• Follow NativePlanet
Share
» »ತಿರುಪತಿಗೆ ತಿಮ್ಮಪ್ಪನಿಗೆ ಕೂದಲು ಕೊಡೋದು ಯಾಕೆ ಗೊತ್ತಾ?

ತಿರುಪತಿಗೆ ತಿಮ್ಮಪ್ಪನಿಗೆ ಕೂದಲು ಕೊಡೋದು ಯಾಕೆ ಗೊತ್ತಾ?

Written By: Rajatha

ದಕ್ಷಿಣ ಭಾರತದಲ್ಲಿ ಪ್ರತಿಯೊಂದು ದೇವಸ್ಥಾನ ಕೂಡಾ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಅವುಗಳಲ್ಲಿ ತಿರುಪತಿ ಬಾಲಾಜಿ ದೇವಸ್ಥಾನ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಈ ದೇವಸ್ಥಾನವನ್ನು ಭಾರತದ ಶ್ರೀಮಂತ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಇಲ್ಲಿ ಪ್ರತೀ ದಿನ ಕೋಟ್ಯಾಂತರ ರೂಪಾಯಿ ಸಂಗ್ರಹವಾಗುತ್ತದೆ. ತಿರುಪತಿಗೆ ಹೋಗುವ ಹೆಚ್ಚಿನವರು ಅಲ್ಲಿ ತಮ್ಮ ಕೇಶ ಮುಂಡನೆ ಮಾಡಿಸಿಕೊಳ್ಳುತ್ತಾರೆ ಯಾಕೆ ಗೊತ್ತಾ? ಪುಟ್ಟ ಮಕ್ಕಳ ಕೂದಲನ್ನು ಕೂಡಾ ತಿರುಪತಿಯಲ್ಲಿ ತೆಗೆಸುತ್ತಾರೆ ಇದರ ಹಿಂದಿನ ಉದ್ದೇಶ ಏನು ಅನ್ನೋದು ನಿಮಗೇನಾದರೂ ಗೊತ್ತಾ?

ಶಿವ-ಪಾರ್ವತಿಯರ ಮದುವೆಯಾದ ಜಾಗ ಎಲ್ಲಿದೆ ಗೊತ್ತಾ?

ಕೂದಲ ದಾನ ಮಾಡೋದು ಯಾಕೆ?

ಕೂದಲ ದಾನ ಮಾಡೋದು ಯಾಕೆ?

PC:PRATAPKUMARBEHERA
ತಿರುಪತಿ ಬಾಲಾಜಿಯನ್ನು ವಿಷ್ಣುವಿನ ರೂಪ ಎಂದೇ ಹೇಳಲಾಗುತ್ತದೆ. ಈ ದೇವರನ್ನು ಪ್ರಸನ್ನವಾಗಿಸಿದರೆ ಲಕ್ಷ್ಮೀ ದೇವಿಯ ಕೃಪೆ ಕೂಡಾ ನಮ್ಮ ಮೇಲಿರುತ್ತದೆ ಎನ್ನಲಾಗುತ್ತದೆ. ಅಲ್ಲದೆ ನಮ್ಮ ಎಲ್ಲಾ ಸಮಸ್ಯೆಗಳು ದೂರ ಆಗುತ್ತವೆ ಎನ್ನಲಾಗುತ್ತದೆ. ಅವರ ಎಲ್ಲಾ ದುಃಖವನ್ನು ಲಕ್ಷ್ಮೀ ದೇವಿ ದೂರಮಾಡುತ್ತಾಳೆ ಎನ್ನುವ ನಂಬಿಕೆ ಜನರದ್ದು. ಹಾಗಾಗಿ ತಮ್ಮ ಎಲ್ಲಾ ಕೆಟ್ಟದ್ದು, ಹಾಗೂ ಪಾಪಗಳ ಪ್ರತೀಕವಾಗಿ ಜನರು ತಮ್ಮ ಕೂದಲನ್ನು ತಿರುಪತಿಯಲ್ಲಿ ದಾನ ಮಾಡುತ್ತಾರೆ. ಹಾಗಾಗಿ ವಿಷ್ಣು ಹಾಗೂ ಲಕ್ಷ್ಮೀಯ ಕೃಪೆ ಸದಾ ನಮ್ಮ ಮೇಲಿರಲಿ ಎಂದು ಅಪೇಕ್ಷಿಸುತ್ತಾರೆ.

ಭಕ್ತರಿಗೆ ತುಳಸಿ ಎಲೆ ನೀಡುವುದಿಲ್ಲ

ಭಕ್ತರಿಗೆ ತುಳಸಿ ಎಲೆ ನೀಡುವುದಿಲ್ಲ

PC: rajaraman sundaram
ಶ್ರೀಕೃಷ್ಣ ಹಾಗೂ ವಿಷ್ಣುವಿಗೆ ತುಳಸಿ ಎಲೆ ಎಂದರೆ ತುಂಬಾ ಪ್ರೀಯವಾದದ್ದು ಹಾಗಾಗಿ ಪೂಜೆಯಲ್ಲಿ ತುಳಸಿಯ ಎಲೆ ಮಹತ್ವದ್ದಾಗಿರುತ್ತದೆ. ಹಾಗಾಗಿ ಬೇರೆಲ್ಲಾ ದೇವಸ್ಥಾನದಲ್ಲಿ ಭಕ್ತರಿಗೆ ತುಳಸಿ ಎಲೆಯನ್ನು ಪ್ರಸಾದ ರೂಪದಲ್ಲಿ ನೀಡುವುದನ್ನು ನೀವು ನೋಡಿರುವಿರಿ. ಇಲ್ಲಿ ಕೂಡಾ ಇತರ ದೇವಸ್ಥಾನದ ಹಾಗೆ ತುಳಸಿ ಎಲೆಯನ್ನು ಅರ್ಪಿಸುತ್ತಾರೆ ಆದರೆ ಅದನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡುವುದಿಲ್ಲ. ಪೂಜೆಯ ನಂತರ ಆ ತುಳಸಿಯ ಎಲೆಗಳನ್ನು ಮಂದಿರದ ಬಳಿ ಇರುವ ಬಾವಿಗೆ ಹಾಕಲಾಗುತ್ತದೆ.

ತನ್ನಷ್ಟಕ್ಕೆ ಪ್ರಕಟವಾಗಿತ್ತು ಮೂರ್ತಿ

ತನ್ನಷ್ಟಕ್ಕೆ ಪ್ರಕಟವಾಗಿತ್ತು ಮೂರ್ತಿ

PC:daimalu
ಇಲ್ಲಿರುವ ಕಪ್ಪು ಬಣ್ಣದ ಮೂರ್ತಿಯನ್ನು ಯಾವ ಶಿಲ್ಪಿಯು ಕೆತ್ತಿಲ್ಲ ಬದಲಾಗಿ ಈ ಮೂರ್ತಿ ತನ್ನಷ್ಟಕ್ಕೆ ಭೂಮಿಯೊಳಗಿನಿಂದ ಪ್ರಕಟವಾಗಿದ್ದು ಎನ್ನಲಾಗುತ್ತದೆ. ವೆಂಕಟಾಚಲ ಪರ್ವತವನ್ನು ಜನರು ದೇವರ ಸ್ವರೂಪ ಎಂದೇ ಭಾವಿಸುತ್ತಾರೆ. ಹಾಗಾಗಿ ಇಲ್ಲಿ ಚಪ್ಪಲು ಧರಿಸಿ ಹೋಗೋದಿಲ್ಲ. ಇಲ್ಲಿರುವ ಕಪ್ಪು ಬಣ್ಣದ ಮೂರ್ತಿಯನ್ನು ಯಾವ ಶಿಲ್ಪಿಯು ಕೆತ್ತಿಲ್ಲ ಬದಲಾಗಿ ಈ ಮೂರ್ತಿ ತನ್ನಷ್ಟಕ್ಕೆ ಭೂಮಿಯೊಳಗಿನಿಂದ ಪ್ರಕಟವಾಗಿದ್ದು ಎನ್ನಲಾಗುತ್ತದೆ. ವೆಂಕಟಾಚಲ ಪರ್ವತವನ್ನು ಜನರು ದೇವರ ಸ್ವರೂಪ ಎಂದೇ ಭಾವಿಸುತ್ತಾರೆ. ಹಾಗಾಗಿ ಇಲ್ಲಿ ಚಪ್ಪಲು ಧರಿಸಿ ಹೋಗೋದಿಲ್ಲ. ಇಲ್ಲಿರುವ ಕಪ್ಪು ಬಣ್ಣದ ಮೂರ್ತಿಯನ್ನು ಯಾವ ಶಿಲ್ಪಿಯು ಕೆತ್ತಿಲ್ಲ ಬದಲಾಗಿ ಈ ಮೂರ್ತಿ ತನ್ನಷ್ಟಕ್ಕೆ ಭೂಮಿಯೊಳಗಿನಿಂದ ಪ್ರಕಟವಾಗಿದ್ದು ಎನ್ನಲಾಗುತ್ತದೆ. ವೆಂಕಟಾಚಲ ಪರ್ವತವನ್ನು ಜನರು ದೇವರ ಸ್ವರೂಪ ಎಂದೇ ಭಾವಿಸುತ್ತಾರೆ. ಹಾಗಾಗಿ ಇಲ್ಲಿ ಚಪ್ಪಲು ಧರಿಸಿ ಹೋಗೋದಿಲ್ಲ.

ಶುಕ್ರವಾರ ಮೂರ್ತಿಯ ದರ್ಶನ

ಶುಕ್ರವಾರ ಮೂರ್ತಿಯ ದರ್ಶನ

PC:YVSREDDY
ದಿನದಲ್ಲಿ ಮೂರು ಬಾರಿ ಬಾಲಾಜಿಯ ದರ್ಶನವಾಗುತ್ತದೆ. ಮೊದಲ ದರ್ಶನ ಬೆಳಗ್ಗೆ ಆಗುತ್ತದೆ ಅದನ್ನು ವಿಶ್ವರೂಪ ಎನ್ನಲಾಗುತ್ತದೆ. ಎರಡನೇ ದರ್ಶನ ಮಧ್ಯಾಹ್ನ ಹೊತ್ತಿಗೆ ಆಗುತ್ತದೆ. ಇನ್ನು ಮೂರನೇ ದರ್ಶನ ಆಗೋದು ರಾತ್ರಿ ಹೊತ್ತಿಗೆ ಈ ಮೂರು ದರ್ಶನಕ್ಕೆ ಯಾವುದೇ ಶುಲ್ಕವಿಲ್ಲ. ಇನ್ನೂ ಬಾಲಾಜಿಯ ಇಡೀ ಮೂರ್ತಿಯ ದರ್ಶನವಾಗೋದು ಶುಕ್ರವಾರ. ಬೆಳಗ್ಗಿನ ಅಭಿಷೇಕದ ಸಮಯದಲ್ಲಿ.

ಬಾಲಾಜಿ ದರ್ಶನಕ್ಕೂ ಮುನ್ನ ಕಪಿಲ ತೀರ್ಥ ಸ್ನಾನ

ಬಾಲಾಜಿ ದರ್ಶನಕ್ಕೂ ಮುನ್ನ ಕಪಿಲ ತೀರ್ಥ ಸ್ನಾನ

PC:Bhaskaranaidu
ಬಾಲಾಜಿಯ ದರ್ಶನ ಪಡೆಯುವ ಮೊದಲು ಕಪಿಲ ತೀರ್ಥದಲ್ಲಿ ಸ್ನಾನ ಮಾಡಿ ಕಪಿಲೇಶ್ವರಿಯ ದರ್ಶನ ಪಡೆಯಬೇಕು. ಆ ನಂತರ ಬಾಲಾಜಿಯ ದರ್ಶನ ಪಡೆಯಬೇಕು. ಬಾಲಾಜಿಯ ದರ್ಶನದ ಬಳಿಕ ಪದ್ಮಾವತಿಯ ದರ್ಶನ ಪಡೆಯುವುದು ವಾಡಿಕೆ.

ಹಲವು ಮಂದಿರಗಳಿವೆ

ಹಲವು ಮಂದಿರಗಳಿವೆ


PC:Siddharth Verma 101
ಇಲ್ಲಿ ಬಾಲಾಜಿ ಮಂದಿರವನ್ನು ಹೊರತುಪಡಿಸಿ ಇನ್ನೂ ಅನೇಕ ಮಂದಿರಗಳಿವೆ, ಆಕಾಂಶ ಗಂಗಾ, ಪಾಪನಾಶಕ ತೀರ್ಥ, ವೈಕುಂಠ ತೀರ್ಥ, ತಿರುಚ್ಚಾನೂರ್, ಈ ಎಲ್ಲಾ ಸ್ಥಳಗಳು ಬಾಲಾಜಿಯ ಲೀಲೆಗಳನ್ನು ಹೊಂದಿದೆ.

Read more about: temple andhra pradesh

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ