Search
  • Follow NativePlanet
Share
ಮುಖಪುಟ » ಸ್ಥಳಗಳು» ಲಾಹೌಲ್

ಲಾಹೌಲ್‌ - ಮಾಯಾ ದಿಬ್ಬಗಳ ನಗರಿ

11

ಹಿಮಾಚಲ ಪ್ರದೇಶದ ಇಂಡೋ-ಟಿಬೇಟಿಯನ್‌ ಗಡಿಯಲ್ಲಿ ನೆಲೆಸಿರುವ ಪ್ರದೇಶವೆ ಲಾಹೌಲ್‌. ಎರಡು ವಿವಿಧ ಜಿಲ್ಲೆಗಳಾಗಿರುವ ಮತ್ತು ಪರ್ವತ ಪ್ರದೇಶಗಳಾಗಿರುವ ಲಾಹೌಲ್‌ ಮತ್ತು ಸ್ಪಿತಿಗಳನ್ನು 1960 ರಲ್ಲಿ ಒಂದೇ ಜಿಲ್ಲೆಯನ್ನಾಗಿ ಸಂಯೋಜಿಸಿ ಲಾಹೌಲ್‌ ಮತ್ತು ಸ್ಪಿತಿ ಎಂದು ಕರೆಯಲಾಯಿತು. ಇಲ್ಲಿನ ಸ್ಥಳೀಯರು ಬೆಳ್ಳನೆಯ ಚರ್ಮ ಮತ್ತು ಕಂದುಬಣ್ಣದ ಕಣ್ಣುಗಳನ್ನು ಹೊಂದಿದ್ದು ಇಂಡೋ-ಆರ್ಯನ್‌ ಮತ್ತು ಟಿಬೇಟಿಯನ್‌ ಸಂತತಿಯವರಾಗಿದ್ದಾರೆ. ಇಲ್ಲಿ ಹೆಚ್ಚಿನವರು ಬೌದ್ಧಮತವನ್ನು ಪಾಲಿಸುತ್ತಾರೆ ಮತ್ತು ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನೇ ಉಡುತ್ತಾರೆ. ಲಡಾಖ್‌ ಮತ್ತು ಟಿಬೇಟ್‌ನ ಜನ ಮಾತನಾಡುವ ಭಾಷೆಯನ್ನೇ ಇಲ್ಲಿನ ಜನರೂ ಮಾತನಾಡುತ್ತಾರೆ. ಇಲ್ಲಿ ಕಾಣಸಿಗುವ ಬೌದ್ಧ ಪ್ರಾರ್ಥನಾ ಮಂದಿರಗಳ ಮೇಲೆ ನಿರಂತರವಾಗಿ ಬಾವುಟಗಳು ಹಾರುತ್ತಿರುತ್ತವೆ. ಇಲ್ಲಿನ ಸ್ಥಳೀಯರ ಧಾರ್ಮಿಕ ಪ್ರಜ್ಞೆಯನ್ನು ಪ್ರಾರ್ಥನಾ ಮಂದಿರಗಳು ಸಾರುತ್ತವೆ ಎಂದರೆ ತಪ್ಪಾಗಲಾರದು.

ಈ ಪ್ರದೇಶದ ಬಹುತೇಕ ಜಾಗವು ಬರಡು ಭೂಮಿಯಾದ್ದರಿಂದ ಇಲ್ಲಿ ಕೇವಲ ಪೊದೆಗಳು ಮತ್ತು ಹುಲ್ಲುಗಳು ಮಾತ್ರ ಬೆಳೆಯುತ್ತವೆ. ಸ್ಥಳೀಯರು ಪ್ರಮುಖವಾಗಿ ಆಲೂಗಡ್ಡೆ ಬೆಳೆ, ಪ್ರಾಣಿ ಸಾಕಾಣಿಕೆ ಹಾಗೂ ನೇಕಾರಿಕೆಯಂತಹ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಇಲ್ಲಿನ ಮನೆಗಳೆಲ್ಲವೂ ಟಿಬೇಟಿಯನ್‌ ವಾಸ್ತುಶಿಲ್ಪದ ಪ್ರಕಾರ ಕಟ್ಟಲಾಗಿದ್ದು, 10 ಡಿಗ್ರಿಯಷ್ಟು ಒಳಬಾಗಿರುವಂತೆ ನಿರ್ಮಿಸಲಾಗಿರುತ್ತದೆ. ಮನೆ ನಿರ್ಮಾಣಕ್ಕೆ ಹೆಚ್ಚಾಗಿ ಮರಗಳು, ಕಲ್ಲುಗಳು ಮತ್ತು ಸಿಮೆಂಟನ್ನು ಬಳಸಲಾಗುತ್ತದೆ. ಈ ಸಾಮಗ್ರಿಗಳನ್ನು ಸಾಮಾನ್ಯವಾಗಿ ಭೂಕಂಪ ಸಂಭವಿಸುವ ಪ್ರದೇಶದಲ್ಲಿ ಉಪಯೋಗಿಸಲಾಗುತ್ತದೆ.

ಕಾಡೆಮ್ಮೆ ಮತ್ತು ಚಮರೀಮೃಗಗಳು ಇಲ್ಲಿ ಯಥೇಚ್ಛವಾಗಿ ತಿರುಗಾಡುತ್ತಿರುವುದನ್ನು ಕಾಣಬಹುದು. ಟಿಬೇಟಿಯನ್‌ ಪ್ರದೇಶದಲ್ಲಿ ಪ್ರಾಣಿಗಳ ಸಂಖ್ಯೆ ತಗ್ಗುತ್ತಿರುವುದರಿಂದಾಗಿ ಕಾಡುಕುರಿ, ಕತ್ತೆಗಳು, ಜಿಂಕೆ ಮತ್ತು ಹಿಮಚಿರತೆಗಳನ್ನು ಅಳಿವಿನಂಚಿನ ಪ್ರಾಣಿಗಳು ಎಂದು ಪರಿಗಣಿಸಲಾಗಿದೆ.

ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯೆಂದರೆ ಕಿಬ್ಬರ್ ಹಳ್ಳಿ. ಇಲ್ಲಿ ಬೌದ್ಧ ವಿಹಾರ ಮತ್ತು ಕಿಬ್ಬರ್ ವನ್ಯಧಾಮವಿದೆ. ಇತರ ಪ್ರವಾಸಿ ತಾಣಗಳೆಂದರೆ ಪಿನ್‌ ವ್ಯಾಲಿ ನ್ಯಾಷನಲ್‌ ಪಾರ್ಕ್‌, ಕೇಯ್‌ ಬೌದ್ಧ ವಿಹಾರ ಮತ್ತು ಕುನ್‌ಝುಮ್‌ ಪಾಸ್‌.

ಲಾಹೌಲ್ ಗೆ ತಲುಪಲು ಭುಂತರ್ ವಿಮಾನ ನಿಲ್ದಾಣವು ಹತ್ತಿರದ ವಾಯುನೆಲೆಯಾಗಿದ್ದು, ಪ್ರಮುಖ ನಗರಗಳಾದ ನವದೆಹಲಿ ಮತ್ತು ಶಿಮ್ಲಾಗೆ ಸಂಪರ್ಕವನ್ನು ಹೊಂದಿದೆ. ವಿಮಾನ ನಿಲ್ದಾಣದಿಂದ ಲಾಹೌಲ್‌-ಸ್ಪಿತಿಯನ್ನು ತಲುಪಲು ಟ್ಯಾಕ್ಸಿ ಮತ್ತು ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆಯಬಹುದು. ಲಾಹೌಲ್‌ಗೆ ಸಮೀಪದ ನ್ಯಾರೋ ಗೇಜ್‌ ರೈಲ್ವೆ ನಿಲ್ದಾಣವು ಜೋಗಿಂದರ್ ನಗರ್ ರೈಲ್ವೆ ನಿಲ್ದಾಣ. ಇದು ಚಂಡೀಗಢ ರೈಲ್ವೆ ನಿಲ್ದಾಣ ಮತ್ತು ಭಾರತದ ಇತರ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ರಸ್ತೆಯ ಮೂಲಕ ತಲುಪುವುದಾದರೆ ರೋಹ್‌ಟಂಗ್‌ ಪಾಸ್‌, ಕುನ್‌ಝುಮ್‌ ಪಾಸ್‌ ಮತ್ತು ಕಿನ್ನೌರ್ ಮೂಲಕ ಸಾಗಿ ಲಾಹೌಲ್‌ಗೆ ಹೋಗಬಹುದು.

ಲಾಹೌಲ್ ಪ್ರಸಿದ್ಧವಾಗಿದೆ

ಲಾಹೌಲ್ ಹವಾಮಾನ

ಉತ್ತಮ ಸಮಯ ಲಾಹೌಲ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಲಾಹೌಲ್

  • ರಸ್ತೆಯ ಮೂಲಕ
    ಲಾಹೌಲ್‌ಗೆ ರಾಷ್ಟ್ರೀಯ ಹೆದ್ದಾರಿ 21ರಲ್ಲಿ ಮನಾಲಿ ಮೂಲಕ ರೋಹ್‌ಟಂಗ್‌ ಪಾಸ್‌ನಿಂದ ಕಾಝಾಗೆ ತಲುಪಬಹುದು. ಪ್ರವಾಸಿಗರು ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ ರೋಹ್‌ಟಂಗ್‌ ಪಾಸ್‌, ಮಧ್ಯ ನವೆಂಬರಿನಿಂದ ಮೇ ತಿಂಗಳ ಮಧ್ಯದ ವರೆಗೆ ಅತಿಯಾದ ಮಂಜು ಸುರಿಯುವಿಕೆಯಿಂದಾಗಿ ಮುಚ್ಚಿರುತ್ತದೆ. ಲಾಹೌಲ್‌ಗೆ ಪ್ರಯಾಣಿಸಲು ಕುನ್‌ಝುಮ್‌ ಪಾಸ್‌ ಇನ್ನೊಂದು ದಾರಿ. ಆದರೂ ಹೆಚ್ಚು ಪ್ರಶಸ್ತವಾದದ್ದು ಕಿನ್ನೌರ್ ದಾರಿಯೇ ಆಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜೋಗಿಂದರ್ ನಗರ ನ್ಯಾರೊ ಗೇಜ್ ಲಾಹೌಲ್ ಗೆ ಹತ್ತಿರದ ರೈಲು ತುದಿಯಾಗಿದ್ದು, ಹತ್ತಿರದ ಪ್ರಮುಖ ರೈಲು ನಿಲ್ದಾಣವೆಂದರೆ ಚಂಡೀಗಢ್. ಈ ನಿಲ್ದಾಣಗಳಿಂದ ಲಾಹೌಲ್ ಗೆ ಟ್ಯಕ್ಸಿ ಹಾಗು ಕ್ಯಾಬ್ಗಳು ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಲಾಹೌಲ್‌ಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಭುಂತರ್. ಇಲ್ಲಿಂದ ನವದೆಹಲಿ ಮತ್ತು ಶಿಮ್ಲಾದಂಥ ಭಾರತದ ಪ್ರಮುಖ ನಗರಗಳ ಸಂಪರ್ಕವಿದೆ. ಪ್ರವಾಸಿಗರು ವಿಮಾನ ನಿಲ್ದಾಣದ ಹೊರಭಾಗದಿಂದ ಇಲ್ಲಿಗೆ ಟ್ಯಾಕ್ಸಿ ಅಥವಾ ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆದು ಲಾಹೌಲ್‌ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Apr,Sun
Return On
27 Apr,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Sun
Check Out
27 Apr,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Sun
Return On
27 Apr,Mon