Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾಹೌಲ್ » ಹವಾಮಾನ

ಲಾಹೌಲ್ ಹವಾಮಾನ

ಲಾಹೌಲ್‌ಗೆ ಪ್ರವಾಸ ಕೈಗೊಳ್ಳಲು ಸೂಕ್ತ ಅವಧಿಯೆಂದರೆ ಬೇಸಿಗೆಗಾಲ. ಈ ಅವಧಿಯಲ್ಲಿ ತಾಪಮಾನವು ಸೂಕ್ತವಾಗಿರುತ್ತದೆ.

ಬೇಸಿಗೆಗಾಲ

(ಮೇ ನಿಂದ ಅಕ್ಟೋಬರಿನವರೆಗೆ) : ಲಾಹೌಲ್‌ನಲ್ಲಿ ಬೇಸಿಗೆಗಾಲವು ಮೇ ನಿಂದ ಅಕ್ಟೋಬರಿನವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ವಾತಾವರಣವು 15 ಡಿಗ್ರಿಯವರೆಗೆ ಇಳಿಯುತ್ತದೆ. ಇಂಥ ವಾತಾವರಣದಲ್ಲಿ ಇಲ್ಲಿ ತಿರುಗಾಡಲು ಪ್ರವಾಸಿಗರಿಗೆ ಅತ್ಯಂತ ಹಿತವಾಗಿರುತ್ತದೆ.

ಮಳೆಗಾಲ

ಲಾಹೌಲ್‌ನಲ್ಲಿ ಮಳೆಗಾಲವು ತೀರಾ ಕಡಿಮೆ. ಬೇಸಿಗೆ ಕಾಲದಂತೆ ಈ ಅವಧಿಯಲ್ಲೂ ಆರ್ದ್ರವಾಗಿರುತ್ತದೆ. ಆದರೂ ರಾತ್ರಿಯಲ್ಲಿ ತಾಪಮಾನವು ತುಂಬಾ ಇಳಿಯುತ್ತದೆ. ಪ್ರವಾಸಿಗರು ಇಲ್ಲಿಗೆ ಪ್ರಯಾಣ ಬೆಳೆಸುವಾಗ ವುಲನ್‌ ಬಟ್ಟೆಗಳನ್ನು ತೆಗೆದುಕೊಂಡುಹೋಗುವುದು ಒಳಿತು.

ಚಳಿಗಾಲ

(ನವೆಂಬರಿನಿಂದ ಏಪ್ರಿಲ್‌): ಲಾಹೌಲ್‌ನಲ್ಲಿ ಚಳಿಗಾಲ ನವೆಂಬರಿನಿಂದ ಏಪ್ರಿಲ್‌ ತಿಂಗಳಿನವರೆಗೆ ವ್ಯಾಪಿಸಿರುತ್ತದೆ. ಈ ಅವಧಿಯಲ್ಲಿ ವಿಪರೀತ ಹಿಮಪಾತವಾಗುತ್ತದೆ. ಇದರಿಂದಾಗಿ ಇಲ್ಲಿನ ರಸ್ತೆಗಳು ಮುಚ್ಚಿಹೋಗುತ್ತವೆ.