» »ಎಲ್ಲಿದೆ ಗಂಗಾಸಾಗರ? ಏನಿದರ ಕಥೆ?

ಎಲ್ಲಿದೆ ಗಂಗಾಸಾಗರ? ಏನಿದರ ಕಥೆ?

Written By:

ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಜಗತ್ತಿನ ಅತಿ ದೊಡ್ಡ ಜನಸೇರುವ ಉತ್ಸವ ಯಾವುದೆಂದು ಗೊತ್ತೆ? ಹೌದು, ಕುಂಭ ಮೇಳ. ಈ ಮೇಳದ ಪ್ರಮುಖ ಉದ್ದೇಶವಾಗಿದೆ ಶಾಹಿ ಸ್ನಾನ ಮಾಡುವುದು. ಗಂಗೆಯಲ್ಲಿ ನಿರ್ದಿಷ್ಟ ದಿನ ಹಾಗೂ ಸಮಯದಂದು ಪುಣ್ಯ ಸ್ನಾನ ಮಾಡುವುದರಿಂದ ಭಗವಂತನ ಪಾದಾರವಿಂದಗಳಲ್ಲಿ ಜಾಗ ದೊರೆಯುತ್ತದೆಂಬ ನಂಬಿಕೆಯಿದೆ.

ಆದರೆ ನಿಮಗಿದು ಗೊತ್ತೆ, ಕುಂಭ ಮೇಳದಂತೆಯೆ ಗಂಗೆಯ ಜಲಾನಯನ ಅಥವ ಜಲಪಾತ್ರವಿರುವ ಒಂದು ಸ್ಥಳದಲ್ಲಿ ಮಕರ ಸಂಕ್ರಾಂತಿಯಂದು ಶಾಹಿ ಸ್ನಾನ ಮಾಡಲಾಗುತ್ತದೆ. ಈ ಸ್ಥಳವು ಒಂದು ದ್ವೀಪದಲ್ಲಿ ನೆಲೆಸಿದ್ದು ಎಲ್ಲೆಡೆ ಆಳವಿಲ್ಲದ ನೀರನ್ನು ಕಾಣಬಹುದು.

ಎಲ್ಲಿದೆ ಗಂಗಾಸಾಗರ? ಏನಿದರ ಕಥೆ?

ಚಿತ್ರಕೃಪೆ: Souradipta

ಹೌದು ಇದರ ರಚನೆಯೆ ಹಾಗಿದೆ. ಇದು ಗಂಗಾ ಡೆಲ್ಟಾ ಪ್ರದೇಶದಲ್ಲಿರುವ ದ್ವೀಪವಾಗಿದೆ. ಇದರಲ್ಲಿ 43 ಗ್ರಾಮಗಳಿದ್ದು ಅದರಲ್ಲಿನ ದೊಡ್ಡ ಗ್ರಾಮವೆ ಗಂಗಾಸಾಗರ ಹಾಗೂ ಈ ದ್ವಿಪವನ್ನು ಸಾಗರ ದ್ವೀಪ ಅಥವಾ ಸಾಗರ ಐಲ್ಯಾಂಡ ಎನ್ನುತ್ತಾರೆ. ಕುಂಭ ಮೇಳದಂತೆಯೆ ಇಲ್ಲಿ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಲಕ್ಷಾಂತರ ಜನರು ಸೇರುತ್ತಾರೆ ಹಾಗೂ ಸ್ನಾನ ಮಾಡುತ್ತಾರೆ.

ಇಲ್ಲಿಯೂ ಸಹ ಸಕಲ ಆಸೆಗಳನ್ನು, ಬಂಧನಾದಿಗಳನ್ನು ತ್ಯಜಿಸಿ ನಗ್ನ ದೇಹದಲ್ಲೆ ಭಗವಂತನ ನಾಮಸ್ಮರಣೆ ಮಾಡುವ ನಾಗಾ ಸಾಧುಗಳನ್ನು ಅಪಾರ ಸಂಖ್ಯೆಯಲ್ಲಿ ಕಾಣಬಹುದು. ಇದು ಮೂಲತಃ ಗಂಗೆಯು ಬಂಗಾಳಕೊಲ್ಲಿಗೆ ಸೇರಿಕೊಳ್ಳುವ ಸ್ಥಳದಲ್ಲಿದ್ದು ವಿಶಾಲವಾದ ಹಾಗೂ ವಿಶಿಷ್ಟವಾದ ಸಂಗಮ ಸ್ಥಳವಾಗಿರುವುದರಿಂದ ಇದಕ್ಕೆ ಸಾಕಷ್ಟು ಮಹತ್ವವಿದೆ.

ಎಲ್ಲಿದೆ ಗಂಗಾಸಾಗರ? ಏನಿದರ ಕಥೆ?

ಕಪಿಲ ಮುನಿ, ಚಿತ್ರಕೃಪೆ: Kaushik Saha

ಅಲ್ಲದೆ ಈ ಸ್ಥಳಕ್ಕೆ ಹೊಂದಿಕೊಂಡಂತೆ ಅದ್ಭುತ ದಂತ ಕಥೆಯಿದ್ದು, ಮೂಲತಃ ಈ ಜಾಗ ಕಪಿಲ ಮಹರ್ಷಿಗಳಿಗೆ ಸಂಭಂಧಿಸಿತ್ತೆಂದು ಹೇಳಲಾಗುತ್ತದೆ. ಹಿಂದೊಮ್ಮೆ ಸತ್ಯಯುಗದಲ್ಲಿ ಸೂರ್ಯವಂಶದ ಮಹಾನ್ ರಾಜನಾಗಿದ್ದ ಸಾಗರನು ಎಲ್ಲ ಜಗತ್ತುಗಳಲ್ಲಿ ತನ್ನ ಅಧಿಪತ್ಯವನ್ನು ರುಜುವಾತು ಪಡಿಸಲೆಂದು ಅಶ್ವಮೇಧಯಾಗವನ್ನು ಮಾಡಲು ನಿರ್ಧರಿಸಿದ.

ಇದರಲ್ಲಿ ಕುದುರೆಯ್ಯ ಬಳಕ್ಕೆ ಅವಶ್ಯಕವಾಗಿರುತ್ತದೆ. ಆದರೆ, ಆ ಯಾಗದ ವಿಷಯ ತಿಳಿದ ದೇವತೆಗಳ ನಾಯಕ ಇಂದ್ರನು ಇದನ್ನು ಸಹಿಸಲಾರನಾದ, ಸಾಗರನನ್ನು ಅಧಿಪತ್ಯವಹಿಸಿಕೊಳ್ಳಲು ಆಗದಂತೆ ಮಾಡುವ ಪಣ ತೊಟ್ಟ ಹಾಗೂ ಅದಕ್ಕಾಗಿ ಒಂದು ಕುತಂತ್ರದಿಂದ ಕೂಡಿದ ಉಪಾಯ ಮಾಡಿದ.

ಎಲ್ಲಿದೆ ಗಂಗಾಸಾಗರ? ಏನಿದರ ಕಥೆ?

ಗಂಗಾಸಾಗರಕ್ಕೆ ಪ್ರಯಣ, ಚಿತ್ರಕೃಪೆ: Biswarup Ganguly

ಅದರಂತೆ ಇಂದ್ರನು ಅಶ್ವಮೇಧಯಾಗದ ಕುದುರೆಯನ್ನು ಕಳುವು ಮಾಡಿ ಅದನ್ನು ಕಪಿಲ ಮಹರ್ಷಿಗಳು ವಾಸಿಸುತ್ತಿದ್ದ ಆಶ್ರಮದಲ್ಲಿ ಬಚ್ಚಿಟ್ಟ. ಕುದುರೆ ಕಳೆದುಹೋದ ವಿಷಯ ತಿಳಿದ ಸಾಗರನು ಬೇಸರಪಟ್ಟು ತನ್ನ 60,000 ಮಕ್ಕಳನ್ನು ಕುದುರೆ ಎಲ್ಲಿದ್ದರೂ ಸರಿ ಹುಡುಕಿ ತರುವಂತೆ ಆದೇಶಿಸಿದ. ಹೀಗೆ ಆ ರಾಜನ ಮಕ್ಕಳು ಎಲ್ಲೆಡೆ ಹುಡುಕಿ ಕೊನೆಯದಾಗಿ ಕಪಿಲ ಮಹರ್ಷಿಗಳ ಆಶ್ರಮಕ್ಕೆ ಬಂದು ಅಲ್ಲಿದ್ದ ಕುದುರೆಯನ್ನು ನೋಡಿದರು.

ಕಪಿಲ ಮಹರ್ಷಿಗಳೆ ಕುದುರೆಯನ್ನು ಕದ್ದಿದ್ದಾನೆಂದು ಅಪಾರ್ಥ ಮಾಡಿಕೊಂಡು ಋಷಿಯೊಂದಿಗೆ ಅನುಚಿತ ವರ್ತನೆ ಮಾಡಿ ಅವನ ಮೇಲೆ ಹಲ್ಲೆ ಮಾಡಲು ಮುಂದಾದರು. ಅಪಾರ ತಪಶಕ್ತಿಯುಳ್ಳ ಕಪಿಲ ಮಹರ್ಷಿಗಳು ಒಂದೆ ಕ್ಷಣದಲ್ಲಿ ಅವರನ್ನು ಭಸ್ಮ ಮಾಡಿ ಅವರ ಆತ್ಮಗಳನ್ನು ನರಕಕ್ಕೆ ಕಳುಹಿಸಿದರು.

ಎಲ್ಲಿದೆ ಗಂಗಾಸಾಗರ? ಏನಿದರ ಕಥೆ?

ನಾಗಾ ಸಾಧುಗಳು, ಚಿತ್ರಕೃಪೆ: Biswarup Ganguly

ಹೀಗೆ ಸಮಯ ಕಳೆದು ಆ ಸೂರ್ಯವಂಶದಲ್ಲಿ ಹುಟ್ಟಿದ ಭಗಿರತ ಮಹಾರಾಜನು ತನ್ನ ಪಿತೃಗಳ ಆತ್ಮ ನರಕದಲ್ಲಿರುಅ ಸ್ಥಿತಿಯನ್ನು ಗಮನಿಸಿ ಕಪಿಲರನ್ನು ಕುರಿತು ಪ್ರಾಥಿಸಿದಾಗ ಕಪಿಲ ಮಹರ್ಷಿಗಳು ಪ್ರತ್ಯಕ್ಷರಾಗಿ ಸ್ವತಃ ಪಾರ್ವತಿಯೆ ಗಂಗೆಯ ರೂಪದಲ್ಲಿ ಭೂಮಿಗೆ ಬಂದಾಗಲೂ ಅದರಲ್ಲಿ ನಿನ್ನ ಪಿತೃಗಳ ಅಸ್ಥಿ ವಿಸರ್ಜನೆಯಿಂದ ಅವರಿಗೆಲ್ಲ ಮುಕ್ತಿ ದೊರೆಯುತ್ತದೆಂದು ಆಶೀರ್ವದಿಸಿದರು.

ಈ ರೀತಿಯಾಗಿ ಈ ಸ್ಥಳವು ಅದ್ಭುತವಾದ ಹಿನ್ನಿಲೆಯನ್ನು ಹೊಂದಿದ್ದು ಧಾರ್ಮಿಕವಾಗಿಯೂ ಸಹ ಸಾಕಷ್ಟು ಮಹತ್ವ ಪಡೆದಿದೆ. ಅಲ್ಲದೆ ಗಂಗೆಯು ಕೊನೆಯ ಬಾರಿಗೆ ಭಾರತ ಖಂಡ ತ್ಯಜಿಸಿ ಸಮುದ್ರಕ್ಕೆ ಸೇರುವ ಸಂಗಮ ಸ್ಥಳವೂ ಇದಾಗಿರುವುದರಿಂದ ಮಕರ ಸಂಕ್ರಾಂತಿಯ ಸಂದರ್ಭದಂದು ಇಲ್ಲಿ ಸ್ನಾನ ಮಾಡಲಾಗುತ್ತದೆ. ಇನ್ನೊಂದು ವಿಶೇಷವೆಂದರೆ ಗಂಗೆಯು ಭೂಮಿಗೆ ಬಂದ ದಿನ ಜನವರಿ 15 ಆಗಿತ್ತು ಎನ್ನಲಾಗಿದೆ.

ಎಲ್ಲಿದೆ ಗಂಗಾಸಾಗರ? ಏನಿದರ ಕಥೆ?

ನಾಗಾ ಸಾಧು, ಚಿತ್ರಕೃಪೆ: Biswarup Ganguly

ಈ ಗಂಗಾಸಾಗರವು ಪ್ರಸ್ತುತ ಪಶ್ಚಿಮಬಂಗಾಳ ರಾಜ್ಯದ "ದಕ್ಷಿಣ 24 ಪರ್ಗಾನಾ" ಜಿಲ್ಲೆಯಲ್ಲಿದೆ. ಸಾಗರ ಐಲ್ಯಾಂಡಿನ ದೊಡ್ಡ ಗ್ರಾಮವಾಗಿರುವ ಗಂಗಾಸಾಗರವು ಕೊಲ್ಕತ್ತಾ ನಗರ ಕೆಂದ್ರದ ದಕ್ಷಿಣಕ್ಕೆ ಸುಮಾರು ನೂರು ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಹಾರ್ವೂದ್ ಪಾಯಿಂಟ್ ವರೆಗೆ ಕೊಲ್ಕತ್ತಾದಿಂದ ಬಸ್ಸುಗಳು ಲಭ್ಯವಿದ್ದು ಸುಮಾರು 90 ಕಿ.ಮೀ ಕ್ರಮಿಸಿ ನಂತರ ಅಲ್ಲಿಂದ ದೋಣಿ ಮೂಲಕ ಇದಕ್ಕೆ ತಲುಪಬಹುದಾಗಿದೆ.

ಇಡಿ ಜಗತ್ತಿಗೆ ಮೋಡಿ ಮಾಡಿರುವ ಕುಂಭ

Please Wait while comments are loading...