ಪೂಕೊಟ್ ಕೆರೆ (ಪೂಕೊಡೆ ಕೆರೆ) ಎಂಬುದು ವಯನಾಡಿನಲ್ಲಿರುವ ತಿಳಿನೀರಿನ ಕೆರೆಯಾಗಿದೆ. ಈ ಕೆರೆಯು ದಟ್ಟ ಕಾಡಿನ ನಡುವೆ ಇದ್ದು, ತನ್ನ ಪ್ರಶಾಂತವಾದ ವಾತಾವರಣದಿಂದಾಗಿ ಕೇರಳ ರಾಜ್ಯದ ಪ್ರಸಿದ್ದ ವಿಹಾರ ತಾಣವಾಗಿದೆ. ನೀವು ನಿಮ್ಮ ಕುಟುಂಬದೊಂದಿಗೆ ಈ ಕೆರೆಯ ದಂಡೆಯ ಮೇಲೆ ಗಂಟೆಗಟ್ಟಲೆ ಸುಮ್ಮನೆ ಕುಳಿತು ಕೆರೆಯ ಅಂದವನ್ನು ಸವಿಯುತ್ತ ಕಾಲ ಕಳೆಯಬಹುದು. ಇಲ್ಲವೆ ದೋಣಿಯನ್ನು ಬಾಡಿಗೆ ಪಡೆದು, ಅದನ್ನು ಚಾಲಯಿಸುತ್ತ ಮೋಜು ಮಾಡಬಹುದು.
ಈ ಕೆರೆಗೆ ಸಮೀಪದಲ್ಲಿ ಶ್ರೀ ನಾರಾಯಣ ಆಶ್ರಮ ಇದೆ. ಈ ಆಶ್ರಮದಲ್ಲಿ ಕೆಲಹೊತ್ತು ಇದ್ದು ನಿಮ್ಮ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿಯನ್ನು ಕೊಡಬಹುದು. ಈ ಆಶ್ರಮದಲ್ಲಿರುವ ಪ್ರಶಾಂತವಾದ ವಾತಾವರಣವು ನಿಮಗೆ ವಿಶೇಷ ಅನುಭೂತಿಯನ್ನು ಒದಗಿಸಿ, ನಿಮ್ಮ ಎಲ್ಲ ಸಮಸ್ಯೆಗಳನ್ನು ಮರೆಯುವಂತೆ ಮಾಡುತ್ತದೆ. ಈ ಆಶ್ರಮವು ಮೂಕ ವಿಸ್ಮಿತಗೊಳಿಸುವಂತಹ ಸೌಂದರ್ಯವನ್ನು ತನ್ನಲ್ಲಡಗಿಸಿಕೊಂಡಿದೆ. ಇದರ ಸುತ್ತಲು ಹೂವುಗಳಿಂದ ಆಚ್ಛಾಧಿತವಾದ ಮರಗಳು, ಹುಲ್ಲು ಹಾಸುಗಳು ಮತ್ತು ಆಕರ್ಷಕವಾದ ಕೆರೆಗಳೆಲ್ಲವು ಸೇರಿ ನೋಡುಗರ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತವೆ.
ಈ ಕೆರೆಗೆ ಸಮೀಪದಲ್ಲಿರುವ ಅಂಗಡಿಗಳಲ್ಲಿ ನಿಮ್ಮ ಪ್ರೀತಿ ಪಾತ್ರರಿಗಾಗಿ ಉಡುಗೊರೆಗಳನ್ನು ಖರೀದಿಸಬಹುದು.


Click it and Unblock the Notifications