Search
  • Follow NativePlanet
Share
» »ವಿಶ್ವ ಬೈಸಿಕಲ್ ದಿನ 2022

ವಿಶ್ವ ಬೈಸಿಕಲ್ ದಿನ 2022

ವಿಶ್ವ ಬೈಸಿಕಲ್ ದಿನವು ಒಂದು ಅಂತರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಇದನ್ನು ಪ್ರತೀವರ್ಷ ಜೂನ್ 3ರಂದು ಆಚರಿಸಲಾಗುತ್ತದೆ. ಬೈಸಿಕಲ್ ಅನ್ನು ಸ್ವಾತಂತ್ರ್ಯ, ಫಿಟ್ನೆಸ್, ಯೋಗಕ್ಷೇಮ ಮತ್ತು ಸುಸ್ಥಿರ ಚಲನಶೀಲತೆಯ ಐಕಾನ್ ಆಗಿ ಆಚರಿಸುವ ಗುರಿಯನ್ನು ಹೊಂದಿದೆ. ಸೈಕ್ಲಿಂಗ್ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು, ಇದು ಸಾರಿಗೆ ವಿಧಾನ, ಕ್ರೀಡೆ, ಹವ್ಯಾಸ ಮಾತ್ರವಲ್ಲದೆ ನಿಮ್ಮ ದೇಹ ಮತ್ತು ಮನಸ್ಸಿಗೆ ಉತ್ತಮ ವ್ಯಾಯಾಮಗಳಲ್ಲಿ ಒಂದಾಗಿದೆ.

ಹಲವಾರು ಉದ್ಯಾನವನಗಳನ್ನು ತನ್ನಲ್ಲಿ ಹೊಂದಿರುವ ಬೆಂಗಳೂರು ಉದ್ಯಾನಗಳ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ ಈ ನಗರವು ಸೈಕ್ಲಿಂಗ್ ಮಾಡಲು ಅನುಕೂಲವಾಗುವಂತಹ ಹಲವಾರು ದಾರಿಗಳು, ಅನೇಕ ಉದ್ಯಾನವನಗಳು, ತೋಟಗಳು, ಮತ್ತು ಸರೋವರಗಳನ್ನು ಸಹ ಹೊಂದಿದೆ. ಆದುದರಿಂದ ಸಾಯಂಕಾಲದ ಸಮಯ ಮತ್ತು ವಾರಾಂತ್ಯದಲ್ಲಿ ಸೈಕ್ಲಿಂಗ್ ಮಾಡಲು ಯೋಗ್ಯವಾದ ಸ್ಥಳವೆನಿಸಿದೆ.

ನಗರದಲ್ಲಿನ ಸುತ್ತುಮುತ್ತಲಿನ ಹಲವಾರು ಸ್ಥಳಗಳನ್ನು ಸೈಕ್ಲಿಂಗ್ ಮೂಲಕವೇ ಅನ್ವೇಷಣೆ ಮಾಡಬಹುದಾಗಿದೆ.

cubbon-park-bangalore

1. ಕಬ್ಬನ್ ಪಾರ್ಕ್

ಈ ಉದ್ಯಾನವನವು ಸೈಕಲ್ ಟ್ರ್ಯಾಕ್ ಗಳು ಮತ್ತು ಹಚ್ಚ ಹಸುರಿನ ಹುಲ್ಲುಹಾಸುಗಳಿಗೆ ಹೆಸರುವಾಸಿಯಾಗಿದೆ. ಈ ಉದ್ಯಾನವನವು ಸ್ಟೇಟ್ ಸೆಂಟ್ರಲ್ ಲೈಬ್ರೆರಿ ಮತ್ತು ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಮತ್ತು ಹಸ್ತಪ್ರತಿಗಳ ಗ್ರಂಥಾಲಯಗಳು ಸೇರಿದಂತೆ ಹಲವಾರು ವಸ್ತುಗಳನ್ನೊಳಗೊಂಡ ವಸ್ತು ಸಂಗ್ರಹಾಲಯಗಳನ್ನೊಳನ್ನು ಹೊಂದಿದೆ.

marathallilake

2. ಮಾರತಹಳ್ಳಿ ಲೇಕ್

ಇಲೆಕ್ಟ್ರಾನಿಕ್ ಸಿಟಿಯ ಹತ್ತಿರವಿರುವ ಈ ಸರೋವರವು ತನ್ನಲ್ಲಿ ಪರಿಸರ ಸ್ನೇಹಿ ಕಾಲು ದಾರಿಯನ್ನು ಹೊಂದಿದೆ ಇದು ಸೈಕ್ಲಿಂಗ್ ಮಾಡಲು ಒಂದು ಸೂಕ್ತವಾದ ಸ್ಥಳವಾಗಿದೆ. ಇಲ್ಲಿಯ ಸರೋವರ ದಡದಲ್ಲಿಯೂ ಕೂಡಾ ಸೈಕ್ಲಿಂಗ್ ಮಾಡಲು ಅನುಕೂಲವಾಗುವಂತೆ ದಾರಿಗಳಿದ್ದು ಇದು ಯಲಹಂಕ ಏರ್ ಪೋರ್ಸ್ ಸ್ಟೇಷನ್ ಗೆ ತಲುಪುತ್ತದೆ.

magadiroadbanagalore

3. ಮಾಗಡಿ ರಸ್ತೆ

ಈ ರಸ್ತೆಯ ಸುತ್ತಮುತ್ತ ಸುಂದರವಾದ ನೋಟಗಳನ್ನು ಕಾಣಬಹುದಾಗಿದ್ದು, ಇದು ಸೈಕಲ್ ಸವಾರಿ ಮಾಡಲು ಸೂಕ್ತವಾಗಿದೆ. ಅದರಲ್ಲೂ ವಿಷೇಶವಾಗಿ ರಾತ್ರಿ ಸಮಯದಲ್ಲಿ ಬೆಂಗಳೂರಿನಿಂದ ಮತ್ತು ಸುತ್ತ ಮುತ್ತಲಿನ ಸ್ಥಳಗಳಿಂದ ಕಾಣುವ ದೀಪಗಳ ಬೆಳಕನ್ನು ಆನಂದಿಸುತ್ತಾ ಸೈಕಲ್ ಸವಾರಿಯ ರೋಚಕ ಅನುಭವವನ್ನು ಪಡೆಯಬಹುದಾಗಿದೆ.

bannerughattanationalpark

4. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಈ ಉದ್ಯಾನವನವು ನಗರಕ್ಕೆ ಹತ್ತಿರವಿರುವುದಕ್ಕೆ ಧನ್ಯವಾದಗಳನ್ನು ಹೇಳಬೇಕು ಏಕೆಂದರೆ ಈ ಉದ್ಯಾನವನವು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನರಿಂದ ಭೇಟಿ ನೀಡಲ್ಪಡುತ್ತದೆ. ಈ ಉದ್ಯಾನವನವು ದಟ್ಟವಾದ ಕಾಡು, ತೆರೆದ ಹುಲ್ಲುಗಾವಲುಗಳನ್ನು ತನ್ನಲ್ಲಿ ಹೊಂದಿದ್ದು ಯಾವುದೇ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿಕೊಳ್ಳುವ ಭಯವಿಲ್ಲದೆ ಸೈಕಲ್ ಸವಾರಿಯನ್ನು ಆರಾಮವಾಗಿ ಮಾಡಬಹುದಾಗಿದೆ.

5. ಇಂದಿರ ಗಾಂಧಿ ರಾಷ್ಟ್ರೀಯ ಉದ್ಯಾನವನ

ಕಾವೇರಿ ನದಿಯ ದಡದಲ್ಲಿರುವ ಉದ್ಯಾನವನವು ಹಲವಾರು ತರಹದ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ. ಈ ಉದ್ಯಾನವನವು ಬೆಳಿಗ್ಗೆ 6 ರಿಂದ ಸಾಯಂಕಾಲ 10 ಗಂಟೆಗಳವರೆಗೆ ತೆರೆದಿರುತ್ತದೆ ಹಾಗೂ ಉದ್ಯಾನವನದ ಒಳಗಿನ ಕೆಲವು ಜಾಗಗಳಿಗೆ ಬಾಡಿಗೆ ಸೈಕಲ್ ಪಡೆದು ಸವಾರಿ ಮಾಡಬಹುದಾಗಿದೆ.

6. ಸ್ಯಾಂಕಿ ಟ್ಯಾಂಕ್

ಇದು 1799 ಕ್ರಿ.ಶ ರಲ್ಲಿ ಟಿಪ್ಪು ಸುಲ್ತಾನನಿಂದ ನಿರ್ಮಿಸಲ್ಪಟ್ಟ ಕೃತಕ ಸರೋವರವಾಗಿದ್ದು ಇದು ಆ ಕಾಲದಲ್ಲಿಯ ನೀರಿನ ಸಂರಕ್ಷಣೆ ಯೋಜನೆಯ ಭಾಗವಾಗಿತ್ತು. ಇದು ಬಿಟಿಎಂ ಲೇಔಟ್ ನಲ್ಲಿದ್ದು ಇದರ ಸುತ್ತಲೂ ದಟ್ಟವಾದ ಹಸಿರಿನಿಂದ ಕೂಡಿದೆ. ಈ ಟ್ಯಾಂಕ್ ಗೆ ತಲುಪಲು ಹಲವಾರು ಪ್ರವೇಶ ದ್ವಾರಗಳಿವೆ ಅಲ್ಲಿ ಬೈಸಿಕಲ್‌ಗಳನ್ನು ಸಮಂಜಸವಾದ ದರದಲ್ಲಿ ಬಾಡಿಗೆಗೆ ಪಡೆಯಬಹುದು ಮತ್ತು ಅದರ ಸುತ್ತಲೂ ಸವಾರಿಯ ಆನಂದವನ್ನು ಪಡೆಯಬಹುದಾಗಿದೆ.

7. ಕಂಠೀರವ ಸ್ಟೇಡಿಯಂ

ಸಾಯಂಕಾಲದ ಸಮಯ ಅಥವಾ ವಾರಾಂತ್ಯದ ರಜಾದಿನಗಳಲ್ಲಿ ಸೈಕ್ಲಿಂಗ್ ಮಾಡಲು ಈ ಸ್ಥಳವು ಬೆಂಗಳೂರಿನ ಅತ್ಯಂತ ಉತ್ತಮವಾದ ಸ್ಥಳಗಳಲ್ಲಿ ಒಂದೆನಿಸಿದೆ. ಅತ್ಯುತ್ತವಾದ ಬೆಳಕು ಹಾಗೂ ಕಡಿಮೆ ಜನಸಂದಣಿಯನ್ನು ಈ ಸಮಯದಲ್ಲಿ ಇರುವುದರಿಂದ ಸೈಕ್ಲಿಂಗ್ ಮಾಡಲು ಅನುಕೂಲಕರವಾಗಿರುತ್ತದೆ. ಅಸ್ಷೇ ಅಲ್ಲದೆ ಈ ಸ್ಟೇಡಿಯಂ ನಲ್ಲಿ ಅನೇಕ ಹೋಟೇಲುಗಳಿದ್ದು ಇದರ ಸುತ್ತಮುತ್ತ ನೀವು ಸೈಕಲ್ ಸವಾರಿ ಮಾಡುವಾಗ ಇಲ್ಲಿಯ ಆಹಾರದ ರುಚಿಯನ್ನು ಸವಿಯಬಹುದಾಗಿದೆ.

koramangalabanagalore

8. ಕೋರಮಂಗಲ

ಹಸಿರು ವಾತಾವರಣದಲ್ಲಿ ಮತ್ತು ಅದರ ಸುತ್ತಮುತ್ತಲಿರುವ ಅಂಕುಡೊಂಕಾದ ರಸ್ತೆಗಳಲ್ಲಿ ಬೈಕ್ ಸವಾರಿ ಮಾಡಲು ಇಚ್ಚಿಸುವ ಸವಾರರಿಗೆ ಇದೊಂದು ಸೂಕ್ತವಾದ ಸ್ಥಳವಾಗಿದೆ. ಈ ಸ್ಥಳದಲ್ಲಿ ದಾರಿಯುದ್ದಕ್ಕೂ ಹಲವಾರು ಕೆಫೆಗಳಿದ್ದು ನಿಮ್ಮ ಸವಾರಿಯ ನಂತರ ಟೀ ಅಥವಾ ಕಾಫಿಯನ್ನು ಸವಿಯಬಹುದಾಗಿದೆ.

nandhihills

9. ನಂದಿ ಬೆಟ್ಟ

ಸಮುದ್ರ ಮಟ್ಟದಿಂದ 915 ಮೀಟರ್ ಎತ್ತರದಲ್ಲಿರುವ ನಂದಿಬೆಟ್ಟವು ಜನಪ್ರಿಯ ಪ್ರವಾಸಿ ತಾಣವಾಗಿದ್ದು ಇದು ಮನಮೋಹಕ ದೃಶ್ಯಗಳು, ಹಚ್ಚಹಸಿರಾದ ದಟ್ಟವಾದ ಕಾಡುಗಳು ಮತ್ತು ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಹಲವಾರು ಹೈಕಿಂಗ್ ಟ್ರೇಲ್‌ಗಳಿದ್ದು ನೀವು ಸಾಹಸಪ್ರಿಯರಾಗಿದ್ದಲ್ಲಿ, ಈ ಎತ್ತರದ ಪ್ರದೇಶವನ್ನು ನಿಮ್ಮ ಬೈಸಿಕಲ್‌ನಲ್ಲಿ ಸವಾರಿ ಮಾಡುವುದರ ಮೂಲಕ ಅನ್ವೇಷಿಸಬಹುದಾಗಿದೆ.

ಬೆಂಗಳೂರು ನಗರವು 200 ಕಿ.ಮೀ ರಸ್ತೆಗಳು ಮತ್ತು ಸೈಕ್ಲಿಂಗ್ ಮಾರ್ಗಗಳನ್ನು ಹೊಂದಿರುವುದರಿಂದ ಸೈಕಲ್ ಸವಾರಿ ಮಾಡಲು ಅತ್ತ್ಯುತ್ತಮವಾದ ಸ್ಥಳವಾಗಿದೆ. ವೃತ್ತಿಪರ ಸೈಕಲ್ ಸವಾರರಾಗಲಿ ಅಥವಾ ಹವ್ಯಾಸಿ ಸೈಕಲ್ ಸವಾರರಿಗಾಗಲಿ ಬೆಂಗಳೂರಿನಲ್ಲಿ ಸೈಕ್ಲಿಂಗ್ ಅಥವಾ ಬೈಕು ಸವಾರಿ ಮಾಡಲು ಅನುಕೂಲವಾಗುವಂತಹ ಹಲವಾರು ಸ್ಥಳಗಳನ್ನು ಕಾಣಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X