Search
  • Follow NativePlanet
Share
ಮುಖಪುಟ » ಸ್ಥಳಗಳು» ಪಾಲಂಪೂರ್

ಪಾಲಂಪೂರ್ - ನಾರ್ಥ್ ವೆಸ್ಟ್ ನ ಟೀ ಕ್ಯಾಪಿಟಲ್!

26

ಪಾಲಂಪೂರ್ ಕಂಗ್ರ ಕಣಿವೆಯಲ್ಲಿರುವ ಪಾಲಂಪೂರ್ ಬೆಟ್ಟದ ಮೇಲೆ ನೆಲೆ ನಿಂತಿದೆ. ದಟ್ಟವಾದ ಪೈನ್ ಕಾಡು ಮತ್ತು ಸುಗಂಧಭರಿತ ಸ್ಪಟಿಕದಷ್ಟು ಶೂದ್ದವಾದ ಹರಿಯುವ ತೊರೆ ಈ ಸ್ಥಳದ ಮೆರುಗು ಹೆಚ್ಚಿಸಿದೆ. ಒಂದೊಳ್ಳೆಯ ರಜಾ ಸಮಯವನ್ನು ಕಳೆಯುವುದಕ್ಕೆ ಪಾಲಂಪೂರ್ ಸೂಕ್ತ ಸ್ಥಳವಾಗಿದ್ದು ಉಳಿದ ವ್ಯಾವಹಾರಿಕ ಪ್ರವಾಸಿ ತಾಣಗಳಿಗಿಂತ ಭಿನ್ನವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 1220 ಮೀಟರ್ ಎತ್ತರದಲ್ಲಿರುವ ಪಾಲಂಪೂರ್ ನಿಸರ್ಗ ಮತ್ತು ಕಲಾ ಪ್ರಿಯರಿಗೆ ಒಳ್ಳೆಯ ಔತಣ ನೀಡುತ್ತದೆ. ಈ ಸ್ಥಳಕ್ಕೆ ಹೆಸರು ಹಿಮಾಚಲಿ ಭಾಷೆಯ ಶಬ್ದ ಪುಲುಂ ಎಂಬುದರಿಂದ ಬಂದಿದ್ದು ಅದರರ್ಥ ನೀರಿನ ಬುಗ್ಗೆ ಎಂದು.

19 ನೇ ಶತಮಾನದಲ್ಲಿ ಬ್ರಿಟಿಷರು ಈ ಸ್ಥಳವನ್ನು ಹುಡುಕಿ ಇಲ್ಲಿನ ಇಳಿಜಾರು ಭೂಮಿಯಲ್ಲಿ ಚಹ ಗಿಡಗಳನ್ನು ಬೆಳೆಸಲು ತೀರ್ಮಾನಿಸಿದರು. ಪಾಲಂಪುರ್ ರಾಜ್ಯದ ಚಹ ರಾಜಧಾನಿ ಎಂದೇ ಪ್ರಸಿದ್ದಿ ಪಡೆದಿದ್ದು ಬೇರೇ ಬೇರೇ ಬ್ರ್ಯಾಂಡ್ ಗಳ ಹೆಸರಲ್ಲಿ ಚಹ ರಫ್ತು ಮಾಡಲಾಗುತ್ತದೆ. ಸಣ್ಣ ನಗರಗಳು, ಭತ್ತದ ಗದ್ದೆಗಳು, ಹಳ್ಳಿಗಳು, ಸಾಲು ಸಾಲು ಬಂಗಲೆಗಳು ಮತ್ತು ಹಿಮಾವೃತ ದೌಲಾಧರ್ ಪರ್ವತ ಶ್ರೇಣಿಗಳು ಪ್ರವಾಸಿಗರ ಪಾಲಿಗೆ ಸ್ವರ್ಗದಂತಾಗಿದೆ.

ಗಗ್ಗಲ್ ಅಥವಾ ಧರ್ಮಶಾಲಾ-ಕಂಗ್ರ ವಿಮಾನ ನಿಲ್ದಾಣ ಪಾಲಂಪುರ್ ದಿಂದ 40 ಕಿಲೋ ಮೀಟರ್ ದೂರದಲ್ಲಿದೆ. ಈ ವಿಮಾನ ನಿಲ್ದಾಣ ದೆಹಲಿ ಮತ್ತು ಮುಂಬೈ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ರೈಲಿನಲ್ಲಿ ಪ್ರಯಾಣಿಸಲು ಇಚ್ಚಿಸುವವರು ಮರಂಡದಲ್ಲಿರುವ ನ್ಯಾರೋ ಗೇಝ್ ರೈಲು ನಿಲ್ದಾಣ ಮತ್ತು 120 ಕಿಲೋ ಮೀಟರ್ ದೂರದಲ್ಲಿರುವ ಬ್ರಾಡ್ ಗೇಝ್ ರೈಲು ನಿಲ್ದಾಣದಿಂದ ರೈಲ್ವೇ ಸಂಪರ್ಕ ಪಡೆಯಬಹುದು. ಇದರ ಜೊತೆಗೆ ರಸ್ತೆ ಪ್ರಯಾಣವೂ ಇಲ್ಲಿ ಸಾಧ್ಯ. ಮಂಡಿ, ಪಠಾನಕೋಟ್ ಮತ್ತು ಧರ್ಮಶಾಲಾದಿಂದ ಖಾಸಗಿ ಮತ್ತು ಸರ್ಕಾರಿ ಬಸ್ ಸೌಲಭ್ಯಗಳಿವೆ.

ಪಾಲಂಪೂರ್ ಪ್ರಸಿದ್ಧವಾಗಿದೆ

ಪಾಲಂಪೂರ್ ಹವಾಮಾನ

ಉತ್ತಮ ಸಮಯ ಪಾಲಂಪೂರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪಾಲಂಪೂರ್

  • ರಸ್ತೆಯ ಮೂಲಕ
    ಮಂಡಿ, ಧರ್ಮಶಾಲಾ ಮತ್ತು ಪಠಾನಕೋಟ್ ದಿಂದ ಸರ್ಕಾರಿ ಮತ್ತು ಖಾಸಗಿ ಬಸ್ ಸೌಲಭ್ಯಗಳಿವೆ. ಸಾರ್ವಜನಿಕ ಸಾರಿಗೆಯಲ್ಲಿ ಕಿಲೋಮೀಟರ್ ಗೆ ಕೇವಲ 2 ರೂಪಾಯಿ ದರವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಇದಕ್ಕೆ ಹತ್ತಿರದ ರೈಲ್ವೇ ನಿಲ್ದಾಣ ಮರಂಡದಲ್ಲಿದ್ದು, ಸುಮಾರು 2ಕಿಲೋ ಮೀಟರ್ ದೂರದಲ್ಲಿದೆ. ಹತ್ತಿರದ ಬ್ರಾಡ್ ಗೇಝ್ ರೈಲ್ವೇ ನಿಲ್ದಾಣ 120 ಕಿಲೋ ಮೀಟರ್ ದೂರದ ಪಠಾನಕೋಟ್ ನಲ್ಲಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಗಗ್ಗಲ್ ಅಥವಾ ಧರ್ಮಶಾಲಾ ವಿಮಾನ ನಿಲ್ದಾಣ ಪಾಲಂಪೂರಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ. ಇದು 40 ಕಿಲೋ ಮೀಟರ್ ದೂರದಲ್ಲಿದೆ. ದೆಹಲಿ ಮತ್ತು ಮುಂಬೈಗಳಿಗೆ ಇಲ್ಲಿಂದ ನೇರ ಸಂಪರ್ಕವಿದೆ. ಸುಮಾರು ಐಎನ್ಆರ್ 750 ಬಾಡಿಗೆಗೆ ಗಗ್ಗಲ್ ನಿಂದ ಪಾಲಂಪೂರ್ ಗೆ ಟ್ಯಾಕ್ಸಿ ದೊರೆಯುತ್ತದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪಾಲಂಪೂರದಿಂದ ದೆಹಲಿ ವಿಮಾನ ಸೌಲಭ್ಯವಿದೆ. ದೆಹಲಿ ಇಲ್ಲಿಂದ ಸುಮಾರು 540 ಕಿಲೋ ಮೀಟರ್. ಪ್ರವಾಸಿ ಟ್ಯಾಕ್ಸಿಗೆ ದೆಹಲಿಯಿಂದ ಪಾಲಂಪೂರಕ್ಕೆ ಒಂದು ಟ್ರಿಪ್ ಗೆ 10000 ರೂಪಾಯಿ ಚಾರ್ಜ್.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue