» »ಅದ್ಭುತ ಅನುಭವ ನೀಡುವ ಯುಮ್ಥಾಂಗ್ ಕಣಿವೆ

ಅದ್ಭುತ ಅನುಭವ ನೀಡುವ ಯುಮ್ಥಾಂಗ್ ಕಣಿವೆ

Written By:

ನೇಪಾಳ, ಟಿಬೆಟ್, ಭೂತಾನ ದೇಶಗಳ ಗಡಿಗಳ ಬಳಿ ಹಾಗೂ ಶುಭ್ರ ಶ್ವೇತ ವರ್ಣದ ಹಿಮಾಲಯ ಪರ್ವತಗಳ ಒಡಲಿನಲ್ಲಿ ನೆಲೆಸಿರುವ ಈಶಾನ್ಯ ಭಾರತದ ಒಂದು ಸುಂದರ ರಾಜ್ಯ ಸಿಕ್ಕಿಂ. ಸಮುದ್ರ ಮಟ್ಟದಿಂದ ಸಾಮಾನ್ಯವಾಗಿ ಬಹು ಎತ್ತರದಲ್ಲಿ ನೆಲೆಸಿರುವುದರಿಂದ ಇಲ್ಲಿನ ವಾತಾವರಣ ಶುದ್ಧವಾಗಿಯೂ ಹಾಗೂ ಹೆಚ್ಚು ಚಳಿಯಿಂದ ಕೂಡಿರುತ್ತದೆ.

ನಿಮಗಿಷ್ಟವಾಗಬಹುದಾದ : ಹೂವುಗಳ ಅಗಾಧ ಸಾಮ್ರಾಜ್ಯ "ಕಾಸ್"

ಸಿಕ್ಕಿಂ ರಾಜ್ಯದಲ್ಲಿಯೂ ಸಹ ಕೆಲವು ವಿಶೇಷವಾದ, ಒಂದೊಮ್ಮೆಯಾದರೂ ಭೇಟಿ ನೀಡಲು ಯೋಗ್ಯವಾದ ಪ್ರವಾಸಿ ಆಕರ್ಷಣೆಗಳಿವೆ. ಪ್ರಸ್ತುತ ಲೇಖನದಲ್ಲಿ ರಾಜಧಾನಿ ನಗರವಾದ ಗ್ಯಾಂಗ್ಟಕ್ ನಿಂದ ಯುಮ್ಥಾಂಗ್ ಎಂಬ ಅತ್ಯದ್ಭುತ ಕಣಿವೆಯ ಪ್ರವಾಸದ ಕುರಿತು ತಿಳಿಸಲಾಗಿದೆ.

ನಿಮಗಿಷ್ಟವಾಗಬಹುದಾದ : ನುಬ್ರಾ ಎಂಬ ರುದ್ರರಮಣೀಯ ಕಣಿವೆ

ಇಲ್ಲಿನ ಸಂಸ್ಕೃತಿ-ಸಂಪ್ರದಾಯಗಳು ಭಿನ್ನವಾಗಿದ್ದು, ನಿಮಗದನ್ನು ಕುರಿತು ತಿಳಿಯುವ ಬಯಕೆ ಹಂಬಲ ಇದ್ದರೆ ಇಲ್ಲಿಗೆ ಭೇಟಿ ನೀಡಬಹುದು. ಇಲ್ಲವೆ ಹಿಮಾಲಯದ ಅದ್ವಿತೀಯ ನೋಟಗಳನ್ನು ಬೇರೊಂದು ಕೋನದಿಂದ ನೋಡುವ ತವಕ, ಹೃದಯವನ್ನರಳಿಸುವ ಮುಗ್ಧ ಪರಿಸರದ ಅಗಾಧ ಗಮ್ಯತೆಯನ್ನು ಆಸ್ವಾದಿಸುವ ಇಚ್ಛೆಯಿದ್ದಲ್ಲಿ ಯುಮ್ಥಾಂಗ್ ಕಣಿವೆಗೆ ಭೇಟಿ ನೀಡಲೇಬೇಕು.

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಮೊದಲಿಗೆ ಸಿಕ್ಕಿಂ ರಾಜ್ಯದ ರಾಜಧಾನಿ ಪಟ್ಟಣ ಗ್ಯಾಂಗ್ಟಕ್ ನಿಂದ ಪ್ರಾರಂಭಿಸೋಣ. ಬುದ್ಧರ ಪ್ರಮುಖ ಯಾತ್ರಾ ಸ್ಥಳ, ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಸಿಕ್ಕಿಂನ ರಾಜ್ಯದ ಅತ್ಯಂತ ದೊಡ್ಡ ನಗರವಾಗಿರುವ ಗ್ಯಾಂಗ್ಟಾಕ್, ಹಿಮಾಲಯ ಪರ್ವತ ಶ್ರೇಣಿಯ ಈಶಾನ್ಯದಲ್ಲಿರುವ ಶಿವಾಲಿಕ್ ಬೆಟ್ಟ ಶ್ರೇಣಿಗಳಲ್ಲಿ ನೆಲೆಸಿದೆ. ಯುಮ್ಥಾಂಗ್ ಕಣಿವೆಯ ಒಂದು ನಯನ ಮನೋಹರ ನೋಟ.

ಚಿತ್ರಕೃಪೆ: Lisa.davis

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

1947ರಲ್ಲಿ ಭಾರತ ಸ್ವಾತಂತ್ರ್ಯವನ್ನು ಪಡೆದ ಬಳಿಕ ಗ್ಯಾಂಗ್ಟಾಕ್ ಸಿಕ್ಕಿಂನ ರಾಜಧಾನಿಯಾಯಿತು. 1975ರಲ್ಲಿ ಭಾರತದೊಂದಿಗೆ ಏಕೀಕರಣವಾದ ಮೇಲೆ ಗ್ಯಾಂಗ್ಟಾಕ್ ನ್ನು 22ನೇ ರಾಜ್ಯ ರಾಜಧಾನಿಯೆಂದು ಘೋಷಿಸಲಾಯಿತು. ಇದಕ್ಕೂ ಮೊದಲು ಸಿಕ್ಕಿಂ ಸ್ವತಂತ್ರ ರಾಜಪ್ರಭುತ್ವದಂತೆ ಕಾರ್ಯನಿರ್ವಹಿಸುತ್ತಿತ್ತು. ಗ್ಯಾಂಗ್ಟಾಕ್ ಬೆಟ್ಟಗಳ ಮೇಲೆ ನೆಸಿರುವ ನಗರವಾಗಿದ್ದು ಪ್ರಯಾಣಿಸಲು ಕೇಬಲ್ ಕಾರುಗಳು ಬಳಸಲ್ಪಡುತ್ತವೆ.

ಚಿತ್ರಕೃಪೆ: kalyan3

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಇಲ್ಲಿ ವಿವಿಧ ಧಾರ್ಮಿಕ, ಧಾರ್ಮಿಕ ಶೈಕ್ಷಣಿಕ ಕೇಂದ್ರ ಮತ್ತು ಟಿಬೆಟ್ ಕೇಂದ್ರಗಳ ಇರುವಿಕೆಯಿಂದ ಇದೊಂದು ಬೌದ್ಧ ಸಂಸ್ಕೃತಿಯ ಕಲಿಕಾ ಕೇಂದ್ರವಲ್ಲದೆ ಸಿಕ್ಕಿಂನ ಪ್ರವಾಸೋದ್ಯಮದ ಪ್ರಮುಖ ನೆಲೆಯಾಗಿದೆ. ಸುಂದರವಾದ ದಟ್ಟ ಹಸಿರಿನಿಂದ ಕೂಡಿದ ವಿವಿಧ ಬೆಟ್ಟ ಗುಡ್ಡಗಳ ಮೇಲೆ ಅಣಬೆಗಳಂತೆ ಕಟ್ಟಡ ರಚನೆಗಳು ನಿರ್ಮಾಣಗೊಂಡಿದ್ದು ಗ್ಯಾಂಗ್ಟಕ್ ನಗರ ನೋಡುಗರು ಮಂತ್ರಮುಗ್ಧಗೊಳ್ಳುವಂತೆ ಮಾಡುತ್ತದೆ. ಟಿಬೆಟ್ ರಸ್ತೆಯಿಂದ ಗ್ಯಾಂಗ್ಟಕ್ ನಗರ ಕಂಡುಬರುವ ರೀತಿ.

ಚಿತ್ರಕೃಪೆ: Thebrowniris

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಸಿಕ್ಕಿಂ ರಾಜ್ಯದ ಹೆಚ್ಚಿನ ಪ್ರಸಿದ್ಧ ನಗರಗಳಿಗೆ ಇತಿಹಾಸದಲ್ಲಿ ಸೂಕ್ತ ದಾಖಲೆಗಳಿಲ್ಲ. ಗ್ಯಾಂಗ್ಟಾಕ್ ಕೂಡ ಈ ಪಟ್ಟಿಯಲ್ಲಿದೆ. ಗ್ಯಾಂಗ್ಟಾಕ್ ನಗರದ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಗ್ಯಾಂಗ್ಟಾಕ್ ನಗರದ ದಾಖಲೆಗಳನ್ನು ತಿರುವಿ ಹಾಕಿದಾಗ 1716ರಲ್ಲಿ ಹೆರ್ಮಿಟಿಕ್ ಗ್ಯಾಂಗ್ಟಾಕ್ ಧಾರ್ಮಿಕ ಕೇಂದ್ರ ನಿರ್ಮಾಣವಾದ ದಿನದಂದು ಗ್ಯಾಂಗ್ಟಾಕ್ ನಗರ ಕೂಡ ಉದಯವಾಯಿತೆಂದು ತಿಳಿದುಬರುತ್ತದೆ. ರಾತ್ರಿಯಲ್ಲಿ ಗ್ಯಾಂಗ್ಟಾಕ್ ನಗರ ಸಿಂಗರಿಸಿಕೊಳ್ಳುವ ಪರಿ.

ಚಿತ್ರಕೃಪೆ: Amit Mitra

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಇನ್ನೂ ಗ್ಯಾಂಗ್ಟಾಕ್ ತಲುಪಲು ಪಶ್ಚಿಮ ಬಂಗಾಳ ರಾಜ್ಯ ಪ್ರವೇಶದ್ವಾರವಾಗಿದೆ. ಪಶ್ಚಿಮ ಬಂಗಾಳದ ಸಿಲಿಗುರಿಯಿಂದ ಗ್ಯಾಂಗ್ಟಾಕ್ 114 ಕಿ.ಮೀ ದೂರವಿದ್ದು ರಾಷ್ಟ್ರೀಯ ಹೆದ್ದಾರಿ 31A ಮೂಲಕ ಸುಲಭವಾಗಿ ಗ್ಯಾಂಗ್ಟಾಕ್ ತಲುಪಬಹುದು. ಗ್ಯಾಂಗ್ಟಾಕ್ ನಲ್ಲಿರುವ ಹಲವು ಪ್ರವಾಸಿ ಆಕರ್ಷಣೆಗಳನ್ನು ನೋಡಿದ ಬಳಿಕ ಯುಮ್ಥಾಂಗ್ ಗೆ ತೆರಳಲು ಸಿದ್ಧರಾಗಿ. ಅದಕ್ಕಾಗಿ ಮೊದಲು ಲಾಚುಂಗ್ ಎಂಬ ಪಟ್ಟಣಕ್ಕೆ ತೆರಳ ಬೇಕು.

ಚಿತ್ರಕೃಪೆ: Srikanthkashyap

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಾಕ್ ನಗರದ ಬಳಿ ಸ್ಥಿತವಿರುವ ಟಿಬೆಟಿಯನ್ನರ ಪ್ರಖ್ಯಾತ ರುಮ್ಟೆಕ್ ಬೌದ್ಧ ದೇವಾಲಯ. ಸಾಕಷ್ಟು ವಿದೇಶಿ ಪ್ರವಾಸಿಗರನ್ನೂ ಸಹ ಈ ದೇವಾಲಯ ತನ್ನ ವಿಶಿಷ್ಟ ವಾಸ್ತುಶೈಲಿಯಿಂದ ಆಕರ್ಷಿಸುತ್ತದೆ.

ಚಿತ್ರಕೃಪೆ: Vikramjit Kakati

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಲಾಚುಂಗ್, ಉತ್ತರ ಸಿಕ್ಕಿಂ ಜಿಲ್ಲೆಯಲ್ಲಿರುವ ಒಂದು ಸುಂದರ ಹಾಗೂ ನಯನಮನೋಹರ ಗಿರಿಧಾಮ ಪ್ರದೇಶವಾಗಿದೆ. ಸಿಕ್ಕಿಂ ರಾಜಧಾನಿ ಗ್ಯಾಂಗ್ಟಾಕ್ ನಿಂದ ಸುಮಾರು 125 ಕಿ.ಮೀ ಗಳಷ್ಟು ದೂರದಲ್ಲಿ ಸ್ಥಿತವಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಗ್ಯಾಂಗ್ಟಾಕ್ ನಲ್ಲಿರುವಾಗಲೆ ಯುಮ್ಥಾಂಗ್ ಗೆ ತೆರಳಲು ಪ್ರವಾಸಿ ಆಯೋಜಕ ಸಂಸ್ಥೆಗಳಲ್ಲಿ ನಿಮ್ಮ ವಿವರ ಹಾಗೂ ಗುರುತಿನ ಚೀಟಿ ಹಾಗೂ ಭಾವಚಿತ್ರಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಏಕೆಂದರೆ,

ಚಿತ್ರಕೃಪೆ: Aman Gupta

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಯುಮ್ಥಾಂಗ್ ಭಾರತ ಹಾಗೂ ಚೀನಾ ಗಡಿಗಳಿಗೆ ಅತ್ಯಂತ ಸಾಮಿಪ್ಯ ಹೊಂದಿರುವುದರಿಂದ ಭದ್ರತೆಯ ದೃಷ್ಟಿಯಿಂದಾಗಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿರುವುದು ಅವಶ್ಯವಾಗಿದೆ. ಇನ್ನೂ ಈ ಅನುಮತಿಗೆ ಸಂಬಂಧಿಸಿದ ವಿಧಿ ವಿಧಾನಗಳನ್ನು ಪ್ರವಾಸ ಆಯೋಜಕ ಸಂಸ್ಥೆಗಳೆ ನೋಡಿಕೊಳ್ಳುವುದರಿಂದ ನೀವು ಕೇವಲ ಅರ್ಜಿ ತುಂಬಿ ಸಲ್ಲಿಸಿದರೆ ಸಾಕು. ನಿಮಗೆ ಬೇಕಾದ ಪ್ರವಾಸಿ ಪ್ಯಾಕೇಜುಗಳನ್ನು ನಿಮ್ಮ ಬಡ್ಜೆಟ್ಟಿಗನುಸಾರವಾಗಿ ಆಯ್ದುಕೊಳ್ಳಬಹುದು.

ಚಿತ್ರಕೃಪೆ: Sayan Bhattacharjee

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಲಾಚುಂಗ್ ಗ್ಯಾಂಗ್ಟಾಕ್ ನಿಂದ ಏಳು ಘಂಟೆಗಳ ಪ್ರಯಾಣಾವಧಿಯಷ್ಟು ದೂರದಲ್ಲಿದೆ. ಲಾಚುಂಗ್ ಗೆ ತೆರಳಲು ಗ್ಯಾಂಗ್ಟಾಕ್ ನಿಂದ ಬೆಳಿಗ್ಗೆಯೆ ಹೊರಡಬೇಕು ಅದು ಕೂಡ ವಾಹನ ಹೊರಡಲು ಹಸಿರು ನಿಶಾನೆ ಸಿಕ್ಕ ನಂತರವೆ. ಏಕೆಂದರೆ ಇದು ಅತ್ಯಂತ ಘಟ್ಟ ಪ್ರದೇಶಗಳಲ್ಲಿ ಸಾಗುವ ಮಾರ್ಗವಾಗಿದ್ದು ಭೂಕುಸಿತಗಳು ಸಾಮಾನ್ಯವಾಗಿರುತ್ತವೆ. ಒಂದೊಮ್ಮೆ ವಾತಾವರಣ ಹೊರಡಲು ಯೋಗ್ಯಕರವಾಗಿದೆ ಎಂಬ ಅನುಮತಿ ದೊರೆಯುತ್ತಿದ್ದಂತೆಯೆ ಪ್ರವಾಸಿ ಸಂಸ್ಥೆಗಳ ಸುಮೊ, ಸ್ಕಾರ್ಪಿಯೊ ಮುಂತಾದ ವಾಹನಗಳಲ್ಲಿ ತೆರಳಬಹುದು. ಚಾಲಕರು ಪರಿಣಿತರಾಗಿದ್ದು ನಿಧಾನವಾಗಿ ಚಲಿಸುತ್ತ ನಿಮ್ಮನ್ನು ಲಾಚುಂಗ್ ಗೆ ಕರೆದೊಯ್ಯುತ್ತಾರೆ.

ಚಿತ್ರಕೃಪೆ: Amol Hatwar

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಲಾಚುಂಗ್ ಸಿಕ್ಕಿಂ ರಾಜ್ಯದಲ್ಲೆ ಅತ್ಯಂತ ನಯನ ಮನೋಹರ ಭೂದೃಶ್ಯಾವಳಿಗಳುಳ್ಳ ಸುಂದರ ಗಿರಿಧಾಮವಾಗಿದೆ. ಲಾಚುಂಗ್ ನಲ್ಲಿ ತಂಗಲು ವಸತಿಗೃಹಗಳಿದ್ದು ಪ್ರವಾಸಿ ಸಂಸ್ಥೆಗಳಿಂದಲೆ ಮುಂಚಿತವಾಗಿ ಕಾಯ್ದಿರಿಸಲಾಗಿರುತ್ತದೆ. ಹಾಗಾಗಿ ನೀವು ಹೋಟೆಲ್ ಹುಡುಕುವ ಯಾವ ಗೋಜಿಗೂ ಹೋಗದೆ ನಿರಾಯಾಸವಾಗಿ ಲಾಚುಂಗ್ ನಲ್ಲಿ ತಂಗಬಹುದು. ಈ ಪ್ಯಾಕೇಜುಗಳು ತಂಗುವಿಕೆ, ಊಟ-ತಿಂಡಿಗಳು ಹಾಗೂ ಯುಮ್ಥಾಂಗ್ ಕಣಿವೆ ಭೇಟಿ, ಚಾಲನಾ ಶುಲ್ಕ ಎಲ್ಲವನ್ನೂ ಒಳಗೊಂಡಿರುತ್ತದೆ.

ಚಿತ್ರಕೃಪೆ: Indrajit Das

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ತೀಸ್ತಾ ನದಿಯ ಉಪನದಿಗಳಾದ ಲಾಚೆನ್ ಹಾಗೂ ಲಾಚುಂಗ್ ನದಿಗಳ ಸಂಗಮದಲ್ಲಿ ಸ್ಥಿತವಿರುವ ಲಾಚುಂಗ್ ಅತ್ಯಂತ ಅದ್ಭುತವಾಗಿ, ಪ್ರಕೃತಿ ಮಾತೆಯ ಭವ್ಯ ಒಡವೆಯಾಗಿ ಕಂಗೊಳಿಸುತ್ತದೆ. ಹಿಮಚ್ಛಾದಿತ ಆ ಪರ್ವತಗಳ ನೋಟ, ರೊಡೊಡೆಂಡ್ರಾನ್ ಎಂಬ ವಿಶಿಷ್ಟ ಮರಗಳ ಮೇಲೆ ಹರಡಿಕೊಂಡ ಹಿಮ, ಸುತ್ತ ಮುತ್ತಲಿನ ಆಹ್ಲಾದಕರ ಹಾಗೂ ತಂಪಾದ ಪರಿಸರ ನಿಮ್ಮನ್ನು ಒಂದು ಯಾವುದೊ ಲೋಕಕ್ಕೆ ಕರೆದೊಯ್ದಿರುವಂತೆ ಮಾಡುತ್ತದೆ.

ಚಿತ್ರಕೃಪೆ: Jaiprakashsingh

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಮಧ್ಯಾಹ್ನದ ಸುಮಾರಿಗೆ ಲಾಚುಂಗ್ ತಲುಪಿ ಅಲ್ಲಿನ ಅದ್ಭುತ ಪರಿಸರವನ್ನು ಸವಿಯುತ್ತ ಆ ರಾತ್ರಿ ಅಲ್ಲಿಯೆ ತಂಗಬಹುದಾಗಿದ್ದು ಯುಮ್ಥಾಂಗ್ ಕಣಿವೆಗೆ ಮರುದಿನ ಬೆಳಿಗ್ಗೆ ಹೊರಡಬೇಕಾಗುತ್ತದೆ. ಯುಮ್ಥಾಂಗ್ ಲಾಚುಂಗ್ ನಿಂದ ಸುಮಾರು 25 ಕಿ.ಮೀ ದೂರವಿದ್ದು ಒಂದು ಘಂಟೆಯಷ್ಟು ಪ್ರಯಾಣಾವಧಿಯನ್ನು ಒಳಗೊಂಡಿರುತ್ತದೆ.

ಚಿತ್ರಕೃಪೆ: Wasin Waeosri

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಮರುದಿನ ಬೆಳಿಗ್ಗೆ ಯುಮ್ಥಾಂಗ್ ನಿಮ್ಮನ್ನು ಬರಮಾಡಿಕೊಲ್ಳಲು ಸಿದ್ಧವಾಗಿರುತ್ತದೆ. ಲಾಚುಂಗ್ ನಿಂದ ಒಂದು ಘಂಟೆ ಪ್ರಯಾಣ ಮಾಡಿದರೆ ಸಾಕು ಯುಮ್ಥಾಂಗ್ ನಿಮ್ಮ ಮುಂದಿದ್ದು ನಿಮ್ಮ ಕಣ್ಣುಗಳು ಒಂದು ಕ್ಷಣ ನಿಮ್ಮನ್ನೆ ನೀವು ನಂಬದ ಹಾಗೆ ಮಾಡುತ್ತವೆ ಎಂದರೆ ತಪ್ಪಾಗಲಾರದು.

ಚಿತ್ರಕೃಪೆ: Joginder Pathak

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಭವ್ಯ ಪ್ರಕೃತಿಯ ಗಮ್ಯ ನೋಟ, ಸ್ವರ್ಗವೆಂದರೆ ಇದೇನಾ...ಅನ್ನುವ ಹಾಗೆ ಮೋಡಿ ಮಾಡುವ ಸುಂದರ ಪರಿಸರ, ಹಿಮಾಲಯದಲ್ಲಿ ಕಂಡುಬರುವ ಅದ್ಭುತಮಯ ಹೂವುಗಳ ಬಣ್ಣ ಬಣ್ಣದ ರಾಶಿಗಳು, ಶುದ್ಧ ಹಾಗೂ ತಂಪಾದ ಜುಳು ಜುಳು ಹರಿಯುವ ನೀರು ಯುಮ್ಥಾಂಗ್ ಕಣಿವೆಯ ವೈಶಿಷ್ಟ್ಯ. ಹೌದು ಇದನ್ನು ಸಿಕ್ಕಿಂ ರಾಜ್ಯದ ಹೂವುಗಳ ಕಣಿವೆ ಎಂತಲೂ ಸಹ ಕರೆಯುತ್ತಾರೆ.

ಚಿತ್ರಕೃಪೆ: Amitra Kar

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ತರಹೇವಾರಿ ಹೂವುಗಳು ಹಾಗೂ ಗಿಡ ಮರ ಬಳ್ಳಿಗಳು ಯುಮ್ಥಾಂಗ್ ಕಣಿವೆಯನ್ನು ಭೂಲೋಕದ ಸ್ವರ್ಗ ಎನ್ನುವಂತೆಯೆ ಮಾಡಿವೆ. ಆದರೆ ನೆನಪಿಡಿ ಇಲ್ಲಿ ಹೂವುಗಳನ್ನು ಕೀಳುವ ಹಾಗಿಲ್ಲ. ಪ್ರಕೃತಿಯ ವಸ್ತುಸ್ಥಿತಿಯನ್ನು ಮನಸಾರೆ ಆನಂದಿಸಿ ನಿಮ್ಮ ನೆನಪಿನಲ್ಲುಳಿಯುವಂತೆ ಮಾಡಿಕೊಳ್ಳಿ.

ಚಿತ್ರಕೃಪೆ: Pradeep Kumbhashi

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗೆರಾನಿಯಂ ಎಂಬ ಸಸ್ಯ ಕುಟುಂಬವೊಂದಕ್ಕೆ ಸೇರಿದ ಈ ಪುಟ್ಟ ಹಾಗೂ ಅತ್ಯಾಕರ್ಷಕವಾದ ಹೂಗಳ ಗುಚ್ಛವು ಯುಮ್ಥಾಂಗ್ ಕಣಿವೆಯ ಎಲ್ಲೆಡೆ ಆವರಿಸುವ ಹೂವುಗಳಲ್ಲಿ ಪ್ರಧಾನವಾಗಿ ಕಂಡುಬರುವ ಹೂವಾಗಿದೆ.

ಚಿತ್ರಕೃಪೆ: Amitra Kar

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಯುಮ್ಥಾಂಗ್ ಕಣಿವೆಯಲ್ಲಿ ಸಾಗುವಾಗ ಕಂಡುಬರುವ ಒಂದು ಸೊಗಸಾದ ಪ್ರಕೃತಿಯ ಶ್ರೀಮಂತಿಕೆಯನ್ನು ಅನಾವರಣಗೊಳಿಸುವ ದೃಶ್ಯ. ಪ್ರೇಮಿಗಳಿಗೆ ಆದರ್ಶಪ್ರಾಯವಾದ ಸ್ಥಳವೆಂದೆ ಹೇಳಬಹುದಲ್ಲವೆ?

ಚಿತ್ರಕೃಪೆ: AmyNorth

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಯುಮ್ಥಾಂಗ್ ಕಣಿವೆಯ ಉತ್ತರದಲ್ಲಿ ಜುಳು ಜುಳು ಎಂದು ಹರಿಯುವ ನದಿ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಶುದ್ಧ ತಾಜಾ ನೀರು, ಪ್ರಶಾಂತತೆಯಿಂದ ಕೂಡಿದ ವಾತಾವರಣ, ಒಂದು ಕ್ಷಣ ಧ್ಯಾನ ಮಾಡಿಯೆ ಬಿಡೋಣ ಎಂದೆನಿಸುವಂತೆ ಮಾಡದೆ ಇರಲಾರದು.

ಚಿತ್ರಕೃಪೆ: Sunil

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಮಂತ್ರ ಮುಗ್ಧಗೊಳಿಸುವ ಯುಮ್ಥಾಂಗ್ ಕಣಿವೆಯ ಕೆಲವು ನಯನಮನೋಹರ ದೃಶ್ಯಾವಳಿಗಳು. ಹಿನ್ನಿಲೆಯಲ್ಲಿ ಪೌಹುನುರಿ ಹಾಗೂ ಶುಂದು ಪರ್ವತಗಳ ಅಮೋಘ ನೋಟ.

ಚಿತ್ರಕೃಪೆ: Shayon Ghosh

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಕಣಿವೆಯ ಒಂದೆಡೆ ತೀಸ್ತಾ ನದಿಯ ಉಪನದಿ ಸದ್ದು ಮಾಡದೆ ಪ್ರಶಾಂತತೆಯಿಂದ ಹರಿಯುತ್ತಿದ್ದರೆ ಇನ್ನೊಂದೆಡೆ ಹಸಿರು ಹುಲ್ಲು ಹಾಸಿನ ಮೇಲೆ ಸುಂದರ ಪುಷ್ಪಗಳ ಮಧ್ಯೆ ಆಹಾರ ಮೇಯುತ್ತಿರುವ ದನ ಕರುಗಳು. ಇವೆಲ್ಲವನ್ನು ರಕ್ಷಿಸುವಂತೆ ಗಟ್ಟಿಯಾಗಿ ನಿಂತಿರುವ ಹಿನ್ನಿಲೆಯ ಹಿಮಪರ್ವತಗಳು. ಅಬ್ಬಾ ವರ್ಣನಾತೀತ ಸಂದರ್ಭ. ಅಲ್ಲದೆ ಪೂರ್ಣ ಚಂದ್ರನ ದಿನದಂದು ಈ ಕಣಿವೆಯು ಅಕ್ಷರಶಃ ಜೀವಂತವಾಗುತ್ತದೆ. ಬೆಳ್ಳಿಯೆಂತೆ ಹೊಳೆಯುವ ಚಂದ್ರನ ಕಿರಣಗಳು ಒಂದು ವಿನೂತನ ರೀತಿಯ ಬೆಳಕನ್ನು ಕರುಣಿಸುತ್ತದೆ. ಇದನ್ನೊಮ್ಮೆಯಾದರೂ ಅನುಭವಿಸಬೇಕೆಂದರೆ ಯುಮ್ಥಾಂಗ್ ಕಣಿವೆಗೊಮ್ಮೆಯಾದರೂ ಭೇಟಿ ನೀಡಲೇಬೇಕು.

ಚಿತ್ರಕೃಪೆ: Amitra Kar

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಮಧ್ಯರಾತ್ರಿಯ ಸಮಯದಲ್ಲಿ ಅದರಲ್ಲೂ ಹುಣ್ಣಿಮೆಯ ದಿನದಂದು ಕಣಿವೆಯ ಪಾಸಿನಲ್ಲಿ ಹರಿಯುತ್ತಿರುವ ನದಿಯ ವಿಹಂಗಮ ನೋಟ.

ಚಿತ್ರಕೃಪೆ: soumyajit pramanick

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಯುಮ್ಥಾಂಗ್ ಕಣಿವೆಯಲ್ಲಿ ಹರಿಯುವ ಆ ಮನೋಹರ ನದಿಯೆ ಲಾಚುಂಗ್ ಚು ನದಿ.

ಚಿತ್ರಕೃಪೆ: Shayon Ghosh

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಯುಮ್ಥಾಂಗ್ ಕಣಿವೆಯಲ್ಲಿರುವ ಒಂದು ಬೌದ್ಧ ಸ್ತೂಪ.

ಚಿತ್ರಕೃಪೆ: Sayan Bhattacharjee

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಗ್ಯಾಂಗ್ಟಕ್, ಲಾಚುಂಗ್ ಹಾಗೂ ಯುಮ್ಥಾಂಗ್:

ಯುಮ್ಥಾಂಗ್ ಕಣಿವೆಯಲ್ಲಿ ಇರುವಷ್ಟು ಸಮಯದ ಒಂದೊಂದು ಕ್ಷಣಗಳನ್ನೂ ಅತಿ ಆನಂದದಿಂದ ಕಳೆದು ಎಂದಿಗೂ ಬತ್ತದ ನೆನಪುಗಳನ್ನು ಮನಸ್ಸಿನ ಬತ್ತಳಿಕೆಯಲ್ಲಿ ತುಂಬಿಕೊಂಡು, ಮತ್ತೆ ಲಾಚುಂಗ್ ಪಟ್ಟಣಕ್ಕೆ ಹಿಂತಿರುಗಿ ಅಲ್ಲಿಂದ ಮತ್ತೆ ಗ್ಯಾಂಗ್ಟಾಕ್ ತಲುಪಬೇಕು. ಅಲ್ಲಿಗೆ ಈ ಸುಂದರ ಪ್ರವಾಸದ ಸಮಾಪ್ತಿ. ಇನ್ನೇಕೆ ತಡ ಇದೆ ಸುಸಮಯ ಇಂದೆ ಯೋಜನೆ ಸಿದ್ಧಪಡಿಸಿಕೊಳ್ಳಿ ಹಾಗೂ ಒಂದು ಅನನ್ಯವಾದ ಪ್ರವಾಸ ಮಾಡಿ.

ಚಿತ್ರಕೃಪೆ: Sayan Bhattacharjee

Please Wait while comments are loading...