ಭಾರತೀಯ ಸೇನೆಯ ಅಧಿಕಾರಿ ಕ್ಯಾಪ್ಟನ್ ಸೌರಭ ಕಾಲಿಯ ಹೆಸರಿನಿಂದ ಸೌರಭ ವನ ವಿಹಾರಕ್ಕೆ ಹೆಸರಿಡಲಾಗಿದೆ. ದೌಲಾಧರ್ ಪರ್ವತ ಶ್ರೇಣಿಯಲ್ಲಿ ನೆಲೆ ನಿಂತಿರುವ ಸೌರಭ ವನ ವಿಹಾರ 35 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು ಪ್ರಧಾನ ಸ್ಥಳ.
ಈ ಭಾಗದಲ್ಲಿ ಮಾತ್ರ ಕಂಡುಬರುವ ಗಿಡಮರಗಳು ಮತ್ತು ಪ್ರಾಣಿ ಪಕ್ಷಿಗಳ ಸುಮಾರು 151 ತಳಿಗಳು ಇಲ್ಲಿ ಕಾಣ ಸಿಗುತ್ತವೆ. ಇದರ ಜೊತೆಗೆ ಹತ್ತಾರು ಗಿಡ ಮೂಲಿಕೆ ಔಷಧಿಗಳೂ ಲಭ್ಯವಿವೆ. ಮಕ್ಕಳ ಉದ್ಯಾನವನ, ವಿಹಾರ ತಾಣ , ಆರೋಗ್ಯ ಟ್ರಯಲ್, ನೀರಿನ ತೊರೆಗಳು, ಬಯಲು ರಂಗ ಮಂದಿರ, ಬಂಬೂಸೆಟಮ್ ಮತ್ತು ಟೈಗರ್ ಹಿಲ್ ಸೇತುವೆಗಳು ಇಲ್ಲಿವೆ.