Search
  • Follow NativePlanet
Share
» »ತಿರುಪತಿ ದೇವಾಲಯವನ್ನು ಯಾರು ನಿರ್ಮಾಣ ಮಾಡಿದರು ಗೊತ್ತ?

ತಿರುಪತಿ ದೇವಾಲಯವನ್ನು ಯಾರು ನಿರ್ಮಾಣ ಮಾಡಿದರು ಗೊತ್ತ?

ತಿರುಪತಿ ದೇವಾಲಯ ಒಂದು ಮಾಹಿಮಾನ್ವಿತವಾದ ದೇವಾಲಯ. ಈ ದೇವಾಲಯದಲ್ಲಿನ ಸ್ವಾಮಿಯನ್ನು ಕಾಣಲು ದೇಶದ ಮೂಲೆ-ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಭೇಟಿ ನೀಡುತ್ತಾರೆ. ಅತ್ಯಂತ ಸುಂದರವಾಗಿ ಕಾಣುವ ಈ ಸ್ವಾಮಿಯು ವಜ್ರ, ಚಿನ್ನಾಭರಣಗಳಿಂದ ಕಂಗೊಳಿ

ತಿರುಪತಿ ದೇವಾಲಯ ಒಂದು ಮಾಹಿಮಾನ್ವಿತವಾದ ದೇವಾಲಯ. ಈ ದೇವಾಲಯದಲ್ಲಿನ ಸ್ವಾಮಿಯನ್ನು ಕಾಣಲು ದೇಶದ ಮೂಲೆ-ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಭೇಟಿ ನೀಡುತ್ತಾರೆ. ಅತ್ಯಂತ ಸುಂದರವಾಗಿ ಕಾಣುವ ಈ ಸ್ವಾಮಿಯು ವಜ್ರ, ಚಿನ್ನಾಭರಣಗಳಿಂದ ಕಂಗೊಳಿಸುತ್ತಿರುತ್ತಾನೆ. 7 ಬೆಟ್ಟಗಳ ವಡೆಯ ಸ್ವಾಮಿ ವೆಂಕಟೇಶ್ವರ ಸ್ವಾಮಿಯು ತಿರುಮಲದಲ್ಲಿ ನೆಲೆಸಿದ್ದಾನೆ. ಈ ಸ್ವಾಮಿಯ ದೇವಾಲಯವು ಅತ್ಯಂತ ವಿಶೇಷವಾಗಿ ನಿರ್ಮಾಣ ಮಾಡಿದ್ದಾರೆ.

ಸ್ವಾಮಿಯ ದೇವಾಲಯಕ್ಕೆ ತೆರಳುವಾಗ ನಮ್ಮಲ್ಲಿ ಮೂಡುವ ಪ್ರೆಶ್ನೆ ಏನೆಂದರೆ ಈ ದೇವಾಲಯವನ್ನು ನಿರ್ಮಾಣ ಮಾಡಿದವರು ಯಾರು? ಪ್ರಸ್ತುತ ಲೇಖನದಲ್ಲಿ ಯಾರು ಈ ದೇವಾಲಯವನ್ನು ನಿರ್ಮಾಣ ಮಾಡಿದರು? ನಿರ್ಮಾಣ ಮಾಡಲು ಕಾರಣವೇನು? ಸ್ವಾಮಿ ಇಲ್ಲಿಯೇ ನೆಲೆಸಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರ ಲೇಖನದ ಮೂಲಕ ಪಡೆಯಿರಿ.

ತಿರುಮಲ ದೇವಾಲಯದ ನಿರ್ಮಾಣ ಮಾಡಿದವರು ಯಾರು?

ತಿರುಮಲ ದೇವಾಲಯದ ನಿರ್ಮಾಣ ಮಾಡಿದವರು ಯಾರು?

ವೆಂಕಟೇಶ್ವರ ಸ್ವಾಮಿಯ ದೇವಾಲಯವು ಅತ್ಯಂತ ಸುಂದರವಾಗಿ ನಿರ್ಮಾಣ ಮಾಡಿದ್ದಾರೆ. ಈ ದೇವಾಲಯವನ್ನು ನಿರ್ಮಾಣ ಮಾಡಿದವರು ತೊಂಡಮಾನ್ ಚಕ್ರವರ್ತಿ ಎಂದು ಹೇಳುತ್ತಾರೆ. ತೊಂಡ ಮಾನ್ ಚಕ್ರವರ್ತಿ ಆಕಾಶ ರಾಜನ ಸಹೋದರ. ಇಲ್ಲಿ ದೊರೆತ ಶಾಸನದ ಪ್ರಕಾರ 1500 ಚರಿತ್ರೆ ಪ್ರಕಾರ ಪಲ್ಲವ ರಾಣಿ ಸಾಮವೇ ಕ್ರಿ. ಶ 614 ರಲ್ಲಿ ಆನಂದ ನಿಲಯ ಜೀರ್ಣೋದಾರಣ ಮಾಡಿದಳು.

PC:YOUTUBE

ಸ್ವಾಮಿಯ ಉತ್ಸವಗಳಿಗೆ ಆಭರಣಗಳು

ಸ್ವಾಮಿಯ ಉತ್ಸವಗಳಿಗೆ ಆಭರಣಗಳು

ಸ್ವಾಮಿಯ ಉತ್ಸವಗಳು, ಆಭರಣಗಳು ಯುವರಾಣಿ ಸಮರ್ಪಿಸುತ್ತಿದ್ದಳು. ಚರಿತ್ರೆಯಲ್ಲಿ ಆಕೆಯು ದೊಡ್ಡ ಭಕ್ತೆಯಾಗಿ ನೆಲೆಸಿದಳು. ಆ ಯುವರಾಣಿಗೆ ಪೆರುಂದೇವಿ ಎಂದು ಸಹ ಕರೆಯುತ್ತಿದ್ದರು. 19 ನೇ ಶತಮಾನದ ಕೊನೆಯ ಘಟ್ಟದವರೆವಿಗೂ ಬೆಟ್ಟದ ಮೇಲೆ ಸ್ವಾಮಿಯ ದೇವಾಲಯ ಹಾಗು ಹಾತಿರಾಮ ಮಠ ಬಿಟ್ಟು ಬೇರೆ ಯಾವುದೇ ನಿರ್ಮಾಣವಾಗಿರಲಿಲ್ಲ. ಅರ್ಚಕರು ಕೂಡ ಬೆಟ್ಟದ ಕೆಳಗೆ ಇರುವ ಕೊಠಡಿಗಳಲ್ಲಿ ಇರುತ್ತಿದ್ದರು.

PC:YOUTUBE

ಕನಸ್ಸಿನಲ್ಲಿ ಬಂದು

ಕನಸ್ಸಿನಲ್ಲಿ ಬಂದು

ನಮಗೆ ಸಾಮಾನ್ಯವಾಗಿ ತಿರುಪತಿಗೆ ತೆರಳಿದಾಗ ಮೂಡುವ ಪ್ರೆಶ್ನೆ ಏನೆಂದರೆ ಈ ಪುಣ್ಯಕ್ಷೇತ್ರವನ್ನು ನಿರ್ಮಾಣ ಮಾಡಿದವರು ಯಾರು ಎಂದು. ಈ ಅದ್ಭುತವಾದ ದೇವಾಲಯವನ್ನು ನಿರ್ಮಾಣ ಮಾಡಿದವರು ತಮಿಳುನಾಡು ರಾಜ್ಯದ ಕಾಂಚಿಪುರಂ ಪ್ರದೇಶಕ್ಕೆ ರಾಜನಾಗಿದ್ದ ತೊಂಡಮಾನ. ಇತನಿಗೆ ಒಂದು ದಿನ ವಿಷ್ಣು ಮೂರ್ತಿಯು ಕನಸ್ಸಿನಲ್ಲಿ ಬಂದು ಹೀಗೆ ಹೇಳಿದ " ಗತ ಜನ್ಮದಲ್ಲಿ ನೀನು ರಂಗದಾಸು ಎಂಬ ಹೆಸರಿನವನಾಗಿದ್ದು, ನನ್ನ ಭಕ್ತನಾಗಿದ್ದೆ" ಎಂದು ಹೇಳುತ್ತಾನೆ.

PC:YOUTUBE

ದೇವಾಲಯದ ನಿರ್ಮಾಣ

ದೇವಾಲಯದ ನಿರ್ಮಾಣ

ಹೀಗಾಗಿ ವೆಂಕಟೇಶ್ವರ ಸ್ವಾಮಿಯಾಗಿ ಶೇಷಚಲ ಬೆಟ್ಟದ ಮೇಲೆ ನೆಲೆಸಿದ್ದೇನೆ ಎಂದೂ, ಕಲಿಯುಗ ಅಂತ್ಯದ ವರೆವಿಗೂ ಅಲ್ಲಿಯೇ ಇರುತ್ತೇನೆ ಇದ್ದರಿಂದಾಗಿ ನೀನು ಅಲ್ಲಿ ದೇವಾಲಯವನ್ನು ನಿರ್ಮಾಣ ಮಾಡು ಎಂದು ಹೇಳುತ್ತಾನೆ. ಇದಕ್ಕೆ ಸಂತೋಷದಿಂದ ಒಪ್ಪಿದ ರಾಜ ತೊಂಡಮಾನನು ತ್ವರಿತವಾಗಿ ವಿಶ್ವಕರ್ಮನನ್ನು ಕರೆಸಿ, ದೇವಾಲಯದ ಪ್ರಣಾಳಿಕೆಯನ್ನು ಸಿದ್ಧಪಡಿಸಿ. ಅದ್ಭುತವಾಗಿ ದೇವಾಲಯವನ್ನು ನಿರ್ಮಾಣ ಮಾಡುತ್ತಾನೆ.


PC:YOUTUBE

ಇತರ ರಾಜ ವಂಶಿಕರು

ಇತರ ರಾಜ ವಂಶಿಕರು

ತೊಂಡಮಾನನು ಆಕಾಶ ರಾಜನ ಸಹೋದರನಾಗಿದ್ದನು. ಇತನ ಆನಂತರ ಚೋಳರು, ಪಲ್ಲವರು, ವಿಜಯನಗರದ ರಾಜರು ಮೊದಲಾದವರು ದೇವಾಲಯವನ್ನು ಅಭಿವೃದ್ಧಿಗೊಳಿಸಿದರು. ಈ ದೇವಾಲಯದಲ್ಲಿ ಆ ಸ್ವಾಮಿಯ ಅಲಂಕಾರಕ್ಕಾಗಿ ಬಳಸುವ ಸ್ವರ್ಣ ಹಾರವು ಸುಮಾರು 12 ಕೆ.ಜಿ ಭಾರವಾಗಿರುತ್ತದೆ. ಈ ಸ್ವಾಮಿಯನ್ನು ಅಲಂಕಾರ ಮಾಡಬೇಕಾದರೆ ಒಬ್ಬರಿಂದ ಆಗುವ ಮಾತಲ್ಲ.


PC:YOUTUBE

ಸ್ವಾಮಿಯ ಕಿರೀಟ

ಸ್ವಾಮಿಯ ಕಿರೀಟ

ದೇವಾಲಯದಲ್ಲಿನ ಸ್ವಾಮಿಯ ಕಿರೀಟದಲ್ಲಿನ ನೀಲಿ ಬಣ್ಣದ ವಜ್ರ ಪ್ರಪಂಚದಲ್ಲಿಯೇ ಎಲ್ಲೂ ಇಲ್ಲವೆಂದೂ, ಅದರ ಬೆಲೆ ಎಷ್ಟು ಲಕ್ಷ ಕೋಟಿಗಳಷ್ಟು ಇರಬಹುದು ಎಂದು ಪೂಜಾರಿಗಳು ಅಭಿಪ್ರಾಯ ಪಡುತ್ತಾರೆ. ಶ್ರೀ ಕೃಷ್ಣ ಆಳ್ವಿಕೆ ನಡೆಸಿದ 21 ವರ್ಷಗಳು ತಿರುಮಲಕ್ಕೆ ಸ್ವರ್ಣಯುಗ ಎಂದೇ ಹೇಳಬಹುದು. ಆ ಸಮಯದಲ್ಲಿ ಸ್ವಾಮಿಗೆ ಶ್ರೀ ಕೃಷ್ಣ ದೇವಾಲಯರು ಬೆಲೆಕಟ್ಟಲಾಗದಂತಹ ವಜ್ರ, ಮುತ್ತು ಮೊದಲಾದವುಗಳಿಂದ ತುಂಬಿ ತುಳುಕುತ್ತಿರುವ ವಜ್ರದ ಕಿರೀಟವನ್ನು ಸ್ವಾಮಿಗೆ ಅರ್ಪಿಸಿದರು.


PC:YOUTUBE

ಸ್ವರ್ಣಯುಗ

ಸ್ವರ್ಣಯುಗ

12 ನೇ ಶತಮಾನದಿಂದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಸ್ವರ್ಣ ಯುಗವು ಪ್ರಾರಂಭವಾಯಿತು. ಆ ಸಮಯದಲ್ಲಿ ಹಲವಾರು ಕಿರೀಟಗಳು ಸ್ವಾಮಿಗೆ ಸಮರ್ಪಿಸಿದರು. ಅವುಗಳು ಯಾವುವು ಎಂದರೆ ಮೂಲ ವಿರಾಟನಿಗೆ 6 ಕಿರೀಟಗಳು, ಉತ್ಸವ ಮೂರ್ತಿಗೆ 7 ಕಿರೀಟಗಳು, 20 ಮುತ್ತಿನ ಹಾರಗಳು, ಸ್ವರ್ಣ ಪೀಠಗಳು, ಸ್ವರ್ಣ ಪಾದಗಳು, ಲೆಕ್ಕವೆ ಹಾಕಲಾಗದ ಬಂಗಾರದ ಅಭರಣಗಳು ಸ್ವಾಮಿಗೆ ಬಂದವು.

PC:YOUTUBE

ವೆಂಕಟೇಶ್ವರ ಸ್ವಾಮಿ ಭೂ ಲೋಕದಲ್ಲಿ ನೆಲೆಸಲು ಕಾರಣವೇನು?

ವೆಂಕಟೇಶ್ವರ ಸ್ವಾಮಿ ಭೂ ಲೋಕದಲ್ಲಿ ನೆಲೆಸಲು ಕಾರಣವೇನು?

ಒಂದು ಕಥೆ ಪ್ರಕಾರ

ಶ್ರೀ ವೆಂಕಟೇಶ್ವರ ಸ್ವಾಮಿಯು ತಿರುಮಲದಲ್ಲಿ ನೆಲೆಸಲು ಕಾರಣವೇನು ಎಂಬ ರಹಸ್ಯ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಪೂರ್ವ ನಾರದ ಮುನಿಯು ಭೂ ಲೋಕದಲ್ಲಿ ಮಾನವರಿಗೆ ದೇವರ ಮೇಲೆ ಇರುವ ನಂಬಿಕೆ, ಭಕ್ತಿ, ವಿಶ್ವಾಸ ಎಂಬುದು ಯಾವುದು ಇಲ್ಲದೇ, ಪಾಪ ಭೀತಿ ಇಲ್ಲದೇ ಜೀವಿಸುತ್ತಿದ್ದಾರೆ ಎಂದು ಹೇಳಿದರು. ಆಗ ಶ್ರೀ ಮಹವಿಷ್ಣುವು ಕಲಿಯುಗ ದೈವವಾಗಿ ಶ್ರೀ ವೆಂಕಟೇಶ್ವರನಾಗಿ ನೆಲೆಸುತ್ತೇನೆ ಎಂದು ಹೇಳುತ್ತಾನೆ.

PC:YOUTUBE

ವೆಂಕಟೇಶ್ವರ ಸ್ವಾಮಿ ಭೂ ಲೋಕದಲ್ಲಿ ನೆಲೆಸಲು ಕಾರಣವೇನು?

ವೆಂಕಟೇಶ್ವರ ಸ್ವಾಮಿ ಭೂ ಲೋಕದಲ್ಲಿ ನೆಲೆಸಲು ಕಾರಣವೇನು?

ಮತ್ತೊಂದು ಕಥೆಯ ಪ್ರಕಾರ

ಮತ್ತೊಂದು ಕಥೆಯ ಪ್ರಕಾರ ಶ್ರೀ ಕೃಷ್ಣನ ನಿಜವಾದ ತಂದೆ ತಾಯಿಗಳು ದೇವಕಿ, ವಾಸುದೇವ ಆಗಿರುತ್ತಾರೆ. ಅದರೆ ಶ್ರೀ ಕೃಷ್ಣನು ಕಾರಣ ಜನ್ಮದವನಾಗಿರುವುದರಿಂದ ಯಶೋಧೆಯಲ್ಲಿ ಬೆಳೆಯುತ್ತಾನೆ. ದೊಡ್ಡವನಾದ ನಂತರ ಶ್ರೀ ಕೃಷ್ಣನು ರುಕ್ಮಿಣಿಯನ್ನು ವಿವಾಹ ಮಾಡಿಕೊಳ್ಳುತ್ತಾನೆ. ಆದರೆ ಆ ವಿವಾಹವನ್ನು ಯಶೋಧೆಯು ನೋಡಲಾಗಲಿಲ್ಲ ಎಂದು ನೋವು ಪಡುವಾಗ ಶ್ರೀ ಕೃಷ್ಣನು ಕಲಿಯುಗದಲ್ಲಿ ವೆಂಕಟೇಶ್ವರನಾಗಿ ನೆಲೆಸಿ ತನ್ನ ವಿವಾಹದ ಸಂದರ್ಭದಲ್ಲಿ (ಯಶೋಧ ಮಾತೆಯನ್ನು) ಬಕುಳ ಮಾತೆಯಾಗಿ ವಿವಾಹವನ್ನು ಕಂಡು ಆನಂದಿಸು ಎಂದು ಹೇಳುತ್ತಾನೆ.


PC:YOUTUBE

ವೆಂಕಟೇಶ್ವರ ಸ್ವಾಮಿ ಭೂ ಲೋಕದಲ್ಲಿ ನೆಲೆಸಲು ಕಾರಣವೇನು?

ವೆಂಕಟೇಶ್ವರ ಸ್ವಾಮಿ ಭೂ ಲೋಕದಲ್ಲಿ ನೆಲೆಸಲು ಕಾರಣವೇನು?

ಇನ್ನೊಂದು ಕಥೆಯ ಪ್ರಕಾರ

ಇನ್ನೊಂದು ಕಥೆಯ ಪ್ರಕಾರ ವೇದವತಿಯು ಶ್ರೀ ಮಹಾ ವಿಷ್ಣುವನ್ನು ವಿವಾಹ ಮಾಡಿಕೊಳ್ಳಬೇಕು ಎಂದು ತನ್ನ ತಂದೆಯೊಂದಿಗೆ ಹೇಳಿಕೊಳ್ಳುತ್ತಾಳೆ. ತದನಂತರ ಶ್ರೀ ಮಹಾ ವಿಷ್ಣುವಿಗಾಗಿ ತಪಸ್ಸು ಮಾಡುತ್ತಾಳೆ. ಆ ಸಮಯದಲ್ಲಿ ರಾವಣನು ವೇದವತಿಯನ್ನು ಅಪಹರಿಸಬೇಕು ಎಂದು ನೋಡುತ್ತಾನೆ. ವೇದವತಿ ರಾವಣಾಸುರನಿಗೆ " ನೀನು ನಿನ್ನ ಲಂಕದಲ್ಲಿಯೇ ಒಬ್ಬ ಸ್ರೀ ಮೂಲಕ ನಾಶವಾಗುತ್ತಿಯಾ "ಎಂದು ಹೀಗೆ ಶಪಿಸುತ್ತಾಳೆ.

PC:YOUTUBE

ವೆಂಕಟೇಶ್ವರ ಸ್ವಾಮಿ ಭೂ ಲೋಕದಲ್ಲಿ ನೆಲೆಸಲು ಕಾರಣವೇನು?

ವೆಂಕಟೇಶ್ವರ ಸ್ವಾಮಿ ಭೂ ಲೋಕದಲ್ಲಿ ನೆಲೆಸಲು ಕಾರಣವೇನು?

ಸೀತಾ ಮಾತೆಯನ್ನು ಅಪರಿಸುವ ಬದಲು ರಾವಣನು ಮಾಯ ಸೀತೆಯಾದ ವೇದವತಿಯನ್ನು ಲಂಕೆಯಲ್ಲಿ ಬಂದಿಸುತ್ತಾನೆ. ರಾವಣಸುರನ ಸಂಹಾರದ ನಂತರ ಮಯಾ ಸೀತೆಯಾಗಿದ್ದ ವೇದವತಿಯು ತನ್ನನ್ನು ವಿವಾಹವಾಗುವಂತೆ ಕೇಳಿಕೊಳ್ಳುತ್ತಾಳೆ. ಏಕ ಪತ್ನಿಯನ್ನು ಅನುಸರಿಸುತ್ತಿದ್ದ ರಾಮನು ಕಲಿಯುಗದಲ್ಲಿ ಶ್ರೀ ವೆಂಕಟೇಶ್ವರನಾಗಿ ಹುಟ್ಟಿ ಪದ್ಮಾವತಿಯಾದ ನಿನ್ನನ್ನು ಆ ಸಂದರ್ಭದಲ್ಲಿ ವಿವಾಹವಾಗುತ್ತೇನೆ ಎಂದು ಹೇಳುತ್ತಾನೆ.

PC:YOUTUBE

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಬೆಂಗಳೂರಿನಿಂದ ತಿರುಮಲಕ್ಕೆ ಸುಮಾರು 267 ಕಿ.ಮೀ ದೂರದಲ್ಲಿದ್ದು, ಹಲವಾರು ಖಾಸಗಿ, ಸರ್ಕಾರಿ ಬಸ್ಸುಗಳ ವ್ಯವಸ್ಥೆಯನ್ನು ಇಲ್ಲಿ ಕಾಣಬಹುದಾಗಿದೆ. ಹಾಗೆಯೇ ಸಾಕಷ್ಟು ರೈಲುಗಳು ತಿರುಪತಿಗೆ ಇವೆ. ಹಾಗಾಗಿ ಸುಲಭವಾಗಿ ತಿರುಮಲಕ್ಕೆ ತಲುಪಬಹುದಾಗಿದೆ.

ತಿರುಮಲದಲ್ಲಿದೆ ಬಂಗಾರದ ಬಾವಿ !ತಿರುಮಲದಲ್ಲಿದೆ ಬಂಗಾರದ ಬಾವಿ !

PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X