೆಂಟ್ ರೋಡ್

ಢೆಲ್ಲಿ ಕಂಟಾನ್‍ಮೆಂಟ್ ರೋಡ್

ದೆವ್ವ ಕಥೆಯನ್ನು ಹೊಂದಿರುವ ಮತ್ತೊಂದು ಸ್ಥಳವೆಂದರೆ ಅದು ದೆಹಲಿಯಲ್ಲಿನ ಕಂಟಾನ್‍ಮೆಂಟ್ ರೋಡ್. ಈ ರಸ್ತೆಯ ಮೇಲೆ ಅತ್ಯಂತ ಕತ್ತಲು ಅವರಿಸಿರುವಾಗ ರಸ್ತೆಯ ಮಧ್ಯೆ ಭಾಗದಲ್ಲಿ ಬಿಳಿ ಬಣ್ಣದ ಸೀರೆಯನ್ನು ಒಟ್ಟು ನಿಂತಿರುವ ಮಹಿಳೆ ನಿಂತಿರುತ್ತಾಳೆ ಎಂದು ಈ ರಸ್ತೆಯಲ್ಲಿ ಪ್ರಯಾಣಿಕರ ಮೂಲಕ ವರದಿಯಾಗಿದೆ. ಕೆಲವು ಪ್ರಯಾಣಿಕರು ಈ ದಾರಿಯಲ್ಲಿ ತೆರಳುವ ಸಮಯದಲ್ಲಿ ರಾಕೆಟ್ ವೇಗದಲ್ಲಿ ತೆರಳಬೇಕು. ಇಲ್ಲವಾದರೆ ಅಪಘಾತ ಸಂಭವಿಸುವುದು ಖಚಿತ ಎಂದು ಹೇಳುತ್ತಾನೆ.

Picture credit: TaxiForSure

ರಾಂಚಿ ಜಮ್‍ಶೇಡ್‍ಪೂರ್ ರಹದಾರಿ

ರಾಂಚಿ ಜಮ್‍ಶೇಡ್‍ಪೂರ್ ರಹದಾರಿ

ನಿಮಗೆ ರಹದಾರಿಗಳ ಬಗ್ಗೆ ಅವಗಹನೆ ಇದ್ದರೆ ಇದನ್ನು 33 ನೇ ಜಾತಿಯ ರಹದಾರಿ ಎಂದು ಕರೆಯುತ್ತಾರೆ. ಈ ಹೈವೆಯಲ್ಲಿರುವ 40 ಕಿ.ಮೀ ದೂರದಲ್ಲಿ ದೆವ್ವಗಳ ವಾಸಸ್ಥಾನಗಳಾಗಿವೆ ಎಂದು ಹೇಳುತ್ತಾರೆ. ಇದಕ್ಕೆ ಸಂಬಧಿಸಿದಂತೆ ಆನೇಕ ಕಥೆಗಳು ಪ್ರಚಾರದಲ್ಲಿಯೂ ಕೂಡ ಇದೆ. ಏಕೆಂದರೆ ಕಳೆದ 3 ವರ್ಷಗಳಗಳಲ್ಲಿ ಕೇವಲ 40 ಕಿ.ಮೀ ಪರೀದಿಯಲ್ಲಿ ಸುಮಾರು 243 ಮಂದಿ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹಾಗೆಯೇ ಹೆಚ್ಚಾಗಿ ಭಯಂಕರವಾದ ರಾಷ್ಟ್ರೀಯ ರಹದಾರಿಗಳಲ್ಲಿ ಇದು ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ ಎಂದರೆ ನೀವೇ ಊಹಿಸಿ ಈ ರಸ್ತೆಯ ಭಯಾನಕತೆ.

Picture credit: panoramio

ಮಾರ್ವಿ ಆಂಡ್ ಮಧ್ ದ್ವೀಪ ರಸ್ತೆ

ಮಾರ್ವಿ ಆಂಡ್ ಮಧ್ ದ್ವೀಪ ರಸ್ತೆ

ಈ ರಹದಾರಿ ಅಷ್ಟಾಗಿ ಭಯಂಕರವಾದುದು ಅಲ್ಲದೇ ಇರುವುದರಿಂದ ಬೆಳಗಿನ ಜಾವದಂದು ಈ ರಸ್ತೆಯ ಪ್ರಯಾಣ ಅತ್ಯಂತ ಸುಖಮಯವಾದ ಪ್ರಯಾಣವಾಗಿರುತ್ತದೆ. ಆದರೆ ರಾತ್ರಿ ವೇಳೆಯಲ್ಲಿ ಇದಕ್ಕೆ ಪೂರ್ತಿಯಾಗಿ ವಿರುದ್ಧವಾಗಿರುತ್ತದೆ. ಏಕೆಂದರೆ ಒಬ್ಬ ಮಹಿಳೆಯು ಮದುವೆ ವಸ್ತ್ರವನ್ನು ಧರಿಸಿಕೊಂಡು ಲಿಫ್ಟ್ ಬೇಕು ಎಂದು ಕಾಯುತ್ತಾ ಇರುತ್ತಾಳಂತೆ. ತೀರಾ ಹತ್ತಿರಕ್ಕೆ ತೆರಳಿದಾಗ ಆ ಸ್ಥಳದಲ್ಲಿ ಯಾರು ಕೂಡ ಇರುವುದಿಲ್ಲವಂತೆ. ಇಷ್ಟೇ ಅಲ್ಲದೇ ಆ ದಾರಿಯಲ್ಲಿ ತೆರಳುವವರಿಗೆ ಹಲವಾರು ಭಯಾನಕವಾದ ಶಬ್ಧಗಳು ಕೇಳಿಸುತ್ತವೆಯಂತೆ.

Picture credit: polkacafe

ಮುಂಬಾಯಿ-ನಾಸಿಕ್ ರಾಷ್ಟ್ರೀಯ ಹೆದ್ಧಾರಿ

ಮುಂಬಾಯಿ-ನಾಸಿಕ್ ರಾಷ್ಟ್ರೀಯ ಹೆದ್ಧಾರಿ

ದೆವ್ವಗಳಿಗೆ ವಾಸಸ್ಥಾನವಾಗಿರುವ ಸ್ಥಳವೆಂದರೆ ಅದು ಮುಂಬೈ ಮತ್ತು ನಾಸಿಕ್‍ನ ಕಾಸರ್‍ಘಾಟ್ ಎಂಬ ಪ್ರದೇಶ ಅತ್ಯಂತ ಪ್ರಸಿದ್ಧವಾದುದು. ಈ ರಾಷ್ಟ್ರೀಯ ಹೆದ್ಧಾರಿಯ ಮೇಲೆ ಕಾಸರ್‍ಘಾಟ್ ಎಂಬ ಪ್ರದೇಶಕ್ಕೆ ವಾಹನಗಳು ತಲುಪುತ್ತಿದ್ದಂತೆ ಅಲ್ಲಿನ ಸುತ್ತಮುತ್ತಿನ ಅರಣ್ಯ ಪ್ರದೇಶದಲ್ಲಿನ ಮರಗಳಲ್ಲಿ, ಪುದೆಗಳಲ್ಲಿ ಭಯಂಕರವಾಗಿ ಶಬ್ಧಗಳು ಕೇಳಿಸುತ್ತದೆ ಎಂತೆ. ತದನಂತರ ಇದ್ದಕ್ಕಿಂದಂತೆ ಆ ಪ್ರದೇಶದಲ್ಲಿ ವಾಹನಗಳು ಮುಂದೆ ಚಲಿಸುವುದೇ ಇಲ್ಲವಂತೆ.

Picture credit: stockpicturesforeveryone

ರಾಷ್ಟ್ರೀಯ ಹೆದ್ಧಾರಿ-209, ಸತ್ಯಮಂಗಳ

ರಾಷ್ಟ್ರೀಯ ಹೆದ್ಧಾರಿ-209, ಸತ್ಯಮಂಗಳ

ಸತ್ಯಮಂಗಳ ವನ್ಯಪ್ರಾಣಿ ಆಭಯಾರಣ್ಯವು ಒಂದು ಕಾಲದಲ್ಲಿ ಮುನಿಸ್ವಾಮಿ ವೀರಪ್ಪನ್ ಅಡಗಿದ್ದ ಪ್ರದೇಶ. ಆ ಸಮಯದಲ್ಲಿ ಇತನು ಹಣಕ್ಕಾಗಿ ದಾರಿಯಲ್ಲಿ ತೆರಳುವವರಿಗೆ ಕೊಲೆ ಮಾಡುತ್ತಿದ್ದ. ವೀರಪ್ಪನ್ ಮೃತನಾದ ನಂತರ ಅದೇ ವಿಧವಾಗಿ ಕತ್ತಲಿನಲ್ಲಿ ಲೈಟ್‍ಗಳು ಬೆಳಗುತ್ತವೆ. ಅಷ್ಟೇ ಅಲ್ಲದೇ ಭಯಾನಕವಾದ ಶಬ್ಧಗಳು ಕೇಳಿಸುತ್ತಿದ್ದವು ಎಂಬುದು ಅಲ್ಲಿನ ಜನರ ಹೇಳುತ್ತಾರೆ.

Picture credit: Suniltg/Wiki Commons

ಕಾಷೇಡಿ ಘಾಟ್, ಮುಂಬೈ-ಗೋವಾ ಹೈವೆ

ಕಾಷೇಡಿ ಘಾಟ್, ಮುಂಬೈ-ಗೋವಾ ಹೈವೆ

ಮುಂಬೈ-ಗೋವಾ ರಾಷ್ಟ್ರೀಯ ಹೆದ್ಧಾರಿಯ ಮಧ್ಯೆಭಾಗದಲ್ಲಿ ಬರುವ ಕಾಷೇಡಿ ಘಾಟ್ ಅತ್ಯಂತ ರಹಸ್ಯವಾದ ರಸ್ತೆಯಾಗಿದೆ. ಏಕೆಂದರೆ ಈ ಘಾಟ್‍ನಲ್ಲಿನ ರಸ್ತೆಯು ಅತ್ಯಂತ ಎತ್ತರವಾಗಿರುತ್ತದೆ. ಆದರೆ ಆ ರಸ್ತೆಯ ಮೂಖಾಂತರ ಕಾರು ಅಥವಾ ಬಸ್ಸುಗಳು ತೆರಳುತಿರುವ ಸಮಯದಲ್ಲಿ ಒಬ್ಬ ವ್ಯಕ್ತಿಯು ವಾಹನವನ್ನು ನಿಲ್ಲಿಸು ಎಂದು ಹೇಳುತ್ತಾನಂತೆ. ಆ ವ್ಯಕ್ತಿಯನ್ನು ಕಾಣುತ್ತಾ ಡ್ರೈವರ್ ಭಯಪಟ್ಟು ವಾಹನವನ್ನು ಹಾಗೆಯೇ ಪಾತಾಳಕ್ಕೆ ನಡೆಸುತ್ತಾನಂತೆ. ಇಂಥಹ ಕಥನಗಳ ಮೇಲೆ ಅಲ್ಲಿ ಹಲವಾರು ಅಪಘಾತಗಳು ಆಗಿರುವುದು ವರದಿಯಾಗಿದೆ.

Picture credit: bcmtouring

ಬೆಸೆಂತ್ ಅವೆನ್ಯು ರೋಡ್

ಬೆಸೆಂತ್ ಅವೆನ್ಯು ರೋಡ್

ಚೆನ್ನೈನಲ್ಲಿನ ಈ ಬೆಸೆಂತ್ ಅವೆನ್ಯು ರೋಡ್ ಕೂಡ ಒಂದು ಕಥೆಯನ್ನು ಆಧರಿಸಿದೆ. ಈ ರಸ್ತೆ ಬೆಳಗಿನ ಜಾವವೆಲ್ಲಾ ಪ್ರಶಾಂತವಾಗಿಯೇ ಇರುತ್ತದೆ. ಆದರೆ ಕತ್ತಲು ಆವರಿಸುತ್ತಿದ್ದಂತೆ ಯಾರೋ ಅಲ್ಲಿಂದ ತಳ್ಳಿದ ಹಾಗೆ ಅನುಭವ ಉಂಟಾಗುತ್ತದೆ ಎಂತೆ. ಎಷ್ಟೇ ಬಲ ಪ್ರಯೋಗ ಮಾಡಿದರು ಕೂಡ ಸಾಧ್ಯವಾಗುವುದಿಲ್ಲ ಎಂದು ಅನುಭವವನ್ನು ಪಡೆದವರು ತಿಳಿಸುತ್ತಾರೆ. ಆದರೆ ಹಲವಾರು ವರ್ಷಗಳಿಂದ ಇದೇ ಘಟನೆ ನಡೆಯುತ್ತಾ ಇದೆಯಂತೆ.

Picture credit: Sankar Pandian/Wiki Commons

ಮುಂಬೈ-ಪೂನ ಹಳೆಯ ಎಕ್ಸ್‍ಪ್ರೆಸ್ ರಹದಾರಿ

ಮುಂಬೈ-ಪೂನ ಹಳೆಯ ಎಕ್ಸ್‍ಪ್ರೆಸ್ ರಹದಾರಿ

ಒಂದು ದೆವ್ವವು ನಿಜವಾಗಿಯೂ ಇದೆ ಎಂಬುದಕ್ಕೆ ಪ್ರತ್ಯಕ್ಷವಾದ ನಿದರ್ಶನ ಇಲ್ಲಿದೆ. ಈ ರಹದಾರಿಯಲ್ಲಿ ಒಬ್ಬ ವ್ಯಕ್ತಿಯು ಪ್ರತಿ ದಿನ ರಾತ್ರಿ ತನ್ನ ಕೆಲಸವನ್ನು ಮುಗಿಸಿಕೊಂಡು ಸ್ಕೂಟರ್ ಮೇಲೆ ಪ್ರಯಾಣ ಮಾಡುತ್ತಿದ್ದ. ಆದರೆ ಒಂದು ದಿನ ಒಬ್ಬ ಮಹಿಳೆಯು ರಸ್ತೆ ಮೇಲೆ ಲಿಫ್ಟ್ ಕೇಳುತ್ತಾ ನಿಂತಿದ್ದಳು. ಸರಿ ಎಂದು ಆಕೆಯನ್ನು ಹಿಂದೆ ಕೂರಿಸಿಕೊಂಡನು. ತದನಂತರ ಆಕೆಯು ತಿಳಿಸಿದ ಮಾರ್ಗದಲ್ಲಿ ನಿಲ್ಲಿಸಿದನಂತೆ. ಮತ್ತೆ ಸ್ವಲ್ಪ ದೂರದಲ್ಲಿಯೇ ತೆರಳಿದಾಗ ಅದೇ ಮಹಿಳೆಯು ಲಿಫ್ಟ್‍ಗಾಗಿ ಕೇಳಿಕೊಂಡಳಂತೆ. ಸರಿ ಎಂದು ಮತ್ತೆ ಲಿಫ್ಟ್ ನೀಡಿದನಂತೆ. ತದನಂತರ ಆಕೆಯನ್ನು ದೂರದಲ್ಲಿ ಇಳಿಸಿ ಹಿಂದೆ ನೋಡಿದನಂತೆ.....

ನಂತರದ ಸ್ಲೈಡ್‍ನಲ್ಲಿ..

Picture credit: ixigo

ಮುಂಬೈ-ಪೂನ ಹಳೆಯ ಎಕ್ಸ್‍ಪ್ರೆಸ್ ರಹದಾರಿ

ಮುಂಬೈ-ಪೂನ ಹಳೆಯ ಎಕ್ಸ್‍ಪ್ರೆಸ್ ರಹದಾರಿ

ಹಿಂದೆ ನೋಡಿದರೆ ಆಕೆಯು ಕಾಣಿಸಲಿಲ್ಲವಂತೆ. ಆಕೆಯು ಒಂದು ದೆವ್ವ ಎಂದು ಅರ್ಥ ಮಾಡಿಕೊಂಡನು. ತದನಂತರ 80 ಕಿ.ಮೀ ವೇಗವಾಗಿ ತನ್ನ ಸ್ಕೂಟರ್ ಅನ್ನು ನಡೆಸಿದನಂತೆ. ಅಲ್ಲಿದಂ ನಗುವ ಶಬ್ಧ ಹಾಗು ಅಳುವ ಶಬ್ಧವು ಕೇಳಿಸುತ್ತಾ ಬಂದಿತಂತೆ. ಏನಿದು ಎಂದು ಒಂದು ಸ್ಥಳದಲ್ಲಿ ನೋಡಿದರೆ ಅಲ್ಲಿ ಭಯಂಕರವಾದ ಒಂದು ಆಕಾರ ಕಾಣಿಸಿತಂತೆ. ಅಲ್ಲಿಯೇ ಆತನು ಜ್ಞಾನ ತಪ್ಪಿ ಬಿದ್ದು ಮರುದಿನ ಬೆಳ್ಳಿಗೆ ಎದ್ದು ತನ್ನ ಕಾಲಿನ ಮೇಲೆ ಆದ ಗಾಯವನ್ನು ಗುರುತಿಸಿಕೊಂಡು ಅನುಭವವನ್ನು ಹಂಚಿಕೊಂಡನಂತೆ.

Picture credit: ixigo

ಸ್ವಯಂ ಅನುಭವ

ಸ್ವಯಂ ಅನುಭವ

ದೆವ್ವಗಳು ಇದೆಯೇ ಇಲ್ಲವೇ ಎಂಬುದು ಒಬ್ಬರು ಹೇಳುವ ರಹಸ್ಯವಲ್ಲ. ಸ್ವಯಂ ಆ ಅನುಭವವನ್ನು ಪಡೆದಾಗ ಮಾತ್ರ ಗೊತ್ತಾಗುವುದು. ಆದರೆ ನಮಗೆ ತಿಳಿಯದೆ ಅವುಗಳನ್ನು ಕಂಡರೆ ತಪ್ಪಾಗುವುದಿಲ್ಲ. ಆದರೆ ತಿಳಿದು ತಿಳಿದು ಆ ದಾರಿಯಲ್ಲಿ ಪ್ರಯಾಣಸಿದರೆ ಮಾತ್ರ ಪ್ರಾಣಕ್ಕೆ ಹಾನಿತಂದುಕೊಳ್ಳುವುದಂತು ಖಚಿತ. ಯಾವುದಕ್ಕೂ ಒಳ್ಳೆಯದು ಇಂಥಹ ದಾರಿಯಲ್ಲಿ ಪ್ರಯಾಣಿಸುವಾಗ ಎಚ್ಚರವಾಗಿರಿ. ಆದರೆ ಈ ಎಲ್ಲಾ ಕಥೆಗಳು ಒಂದು ವೆಬ್‍ಸೈಟ್‍ನ ಕಥನಗಳ ಆಧಾರವಾಗಿ ನಿಮಗೆ ಪ್ರಸ್ತುತ ಪಡಿಸಿರುವುದೇ ಆಗಿದೆ...

ಈ ಮಹಲ್ ಬಗ್ಗೆ ತಿಳಿದುಕೊಂಡರೆ ನೀವು ಭಯಗೊಳ್ಳುವುದು ಖಚಿತ!

ಈ ಮಸೀದಿಯಲ್ಲಿದೆ ಅಗೋಚರ ಶಕ್ತಿಗಳ ಸಂಚಾರ

ಈ ರಹಸ್ಯಗಳು ಎಂದೂ ಭೇದಿಸಲಾಗದು!!!

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more