Search
  • Follow NativePlanet
Share
» »ಲೈಫ್‌ನಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

ಲೈಫ್‌ನಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸುಂದರವಾದ ಸ್ಥಳಗಳು ಇವು..!

By Vijay

ನಸುಕು ಕಳೆದು ಬೆಳಗಾಗಲು ಪ್ರಾರಂಭಿಸುತ್ತಿದ್ದಂತೆ ಸಾಕು, ಚಿಮು ಚಿಮು ಚಳಿಯಿಂದ ತಂಪೇರಿದ ಶರೀರಕ್ಕೆ ಎಳೆ ಎಳೆಯಾದ ಸೂರ್ಯ ಕಿರಣಗಳು ಬೆಚ್ಚನೆಯ ಅಪ್ಪುಗೆಗಳನ್ನು ಕೊಡಲಾರಂಭಿಸುತ್ತವೆ. ಇನ್ನೂ ಉದಯಿಸುತ್ತಿರುವ ಆ ರವಿಯನ್ನ ನೋಡುವುದೆಂದರೆ ಹಲವರಿಗೆ ರೋಮಾಂಚನ ಉಂಟಾಗುತ್ತದೆ.

ಹೌದು, ಮೂಡಣದಿ ಉದಯಿಸುವ ಸೂರ್ಯನ ಬಂಗಾರದಂತಹ ಹೊಳಪಿರುವ ಎಳೆ ಎಳೆ ರಷ್ಮಿಗಳು ಆಗಸದಿ ಚಿತ್ತಾರ ಬಿಡಿಸುತ್ತ ಸಾಗಿದಾಗ ಅಕ್ಷರಶಃ ನಿಲಾಕಾಶವು ಸ್ವರ್ಣ ವರ್ಣದಿಂದ ಶೋಭಿತವಾಗುವುದನ್ನು ನೋಡಿದಾಗ ಮನ ಪ್ರಸನ್ನಗೊಳ್ಳದೆ ಇರಲಾರದು. ಹೀಗಾಗಿ ಸೂರ್ಯೋದಯ ನೋಡುವುದೆ ಒಂದು ಅದ್ಭುತ ಅನುಭವವಾಗಿ ಪರಿಣಮಿಸಿದ್ದು ಆಕರ್ಷಕ ಪ್ರವಾಸಿ ಚಟುವಟಿಕೆಯೂ ಆಗಿದೆ.

ನಿಮಗಿದು ಗೊತ್ತೆ ಭಾರತದಲ್ಲಿರುವ ಕೆಲವು ಆಕರ್ಷಕ ಪ್ರವಾಸಿ ಸ್ಥಳಗಳು ಸೂರ್ಯೋದಯದ ನೋಟಗಳಿಗೆಂದೆ ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಅದೆಷ್ಟೊ ಪ್ರವಾಸಿಗರು ಸೂರ್ಯೋದಯದ ಅದ್ಭುತ ದೃಶ್ಯಾವಳಿಗಳನ್ನ ತಮ್ಮ ಕಣ್ಗಳಲ್ಲಿ ತುಂಬುಕೊಳ್ಳುವುದರ ಜೊತೆಗೆ ಕ್ಯಾಮೆರಾದಲ್ಲೂ ಸಹ ಸೆರೆ ಹಿಡಿಯಬೇಕೆಂಬ ಉದ್ದೇಶದಿಂದ ನಿರ್ದಿಷ್ಟ ಸ್ಥಳಗಳಿಗೆ ಪ್ರವಾಸ ಮಾಡುತ್ತಾರೆ.

ಪ್ರತಿ ದಿನ ಸೂರ್ಯೋದಯವಾಗುತ್ತದಾದರೂ ಆ ಒಂದು ನಿರ್ದಿಷ್ಟ ಘಳಿಗೆಯನ್ನು ದಿನದ ಮತ್ತಿನ್ಯಾವ ಸಮಯದಲ್ಲೂ ಅನುಭವಿಸಲಾಗಲ್ಲ. ಉದಾಹರಣೆಗೆ ಬೆಂಗಳೂರು ಬಳಿಯಿರುವ ನಂದಿಬೆಟ್ಟವು ಪ್ರಸಿದ್ಧ ಪ್ರವಾಸಿ ತಾಣದ ಜೊತೆ ಜೊತೆಗೆ ಅದ್ಭುತ ಸೂರ್ಯೋದಯದ ನೋಟ ಒದಗಿಸುವ ತಾಣವಾಗಿಯೂ ಹೆಸರುವಾಸಿಯಾಗಿದೆ. ಆದರೆ ಒಮ್ಮೊಮ್ಮೆ ಮೋಡ ಮುಸುಕಿದ ವಾತಾವರಣದಿಂದ ಇದನ್ನು ನೋಡಲಾಗಲ್ಲ.

ಪ್ರಸ್ತುತ ಲೇಖನದ ಮೂಲಕ ಕೆಲವು ಆಯ್ದ ಭಾರತದ ಸೂರ್ಯೋದಯ ನೋಟಗಳಿಗೆ/ದೃಶ್ಯಗಳಿಗೆ ಹೆಸರುವಾಸಿಯಾದ ಸ್ಥಳಗಳ ಕುರಿತು ತಿಳಿಸಲಾಗಿದೆ. ನಿಮಗೇನಾದರೂ ಆ ಸ್ಥಳಗಳಿಗೆ ಭೇಟಿ ನಿಡುವ ಅವಕಾಶ ಲಭಿಸಿದರೆ ಖಂಡಿತವಾಗಿಯೂ ಅಲ್ಲಿನ ಸೂರ್ಯೋದಯದ ದೃಶ್ಯವನ್ನೊಮ್ಮೆ ನಿಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಲು ಮರೆಯದಿರಿ.

ತ್ರಿಯುಂದ್

ತ್ರಿಯುಂದ್

ಬೆರಗಾಗಿಸುವಂತಹ ಸೂರ್ಯೋದಯ. ಧೌಲಾಧರ್ ಹಿಮ ಪರ್ವತಗಳ ಶ್ರೇಣಿಗಳ ಹಿಂದಿನಿಂದ ಉದಯಿಸುವ ರವಿ ನೋಡುಗರು ನಿಬ್ಬೆರಗಾಗುವಂತೆ ಮಾಡುತ್ತಾನೆ. ಹಿಮಾಚಲದ ಕಂಗ್ರಾ ಜಿಲ್ಲೆಯ ತ್ರಿಯುಂದ್ ಗಿರಿಧಾಮ.

ಚಿತ್ರಕೃಪೆ: Kiran Jonnalagadda

ಜೈಸಲ್ಮೇರ್

ಜೈಸಲ್ಮೇರ್

ರಾಜಸ್ಥಾನ ರಾಜ್ಯದ ಪ್ರಖ್ಯಾತ ಪ್ರವಾಸಿ ತಾಣವಾಗಿದೆ ಜೈಸಲ್ಮೇರ್. ಜೈಸಲ್ಮೇರ್ ಪ್ರಮುಖವಾಗಿ ಕೋಟೆ, ಥಾರ್ ಮರಭೂಮಿಗಳಿಂದಾಗಿ ಸಾಕಷ್ಟು ಜನಪ್ರೀಯತೆ ಪಡಿದಿದೆ. ಆದರೆ ಆ ಮರಭೂಮಿಯಲ್ಲಿ ಉದಯಿಸುತ್ತಿರುವ ಸೂರ್ಯ ತನ್ನದೆ ಆದ ವೈವಿಧ್ಯಮಯ ವರ್ಣಚಿತ್ರವನ್ನು ಆಗಸದಲ್ಲಿ ಬಿಡಿಸುತ್ತಾನೆ.

ಚಿತ್ರಕೃಪೆ: Dakshil Shah

ದಾರ್ಜೀಲಿಂಗ್

ದಾರ್ಜೀಲಿಂಗ್

ಪಶ್ಚಿಮಬಂಗಾಳ ರಾಜ್ಯದ ಏಕೈಕ ಗಿರಿಧಾಮ ಪ್ರದೇಶ ಎಂದೆ ಹೇಳಬಹುದಾದ ದಾರ್ಜೀಲಿಂಗ್ ಒಂದು ಅದ್ಭುತ ಪ್ರವಾಸಿ ತಾಣವಾಗಿಯೂ ಸಾಕಷ್ಟು ಜನಪ್ರೀಯತೆಗಳಿಸಿದೆ. ಅಲ್ಲದೆ ದಾರ್ಜೀಲಿಂಗ್ ಚಹಾ ತೋಟಗಳಿಂದಾಗಿಯೂ ಹೆಸರುವಾಸಿಯಾಗಿದ್ದು ಬೆಳ್ಳಂಬೆಳಿಗ್ಗೆ ದಾರ್ಜೀಲಿಂಗ್ ನ ಬಿಸಿ ಬಿಸಿ ಚಹಾ ಹೀರುತ್ತ ಮಾಲ್ ರಸ್ತೆಯಿಂದ ಸೂರ್ಯನನ್ನು ಹೀಗೆ ಸ್ವಾಗತಿಸಬಹುದು.

ಚಿತ್ರಕೃಪೆ: Yoghya

ದೀವ್ ಪಟ್ಟಣ

ದೀವ್ ಪಟ್ಟಣ

ಕೇಂದ್ರಾಡಳಿತ ಪ್ರದೇಶವಾದ ದಮನ್ ಮತ್ತು ದೀವ್ ಪ್ರದೇಶದ ದೀವ್ ಪಟ್ಟಣದ ಸಮುದ್ರ ಪ್ರದೇಶದಿಂದ ಸೂರ್ಯೋದಯ ಹೀಗೆ ಕಂಡುಬರುತ್ತದೆ.

ಚಿತ್ರಕೃಪೆ: Visdaviva

ಗಿರ್ನಾರ್

ಗಿರ್ನಾರ್

ಗುಜರಾತ್ ರಾಜ್ಯದ ಜುನಾಗಡ್ ಜಿಲ್ಲೆಯ ಗಿರ್ನಾರ್ ಪಟ್ಟಣವು ಧಾರ್ಮಿಕ ಪ್ರವಸಕ್ಕೆ ಹೆಸರುವಾಸಿಯಾಗಿದ್ದು ಇಲ್ಲಿನ ಸೂರ್ಯೋದಯ ನೋಟವೂ ಸಹ ಸಾಕಷ್ಟು ಆಕರ್ಷಣೆ ಉಂಟು ಮಾಡುತ್ತದೆ.

ಚಿತ್ರಕೃಪೆ: Imm1122

ಮುನ್ಸಿಯಾರಿ

ಮುನ್ಸಿಯಾರಿ

ಉತ್ತರಾಖಂಡ ರಾಜ್ಯದ ಪಿತೋರ್ಗಡ್ ಜಿಲ್ಲೆಯ ಅದ್ಭುತ ಗಿರಿ ಪ್ರವಾಸಿ ಪ್ರದೇಶವಾದ ಮುನ್ಸಿಯಾರಿಯಿಂದ ಸೂರ್ಯೋದಯ ಹೀಗೆ ಕಂಡುಬರುತ್ತದೆ.

ಚಿತ್ರಕೃಪೆ: Abhijit Kar Gupta

ಕಂಚನ್ ಜುಂಗಾ

ಕಂಚನ್ ಜುಂಗಾ

ಗೊಯೆಚಾಲಾ ಚಾರಣದ ಮೂಲಕ ತಲುಪಬಹುದಾದ ಸಿಕ್ಕಿಂ ರಾಜ್ಯದ ಒಂದು ಅದ್ಭುತ ತಾಣವಾಗಿದೆ. ಟ್ರೆಕ್ ಮಾಡುವ ಸಂದರ್ಭದಲ್ಲಿ ವೀಕ್ಷಣಾ ತಾಣವೊಂದು ಕಂಚನ್ ಜುಂಗಾ ಪರ್ವತದಲ್ಲಿ ಕಂಡುಬರುವ ಸುಂದರ ಸೂರ್ಯೋದಯಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Ravi.sangeetha

ಗಡ್ಸಿಸಾರ್

ಗಡ್ಸಿಸಾರ್

ರಾಜಸ್ಥಾನದ ಜೈಸಲ್ಮೇರ್ ನಲ್ಲಿರುವ ಗಡ್ಸಿಸಾರ್ ಕೆರೆ ಸಾಕಷ್ಟು ಐತಿಹಾಸಿಕ ಮಹತ್ವ ಪಡೆದಿರುವ ಹಾಗೂ ಧಾರ್ಮಿಕ ಮಹತ್ವ ಪಡೆದಿರುವ ಅದ್ಭುತ ಕೆರೆ ತಾಣವಾಗಿದ್ದು ಇಲ್ಲಿನ ಸೂರ್ಯೋದಯವು ಸಾಕಷ್ಟು ವಿಶಿಷ್ಟವಾಗಿರುತ್ತದೆ ಹಾಗೂ ಆ ಸಂದರ್ಭದಲ್ಲಿ ಸಾಕಷ್ಟು ಜನರು ಇದರ ತಟದ ಮೇಲೆ ಕುಳಿತು ಧ್ಯಾನ ಮಾಡಲು ಬಯಸುತ್ತಾರೆ.

ಚಿತ್ರಕೃಪೆ: Sanyamgoyal007

ಕಾವೇರಿ ನದಿಪಾತ್ರ

ಕಾವೇರಿ ನದಿಪಾತ್ರ

ಸಾಮಾನ್ಯವಾಗಿ ಕರ್ನಾಟಕದಲ್ಲಿ ಕಾವೇರಿ ನದಿ ಹರಿಯುವ ಪಥದಲ್ಲಿ ನೆಲೆಸಿರುವ ದಟ್ಟ ಹಸಿರಿನ ಕಾಡುಗಳಿಂದ ತುಂಬಿರುವ ಸಾಕಷ್ಟು ಸ್ಥಳಗಳು ಸೂರ್ಯೋದಯದ ನೋಟಗಳಿಗೆ ಹೆಸರುವಾಸಿಯಾಗಿದೆ. ವಿಶೇಷವಾಗಿ ದುಬಾರೆ, ಭೀಮೇಶ್ವರಿಯಂತಹ ಸ್ಥಳಗಳು.

ಚಿತ್ರಕೃಪೆ: Shoorveer5893

ಬೆಂಗಳೂರು ಬಳಿ

ಬೆಂಗಳೂರು ಬಳಿ

ಬೆಂಗಳೂರು ಬಳಿಯಿರುವ ನಂದಿ ಗಿರಿಧಾಮವು ಒಂದು ಜನಪ್ರೀಯ ಪ್ರವಾಸಿ ಸ್ಥಳವಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಈ ಬೆಟ್ಟದ ಮೇಲಿಂದ ಕಂಡುಬರುವ ಅದ್ಭುತ ಸೂರ್ಯೋದಯದ ನೋಟ. ಇದಕ್ಕೆಂದೆ ಎಷ್ಟೊ ಪ್ರವಾಸಿಗರು ರಾತ್ರಿ ಚಾರಣ ಮಾಡಿ ಬೆಟ್ಟದ ಮೇಲೆ ತಂಗಿ ಮರು ದಿನ ಬೆಳಿಗ್ಗೆಯಂದು ಉದಯಿಸುವ ಸೂರ್ಯನ ನೋಟವನ್ನು ಕಣ್ಣಲ್ಲಿ ತುಂಬಿಸಿಕೊಳ್ಳುತ್ತಾರೆ.

ಚಿತ್ರಕೃಪೆ: Sri chakra pranav

ಸ್ಕಂದಗಿರಿ

ಸ್ಕಂದಗಿರಿ

ಬೆಂಗಳೂರಿನಿಂದ 65 ಕಿ.ಮೀ ಹಾಗೂ ಚಿಕ್ಕಬಳ್ಳಾಪುರದಿಂದ 4 ಕಿ.ಮೀ ದೂರದಲ್ಲಿರುವ ಸ್ಕಂದಗಿರಿ ಒಂದು ಆಕರ್ಷಕ ಚಾರಣ ತಾಣವಾಗಿದೆ. ಕಲಾವರದುರ್ಗ ಎಂತಲೂ ಸಹ ಕರೆಯಲ್ಪಡುವ ಈ ಅದ್ಭುತ ತಾಣವು ಸೂರ್ಯೋದಯದ ನೋಟಕ್ಕೂ ಸಹ ವಿಶೇಷವೆಂದೆ ಹೇಳಬಹುದು.

ಚಿತ್ರಕೃಪೆ: Karthik Vasudev

ಕೊಡಚಾದ್ರಿ

ಕೊಡಚಾದ್ರಿ

ಶಿವಮೊಗ್ಗ ಹಾಗೂ ಕೊಲ್ಲೂರುಗಳಿಗೆ ಹಿನ್ನಿಲೆಯಾಗಿ ಪಶ್ಚಿಮ ಘಟ್ಟಗಳಲ್ಲಿ ಲೀಲಾಜಾಲವಾಗಿ ಚಾಚಿರುವ ಅದ್ಭುತವಾದ ಕೊಡಚಾದ್ರಿ ಶಿಖರವು ಚಾರಣಕ್ಕೂ ಸೈ ಹಾಗೂ ತಾನು ಕರುಣಿಸುವ ಸೂರ್ಯೋದಯದ ನೋಟಕ್ಕೂ ಸೈ.

ಚಿತ್ರಕೃಪೆ: Narotham.r

ಹಂಪಿ

ಹಂಪಿ

ವಿಜಯನಗರ ಸಾಮ್ರಾಜ್ಯದ ಗತ ವೈಭವದ ಪರಿಚಯ ನೀಡುವ ಸುಂದರ ಐತಿಹಾಸಿಕ ಸ್ಥಳವಾದ ಹಂಪಿಯು ತನ್ನಲ್ಲಿರುವ ಅದ್ಭುತವಾದ ಬಂಡೆಗಲ್ಲುಗಳಿಂದ ಕೂಡಿದ ಬೆಟ್ಟಗಳ ಹಿನ್ನಿಲೆಯಲ್ಲಿ ಉದಯಿಸುವ ಸೂರ್ಯನ ಅದ್ಭುತ ನೋಟಕ್ಕೂ ಸಹ ಚಿರಪರಿಚಿತವಾಗಿದೆ.

ಚಿತ್ರಕೃಪೆ: Tapas Biswas

ವಿಶಾಖಾಪಟ್ಟಣ

ವಿಶಾಖಾಪಟ್ಟಣ

ವೈಜಾಗ್ ನಲ್ಲಿರುವ ತೆನ್ನೆತಿ ಪಾರ್ಕ್ ಕಡಲ ತೀರದ ಸೂರ್ಯೋದಯ

ಚಿತ್ರಕೃಪೆ: Adityamadhav83

ಕೃಷ್ಣ ಜಿಲ್ಲೆ

ಕೃಷ್ಣ ಜಿಲ್ಲೆ

ಆಂಧ್ರದ ಕೃಷ್ಣ ಜಿಲ್ಲೆಯಲ್ಲಿರುವ ಮಚಿಲಿಪಟ್ಟಣವು ತನ್ನಲ್ಲಿರುವ ಕಡಲ ತೀರದಿಂದಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಸೂರ್ಯೋದಯವೂ ಸಹ ಸಾಕಷ್ಟು ವಿಶೆಷವಾಗಿ ಜನರನ್ನು ಸೆಳೆಯುತ್ತದೆ.

ಚಿತ್ರಕೃಪೆ: Govind.salinger

ರಾಮೇಶ್ವರಂ

ರಾಮೇಶ್ವರಂ

ತಮಿಳುನಾಡಿನ ಪ್ರಖ್ಯಾತ ತೀರ್ಥ ಕ್ಷೇತ್ರವಾದ ರಾಮೇಶ್ವರಂನಲ್ಲಿರುವ ಪಂಬನ್ ಸೇತುವೆ ಐತಿಹಾಸಿಕ ಮಹತ್ವ ಪಡೆದಿರುವ ಅದ್ಭುತ ಸೇತುವೆಯಾಗಿದೆ. ಸೂರ್ಯೋದಯದ ಸಂದರ್ಭದಲ್ಲಿ ಈ ಸೇತುವೆಯ ಮೂಲಕ ರೈಲು ಸಾಗುತ್ತಿರುವ ದೃಶ್ಯ ನೋಡಿದಾಗ ಎಂಥವರಿಗಾದರೂ ಸರಿ ಒಂದು ಕ್ಷಣ ರೋಮಾಂಚನವಾಗದೆ ಇರಲಾರದು.

ಚಿತ್ರಕೃಪೆ: Picsnapr

ಕೊಲುಕ್ಕುಮಲೈ

ಕೊಲುಕ್ಕುಮಲೈ

ತಮಿಳುನಾಡಿನ ಪ್ರಖ್ಯಾತ ತೇಣಿ ಕಣಿವೆ ಪ್ರದೇಶದ ಕೊಲುಕ್ಕುಮಲೈ ಗಿರಿಧಾಮ ಪ್ರದೇಶ ಮನಮೋಹಕ ಸೂರ್ಯೋದಯ ನೋಟಕ್ಕಾಗಿ ಸಾಕಷ್ಟು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Jan J George

ಊಟಿ

ಊಟಿ

ಗಿರಿಧಾಮಗಳ ರಾಣಿ ಎಂದೆ ಕರೆಸಿಕೊಳ್ಳುವ ತಮಿಳುನಾಡಿನ ಊಟಿಯಲ್ಲಿಯೂ ಸಹ ಸೂರ್ಯೋದಯದ ನೋಟ ಅದ್ಭುತವಾಗಿ ಗೋಚರಿಸುತ್ತದೆ. ವಿಶೆಷವಾಗಿ ಊಟಿಯ ಕೆರೆಗಳ ತಟದಲ್ಲಿ ಕುಳಿತು ಸೂರ್ಯೋದಯ ನೋಡುವುದು ಒಂದು ಚೆಂದದ ಅನುಭವವಾಗಿದೆ.

ಚಿತ್ರಕೃಪೆ: ZeePack

ಕನ್ಯಾಕುಮಾರಿ

ಕನ್ಯಾಕುಮಾರಿ

ಭಾರತದ ದಕ್ಷಿಣದ ತುತ್ತುದಿಯಾದ ತಮಿಳುನಾಡಿನ ಕನ್ಯಾಕುಮಾರಿಯು ಒಂದು ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿದೆ. ಕಡಲ ತೀರದ ಈ ಪಟ್ಟಣದ ಸಮುದ್ರದಲ್ಲಿ ನಿರ್ಮಿತವಾಗಿರುವ ತಿರುವಳ್ಳಾರ್ ಪ್ರತಿಮೆ ಹಾಗೂ ವಿವೇಕಾನಂದ ಬಮ್ಡೆ ಸ್ಮಾರಕದ ಹಿನ್ನ್ಲೆಯಲ್ಲಿ ಸೂರ್ಯನು ಉದಯಿಸಿದಾಗ ಕಂಡುಬರುವ ನೋಟ ನೋಡಲು ನಯನಮನೋಹರವಾಗಿರುತ್ತದೆ.

ಚಿತ್ರಕೃಪೆ: Gopinath Sivanesan

ಚೆನ್ನೈ

ಚೆನ್ನೈ

ಚೆನ್ನೈ ನಗರದ ಎಲಿಯಟ್ ಕಡಲ ತೀರವು ಒಂದು ಆಕರ್ಷಕ ಕಡಲ ತೀರವಾಗಿದ್ದು ಇಲ್ಲಿಂದ ಸೂರ್ಯೋದಯ ಮನಮೋಹಕ ದೃಶ್ಯವನ್ನು ಕಾಣಬಹುದು.

ಚಿತ್ರಕೃಪೆ: Bsuryavanshi24

ಅದ್ಭುತ

ಅದ್ಭುತ

ತಮಿಳುನಾಡಿನ ತೂತುಕುಡಿ ಕಡಲ ತೀರವೂ ಸಹ ಆಕರ್ಷಕ ಸೂರ್ಯೋದಯ ನೋಟಕ್ಕೆ ಬಲು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Ramkumar

ಆಗ್ರಾ

ಆಗ್ರಾ

ಉತ್ತರ ಪ್ರದೇಶದ ಆಗ್ರಾ ಪಟ್ಟಣದಲ್ಲಿರುವ ತಾಜ್ ಮಹಲ್ ಒಂದು ಐತಿಹಾಸಿಕ ಮಹತ್ವ ಪಡೆದಿರುವ ಜಗದ್ವಿಖ್ಯಾತ ಸ್ಮಾರಕವಾಗಿದ್ದು ಇಲ್ಲಿ ಸೂರ್ಯೋದಯದ ನೋಟ ಬಲು ಅಪರೂಪ್ ಹಾಗೂ ಅಷ್ಟೆ ಸೊಗಸಾಗಿ ಕಂಡುಬರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಮಂಜಿನ ನಡುವೆ ಉದಯಿಸುವ ಸೂರ್ಯ ಒಟ್ಟಾರೆ ಸ್ಮಾರಕಕ್ಕೆ ವಿಶೇಷವಾದ ಮೆರುಗನ್ನೆ ನೀಡುತ್ತಾನೆ.

ಚಿತ್ರಕೃಪೆ: Narender9

ಬಲು ಆಕರ್ಷಕ

ಬಲು ಆಕರ್ಷಕ

ಉತ್ತರ ಪ್ರದೇಶದ ಆಧ್ಯಾತ್ಮಿಕ ನಗರಿಯಾದ ವರಾಣಸಿಯು ಭಾರತದಲ್ಲೆ ಹೆಚ್ಚು ಧಾರ್ಮಿಕ ಮಹತ್ವ ಪಡೆದಿರುವ ಸ್ಥಳವಾಗಿದೆ. ಗಂಗೆಯ ಹಿನ್ನಿಲೆಯಲ್ಲಿ ಮೂಡಿ ಬರುವ ಇಲ್ಲಿನ ಸೂರ್ಯೋದಯ ಸದಾ ಆಕರ್ಷಕವಾಗಿರುತ್ತದೆ.

ಚಿತ್ರಕೃಪೆ: orvalrochefort

ಟಾಪ್ ಸ್ಟೇಷನ್

ಟಾಪ್ ಸ್ಟೇಷನ್

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಮುನ್ನಾರ್ ಅತ್ಯಂತ ಹೆಸರುವಾಸಿಯಾದ ಪ್ರವಾಸಿ ಸ್ಥಳ. ಇಲ್ಲಿರುವ ಗಿರಿ ಪ್ರದೇಶವಾದ ಟಾಪ್ ಸ್ಟೇಷನ್ ಎಲ್ಲರೂ ಹತ್ತ ಬಯಸುವ ಮನಮೋಹಕ ಬೆಟ್ಟ. ಇಲ್ಲಿಂದ ಕಂಡುಬರುವ ಸೂರ್ಯೋದಯದ ನೋಟ ಅತ್ಯದ್ಭುತವಾಗಿ ಕಂಡುಬರುತ್ತದೆ.

ಚಿತ್ರಕೃಪೆ: Varkeyparakkal

ಅಲ್ಲೆಪ್ಪಿ

ಅಲ್ಲೆಪ್ಪಿ

ಅಲಪುಳಾ ಎಂದೂ ಕರೆಯಲ್ಪಡುವ ಅಲ್ಲೆಪ್ಪಿತ್ಯ ಹಿನ್ನೀರಿನ ಹಿನ್ನಿಲೆಯಲ್ಲಿ ಸೂರ್ಯನ ಉದಯ.

ಚಿತ್ರಕೃಪೆ: Anjalichandhok

ಚಿತ್ಕುಲ್

ಚಿತ್ಕುಲ್

ಹಿಮಾಚಲದ ಕಿನ್ನಔ ಜಿಲ್ಲೆಯಲ್ಲಿರುವ ಚಿತ್ಕುಲ್ ಗ್ರಾಮದಲ್ಲಿ ವಿಶೇಷವಾಗಿ ಕಂಡುಬರುವ ಸೂರ್ಯೋದಯದ ಪ್ರಭಾವದಲ್ಲಿರುವ ಆಕರ್ಷಕ ಪ್ರಕೃತಿ.

ಚಿತ್ರಕೃಪೆ: Sudhakarbichali

ವ್ಯಾಸ್ ನದಿ

ವ್ಯಾಸ್ ನದಿ

ಹಿಮಾಚಲದ ಕುಲ್ಲು ಮನಾಲಿ ಮಧ್ಯದಲ್ಲಿರ್ ಹರಿದಿರುವ ವ್ಯಾಸ ನದಿಯ ಹಿನ್ನಿಲೆಯಲ್ಲಿ ಸೂರ್ಯೋದಯ.

ಚಿತ್ರಕೃಪೆ: Himanshu Sharma

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more