Search
  • Follow NativePlanet
Share
» »BMTC : ಸಂಜೆ ವೇಳೆ ಬಸ್‌ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಟಿಕೆಟ್ ದರಕ್ಕೆ ಬೇಡಿಕೆ ನೀಡುವಂತಿಲ್ಲ!

BMTC : ಸಂಜೆ ವೇಳೆ ಬಸ್‌ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಟಿಕೆಟ್ ದರಕ್ಕೆ ಬೇಡಿಕೆ ನೀಡುವಂತಿಲ್ಲ!

ಸಂಜೆ ವೇಳೆ ವಿದ್ಯಾರ್ಥಿಗಳು ಬಸ್‌ ನಲ್ಲಿ ಪ್ರಯಾಣ ಬೆಳೆಸಿದರೆ ಕಂಡಕ್ಟರ್‌ಗಳು ಟಿಕೆಟ್ ದರಕ್ಕೆ ಬೇಡಿಕೆ ಇಡಬಾರದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಂಡಕ್ಟರ್‌ಗಳಿಗೆ ಸೂಚನೆ ನೀಡಿದೆ. ವಿದ್ಯಾರ್ಥಿಗಳ ಬಸ್ ಪಾಸ್‌ಗಳು 24 ಗಂಟೆಗಳ ಕಾಲ ಮಾನ್ಯವಾಗಿರುತ್ತವೆ ಎಂದು ನಿಗಮ ಸ್ಪಷ್ಟಪಡಿಸಿದೆ. ಆದರೆ ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗು ಪಾಸ್ ನಲ್ಲಿ ನಮೂದಿಸಿರುವ ಮಾರ್ಗಗಳಲ್ಲಿ ಮಾತ್ರ ಪ್ರಯಾಣಿಸಬೇಕಿರುತ್ತದೆ.

Students Who Have Pass Can Travel Any Time On City Buses

ಇತ್ತೀಚೆಗಷ್ಟೇ ಬಿಎಂಟಿಸಿ ಕಂಡಕ್ಟನೋರ್ವ ಸಂಜೆ 7 ಗಂಟೆಯ ನಂತರ ವಿದ್ಯಾರ್ಥಿ ಪಾಸ್‌ಗಳು ಮಾನ್ಯವಾಗಿಲ್ಲ ಎಂದು ಟಿಕೆಟ್ ಖರೀದಿಸಲು ಕೇಳಿದ್ದಕ್ಕಾಗಿ ವಿದ್ಯಾರ್ಥಿಯು ಬಿಎಂಟಿಸಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸಮಯದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುವಂತೆ ನಿಗಮವು ಕಂಡಕ್ಟರ್‌ಗಳಿಗೆ ಮೌಖಿಕ ಸೂಚನೆ ನೀಡಿದೆ.

ಬಿಎಂಟಿಸಿಯ ಅಧಿಕಾರಿಯೊಬ್ಬರು "ಸಂಜೆ 7 ಗಂಟೆಯ ನಂತರ ಒಬ್ಬ ವಿದ್ಯಾರ್ಥಿಗೆ ಪ್ರಯಾಣಿಸಲು ಕಂಡಕ್ಟರ್ ಅನುಮತಿಸಲಿಲ್ಲ ಎಂದು ಆರೋಪಿಸಿ ಬಿಎಂಟಿಸಿಯ ನಿಯಂತ್ರಣ ಕೊಠಡಿಗೆ ಇತ್ತೀಚೆಗೆ ದೂರು ಬಂದಿತ್ತು. ಇದನ್ನು ಪರಿಶೀಲಿಸಿ ಪಾಸ್ ಹೊಂದಿರುವವರಿಗೆ ಸಂಜೆಯ ನಂತರವೂ ಪ್ರಯಾಣಿಸಲು ಅವಕಾಶ ನೀಡುವಂತೆ ಕಂಡಕ್ಟರ್‌ಗಳಿಗೆ ತಿಳಿಸಲಾಗಿದೆ" ಎಂದು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X