Search
  • Follow NativePlanet
Share
ಮುಖಪುಟ » ಸ್ಥಳಗಳು» ವರ್ಕಲಾ

ವರ್ಕಲಾ : ಪುರುಷ ಹಾಗೂ ಪ್ರಕೃತಿಯ ಒಕ್ಕೂಟ. ಸಮಾಗಮ

34

ನಾವು ಇರುವ ಸ್ಥಳಗಳಿಂದ ಬೇರೆ ಸ್ಥಳಗಳಿಗೆ ಪ್ರವಾಸಕ್ಕೆ ಹೋಗುವುದು ಕೆಲವರ ಹವ್ಯಾಸ. ಇದು ಒಳ್ಳೆಯ ಅಭ್ಯಾಸ ಕೂಡಾ. ಆದರೆ ಎಲ್ಲರಿಗೂ ಎಲ್ಲಾ ಸಮಯಗಳಲ್ಲಿಯೂ ಹೊರವಲಯಕ್ಕೆ ಹೋಗುವುದು ಸುಲಭವಲ್ಲ. ಕೆಲಸದ ನಡುವೆ ಬಿಡುವು ಸಿಗುವುದೆ ಅಪರೂಪವಾಗಿರುತ್ತದೆ. ಆದರೆ ಸಮಯ ಸಿಕ್ಕಾಗ ನಿಮ್ಮ ಕುಟುಂಬದವರೊಂದಿಗೆ ಪ್ರಯಾಣ ಮಾಡಬೇಕೆಂದರೆ ನಿಮಗೆ ಸೂಕ್ತವಾದ ಸ್ಥಳ ಬೇಕಲ್ಲವೇ? ಇದಕ್ಕಾಗಿಯೇ ನಿಮಗೊಂದು ಉತ್ತಮವಾದ ಹಾಗೂ ಮೌಲ್ಯಯುತ ಎನಿಸುವ ಸ್ಥಳವೊಂದರ ಬಗ್ಗೆ ಒಂದು ಸಂಕ್ಷಿಪ್ತ  ಮಾಹಿತಿ ಇಲ್ಲಿದೆ.

ಭಾರತದಲ್ಲಿನ ಎಲ್ಲಾ ಪ್ರೇಕ್ಷಣೀಯ ಸ್ಥಳಗಳಂತೆಯೇ ಕೇರಳವೂ ಕೂಡಾ ಸೌಂದರ್ಯಗಳ ನಾಡು, ಪ್ರಕೃತಿಗಳ ಬೀಡು. ಇಲ್ಲಿನ ಪ್ರತಿಯೊಂದು ಜಿಲ್ಲೆಯೂ ವಿಶೇಷತೆಗಳನ್ನು ಹೊತ್ತು ನಿಂತಿವೆ. ಧಾರ್ಮಿಕ ನಂಬಿಕೆಗಳಿಂದ ಹಿಡಿದು ಸಂಶೋಧನೆಗಳಿಗೆ ಬೇಕಾಗುವ ಸೂಕ್ತ ಸ್ಥಳ, ಅದುವೇ ಕೇರಳ ರಾಜ್ಯ. ಕೇರಳ ರಾಜ್ಯದ ವರ್ಕಲಾಕ್ಕೊಮ್ಮೆ ನೀವು ಭೇಟಿಯಿತ್ತರೆ ನಿಮ್ಮ ಮನಸ್ಸಿನಲ್ಲಿ ಇಲ್ಲಿನ ಸೊಬಗು ಶಾಶ್ವತವಾಗಿ ಅಚ್ಚಳಿಯದಂತೆ ಹಾಗೆಯೇ ಉಳಿಯುವುದರಲ್ಲಿ ಎರಡು ಮಾತಿಲ್ಲ.

ವರ್ಕಲಾ ಕರಾವಳಿ ತೀರದಲ್ಲಿರುವ ಒಂದು ಸುಂದರವಾದ ಪಟ್ಟಣ. ಇದು ಕೇರಳ ರಾಜ್ಯದಲ್ಲಿರುವ ತಿರುವಂನಂತಪುರಂ ಜಿಲ್ಲೆಯಲ್ಲಿದೆ. ಈ ಪಟ್ಟಣವು ಕೇರಳದ ದಕ್ಷಿಣ ಭಾಗದಲ್ಲಿದೆ. ವರ್ಕಲಾ ಸಾಗರಕ್ಕೆ ಅತ್ಯಂತ ಹತ್ತಿರದಲ್ಲಿರುವ ಪರ್ವತ ಪ್ರದೇಶವಾಗಿದ್ದು ಕೇರಳದಲ್ಲಿರುವ ಏಕೈಕ ಪರ್ವತ ವಲಯವಾಗಿದೆ. ಇಲ್ಲಿನ ಅಪೂರ್ವತೆಯೆಂದರೆ ವರ್ಕಲಾ ಬೆಟ್ಟಗಳು ಅರೇಬಿಯನ್ ಸಮುದ್ರ ಪ್ರಪಾತದೊಂದಿಗೆ ವಿಲೀನವಾದಂತೆ ತೋರುತ್ತದೆ. ಭಾರತದ ಬೌಗೋಳಿಕ / ಸರ್ವೇಕ್ಷಣೆ, ವರ್ಕಲಾ ರಚನೆ ಎಂದು ಕರೆದಿದ್ದಾರೆ. ಕರಾವಳಿ ತೀರದಲ್ಲಿ ನೀರು ಬಂದು ಅಪ್ಪಳಿಸುವುದು ಕಾಲೋಚಿತ ಕಡಲ ತೀರಗಳು, ಡಿಸ್ಕವರಿ ಚಾನಲ್ ಗಳಲ್ಲಿಯೂ ವರ್ಕಲಾದ ಸೊಬಗನ್ನು ತೋರಿಸಲಾಗಿದೆ. ಅಲ್ಲದೆ ಅದನ್ನು ಪ್ರಮುಖ 10 ಕಡಲ ತೀರಗಳಲ್ಲಿ ವರ್ಕಲಾವೂ ಒಂದು ಎಂದು ಹೇಳಲಾಗಿದೆ.

ಪೌರಾಣಿಕ ರಚನೆ

ಪುರಾಣಗಳ ಪ್ರಕಾರ ವರ್ಕಲಾ ಬಗ್ಗೆ ಈ ಕೆಳಗಿನಂತೆ ಪ್ರಚಲಿತವಿದೆ. ಪದ್ಯನ್ ಎನ್ನುವ ರಾಜ ವರ್ಕಲಾದಲ್ಲಿ ತನ್ನ ಪಾಪ ಪರಿಹಾರಕ್ಕಾಗಿ ಭಗವಾನ್ ಬ್ರಹ್ಮನಿಂದ ಆದೇಶವನ್ನು ಪಡೆದಿದ್ದನು. ಎರಡನೇ ಪೌರಾಣಿಕ ಪ್ರತೀತಿಯ ಪ್ರಕಾರ, ನಾರದ ಮುನಿಯು ಜ್ನರ ನಡುವೆ ಪ್ರತ್ಯಕ್ಷನಾದ ಕೂಡಲೇ  ತನ್ನ ಬಳಿ ಬಂದ ಭಕ್ತಾದಿಗಳು ಪಾಪ ಪರಿಹಾರಕ್ಕಾಗಿ ಮಾರ್ಗವನ್ನು ಕೇಳಿದಾಗ ಆತ ತನ್ನ ಕೈಯಲ್ಲಿದ್ದ ವಲ್ಕಂ ನ್ನು ಗಾಳಿಯಲ್ಲಿ ಬೀಸುತ್ತಾನೆ ಎದು ಎಲ್ಲಿ ನೆಲೆಗೊಂಡಿತೋ ಆ ಸ್ಥಳವೇ ಮುಂದೆ ವರ್ಕಲಾ ಎಂಬ ಹೆಸರಿನಿಂದ ಪ್ರಸಿದ್ದಿಯನ್ನು ಪಡೆಯಿತು. ಆದ್ದರಿಂದಲೇ ಈ ಬೀಚ್ ಹಿಂದುಗಳ ಪವಿತ್ರ ಸ್ಥಳವಾಗಿದೆ.

ಸರಳ ಪ್ರವಾಸ

ಇದು ಹಿಂದೂ ಹಾಗೂ ಮುಸ್ಲಿಂ ಭಕ್ತಾದಿಗಳ ಪ್ರಮುಖ ಯಾತ್ರಾ ಸ್ಥಳ. ಇತರ ಸ್ಥಳಗಳೆಂದರೆ ಶಿವಗಿರಿ ಮಠ, ಜನಾರ್ಧನ ಸ್ವಾಮಿ ದೇವಾಲಯ, ಕದುವೈಲಿ ಜುಮಾ ಮಸೀದಿ, ವರ್ಕಲಾ ಬೀಚ್, ಪಾಪನಾಶಂ ಬೀಚ್, ಕಪಿಲ ಕೆರೆ, ಅಂಚೆಗೋ (Anchelo) ಕೋಟೆ, ವರ್ಕಲಾ ಸುರಂಗ, ಶಿವ ಪಾರ್ವತಿ ದೇವಾಲಯ, ಹಾಗೂ ಪವರ್ ಹೌಸ್ ನ್ನು ಕಾಣ ಬಹುದು.

ವರ್ಕಲಾ ಒಂದು ಮೌಲ್ಯಯುತವಾದ ಪ್ರವಾಸಿತಾಣವಾಗಿದೆ. ಇಲ್ಲಿನ ಹಲವಾರು ನೀರಿನ ಬುಗ್ಗೆಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ.  ಇಲ್ಲಿನ ಪ್ರಮುಖ ಬೀಚ್ ಎಂದರೆ, ಪಾಪನಾಶಂ ಬೀಚ್ ಇದರ ಅತ್ಯಂತ ಸಮೀಪದಲ್ಲಿ ಜನಾರ್ಧನ ಸ್ವಾಮಿ ದೇವಾಲಯವಿದೆ. ಈ ದೇವಾಲಯಕ್ಕೆ 2000 ವರ್ಷಗಳ ಇತಿಹಾಸವಿದೆ. ಜನಾರ್ಧನ ಸ್ವಾಮಿ ದೇವಾಲಯವು ಇಲ್ಲಿನ ಪ್ರಮುಖ ಆಕರ್ಷಣೆ.

ವರ್ಕಲಾ ಬೀಚ್ ಅತ್ಯಂತ ಪ್ರಮುಖ ಹಾಗೂ ಪ್ರಸಿದ್ಧವಾದ ಬೀಚ್ ಆಗಿದ್ದು, ಇಲ್ಲಿ ಹಲವಾರು ಬೇರೆ ಬೇರೆ ಚಟುವಟುಕೆಗಳನ್ನು ಆನಂದಿಸಬಹುದು.  ಪ್ಯಾರಾ – ನೌಕಾಯಾನ, ಪ್ಯಾರಾಗ್ಲೈಡಿಂಗ್ ಮೊದಲಾದವು ಮುದ ನೀಡುವ ಚಟುವಟಿಕೆಗಳಾಗಿವೆ. ಕಪಿಲ್ ಲೇಕ್ / ಕೆರೆ ಈ ಬೀಚ್ ಗೆ ಅತ್ಯಂತ ಹತ್ತಿರದಲ್ಲಿಯೆ ಕಾಣಬಹುದು. ಇದು ಇನ್ನೊಂದು ಸುಂದರವಾದ ಪ್ರದೇಶವಾಗಿದೆ. ಚಿಲಕ್ಕೂರ್ ಬೀಚ್ ವರ್ಕಲಾ ಪಟ್ಟಣದ ಅತ್ಯಂತ ಸಮೀಪದಲ್ಲಿ ಕಾಣಬಹುದು. ಸೂರ್ಯಾಸ್ತದ ಸೊಬಗನ್ನು ನೋಡಿ ಕಣ್ತುಂಬಿಸಿಕೊಳ್ಳಬೇಕಾದರೆ ಈ ಕಡಲ ತೀರಕ್ಕೆ ಬರಬೇಕು. . ಪೊನ್ನುಮ್ ತುರುತು ದ್ವೀಪ ಹಾಗೂ ಗೋಲ್ಡನ್ ದ್ವೀಪ ಕೂಡಾ ಮತ್ತೊಂದು ಸುಂದರ ತಾಣ. ಇಲ್ಲಿ ನೂರು ವರ್ಷ ಹಳೆಯದಾದ ಶಿವ – ಪಾರ್ವತಿ ದೇವಾಲಯವು ಇಲ್ಲಿಯೇ ಇರುವುದರಿಂದ ಈ ಸ್ಥಳ ಇನ್ನಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಅಂಜೆಂಗೋ (Anjengo) ಕೋಟೆ/ ಬಂದರು ಐತಿಹಾಸಿಕ ಕೋಟೆಯಾಗಿದೆ. ಅಲ್ಲದೇ ಅನೇಕ ಪ್ರವಾಸಿಗರಿಗೆ ಇದೊಂದು ಅತ್ಯಂತ ಪ್ರಿಯವಾದ ಪ್ರವಾಸಿ ತಾಣವಾಗಿದೆ. ವರ್ಕಲಾದ ಅಕ್ಕ ಪಕ್ಕದಲ್ಲಿರುವ ಸುರಂಗ ಹಾಗೂ ಲೈಟ್ ಹೌಸ್, ಈ ಪ್ರದೇಶವನ್ನು ಇನ್ನಷ್ಟು ಲಾವಣ್ಯಯುತವಾಗಿ ಕಾಣುವಂತೆ ಮಾಡಿದೆ. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಕೇರಳದ ಪಾರಂಪರಿಕ ನೃತ್ಯ ಕಥಕ್ಕಳಿ. ವರ್ಕಲಾದಲ್ಲಿರುವ ಕಥಕ್ಕಳಿ ಕೇಂದ್ರವು ಇನ್ನೊಂದು ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಇಲ್ಲಿ ಹೆಚ್ಚಾಗಿ ಪ್ರತೀ ದಿನ ರಾತ್ರಿ ಹಾಗೂ ವಿಶೇಷವಾಗಿ ರಜಾದಿನಗಳಲ್ಲಿ ಕಥಕ್ಕಳಿ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಮೇಕಪ್ ವಿಭಾಗದ ಬಗ್ಗೆ ಮಾಹಿತಿಯನ್ನು ಕೊಟ್ಟ ನಂತರ ಪ್ರದರ್ಶನನವನ್ನು ಆರಂಭಿಸಲಾಗುತ್ತದೆ. ಪ್ರೇಕ್ಷಕರು ಕಥಕ್ಕಳಿ ಮೇಕಪ್ ಬಗ್ಗೆ ತಿಳಿಯಲು ಇದರಿಂದ ಸಹಾಯವಾಗುತ್ತದೆ.  ಈ ಕೇಂದ್ರದಲ್ಲಿ ಪ್ರೇಕ್ಷಕರಿಗಾಗಿ ಮೋಹಿನಿಯಾಟಂ ಪ್ರದರ್ಶನವನ್ನೂ ಕೂಡಾ ಮಾಡಲಾಗುತ್ತದೆ. ವರ್ಕಲಾ ಪಟ್ಟಣದ ಕೇಂದ್ರ ಭಾಗದಲ್ಲಿಯೇ ಇದನ್ನು ನಿರ್ಮಿಸಲಾಗಿದೆ.

ವಿಶ್ರಾಂತಿ ಮತ್ತು ಯೋಗದ ಮೂಲಕ ಪುನರ್ಯೌವನ !

ಕಾಸಿ ಯೋಗ ಮತ್ತು ಅನುಷ್ಟಾನ ಕೇಂದ್ರ ನಿಮ್ಮನ್ನು ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ. ಇದೊಂದು ಯೋಗ ಹಾಗೂ ಧ್ಯಾನದ ತರಬೇತಿ ಕೇಂದ್ರವಾಗಿದೆ. ವಿಶ್ರಾಂತಿ ಹಾಗೂ ಪುನರ್ಯೌವ್ವನ ಯೋಗ ಹಾಗೂ ಬಾಡಿ ಮಸಾಜ್ ಗಾಗಿ ಬೇರೆ ಬೇರೆ ಕೇಂದ್ರಗಳಿವೆ. ಆದರೆ ಇದು ಕೇವಲ ಕಾಲಕ್ಕನುಗುಣವಾಗಿ ಮಾತ್ರ. ಒಂದು ವಾರದಿಂದ ಇಂದು ತಿಂಗಳು ಕಾಲ ಈ ಕೇಂದ್ರಗಳಲ್ಲಿ ತರಬೇತಿಯನ್ನು ಪಡೆಯಬಹುದು. ಅಲ್ಲದೇ ಮನಸ್ಸಿನ ವಿಶ್ರಾಂತಿಗಾಗಿ ಧ್ಯಾನವನ್ನು ಮಾಡಲು ಶಿವಗಿರಿ ಮಠವು ಅತ್ಯುತ್ತಮ ಸ್ಥಳ. ವರ್ಕಲಾ ಬೀಚ್ ನ ಪಕ್ಕದಲ್ಲಿ ಪ್ರಕೃತಿ ಚಿಕಿತ್ಸೆ ಕೇಂದ್ರಗಳನ್ನು ಕೂಡಾ ಪ್ರವಾಸಿಗರಿಗಾಗಿ ಒದಗಿಸಲಾಗಿದೆ.

ವರ್ಕಲಾಕ್ಕೆ ತಲುಪುವುದು

ವರ್ಕಲಾ ಪಟ್ಟಣವು ತಿರುವನಂತಪುರಂ ನಗರದಿಂದ 50 ಕೀ.ಮಿ ಉತ್ತರಕ್ಕೆ ಹಾಗೂ ಕೊಲ್ಲಂ ನಗರದ ನೈಋತ್ಯಕ್ಕೆ 37 ಕೀ.ಮಿ ದೂರದಲ್ಲಿ ಕಾಣಬಹುದು. ದಕ್ಷಿಣ ಭಾರತದ ಎಲ್ಲಾ ಪ್ರಮುಖ ಪಟ್ಟಣಗಳಿಂದ ಇಲ್ಲಿಗೆ ಕೆಎಸ್ ಆರ್ ಟ್ ಸಿ ಬಸ್ ಸೌಲಭ್ಯವಿದೆ. ಅಲ್ಲದೆ ರೈಲ್ವೆ ಸೌಕರ್ಯ ಕೂಡಾ ಒದಗಿಸಲಾಗಿದ್ದು ಹತ್ತಿರದ ತಿರುವನಂತಪುರಂ ವಿಮಾನ ನಿಲ್ದಾಣದ ಮೂಲಕವೂ ವರ್ಕಲಾ ನಗರವನ್ನು ಸೇರಬಹುದು.        

ಹವಾಗುಣ

ಕೇರಳಾದ ಕರಾವಳಿ ತೀರದ ಇತರ ನಗರಗಳಂತೆ ವರ್ಕಲಾದಂತೆ ಮಧ್ಯಮ ಹವಾಗುಣವನ್ನು ಹೊಂದಿದೆ. ಆದರೆ ಚಳಿಗಾಲವು ವರ್ಕಲಾಕ್ಕೆ ಪ್ರವಾಸಕ್ಕೆ ಹೋಗಲು ಸೂಕ್ತವಾದ ಸಮಯ.

ವರ್ಕಲಾ ಪ್ರಸಿದ್ಧವಾಗಿದೆ

ವರ್ಕಲಾ ಹವಾಮಾನ

ಉತ್ತಮ ಸಮಯ ವರ್ಕಲಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ವರ್ಕಲಾ

  • ರಸ್ತೆಯ ಮೂಲಕ
    ವರ್ಕಲಾಕ್ಕೆ ತಲುಪಲು ಕೇರಳದ ಎಲ್ಲಾ ಭಾಗಗಳಿಂದ ಹಾಗೂ ತಮಿಳುನಾಡಿನಿಂದ ನೇರವಾಗಿ ಬಸ್ ಸೌಕರ್ಯವಿದೆ. ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣವು ರೈಲ್ವೆ ನಿಲ್ದಾಣಕ್ಕೆ ಅತ್ಯಂತ ಹತ್ತಿರದಲ್ಲಿದೆ. ದಕ್ಷಿಣ ಭಾರತದ ಎಲ್ಲಾ ಪ್ರಮುಖ ಪಟ್ಟಣಗಳಿಂದ ವರ್ಕಲಾಕ್ಕೆ ಬಸ್ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕೆರಳದ ಇತರ ಭಾಗಗಳಿಂದ ಪ್ರತಿ ದಿನ ವರ್ಕಲಾಕ್ಕೆ ರೈಲ್ವೇ ಸೌಲಭ್ಯವಿದೆ. ಅಲ್ಲದೇ ರೈಲಿಗೆ ಭರಿಸುವ ಹಣ ಕೂಡಾ ದುಬಾರಿಯಲ್ಲ. ರೈಲ್ವೆ ನಿಲ್ದಾಣದಿಂದ ಪ್ರಿ ಪೇಯ್ಡ್ (ಮೊದಲೇ ನಿಖರ ಹಣ ಪಾವತಿಸಿ) ಆಟೋ ರಿಕ್ಷಾಗಳ ಮೂಲಕವೂ ಪ್ರವಾಸಿ ತಾಣ ವರ್ಕಲಾಕ್ಕೆ ತಲುಪಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ವರ್ಕಲಾದಿಂದ 55 ಕೀ.ಮಿ ಅಂತರದಲ್ಲಿ ತಿರುವನಂತಪುರಂ ವಿಮಾನ ನಿಲ್ದಾಣವಿದೆ. ವಿಮಾಲ ನಿಲ್ದಾಣದಿಂದ ಟ್ಯಾಕ್ಸಿಯನ್ನು ಬಾಡಿಗೆಗೆ ತೆಗೆದುಕೊಂಡು ಬೀಚ್ ಗಳ ನಗರ ವರ್ಕಲಾಕ್ಕೆ ಸುಲಭವಾಗಿ ತಲುಪಬಹುದು. ಇಲ್ಲಿಯೆ ಸಮೀಪದಿಂಅದ್ ಬಸ್ ಕೂಡಾ ವರ್ಕಲಾಕ್ಕೆ ತಲುಪಲು ಪ್ರವಾಸಿಗರಿಗಾಗಿ ವ್ಯವಸ್ಥೆ ಮಾಡಲಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat