Search
  • Follow NativePlanet
Share
» »ವಿಶ್ವ ಪರಿಸರ ದಿನ 2022 ಅನ್ನು ಜೂನ್ 5 ರಂದು ಆಚರಿಸಲಾಗುತ್ತದೆ

ವಿಶ್ವ ಪರಿಸರ ದಿನ 2022 ಅನ್ನು ಜೂನ್ 5 ರಂದು ಆಚರಿಸಲಾಗುತ್ತದೆ

ಪರಿಸರ ಮತ್ತು ಅದರ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗತಿಕ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ 1972ರ ಲ್ಲಿ ಸ್ಥಾಪಿತವಾದ ವಿಶ್ವಪರಿಸರ ದಿನವು ಪ್ರತೀ ವರ್ಷ ಜೂನ್ 5 ರಂದು ಆಚರಿಸಲಾಗುತ್ತಿದೆ. ವಿಶ್ವ ಪರಿಸರ ದಿನವನ್ನು ಸುಮಾರು 100ಕ್ಕೂ ಅಧಿಕ ದೇಶಗಳಲ್ಲಿ ಆಚರಿಸಲ್ಪಡುತ್ತಿದ್ದು, ಈ ಪರಿಸರ ದಿನದ ಆಚರಣೆಯಲ್ಲಿ ಒಂದು ಮಿಲಿಯನ್ ಗಿಂತಲೂ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಳ್ಳುತ್ತಾರೆ.
ಪರಿಸರದ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ಪರಿಸರದ ಕುರಿತಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ದಿನವು ವಿಶ್ವದಾದ್ಯಂತದ ಜನರಿಂದ ವಿವಿಧ ಪ್ರಕಾರಗಳಲ್ಲಿ ಪ್ರತಿ ವರ್ಷವೂ ಆಚರಿಸಲ್ಪಡುತ್ತದೆ.
ನಮ್ಮ ಭೂಮಿಯು ಮಾಲಿನ್ಯವಾಗುವುದನ್ನು ತಡೆಗಟ್ಟುವಿಕೆಗೆ ವಿಶ್ವದಾದ್ಯಂತದ ಜನರು ಸಾರ್ವತ್ರಿಕವಾಗಿ ಕೈಜೋಡಿಸುವುದು ಮತ್ತು ಪರಿಸರ ಮಾಲಿನ್ಯತೆಯ ಬಗ್ಗೆ ಜನರು ಗಂಭೀರವಾಗಿ ಯೋಚಿಸುವಂತೆ ಮಾಡುವುದು ಆಚರಣೆಯ ಮುಖ್ಯ ಉದ್ದೇಶವಾಗಿದೆ.
ವಿಶ್ವ ಪರಿಸರ ದಿನದ ಆಚರಣೆಯ ಜೊತೆಗೆ ಪ್ರತಿ ವರ್ಷ ವಿಶ್ವದಾದ್ಯಂತ ತಮ್ಮ ತಮ್ಮ ಸ್ಥಳೀಯ ಪರಿಸರಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಮತ್ತು ಪರಿಸರ ಸಂರಕ್ಷಣಾ ಚಟುವಟಿಕೆಗಳನ್ನು ಋಣಾತ್ಮಕವಾಗಿ ನಿರ್ವಹಿಸುವಂತೆ ಮಾಡಲು ಪೇರೇಪಿಸುವಂತಹ ಸಾವಿರಾರು ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತದೆ. ಅಂತಹ ಕಾರ್ಯಕ್ರಮಗಳಲ್ಲಿ ಗಿಡಗಳನ್ನು ನೆಡುವುದು, ಮತ್ತು ಸಮುದ್ರ ಕಿನಾರೆಗಳನ್ನು ಸ್ವಚ್ಚಗೊಳಿಸುವುದು ಮುಖ್ಯವಾಗಿವೆ ಅಷ್ಟೇ ಅಲ್ಲದೆ ಉಪನ್ಯಾಸಗಳು, ಪ್ರದರ್ಶನಗಳು ಮತ್ತು ವರ್ಕ್ ಶಾಪ್ ಗಳಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ.

ಪರಿಸರವನ್ನು ಸಂರಕ್ಷಿಸಬೇಕೆಂಬ ಅರಿವು ನಮಗೆಲ್ಲರಿಗೂ ಇದೆ. ನಾವು ಕಸ ಹಾಕಬಾರದು ಮತ್ತು ಮರುಬಳಕೆ ಮಾಡಬೇಕು ಎಂದೆಲ್ಲಾ ನಮಗೆ ತಿಳಿದಿದೆ. ಆದರೆ ಪ್ರಯಾಣಿಕರಾಗಿ ನಾವು ಏನು ಮಾಡಬಹುದು?

ಒಳ್ಳೆಯ ಸುದ್ದಿ ಎಂದರೆ ಪರಿಸರಕ್ಕೆ ಹಾನಿಯಾಗದಂತೆ ನೀವು ಪ್ರಯಾಣಿಸುವಾಗ ಅನುಸರಿಸಬೇಕಾದ ಹಲವು ಮಾರ್ಗಗಳಿವೆ. ಪರಿಸರ ಸ್ನೇಹಿ ಪ್ರಯಾಣಕ್ಕಾಗಿ ಕೆಲವು ಸಲಹೆಗಳನ್ನು ಕೆಳಗೆ ನೀಡಲಾಗಿದೆ

ವಿಶ್ವ ಪರಿಸರ ದಿನ 2022 ಅನ್ನು ಜೂನ್ 5 ರಂದು ಆಚರಿಸಲಾಗುತ್ತದೆ


1. ಶಕ್ತಿ-ಸಮರ್ಥ ಬೆಳಕಿನ ಬಲ್ಬ್‌ಗಳನ್ನು ಹೊಂದಿರುವ ಹೋಟೆಲ್‌ಗಳಲ್ಲಿ ಉಳಿಯಿರಿ ಅಥವಾ ಸುಸಜ್ಜಿತವಾದ ವಸತಿಯನ್ನು ಆಯ್ಕೆ ಮಾಡಿ.

2. ಪರಿಸರ ಕಾಪಾಡಲು ಎಲ್ಲೆಂದರಲ್ಲಿ ಕಸ ಹಾಕದಂತೆ, ಪ್ರತಿಜ್ಞೆ ಮಾಡಿ.

3. ಅಂಗಡಿಗಳಲ್ಲಿ ಸಿಗುವ ಪ್ಲಾಸ್ಟಿಕ್ ನೀರಿನ ಬಾಟಲುಗಳ ಬದಲಾಗಿ ಮನೆಯಿಂದ ಮರು ಬಳಕೆಯಾಗುವಂತಹ ಬಾಟಲುಗಳನ್ನು ಜೊತೆಗೆ ಕೊಂಡೊಯ್ಯಿರಿ.

4. ಬಿದಿರಿನ ಹಲ್ಲುಜ್ಜುವ ಬ್ರಷ್‌ಗಳು ಮತ್ತು ಬಿಳುಪುಗೊಳಿಸದ ಟಾಯ್ಲೆಟ್ ಪೇಪರ್‌ನಂತಹ ಕಡಿಮೆ-ಹಾನಿಕಾರಕ ವಸ್ತುಗಳೊಂದಿಗೆ ಪ್ರಯಾಣಿಸಿ.

5. ಪ್ಲಾಸ್ಟಿಕ್ ಸ್ಟ್ರಾಗಳಿಂದ ದೂರವಿರಿ ಮತ್ತು ತೊಳೆಯಬಹುದಾದ ಪಾತ್ರೆಗಳನ್ನು ಬಳಸಿ.

6. ಕಾಫೀ ಅಂಗಡಿಗಳಲ್ಲಿ ಸಿಗುವ ಬಿಸಾಡುವ ಲೋಟಗಳ ಬದಲಾಗಿ ಮರುಬಳಕೆಯಾಗುವಂತಹ ಕಾಫೀ ಮಗ್ ಗಳನ್ನು ನಿಮ್ಮ ಜೊತೆ ಕೊಂಡೊಯ್ಯಬಹುದು.

7. ಸ್ಥಳೀಯ ಸಾರಿಗೆ ಬಳಸಿ.

8. ಕಾರ್ಬನ್ ಫ಼ೂಟ್ ಪ್ರಿಂಟ್ ನ್ನು ಕಡಿಮೆ ಬಳಸಿ

9. ಆಹಾರ ತ್ಯಾಜ್ಯವನ್ನು ಕಡಿಮೆ ಮಾಡಿ

10. ಮುಂಚಿತವಾಗಿ ಪ್ರಯಾಣವನ್ನು ಯೋಜಿಸಿ ಮತ್ತು ಅದಕ್ಕೆ ತಕ್ಕಂತೆ ಬುಕ್ ಮಾಡಿ.

11. ನಿಮ್ಮ ವಾಸ್ತವ್ಯವನ್ನು ಸಾರ್ವಜನಿಕ ಸಾರಿಗೆ ಕೇಂದ್ರಗಳಿಗೆ ಹತ್ತಿರವಿರುವಂತೆ ನೋಡಿಕೊಳ್ಳಿ.

12. ಗುಂಪಾಗಿ ಪ್ರಯಾಣಿಸಿ.

ವಿಶ್ವ ಪರಿಸರ ದಿನ 2022 ಅನ್ನು ಜೂನ್ 5 ರಂದು ಆಚರಿಸಲಾಗುತ್ತದೆ

13. ನೀವು ವಾಹನವನ್ನು ಓಡಿಸಬೇಕಾದರೆ ವಾಹನಗಳ ಇಂಧನ ಸಾಮರ್ಥ್ಯವನ್ನು ಪರಿಶೀಲಿಸಿ ಅಥವಾ ಎಲೆಕ್ಟ್ರಿಕ್ ವಾಹನಗಳು ಲಭವಿದ್ದಲ್ಲಿ ಬಳಸಿ. ನೀವು ಇತರ ಪ್ರಯಾಣಿಕರ ಜೊತೆಗೆ ಸಹಪ್ರಯಾಣವನ್ನೂ ಮಾಡಬಹುದಾಗಿದೆ ಅಥವಾ ಪ್ರವಾಸಿಗರು ನಗರವನ್ನು ಅಗ್ಗದ ದರದಲ್ಲಿ ಸುತ್ತಾಡಲು ಸ್ಥಳೀಯರೊಂದಿಗೆ ಸವಾರಿಗಳನ್ನು ಹಂಚಿಕೊಳ್ಳುವುದನ್ನೂ ಆಯ್ಕೆಮಾಡಬಹುದಾಗಿದೆ ಇದರಿಂದಾಗಿ ಸ್ಥಳೀಯರು ಪ್ರವಾಸಿಗರಿಗೆ ಪ್ರಯಾಣಕ್ಕೆ ಸಹಾಯ ಮಾಡುತ್ತಾ ಹಣ ಸಂಪಾದಿಸಲು ಸಹಾಯವಾಗಬಹುದು.
ವಿಶ್ವ ಪರಿಸರ ದಿನ 2022 ಅನ್ನು ಜೂನ್ 5 ರಂದು ಆಚರಿಸಲಾಗುತ್ತದೆ

14. ಸ್ಮರಣಿಕೆಗಳನ್ನು ಬಿಟ್ಟುಬಿಡಿ ಮತ್ತು ಬದಲಿಗೆ ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಖರೀದಿಸಿ - ಇದು ಪ್ರಪಂಚದಾದ್ಯಂತ ಅಭಿವೃದ್ಧಿಶೀಲ ರಾಷ್ಟ್ರಗಳಿಂದ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುವ ಸಂಸ್ಥೆಗಳಿಗೆ ಹಣವನ್ನು ನೀಡುವ ಬದಲು ಸ್ಥಳೀಯ ಆರ್ಥಿಕತೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ (ಇಲ್ಲಿ ಸಾಮಾನ್ಯವಾಗಿ ಬಾಲ ಕಾರ್ಮಿಕರನ್ನು ಬಳಸಲಾಗುತ್ತದೆ ಎಂಬುದು ಪ್ರಮುಖ ಅಂಶ).

ವಿಶ್ವ ಪರಿಸರ ದಿನ 2022 ಅನ್ನು ಜೂನ್ 5 ರಂದು ಆಚರಿಸಲಾಗುತ್ತದೆ

ಕೊನೆಯದಾಗಿ, ಈ ದಿನದಂದು, ಪ್ರಪಂಚದಾದ್ಯಂತ ಜನರು ಮರಗಳನ್ನು ನೆಡುವುದು ಅಥವಾ ಸ್ಥಳೀಯ ಉದ್ಯಾನವನಗಳು ಮತ್ತು ಜಲಮಾರ್ಗಗಳನ್ನು ಸ್ವಚ್ಛಗೊಳಿಸುವಂತಹ ಪರಿಸರವನ್ನು ರಕ್ಷಿಸಲು ಸಹಾಯ ಮಾಡುವ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸಲಾಗುತ್ತದೆ ಅದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರುವುದಲ್ಲದೆ, ಎಲ್ಲರೂ ಇದನ್ನು ಪ್ರತಿದಿನ ಅಭ್ಯಾಸ ಮಾಡಬಹುದು ಮತ್ತು ಪರಿಸರವನ್ನು ಸ್ವಚ್ಛವಾಗಿಡಲು ನಮ್ಮ ಸುತ್ತಮುತ್ತಲಿನ ಜನರನ್ನು ಯಾವಾಗಲೂ ಪ್ರೋತ್ಸಾಹಿಸಬಹುದು. ಜವಾಬ್ದಾರಿಯುತ ಪ್ರವಾಸಿಗರಾಗಲು ಪ್ರಯತ್ನಿಸಿ ಹಾಗೂ ಮೇಲಿನ ಸಲಹೆಗಳನ್ನು ಅಭ್ಯಾಸ ಮಾಡಿ ಮತ್ತು ವಿಶ್ವ ಪರಿಸರ ದಿನದ ಈ ಸಂದರ್ಭದಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ!
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X