Search
  • Follow NativePlanet
Share
» »ಹುಷಾರು! ಈ "ಟ್ರೆಕ್ಕುಗಳು" ಅತ್ಯಂತ ಅಪಾಯಕಾರಿ

ಹುಷಾರು! ಈ "ಟ್ರೆಕ್ಕುಗಳು" ಅತ್ಯಂತ ಅಪಾಯಕಾರಿ

By Vijay

"ಟ್ರೆಕ್ಕಿಂಗ್" ಅಥವಾ ಚಾರಣವು ಒಂದು ಸಾಹಸಮಯ ರೋಮಾಂಚಕ ಪ್ರವಾಸಿ ಚಟುವಟಿಕೆಯಾಗಿದ್ದು ಸಾಕಷ್ಟು ಉತ್ಸಾಹವನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಯುವಜನಾಂಗದವರಲ್ಲಿ ಇದು ಬಲು ನೆಚ್ಚಿನ ಚಟುವಟಿಕೆಯಾಗಿದೆ.

ರಸ್ತೆಯಿಲ್ಲದೆ, ಮಾರ್ಗಸೂಚಿಗಳಿಲ್ಲದೆ ಮೊನಚಾದ,ಅಂಕು ಡೊಂಕಾದ ಭೂಪ್ರದೇಶಗಳನ್ನು ಏರುತ್ತ ಇಳಿಯುತ್ತ, ಸಸ್ಯರಾಶಿಗಳ ಮಧ್ಯೆ, ಹುಲ್ಲುಗಾವಲಿನ ಮಧ್ಯೆ, ಅಲ್ಲಲ್ಲಿ ಸಿಗುವ ಹಳ್ಳ ಕೊಳ್ಳಗಳನ್ನು ದಾಟುತ್ತ, ಪ್ರಕೃತಿಯ ಸಹಜ ಸೌಂದರ್ಯವನ್ನು ಅನುಭವಿಸುತ್ತ, ಎದುರಾಗುವ ಚಿತ್ರ-ವಿಚಿತ್ರ ಆಕಾರಗಳ ಬಂಡೆಗಳು, ಬೆಟ್ಟ-ಗುಡ್ಡಗಳನ್ನು ನೋಡಿ ಬೆರಗಾಗುತ್ತ ಸಾಗುವುದು ಯಾರಿಗೆ ತಾನೆ ಇಷ್ಟ ಇಲ್ಲ...

ಅಂತಹ ಅಭೂತಪೂರ್ವ ಅನುಭವ ನೀಡುವ ಚಾರಣ ಮಾರ್ಗಗಳು ಭಾರತದೆಲ್ಲೆಡೆ ಕಾಣಬಹುದು. ಗಮನಿಸಿ, ಸಾಮಾನ್ಯವಾಗಿ ಚಾರಣ ಮಾರ್ಗಗಳು ತುಸು ಕಷ್ಟದಾಯಕವೆನಿಸಿದರೂ ಸಹ ಮಾಡಬಹುದಾಗಿದೆ. ಆದರೆ ಎಲ್ಲ ಚಾರಣ ಮಾರ್ಗಗಳು ಹಾಗಲ್ಲ. ಕೆಲವು ಅತಿ ಭಯಾನಕ ಅಥವಾ ಅತ್ಯಂತ ಅಪಾಯಕಾರಿ ಚಾರಣ ಮಾರ್ಗಗಳಾಗಿವೆ.

ಇಂತಹ ಚಾರಣ ಮಾರ್ಗಗಳು ಅತ್ಯಂತ ಕಷ್ಟಕರ, ಸವಾಲೆಸೆಯುವಂತಿದ್ದರೂ ಇವು ನೀಡುವ ಆ ಆನಂದ ಎಷ್ಟು ಲಕ್ಷ ರೂಪಾಯಿ ಕೊಟ್ಟರೂ ಸಿಗದು. ಹಾಗಂತ ಇವುಗಳಿಗೆ ಹಾಗೆ ತೆರಳಲು ಸಾಧ್ಯವಿಲ್ಲ. ಸಾಕಷ್ಟು ಮನೋಸ್ಥೈರ್ಯ, ಸಹನೆ, ಸದೃಢ ಆರೋಗ್ಯ ಹಾಗೂ ಧೈರ್ಯಗಳು ಇರಲೇಬೇಕು. ಅಲ್ಲದೆ ಸದಾ ಜಾಗೃತರಾಗಿರಬೇಕು ಹಾಗೂ ನಿಪುಣತೆ ಹೊಂದಿದ ಚಾರಣಿಗರ ಮಾರ್ಗದರ್ಶನವಿರಬೇಕು.

ಇಲ್ಲಿ ನೀಡಲಾಗಿರುವ ಕೆಲವು ಚಾರಣ ಮಾರ್ಗಗಳು ಅತ್ಯಂತ ಕಷ್ಟಕರವಾಗಿದ್ದು, ಸ್ವಲ್ಪ ನಿರ್ಲಕ್ಷಿಸಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಸಾಹಸ ಇಷ್ಟಪಡುವ ಅನೇಕ ದೇಶೀಯ ಹಾಗೂ ವಿದೇಶಿಯ ಪ್ರವಾಸಿಗರನ್ನು ಸದಾ ಈ ಚಾರಣಗಳು ಆಕರ್ಷಿಸುತ್ತವೆ ಹಾಗೂ ಬಹಳಷ್ಟು ಜನರಿಂದ ಈ ಚಾರಣಗಳು ಇಂದಿಗೂ ನಡೆಯುತ್ತಿರುತ್ತವೆ.

ಅಪಾಯಕಾರಿ ಚಾರಣ ಮಾರ್ಗಗಳು:

ಅಪಾಯಕಾರಿ ಚಾರಣ ಮಾರ್ಗಗಳು:

ಚಾದರ್ ಚಾರಣ : ಹಿಂದಿಯಲ್ಲಿ ಬಳಸಲಾಗುವ "ಚಾದರ್" ಎಂದರೆ ಹಾಸಿಗೆ ಎಂಬರ್ಥ ಬರುತ್ತದೆ. ಹಾಗಾದರೆ ಇದೊಂದು ರೀತಿಯ ಹಾಸಿಗೆಯಿರಬೇಕೆಂದು ನೀವು ಊಹಿಸಿದ್ದರೆ ಅದು ಖಂಡಿತ ನಿಜ. ಆದಾಗ್ಯೂ ಇದರಲ್ಲೇನಪ್ಪಾ ಅಷ್ಟೊಂದು ಅಪಾಯ ಎಂದೆನಿಸಿದರೆ...ಖಂಡಿತವಾಗಿಯೂ ಅಪಾಯವಿದೆ ಏಕೆಂದರೆ ಇದು ಘನೀಕೃತವಾದ ಮಂಜುಗಡ್ಡೆಯ ಹಾಸಿಗೆ!

ಚಿತ್ರಕೃಪೆ: Christophe Roudet

ಅಪಾಯಕಾರಿ ಚಾರಣ ಮಾರ್ಗಗಳು:

ಅಪಾಯಕಾರಿ ಚಾರಣ ಮಾರ್ಗಗಳು:

ಜಮ್ಮು ಕಾಶ್ಮೀರ ರಾಜ್ಯದ ಲಡಾಖ್ ಪ್ರಾಂತ್ಯದ ಝನ್ಸ್ಕಾರ್ ನದಿಯಿರುವ ಝನ್ಸ್ಕಾರ್ ಕಣಿವೆಯ ಅದೆ ಹೆಸರಿನ ಹಳ್ಳಿ ತಲುಪಲು ಈ ಚಾರಣ ಮಾಡಬೇಕಾಗುತ್ತದೆ. ವಿಶೇಷವೆಂದರೆ ಬೇಸಿಗೆಯ ಸಮಯದಲ್ಲಿ ಝನ್ಸ್ಕಾರ್ ನದಿಯಲ್ಲಿ ರಾಫ್ಟಿಂಗ್ (ದೋಣಿ ಸವಾರಿ) ಮಾಡಬಹುದಾಗಿದ್ದರೆ ಕ್ಲಿಷ್ಟಕರ ಚಳಿಗಾಲದಲ್ಲಿ ಈ ನದಿಯು ಹಿಮಗಟ್ಟುವುದರಿಂದ ಇದರ ಮೇಲೆ ನಡೆದೆ ಸಾಗಬೇಕು. ಹುಷಾರು, ಹಿಮದ ಪದರವು ಕೆಲವು ಕಡೆ ತೆಳುಆಗಿದ್ದು ನಿಮ್ಮ ಭಾರ ಬಿಳುತ್ತಿದ್ದಂತೆಯೆ ಮುರಿಯಬಹುದು! ಹೀಗಾಗಿ ಸಾವಧಾನ ಹಾಗೂ ಜಾಗೃತೆಯಿಂದ ಈ ಚಾರಣ ಮಾಡಬಹುದಾಗಿದೆ.

ಚಿತ್ರಕೃಪೆ: Sankara Subramanian

ಅಪಾಯಕಾರಿ ಚಾರಣ ಮಾರ್ಗಗಳು:

ಅಪಾಯಕಾರಿ ಚಾರಣ ಮಾರ್ಗಗಳು:

ಫುಗ್ತಾಲ್ ಬೌದ್ಧ ಮಠ : ಜಮ್ಮು ಕಾಶ್ಮೀರ ರಾಜ್ಯದ ಲಡಾಖ್ ಪ್ರಾಂತ್ಯದಲ್ಲೆ ಇರುವ ಲುಂಗ್ನಾಕ್ ಎಂಬ ಕಣಿವೆಯಲ್ಲಿ ಎತ್ತರದ ಪರ್ವತಗಳಲ್ಲಿ ಜೇನು ಗೂಡಿನಂತೆ ಈ ಮಠ ನಿರ್ಮಿತವಾಗಿದೆ. ಇದನ್ನು ಏರಬಹುದಾಗಿದ್ದರೂ ಸಾಕಷ್ಟು ಮುಂಜಾಗ್ರತೆಯಿಂದ ಹತ್ತ ಬೇಕು. ಸ್ವಲ್ಪ ನಿರ್ಲಕ್ಷಿಸಿದರೂ ನೀವು ಕೆಳಗೆ ಬಿಳುವುದು ಖಂಡಿತ.

ಚಿತ್ರಕೃಪೆ: Shakti

ಅಪಾಯಕಾರಿ ಚಾರಣ ಮಾರ್ಗಗಳು:

ಅಪಾಯಕಾರಿ ಚಾರಣ ಮಾರ್ಗಗಳು:

ಹೆಮಿಸ್ ರಾಷ್ಟ್ರೀಯ ಉದ್ಯಾನ : ಇದೂ ಕೂಡ ಇರುವುದು ಲಡಾಖ್ ಪ್ರಾಂತ್ಯದಲ್ಲೆ. ಈ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ಮಾಡಲು ಯಾವುದೆ ರೀತಿಯ ನಿರ್ಮಿತ ರಸ್ತೆಗಳಿಲ್ಲ. ಕೇವಲ ಚಾರಣವಷ್ಟೆ ಮಾಡಬೇಕು. ಇಲ್ಲಿ ಎದುರಾಗಬಹುದಾದ ಮುಖ್ಯ ಅಪಾಯವೆಂದರೆ ಹಿಮಚಿರತೆಗಳಿಂದ ಹಟಾತ್ ಆಗಿ ಆಗಬಹುದಾದ ದಾಳಿ. ಹೌದು ಇಲ್ಲಿ ಹಿಮ ಚಿರತೆಗಳು ಸಾಕಷ್ಟು ಸಂಖ್ಯೆಯಲ್ಲಿದ್ದು ನೀವು ಸಮೂಹದಲ್ಲಿ ಚಾರಣ ಮಾಡುತ್ತಿದ್ದರೆ ಒಳಿತು. ಇಲ್ಲವಾದಲ್ಲಿ ಯಾರಿಗೆ ಗೊತ್ತು ಎಲ್ಲಿಂದ ಚಿರತೆ ನಿಮ್ಮ ಮೇಲೆ ದಾಳಿ ಮಾಡಬಹುದೆಂದು. ಅದೂ ಸಹ ರಕ್ತ ಹೆಪ್ಪುಗಟ್ಟುವಂತಹ ಚಳಿಯಲ್ಲಿ!

ಚಿತ್ರಕೃಪೆ: Irbis1983

ಅಪಾಯಕಾರಿ ಚಾರಣ ಮಾರ್ಗಗಳು:

ಅಪಾಯಕಾರಿ ಚಾರಣ ಮಾರ್ಗಗಳು:

ರುಪಿನ್ ಪಾಸ್ : ಇದು ಹಿಮಾಚಲ ಪ್ರದೇಶದಲ್ಲಿರುವ ರಹದಾರಿಯಾಗಿದೆ. ಸಾಹಸಮಯ ಚಾರಣಿಗರಿಗೆ ಬಲು ನೆಚ್ಚಿನ ಚಾರಣ ಮಾರ್ಗವಾಗಿದೆ ಇದು. ಈ ಚಾರಣ ಉತ್ತರಾಖಂಡದ ಧೌಲಾದಿಂದ ಪ್ರಾರಂಭವಾಗಿ ಹಿಮಾಚಲದ ಸಾಂಗ್ಲಾದಲ್ಲಿ ಅಂತ್ಯಗೊಳ್ಳುತ್ತದೆ. ಮಾರ್ಗವು ಕಡಿದಾದ ಮಾರ್ಗವಾಗಿದ್ದು ಕಲ್ಲು ಬಂಡೆಗಳನ್ನು ಒಡೆದು ಮುರಿದು ಮಾಡಿದಂತಿದೆ. ಬಂಡೆ ಮಾರ್ಗಗಳನ್ನು ಯಾವ ಉದ್ದೇಶಕ್ಕಾಗಿ ಒಡೆಯಲಾಗಿದೆಯೊ, ಯಾರು ಒಡಿದಿರುವರೊ ದೇವರಿಗೆ ಗೊತ್ತು, ಆದರೆ ಬಲು ಜಾಗ್ರತೆಯಿಂದ ಸಾಗಬೇಕು. ಅಷ್ಟೆ ಅಲ್ಲ, ಅಲ್ಲಲ್ಲಿ ಗಾಳಿಯಲ್ಲಿ ನೇತಾಡುವ ಒಬೇರಾಯನ ಕಾಲದ ಕಟ್ಟಿಗೆಯ ಸೇತುವೆಗಳು ನಿಮ್ಮ ಎದೆ ಬಡಿತವನ್ನಂತೂ ಖಂಡಿತವಾಗಿ ಜಾಸ್ತಿ ಮಾಡುತ್ತವೆ.

ಚಿತ್ರಕೃಪೆ: Thisguyhikes

ಅಪಾಯಕಾರಿ ಚಾರಣ ಮಾರ್ಗಗಳು:

ಅಪಾಯಕಾರಿ ಚಾರಣ ಮಾರ್ಗಗಳು:

ಆಡೆನ್ಸ್ ಕೋಲ್ ಟ್ರೆಕ್ : ವಿಶ್ವದ ಅಪಾಯಕಾರಿ ಚಾರಣಗಳ ಪೈಕಿ ಇದೂ ಸಹ ಒಂದಾಗಿದೆ. ಸಾಕಷ್ಟು ಮನಓಸ್ಥೈರ್ಯವಿರಬೇಕು ಈ ಚಾರಣದಲ್ಲಿ. ಅತ್ಯಂತ ವಿಪರೀತವಾದ ಹವಾಮಾನ, ಅಕ್ಷರಶಃ ಮೈಯನ್ನು ಗರಗಸದ ಹಾಗೆ ಕೊರೆಯುವ ಚಳಿ, ಕನಿಷ್ಠ ಮಟ್ಟಕ್ಕಿಂತಲೂ ಕೆಳಗೆ ಕುಸಿದಿರುವ ತಾಪಮಾನ, ಮೊನಚಾದ, ಅಂಕುಡೊಂಕಾದ ಹಿಮದಿಂದ ಕೂಡಿದ ಬೆಟ್ಟ ಪರ್ವತಗಳು, ಆಮ್ಲಜನಕದ ಕೊರತೆ, ಊಟ ತಿಂಡಿಗಳ ಕೊರತೆ, ನಿರ್ಜನ ಪ್ರದೇಶ, ಆಯ ತಪ್ಪಿ ಬಿದ್ದರೂ ಕೊಚ್ಚಿ ಹೋಗುವಂತೆ ಮಾಡುವ ರಭಸದಿ ಹರಿಯುವ ನದಿ ಇವೆಲ್ಲವೂ ಈ ಚಾರಣದ ಗಂಭೀರತೆಗಳು.

ಚಿತ್ರಕೃಪೆ: Barry Silver

ಅಪಾಯಕಾರಿ ಚಾರಣ ಮಾರ್ಗಗಳು:

ಅಪಾಯಕಾರಿ ಚಾರಣ ಮಾರ್ಗಗಳು:

ಪಿನ್ - ಪಾರ್ವತಿ ಟ್ರೆಕ್ : ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಹಾಗೂ ಸ್ಪಿತಿಯನ್ನು ಕಣಿವೆಯನ್ನು ಬೆಸೆಯುವ ಈ ಚಾರಣ ಮಾರ್ಗವು ಕಠಿಣವಾದ ಹಾಗೂ ಅಪಾಯಕಾರಿಯಾದ ಚಾರಣ ಮಾರ್ಗವಾಗಿದೆ. ಏರುವ ಸಂದರ್ಭದಲ್ಲಾಗಲಿ, ಇಳಿಯುವ ಸಂದರ್ಭದಲ್ಲಾಗಲಿ ಸಾಕಷ್ಟು ಜಾಗ್ರತೆವಹಿಸಲೇಬೇಕು. ಮೂಲತಃ ಈ ಚಾರಣ ಮಾರ್ಗವು ನೂರು ಕೀ.ಮೀ ಗಳಷ್ಟು ಉದ್ದವಿದ್ದು ಕುಲ್ಲು ಜಿಲ್ಲೆಯ ಪಾರ್ವತಿ ಕಣಿವೆಯನ್ನು ಸ್ಪಿತಿಯಲ್ಲಿರುವ ಪಿನ್ ಕಣಿವೆಯೊಂದಿಗೆ ಬೆಸೆಯುವುದರಿಂದ ಇದಕ್ಕೆ ಪಿನ್ - ಪಾರ್ವತಿ ಟ್ರೆಕ್ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Todd vanGoethem

ಅಪಾಯಕಾರಿ ಚಾರಣ ಮಾರ್ಗಗಳು:

ಅಪಾಯಕಾರಿ ಚಾರಣ ಮಾರ್ಗಗಳು:

ನಮಿಕ್ ಗ್ಲೇಸಿಯರ್ ಟ್ರೆಕ್ : ಇದು ಅಷ್ಟೊಂದಾಗಿ ಅನ್ವೇಷಿಸಲಾರದ ಚಾರಣ ಮಾರ್ಗವಾಗಿದೆ. ಆದರೆ ಈ ರೋಮಾಂಚಕ ಚಾರಣ ಮಾರ್ಗವು ಅದ್ಭುತ ಪ್ರದೇಶಗಳಿಂದ ಸಾಗುವುದರಿಂದ ಮೈಯಲ್ಲೆಲ್ಲ ವಿದ್ಯುತ್ ಸಂಚಾರದ ಅನುಭವವಾಗುತ್ತದೆ. ಉತ್ತರಾಖಂಡದ ಧಲ್ದೌಕ್ ನಿಂದ ನಮಿಕ್ ಗ್ಲೇಸಿಯರ್ ವರೆಗೆ ಈ ಚಾರಣ ಮಾರ್ಗವಿದೆ. ಸಾಕಷ್ಟು ವಿಪರೀತ ಹವಾಮಾನದಿಂದ ಕೂಡಿರುವ ಈ ಚಾರಣವು ಕೊನೆಯದಾಗಿ ನಮಿಕ್ ಗ್ಲೇಸಿಯರ್ ಗೆ ತಲುಪುವಂತೆ ಮಾಡುತ್ತದೆ. ಈ ಹಿಮನದಿಯು ಮೈಜುಮ್ಮೆನ್ನಿಸುವಂತಹ ನಂದಾ ದೇವಿ, ನಂದಾ ಕೋಟ ಹಾಗೂ ತ್ರಿಶೂಲಿ ಪರ್ವತಗಳಿಂದ ಸುತ್ತುವರೆದಿದ್ದು ಒಂದು ಅದ್ಭುತ ಹಾಗೂ ಎಂದಿಗೂ ಮರೆಯಲಾಗದ ನೋಟವನ್ನು ಕರುಣಿಸುತ್ತದೆ. ನಂದಾ ದೇವಿ ಪರ್ವತ.

ಚಿತ್ರಕೃಪೆ: Senia L

ಅಪಾಯಕಾರಿ ಚಾರಣ ಮಾರ್ಗಗಳು:

ಅಪಾಯಕಾರಿ ಚಾರಣ ಮಾರ್ಗಗಳು:

ಖಾಟ್ಲಿಂಗ್ - ಸಹಸ್ರತಲ್ : ಭಿಲಾಂಗನಾ ನದಿಯ ಮೂಲವಾಗಿರುವ ಖಾಟ್ಲಿಂಗ್ ಹಿಮನದಿಗೆ ಚಾರಣವು ಅದ್ಭುತವಾದ ಪರಿಸರದಿಂದ ಕೂಡಿದೆ ಹಾಗೂ ಸಾಕಷ್ಟು ಕಠಿಣವಾಗಿದೆ. ಈ ಚಾರಣ ಮಾರ್ಗದಲ್ಲಿ ಸಾಕಷ್ಟು ಕೆರೆಗಳು, ಬಯಲು ಭೂಮಿ ಹಾಗೂ ಹಿಮಚ್ಛಾದಿತ ಪರ್ವತಗಳನ್ನು ದಾಟಬೇಕಾಗುತ್ತದೆ. ಅಲ್ಲಲ್ಲಿ ಸಿಗುವ ಕೆಲವು ಹರಿಯುವ ನದಿಗಳ ಮೇಲೆ ಅಡ್ಡಲಾಗಿ ಹಾಕಲಾಗಿರುವ ಕೆಲವೆ ಕ್ಲೆಅವು ಕಬ್ಬಿಣ ಅಥವಾ ಕಟ್ಟಿಗೆ ತುಂಡುಗಳ ಮೇಲೆ ಸಾಗುತ್ತ ನಡೆಯಬೇಕು.

ಚಿತ್ರಕೃಪೆ: Senia L

ಅಪಾಯಕಾರಿ ಚಾರಣ ಮಾರ್ಗಗಳು:

ಅಪಾಯಕಾರಿ ಚಾರಣ ಮಾರ್ಗಗಳು:

ದಮ್ದಾರ್ ಕಂಡಿ ಪಾಸ್ : ಈ ಚಾರಣವು ಖಂಡಿತ ನೀವು ಜೀವಮಾನದಲ್ಲೆ ಮರೆಯುವಂತಿಲ್ಲ ಮಾಡಿದರೆ ಮಾತ್ರ. ಸುಂದರವಾಗಿಯೂ ಅಷ್ಟೆ ಕಠಿಣವಾಗಿಯೂ ಈ ಚಾರಣ ಮಾರ್ಗವಿದೆ. ಉತ್ತರಕಾಶಿಯಿಂದ ಮೂರ್ನಾಲ್ಕು ಘಂಟೆಗಳಷ್ಟು ದೂರದಲ್ಲಿರುವ ಝಾಲಾದಿಂದ ಈ ಚಾರಣ ಪ್ರಾರಂಭವಾಗಿ ದಟ್ಟಾರಣ್ಯದ ಮೂಲಕ ಸಾಗಿ ನಂತರ ಅತಿ ಮೊನಚಾದ ಏರಿಕೆಯಿಂದ ಕೂಡಿದ್ದು ಭಯ ಮೂಡಿಸುವಂತಿರುತ್ತದೆ. ಏರಿದ ಮೇಲೆ ಮತ್ತೆ ಕಾಲಾ ನಾಗ್ ಎಂಬ ಸ್ಥಳಕ್ಕೆ ಇಳಿಮುಖವಾಗಿ ಸಾಗಬೇಕು. ಸಾಂದರ್ಭಿಕ ಚಿತ್ರ. ಚಿತ್ರ ಸಾಂದರ್ಭಿಕವಾದರೂ ನೈಜ ಸ್ಥಿತಿಯೂ ಹೆಚ್ಚು ಕಮ್ಮಿ ಇದೆ ರೀತಿಯಲ್ಲಿರುತ್ತದೆ.

ಚಿತ್ರಕೃಪೆ: Donald Macauley

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more