ಮಾಪುಸಾದ ವಾಯವ್ಯ ದಿಕ್ಕಿನಲ್ಲಿ ನೆಲೆಸಿರುವ ಪಟ್ಟಣ ಸಿಯೋಲಿಮ್. ಇದು ಪಾರ್ಟಿ ತಾಣಗಳಾದ ಕಲಂಗುಟ್, ಬಾಗಾ ಮತ್ತು ಅಂಜುನಾಗಳಿಗೆ ಉತ್ತರ ದಿಕ್ಕಿನಲ್ಲಿದೆ. ಸಿಯೋಲಿಮ್ ಕಡಲ ತೀರದ ಸೂರ್ಯಾಸ್ತ ಅಥವಾ ಸೂರ್ಯೊದಯ ವಿಕ್ಷೀಸಲಾಗದಿದ್ದರೆ ಗೋವಾ ಪ್ರವಾಸ ಅಸಂಪೂರ್ಣವೆಂದೆ ಹೇಳಬಹುದು. ಒಂದಾನೊಂದು ಕಾಲದಲ್ಲಿ ಅದೂ ಗುಡ್ಡ ಪ್ರದೇಶದಲ್ಲಿ ಹಚ್ಚಿನ ಸಂಖ್ಯೆಯಲ್ಲಿ ಹುಲಿ ಮತ್ತು ಸಿಂಹಗಳನ್ನು ಹೊಂದಿದಂತಹ ಪ್ರದೇಶವೆಂಬ ಅರ್ಥ ಕೊಡುವ ಸಿಯೋಲಿಮ್ ಹಿಂದು ಮತ್ತು ಕ್ಯಾಥೊಲಿಕ್ ಜನಾಂಗಕ್ಕೆ ಧಾರ್ಮಿಕ ಸ್ಥಳವಾಗಿದೆ. ದೇಶಾದ್ಯಂತ ಬಹುಸಂಖ್ಯೆಯಲ್ಲಿ ಯಾತ್ರಿಕರು ಇಲ್ಲಿರುವ ಮೇಯ್ ಡೆ ಡ್ಯೂಸ್ ಚರ್ಚ್, ಅವರ್ ಲೇಡಿ ಆಫ್ ಸಾರ್ರೊವ್ಸ್ ಮತ್ತು ಶ್ರೀ ದತ್ತ, ಸತೇರಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ.
ಪ್ರವಾಸಿ ತಾಣವಾಗಿ ಸಿಯೋಲಿಮ್ ಒಂದು ಅದ್ಭುತ ಪ್ರದೇಶವಾಗಿದ್ದು ಮಾಪುಸಾ, ಉತ್ತರ ಗೋವಾ ಮತ್ತು ಪಣಜಿಯಿಂದ ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಹೋಗುವಾಗ ಈ ಪ್ರದೇಶದ ನೋಟವನ್ನು ಕಾಣಬಹುದು. ವಾಗಾತೋರ್, ಚಪೋರಾ ಮತ್ತು ಅಂಜುನಾ ಬೀಚ್ ಗಳೂ ಕೂಡ ಇದಕ್ಕೆ ಹತ್ತಿರವಾಗಿವೆ. ವಸತಿ ವಿಷಯವಾಗಿ ಹಲವಾರು ತಾರಾ ಹೋಟೆಲ್ ಕೂಡ ಲಭ್ಯವಿದೆ.
ಪಣಜಿ ಅಥವಾ ಬಾಗಾದಿಂದ ಇಲ್ಲಿಗೆ ತಲುಪಲು ಕ್ಯಾಬ್ ಲಭ್ಯವಿದ್ದು, ಬಾಡಿಗೆ ಬೈಕ್ ಗಳ ಬಳಕೆಯು ಉತ್ತಮವಾದುದಾಗಿದೆ.


Click it and Unblock the Notifications