ಕಪಿಲ ಲೇಕ್, ವರ್ಕಲಾ

ಕಪಿಲ್ ಕೆರೆಯು ವರ್ಕಲಾದ ಉತ್ತರ ಭಾಗದಲ್ಲಿ 4 ಕೀ.ಮಿ ದೂರದಲ್ಲಿ ಕೊಲ್ಲಂಗೆ ಹೋಗುವ ಮಾರ್ಗದಲ್ಲಿದೆ. ಇದು ಇನ್ನೊಂದು ಪ್ರಮುಖ ಅತ್ಯದ್ಭುತವಾದ ಪ್ರವಾಸಿ ತಾಣ.  ಹಿನ್ನೀರಿನ ಶಾಂತ ಮತ್ತು ಬೆರಗುಗೊಳಿಸುವ ನೋಟ ಮತ್ತು ವಿಶಾಲವಾದ ಅರಬ್ಬೀ ಸಮುದ್ರ ನೋಡುಗರನ್ನು ಸೂರೆಗೊಳ್ಳುತ್ತದೆ ಅದರಲ್ಲೂ ತೆಂಗಿನ ಮರಗಳ ನಡುವಿನಿಂದ ಕಾಣುವ ಈ ನೋಟ ಇನ್ನಷ್ಟು ನಯನ ಮನೋಹರವಾಗಿದೆ, ಸೇತುವೆಯ ಮೇಲೆ ನಿಂತು ಕಪಿಲ್ ಕೆರೆಯ ಸೌಂದರ್ಯವನ್ನು ನಿಮ್ಮ ಕಣ್ಣಿನಲ್ಲಿ ಸೆರೆಹಿಡಿಯಬಹುದು. ಬೋಟಿನಲ್ಲಿ ಕೂತು ಹಿನ್ನೀರು ಮತ್ತು ಅರಬ್ಬೀ ಸಮುದ್ರದಲ್ಲಿ ಒಂದು ಸುತ್ತು ಹೊಡೆದು ಬರಬಹುದು. ನಿಮ್ಮನ್ನು ನೀವು ಮರೆತು ಪ್ರಕೃತಿಯ ಒಂದು ಭಾಗವೇ ಆಗುವ ಅವಕಾಶ ಇಲ್ಲಿ ನಿಮಗಿದೆ. ಇನ್ನು ಫೊಟೋಗ್ರಾಫಿ ನಿಮ್ಮ ಹವ್ಯಾಸವಾಗಿದ್ದಲ್ಲಿ ಇದೊಂದು ಭೇಟಿ ನೀಡದೆ ಇರಲೇಬಾರದ ಒಂದು ಸ್ಥಳವಾಗಿದೆ.

Please Wait while comments are loading...