Search
  • Follow NativePlanet
Share
» » ಬೆಂಗಳೂರಿನಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದೀರಾ?

ಬೆಂಗಳೂರಿನಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದೀರಾ?

ಭಾರತದ ಪ್ರತಿಯೊಂದು ರಾಜ್ಯದಲ್ಲಿ ಸಾವಿರಾರು ದೇವಸ್ಥಾನಗಳಿವೆ. ಭಾರತದಲ್ಲಿ ಇತಿಹಾಸಕಾಲದಿಂದ ಹಿಡಿದು ಈಗಿನವರೆಗೆ ಅನೇಕ ದೇವಸ್ಥಾನಗಳನ್ನು ಕಾಣಬಹುದಾಗಿದೆ. ಕೆಲವು ಶಿವನಿಗೆ ಸಮರ್ಪಿತವಾದರೆ ಇನ್ನೂ ಕೆಲವು ವಿಷ್ಣು, ಕೆಲವು ಬ್ರಹ್ಮ ಹಾಗೂ ಅನೇಕ ದೇವಿ ದೇವತೆಗಳಿಗೆ ಸಮರ್ಪಿತವಾದವುಗಳಾಗಿದೆ.

ಸತಿಯ ಮೊಣಕೈ ಬಿದ್ದ ಈ ಜಾಗದಲ್ಲಿ ಕಾಲಸರ್ಪ ದೋಷವೂ ನಿವಾರಣೆಯಾಗುತ್ತಂತೆ!ಸತಿಯ ಮೊಣಕೈ ಬಿದ್ದ ಈ ಜಾಗದಲ್ಲಿ ಕಾಲಸರ್ಪ ದೋಷವೂ ನಿವಾರಣೆಯಾಗುತ್ತಂತೆ!

ಅವುಗಳಲ್ಲಿ ಇನ್ನೂ ಅನೇಕ ದೇವಸ್ಥಾನಗಳಿವೆ ಅವು ದೇವಿ, ದೇವತೆಗಳಿಗೆ ಸಮರ್ಪಿತವಾಗಿಲ್ಲ. ಅಂತಹದ್ದೇ ಒಂದು ದೇವಸ್ಥಾನ ಬೆಂಗಳೂರಿನಲ್ಲಿದೆ. ಅದುವೇ ಧರ್ಮರಾಯಸ್ವಾಮಿ ದೇವಸ್ಥಾನ ಬೆಂಗಳೂರು. ಇಲ್ಲಿಗೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಹಾಗಾದರೆ ಬನ್ನಿ ಈ ಅಸಾಮಾನ್ಯ ದೇವಸ್ಥಾನದ ಬಗ್ಗೆ ತಿಳಿಯೋಣ.

ಹಿಂದೂ ಶಿಲ್ಪಕಲಾಶೈಲಿ

ಹಿಂದೂ ಶಿಲ್ಪಕಲಾಶೈಲಿ

PC: Thigala4u alias Shri

ಮಹಾಭಾರತದ ಪಾಂಡವರಲ್ಲಿ ಒಬ್ಬರಾದ ಧರ್ಮರಾಯನಿಗೆ ಸಮರ್ಪಿತವಾದ ಈ ದೇವಸ್ಥಾನವು ಪಾಂಡವರಿಗೆ ಸಮರ್ಪಿತವಾಗಿರುವ ದೇಶದಲ್ಲೇ ಏಕೈಕ ದೇವಸ್ಥಾನವಾಗಿದೆ. ಈ ಮಂದಿರವನ್ನು ಹಿಂದೂ ಶಿಲ್ಪಕಲಾಶೈಲಿಯಲ್ಲಿ ಮಾಡಲಾಗಿದೆ. ನೀವು ಪುರಾಣಕ್ಕೆ ಸಂಬಂಧಿಸಿದ ಸ್ಥಳಗಳನ್ನು ಭೇಟಿ ನೀಡಲು ಬಯಸಿದ್ದಲ್ಲಿ ಈ ಮಂದಿರವನ್ನು ಮಿಸ್ ಮಾಡುವಂತಿಲ್ಲ.

ಧರ್ಮರಾಯ ಸ್ವಾಮಿ ದೇವಸ್ಥಾನದ ಇತಿಹಾಸ

ಧರ್ಮರಾಯ ಸ್ವಾಮಿ ದೇವಸ್ಥಾನದ ಇತಿಹಾಸ

PC: Muhammad Mahdi Karim

ಕೆಂಪೇಗೌಡರು ಬೆಂಗಳೂರನ್ನು 16ನೇ ಶತಮಾನದಲ್ಲಿ ನಿರ್ಮಿಸುವ ಮೊದಲೇ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆಯಂತೆ. ಇದನ್ನು 11 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಈ ದೇವಾಲಯವನ್ನು ಮಧ್ಯವಾಗಿಟ್ಟು ಇಡೀ ಬೆಂಗಳೂರನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆ.
ಇಲ್ಲಿ ಆಚರಿಸಲಾಗುವ ಪ್ರಮುಖ ಉತ್ಸವಗಳೆಂದರೆ ಬೆಂಗಳೂರು ಕರಗ, ಬಹಳ ಹಳೆಯ ಉತ್ಸವವಾಗಿರುವ ಇದನ್ನು ದ್ರೌಪದಿಗೆ ಗೌರವವನ್ನು ನೀಡುವ ಸಲುವಾಗಿ ಆಯೋಜಿಸಲಾಗುವುದು.

ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ

ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ

PC: Kiran Jonnalagadda

ಬೆಂಗಳೂರಿನಲ್ಲಿ ಯಾವಾಗಲೂ ತಂಪಾದ ವಾತಾವರಣ ಇರುತ್ತದೆ. ಹಾಗಾಗಿ ಈ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಯಾವಾಗ ಬೇಕಾದರೂ ಭೇಟಿ ನೀಡಬಹುದು. ನೀವು ಹಿಂದೂ ಭಕ್ತರು ತುಂಬಿರುವುದನ್ನು ನೋಡಬೇಕಾದರೆ ಮಾರ್ಚ್, ಎಪ್ರಿಲ್‌ನಲ್ಲಿ ಬೆಂಗಳೂರು ಕರಗದ ಸಂದರ್ಭ ಇಲ್ಲಿಗೆ ಭೇಟಿ ನೀಡಬೇಕು.

 ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Thigala4u alias Shri

ಬೆಂಗಳೂರಿಗೆ ದೇಶದ ಎಲ್ಲಾ ದೊಡ್ಡ ನಗರದಗಳಿಂದ ವಿಮಾನದ ವ್ಯವಸ್ಥೆ ಇದೆ. ಹಾಗಾಗಿ ಬೆಂಗಳೂರು ಏರ್‌ಪೋರ್ಟ್‌ಗೆ ನೇರ ವಿಮಾನವನ್ನು ಹಿಡಿಯಬಹುದು. ಏರ್‌ಪೋರ್ಟ್‌ನಿಂದ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಕ್ಯಾಬ್‌ ಮೂಲಕ ಹೋಗಬಹುದು. ವಿಮಾನ ನಿಲ್ದಾನದಿಂದ ಈ ದೇವಸ್ಥಾನವು ಸುಮಾರು 36 ಕಿ.ಮೀ ದೂರದಲ್ಲಿದೆ.
ರೈಲು ಮೂಲಕ ಹೋಗುವುದಾದರೆ ಬೆಂಗಳೂರು ರೈಲು ನಿಲ್ದಾಣಕ್ಕೆ ಬೇಕಾದಷ್ಟು ರೈಲುಗಳಿವೆ. ಅಲ್ಲಿಂದ ಟ್ಯಾಕ್ಸಿ ಮೂಲಕ ತಿಗಲಾರ್‌ಪೇಟೆಗೆ ಬರಬಹುದು. ಇನ್ನು ಬಸ್‌ ಮೂಲಕವೂ ಇಲ್ಲಿಗೆ ಬರಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X