• Follow NativePlanet
Share
Menu
» »ಬ್ರಿಟೀಷ್‍ರು ನಿರ್ಮಾಣ ಮಾಡಿದ ಏಕೈಕ ಹಿಂದೂ ದೇವಾಲಯ ಯಾವುದು ಗೊತ್ತೆ?

ಬ್ರಿಟೀಷ್‍ರು ನಿರ್ಮಾಣ ಮಾಡಿದ ಏಕೈಕ ಹಿಂದೂ ದೇವಾಲಯ ಯಾವುದು ಗೊತ್ತೆ?

Written By:

ಮಾನವರು ನಿರ್ಮಾಣ ಮಾಡಿದ್ದು ಕುಲ, ಮತ, ಪ್ರಾಂತ್ಯ. ಆದರೆ ಭಗವಂತನು ನಿರ್ಮಾಣ ಮಾಡಿದ್ದು ಈ ಸೃಷ್ಟಿಯನ್ನು ಮತ್ತು ಜೀವಿಗಳನ್ನು. ಈ ಜೀವಿಗಳಲ್ಲಿ ನೋಡುವುದೇ ಪ್ರಾರ್ಥನೆ ಮಾಡುವ ಗುಣವನ್ನು, ಪಾಪ-ಪುಣ್ಯಗಳನ್ನು. ಆ ಸೃಷ್ಟಿಕರ್ತ ಯಾವುದೇ ಕುಲ, ಮತವನ್ನು ನೋಡುವುದಿಲ್ಲ.

ನಮ್ಮ ಭಾರತ ದೇಶದಲ್ಲಿ ಸುಮಾರು 200 ವರ್ಷಗಳ ಕಾಲ ಬ್ರಿಟಿಷರು ಆಳ್ವಿಕೆ ಮಾಡಿದರು ಎಂಬುದು ಸಾಮಾನ್ಯವಾಗಿ ನಮಗೆ ತಿಳಿದೇ ಇದೆ. ಬ್ರಿಟಿಷರು ತನ್ನ ಒಳ್ಳೆ ಒಳ್ಳೆಯ ಕೊಡುಗೆಗಳನ್ನು ನಮ್ಮ ಭಾರತ ದೇಶಕ್ಕೆ ನೀಡಿದ್ದಾರೆ. ಅವರು ಬೇರೆ ಧರ್ಮದವರಾಗಿದ್ದರೂ ಕೂಡ ಬ್ರಿಟಿಷರು ಒಂದು ಹಿಂದು ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಆ ದೇವಾಲಯದಲ್ಲಿ ನೆಲೆಸಿರುವುದು ಮಹೇಶ್ವರನು. ಅಸಲಿಗೆ ಅವರು ಶಿವಾಲಯವನ್ನು ಏಕೆ ನಿರ್ಮಾಣ ಮಾಡಿದರು ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲೂ ಮೂಡುವಂತಹದು. ಇದಕ್ಕೆ ಒಂದು ರೋಚಕವಾದ ಕಥೆ ಅಡಗಿದೆ.

ಹಾಗಾದರೆ ಲೇಖನದ ಮೂಲಕ ಬ್ರಿಟೀಷರು ನಿರ್ಮಾಣ ಮಾಡಿದ ಆ ದೇವಾಲಯ ಯಾವುದು? ಏಕೆ ನಿರ್ಮಾಣ ಮಾಡಿದರು? ಎಂಬ ಹಲವಾರು ಪ್ರೆಶ್ನೆಗೆ ಉತ್ತರ ಲೇಖನದ ಮೂಲಕ ಪಡೆಯೋಣ.

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಭಾರತ ದೇಶದ ಹೃದಯಭಾಗ ಎಂದು ಗುರುತಿಸಿಕೊಂಡಿರುವ ಮಧ್ಯ ಪ್ರದೇಶ ದೇಶದಲ್ಲಿನ 2ನೇ ಅತಿ ದೊಡ್ಡ ರಾಜ್ಯವಾಗಿದೆ. ಈ ರಾಜ್ಯದ ಚರಿತ್ರೆ, ಅದರ ಭೌಗೋಳಿಕ ಸ್ಥಾನ, ಪ್ರಾಕೃತಿ ಸೌಂದರ್ಯ, ಸಾಂಸ್ಕøತಿಕ ಪರಂಪರೆ, ಪ್ರಜೆಗಳು ಈ ರಾಜ್ಯದಲ್ಲಿನ ಅತ್ಯುತ್ತಮ ಪ್ರವಾಸಿ ಕೇಂದ್ರವಾಗಿ ಪ್ರಸಿದ್ಧಿಗೊಂಡಿದೆ. ರಾಜಧಾನಿ ಭೋಪಾಲ್ "ನದಿಗಳ ನಗರ" ಎಂದೇ ಪ್ರಸಿದ್ಧಿ ಹೊಂದಿದೆ.

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಖಜುರಾಹೋ ನಂತಹ ದೇವಾಲಯ ನಿರ್ಮಾಣವು ಹೆಚ್ಚಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಧ್ಯೆ ಪ್ರದೇಶದ ಭೌಗೋಳಿಕ ಸ್ವರೂಪ ದೇಶದಲ್ಲಿಯೇ ಅತ್ಯುತ್ತಮ ಪ್ರಕೃತಿ ವೈವಿದ್ಯವನ್ನು ಹೊಂದಿರುವ ಸ್ಥಳವಾಗಿದೆ. ಇಲ್ಲಿ ಎತ್ತರವಾದ ಪರ್ವತ ಶ್ರೇಣಿಗಳು, ದಟ್ಟವಾದ ಅರಣ್ಯಗಳು, ನದಿಗಳು ಪ್ರವಾಸಿಗರ ಗಮನ ಸೆಳೆಯುತ್ತದೆ.

PC: Kirandeep Atwal

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ವಿಂಧ್ಯಾ, ಸಾತ್ಪುರಾ ಪರ್ವತ ಶ್ರೇಣಿಗಳ ಮಧ್ಯೆ ನರ್ಮದ, ತಪತಿ ನದಿಗಳು ಸಮಾಂತರವಾಗಿ ಪ್ರವಹಿಸುತ್ತಿರುತ್ತದೆ. ಇಲ್ಲಿ ವೈವಿದ್ಯಭರಿತವಾದ ವೃಕ್ಷಗಳು, ಪ್ರಾಣಿ-ಪಕ್ಷಿ ಸಂಕುಲಗಳು ಮಧ್ಯ ಪ್ರದೇಶ ಪ್ರವಾಸಿಗರಿಗೆ ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭುತಿಯನ್ನು ಉಂಟು ಮಾಡುತ್ತದೆ. ಮಧ್ಯ ಪ್ರದೇಶದಲ್ಲಿ ವಿವಿಧ ಸಂಸ್ಕøತಿಯ, ವಿವಿಧ ರಾಜರ ಆಳ್ವಿಕೆಗಳನ್ನು ನೋಡಿದೆ.

PC: Offical Site

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಪ್ರಾಚೀನ ಕಾಲದಲ್ಲಿ ಮೌರ್ಯರು, ರಾಷ್ಟ್ರಕೂಟರು, ಗುಪ್ತರು, ಮೊಗಲರು, ಸಿಂಧಿಗಳ ರಾಜವಂಶ ಆಳ್ವಿಕೆಗಳನ್ನು ಮಧ್ಯ ಪ್ರದೇಶ ಕಂಡಿದೆ. ಅಂದರೆ ಇಲ್ಲಿ ಸುಮಾರು 14 ರಾಜವಂಶ ಪಾಲನೆ ಮಾಡಿದ ಸಾಕ್ಷಿ. ವಿವಿಧ ರಾಜರ ಅಳ್ವಿಕೆಗಳ ಕಾರಣವಾಗಿ ವಿವಿಧ ಕಲೆ, ವಾಸ್ತು ಶಿಲ್ಪಗಳ ನಿರ್ಮಾಣಕ್ಕೆ ನಿರ್ದಶನವಾಗಿದೆ.

PC: Gyanendra_Singh_Chau...

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಖಜರಾಹೋದಲ್ಲಿನ ಶೃಂಗಾರ ಶಿಲ್ಪಗಳು, ಗ್ವಾಲಿಯರ್ ಕೋಟೆ, ಉಜ್ಜಯಿನಿಯಲ್ಲಿನ ದೇವಾಲಯಗಳು, ಚಿತ್ರಕೂಟ್ ಇವೆಲ್ಲಾ ಮಧ್ಯ ಪ್ರದೇಶದ ಅದ್ಭುತ ನಿರ್ಮಾಣಗಳು. ಖಜರಾಹೋ, ಸಾಂಚಿ ಸ್ತೂಪ, ಭೀಮ್ ಬೆಟ್ಕಾನಂತಹ ಯುನೆಸ್ಕು ವಿಶ್ವ ಪಾರಂಪರಿಕ ಕೇಂದ್ರಗಳನ್ನು ಕೂಡ ಇಲ್ಲಿ ಕಾಣಬಹುದು. ಮಧ್ಯ ಪ್ರದೇಶದಲ್ಲಿನ ಗಿರಿಜನ ಸಂಸ್ಕøತಿ ಇಲ್ಲಿನ ಪ್ರಧಾನವಾದ ಪ್ರವಾಸಿ ಭಾಗವಾಗಿದೆ.

PC: Intekhab0731

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಖಜರಾಹೋದಲ್ಲಿನ ಖಜರಾಹೋ ನೃತ್ಯೋತ್ಸವ, ಗ್ವಾಲಿಯರ್‍ನಲ್ಲಿ ನಡೆಯುವ ತಾನ್ಸೆನ್ ಸಂಗೀತ ಉತ್ಸವವು ಪ್ರಪಂಚ ಪ್ರಸಿದ್ಧಿ ಹೊಂದಿದೆ. ಇಲ್ಲಿ ಹಲವಾರು ಗಿರಿಜನರ ಹಬ್ಬಗಳನ್ನು ನಡೆಸುತ್ತಾರೆ. ಆ ಸಮಯದಲ್ಲಿ ಹಲವಾರು ಜನರು ಭಾಗವಹಿಸುತ್ತಾರೆ.

PC: shivanjan choudhury

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಎಲ್ಲಿದೆ ದೇವಾಲಯ?
ಮಧ್ಯ ಪ್ರದೇಶದಲ್ಲಿನ ಅಗರ್ಮಾಲ್ವಾ ಎಂಬ ಗ್ರಾಮದಲ್ಲಿ ಬಿಟ್ರೀಷರು ನಿರ್ಮಾಣ ಏಕೈಕ ಹಿಂದೂ ದೇವಾಲಯವಾಗಿದೆ. ಅಲ್ಲಿನ ಚಿಕ್ಕದಾದ ಬೆಟ್ಟದ ಮೇಲೆ ಇರುವ ದೇವಾಲಯದಲ್ಲಿ ಲಯಕಾರನಾದ ಮಹಾಶಿವನು ವೈದ್ಯನಾಥನಾಗಿ ನೆಲೆಸಿದ್ದಾನೆ. ಈ ದೇವಾಲಯದ ಹೊರಭಾಗದಲ್ಲಿರುವ ಒಂದು ಶಿಲಾ ಶಾಸನದಲ್ಲಿ ಭಕ್ತನ ಭಕ್ತಿ ಹಾಗು ದೇವರ ಅಸ್ತಿತ್ವವನ್ನು ತಿಳಿಸುತ್ತದೆ.

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಅದು 1839ರ ಸಮಯದಲ್ಲಿ ಅಖಂಢ ಭಾರತ ದೇಶವನ್ನಾಗಿ ಮಾಡಬೇಕು ಎಂಬ ಆಕಾಂಕ್ಷೆಯಿಂದ ಇದ್ದ ಬ್ರಿಟೀಷರು ಆಫ್‍ಘಾನಿಸ್ತಾನದಲ್ಲಿದ್ದ ತೀವ್ರವ್ಯತಿರೇಕತೆ ಬಂದಿದ್ದರಿಂದ ಯುದ್ಧ ಅನಿವಾರ್ಯವಾಗಿ ಮಾಡಲೇಬೇಕಾಯಿತು. ಈ ಯುದ್ಧ 1841 ರವರೆಗೆ ತ್ರೀವ್ರವಾಗಿ ನಡೆದ ಕಾರಣ, 1842 ರ ಜನವರಿ ತಿಂಗಳಿನಲ್ಲಿ ಆಫ್‍ಘಾನಿಸ್ತಾನದವರು ಸೋಲನ್ನು ಅನುಭವಿಸಿದರು.

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಈ ಕ್ರಮವಾಗಿ ಲೆಫ್ಟಿನೆಂಟ್ ಕರ್ನಲ್ ಮಾರ್ಟಿನ್ ಮತ್ತು ಅತನ ಪತ್ನಿಯಾದ ಮಿಸಸ್ ಮಾರ್ಟಿನ್ ಲಂಡನ್‍ನಿಂದ ಭಾರತಕ್ಕೆ ಬಂದಿಳಿದರು. ಭಾರತ ದೇಶದಲ್ಲಿನ ಉದ್ಯೋಗ ಭಾದ್ಯತೆಗಳನ್ನು ನಿರ್ವಹಿಸುತ್ತಿರುವಾಗ ಸರ್ಕಾರದ ಆದೇಶದಿಂದಾಗಿ ರಿತ್ಯಾ ಆಫ್ಖನ್‍ಗೆ ಸೈನ್ಯಾಧಿಕಾರಿಯಾಗಿ ಯುದ್ಧಕ್ಕೆ ತೆರಳಿದನು.

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಆದರೆ ತನ್ನ ಪತ್ನಿಯನ್ನು ಅಪರಿಮಿತವಾಗಿ ಪ್ರೇಮಿಸುತ್ತಿದ್ದರಿಂದ ದಿನನಿತ್ಯವು ಅಲ್ಲಿ ನಡೆದ ವಿಷಯಗಳನ್ನೆಲ್ಲಾ ಕ್ಷೇಮ ಸಮಾಚರವಾಗಿ ಉತ್ತರದ ಮೂಲಕ ಬರೆದು ತಿಳಿಸುತ್ತಿದ್ದನು. ಹೀಗೆ ದಿನಗಳು ಸಾಗುತ್ತಿರುವಾಗ ಕೆಲವು ದಿನಗಳ ನಂತರ ಮಿಸಸ್ ಮಾರ್ಟಿನ್‍ಗೆ ತನ್ನ ಪತಿಯ ಮೂಲಕ ಉತ್ತರ ಬರುವುದು ನಿಂತು ಹೋಯಿತು.

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಹಾಗೆ ಕೆಲವು ದಿನಗಳು ಸಾಗಿದ ನಂತರ ತನ್ನ ಪತಿಗೆ ಏನಾಯಿತೋ ಏನೋ ಎಂದು ಕೊಂಡು ಭಯ ಪಟ್ಟಳು. ಆ ಭಯವೇ ಉದ್ವೇಗವಾಗಿ ಮಾರ್ಪಾಟಾಗಿ ಆಕೆಯ ಆರೋಗ್ಯ ಕ್ಷೀಣವಾಗುತ್ತಾ ಬಂತು. ಹಾಗೆ ಒಂದು ದಿನ ಸಂಜೆ ಕುದುರೆಯ ಮೇಲೆ ತೆರಳುವಾಗ ಒಂದು ಚಿಕ್ಕದಾದ ಬೆಟ್ಟದ ಮೇಲೆ ದೇವಾಲಯದ ಶಬ್ಧ, ದೀಪಗಳನ್ನು ಕಂಡಳು. ಆ ದೇವಾಲಯಕ್ಕೆ ಹೋಗಬೇಕು ಎಂದು ತೀರ್ಮಾನಿಸಿ ತೆರಳಿದಳು. ಶಿಥಿಲಾವಸ್ಥೆಯಲ್ಲಿದ್ದ ಆ ದೇವಾಲಯದಲ್ಲಿ ಒಂದು ಪೂಜಾರಿಯು ಪರಮೇಶ್ವರನಿಗೆ ಹಾರತಿ ಮಾಡುತ್ತಿದ್ದನು.

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಪೂಜಾರಿಯು ಪರಮೇಶ್ವರನ ಪೂಜೆಯನ್ನು ಮಾಡಿ ಅಲ್ಲಿಯೇ ಇದ್ದ ಮಹಿಳೆಯ ಒದ್ದೆಯಾದ ಕಣ್ಣುಗಳನ್ನು ಕಂಡು ಯಾರಮ್ಮ ನೀನು? ಏಕೆ ನೋವು ಪಡುತ್ತಿರುವೆ ಎಂದು ಕೇಳಿದಳು. ಆಗ ತನ್ನ ಪತಿಯ ವೃತ್ತಾಂತವನ್ನೆಲ್ಲಾ ತಿಳಿಸಿದಳು. ಆಗ ಆ ಪೂಜಾರಿ " ಓಂ ನಮಃ ಶಿವಾಯ" ಎಂಬ ಪಂಚಾಕ್ಷರಿ ಮಂತ್ರವನ್ನು ನಿನ್ನ ಅಂತಃಕರಣದಲ್ಲಿ ಶುದ್ಧವಾಗಿ ಜಪಿಸಿದರೆ ಆ ಪರಮೇಶ್ವರನು ಖಂಡಿತವಾಗಿಯೂ ಒಳ್ಳೆಯದು ಮಾಡುತ್ತಾನೆ ಎಂದು ತಿಳಿಸಿದನು.

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಆ ನಂತರ ಅಲ್ಲಿಂದ ನೇರವಾಗಿ ಮನೆಗೆ ತೆರಳಿ ಪರಮೇಶ್ವರನ ಪಂಚಾಕ್ಷರಿ ಮಂತ್ರವನ್ನು ಜಪಿಸತೊಡಗಿದಳು. ಹಾಗೆಯೇ ಕೆಲವು ಕಾಲ ಜಪಿಸುತ್ತಲೆ ಇದ್ದಳು. ಹಾಗೆ ಆಕೆಯು ಮಹೇಶ್ವರನ ಧ್ಯಾನವನ್ನು ಮಾಡುತ್ತಿರುವ ಸಂದರ್ಭದಲ್ಲಿ ಆಕೆಯ ಪತಿಯಿಂದ ಒಂದು ಉತ್ತರ ಬಂದಿತು. ಅದರಲ್ಲಿ "ಡಿಯರ್ ನಾನು ಕ್ಷೇಮವಾಗಿ ಇದ್ದೇನೆ" ಎಂದು ಇತ್ತು.

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಹಾಗೆಯೇ ನಾನು ತ್ವರಿತವಾಗಿ ನಿನ್ನ ಹತ್ತಿರ ಬರುತ್ತಿದ್ದೇನೆ ಎಂದು ಸಂದೇಶ ಅದರಲ್ಲಿತ್ತು. ಆತನು ಮನೆಗೆ ಬಂದ ನಂತರ ಅಲ್ಲಿ ಕೆಲವು ದಿನಗಳ ಹಿಂದೆ ನಡೆದ ಎಲ್ಲಾ ವೃತ್ತಾಂತವನ್ನು ತನ್ನ ಪತ್ನಿಗೆ ತಿಳಿಸಿದನು. ನಮ್ಮ ತಂಡ ಹಾಗು ಆಫ್‍ಘಾನರ ನಡುವೆ ತೀವ್ರವಾದ ಯುದ್ಧ ನಡೆಯಿತು.

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಅವರ ಸೈನ್ಯ ಬಲವು ಹೆಚ್ಚಾಗಿ ಇದ್ದರಿಂದ ಎಲ್ಲರೂ ಮೃತರಾದರು. ಉಳಿದ ಕೆಲವು ಮಂದಿ ಮಾತ್ರ ಇರುವ ಸಂದರ್ಭದಲ್ಲಿ ಎಲ್ಲಿಂದಲೂ ಒಬ್ಬ ವ್ಯಕ್ತಿ ಮೈಯೆಲ್ಲಾ ಬೂದಿಯನ್ನು ಬಳಿದುಕೊಂಡು, ದೇಹಕ್ಕೆ ಹುಲಿಯ ಚರ್ಮವನ್ನು ಸುತ್ತಿಕೊಂಡು ಒಂದು ವಿಚಿತ್ರವಾದ ಆಯುದ್ಧವನ್ನು ಕೈಯಲ್ಲಿ ಹಿಡಿದು ಕೊಂಡು ಬಂದಿದ್ದನು.

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಆ ಆಫ್‍ಘಾನರ ಸೈನ್ಯದಿಂದ ನಮ್ಮನ್ನು ಕಪಾಡಿ ಮಾಯವಾದನು ಎಂದು ಹೇಳಿದನು. ಆತ ಯಾರು? ಎಲ್ಲಿಂದ ಬಂದನು? ಎಲ್ಲಿಗೆ ಹೋದನು ಎಂಬ ಯಾವುದೇ ವಿಷಯ ನಮಗೆ ತಿಳಿಯಲಿಲ್ಲ. ಆದರೆ ನಮ್ಮ ಪ್ರಾಣವನ್ನು ರಕ್ಷಣೆ ಮಾಡುವ ಸಲುವಾಗಿ ಬಂದಿದ್ದೇನೆ ಎಂದು ಮಾತ್ರ ತಿಳಿಸಿದನು ಎಂದನು.

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಪತಿ ಹೇಳಿದ ಆ ವೃತ್ತಾಂತವನ್ನು ಆಶ್ಚರ್ಯದಿಂದ ಕೇಳಿಸಿಕೊಳ್ಳುತ್ತಿದ್ದು ಕುಳಿತಿದ್ದ ಆಕೆ ತನ್ನ ಪತಿಯ ಕೈಯನ್ನು ಹಿಡಿದು ದೇವಾಲಯಕ್ಕೆ ಕರೆದುಕೊಂಡು ಹೋದಳು. ದೇವಾಲಯದಲ್ಲಿದ್ದ ಪೂಜಾರಿಯು ನೀನು ಮಾಡಿದ ಶಿವನ ಧ್ಯಾನಕ್ಕೆ ಆ ಮಹಾಶಿವನು ಪ್ರಸನ್ನನಾಗಿದ್ದಾನೆ ಎಂದು ತಿಳಿಸಿದನು. ಈ ವಿಷಯವನ್ನು ತಿಳಿದ ಪತಿಯು ಶಿಥಿಲಾವಸ್ಥೆಯಲ್ಲಿದ್ದ ದೇವಾಲಯವನ್ನು 1500ರಲ್ಲಿ ಜೀರ್ಣೋಧರಣ ಮಾಡಿಸಿದರು.

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ವರ ಕಥೆಯನ್ನು ಈ ದೇವಾಲಯದಲ್ಲಿ ಒಂದು ಶಿಲಾ ಫಲಕದ ಮೇಲೆ ಅಂದರೆ ಆ ದೇವಾಲಯದ ಪ್ರಾಂಗಣದಲ್ಲಿ ಕೆತ್ತನೆ ಮಾಡಿದ್ದಾರೆ. ಆ ನಂತರ ಮಾರ್ಟಿನ್ ಮತ್ತು ಆತನ ಪತ್ನಿಯು ಲಂಡನ್ ತೆರಳುವ ಸಮಯದಲ್ಲಿ ಒಂದು ಶಿವಲಿಂಗವನ್ನು ಕೂಡ ತನ್ನ ಜೊತೆ ತೆಗೆದುಕೊಂಡು ಹೋದರಂತೆ.

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಬ್ರಿಟಿಷ್‍ರು ನಿರ್ಮಾಣ ಮಾಡಿದ ಹಿಂದೂ ದೇವಾಲಯ ರಹಸ್ಯ

ಈ ವಿಧವಾಗಿ ಬ್ರಿಟೀಷರು ನಮ್ಮ ಭಾರತ ದೇಶದಲ್ಲಿ ನಿರ್ಮಾಣ ಮಾಡಿದ ಏಕೈಕ ಹಿಂದೂ ದೇವಾಲಯವಾಗಿದೆ. ಭಕ್ತಿ ಇದ್ದರೆ ಭಗವಂತ ಯಾವುದೇ ಧರ್ಮ, ಪ್ರದೇಶ, ಯಾವುದೇ ಭೇದ ನೋಡುವುದಿಲ್ಲ ಎಂಬುದಕ್ಕೆ ಈ ದೇವಾಲಯವೇ ನಿದರ್ಶನವಾಗಿದೆ. ಹೀಗಾಗಿಯೇ ಆ ಪರಮೇಶ್ವರ ನಮಗೆಲ್ಲಾ ತಿಳಿಸುತ್ತಾನೆ.

ಹೇಗೆ ಹೋಗಬೇಕು?

ಹೇಗೆ ಹೋಗಬೇಕು?

ರಸ್ತೆ ಮಾರ್ಗದ ಮೂಲಕ
ಅಗಾರ್ ದೇಶದಲ್ಲಿನ ಇತರ ಪ್ರಧಾನ ನಗರಗಳಿಗೆ ಸಾಧಾರಣ ಬಸ್ಸುಗಳ ಮುಖಾಂತರ ಭೇಟಿ ನೀಡಬಹುದಾಗಿದೆ.

ಹೇಗೆ ಹೋಗಬೇಕು?

ಹೇಗೆ ಹೋಗಬೇಕು?

ರೈಲು ಮಾರ್ಗದ ಮೂಲಕ
ಇತರ ಪ್ರಧಾನವಾದ ನಗರಗಳಿಂದ ಅಗರ್‍ವರೆವಿಗೂ ಯಾವುದೇ ರೆಗ್ಯುಲರ್ ರೈಲುಗಳು ಇಲ್ಲ. ಹಾಗಾಗಿ ಸಮೀಪದ ರೈಲು ನಿಲ್ದಾಣ ಎಂದರೆ ಅದು ಷಜಪೂರ್.

ಹೇಗೆ ಹೋಗಬೇಕು?

ಹೇಗೆ ಹೋಗಬೇಕು?

ವಿಮಾನ ನಿಲ್ದಾಣ
ಅಗರ್‍ಗೆ ಸಮೀಪದವಾದ ವಿಮಾನ ನಿಲ್ದಾಣವೆಂದರೆ ಅದು ಇಂಡೋರ್ ವಿಮಾನ ನಿಲ್ದಾಣವಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ