Search
  • Follow NativePlanet
Share
» »ಪ್ರಾಚೀನ ಭಾರತದ ವಿಶ್ವವಿದ್ಯಾನಿಲಯಗಳನ್ನು ಭೇಟಿ ಮಾಡಿ ಮತ್ತೆ ಜೀವಕ್ಕೆ ಹಿಂದಿರುಗದಿರುವುದು

ಪ್ರಾಚೀನ ಭಾರತದ ವಿಶ್ವವಿದ್ಯಾನಿಲಯಗಳನ್ನು ಭೇಟಿ ಮಾಡಿ ಮತ್ತೆ ಜೀವಕ್ಕೆ ಹಿಂದಿರುಗದಿರುವುದು

By Manjula Balaraj Tantry

ಭಾರತವು ಪ್ರತಿಯೊಂದು ಕ್ಷೇತ್ರದಲ್ಲಿಯೂ ವಿಶ್ವದ ಅಗ್ರಗಣ್ಯ ಸಾಧಕರನ್ನು ಹೊಂದಿದೆ. ಅದು ಆಯುರ್ವೇದ ಖಗೋಳ ವಿಜ್ಞಾನ, ವಿಜ್ಞಾನ ಅಥವಾ ಶಿಕ್ಷಣದಲ್ಲಾಗಲಿ ಬಹಳ ಕಾಲದಿಂದಲೂ ಸ್ಥಿರವಾಗಿದ್ದು ಎಲ್ಲಾ ಐತಿಹಾಸಿಕ ಪಾತ್ರಗಳ ಹಿಂದಿರುವ ಒಂದು ಕಂಬದಂತಿದೆ.

ಭಾರತದಲ್ಲಿ ಎಂದಿಗೂ ಶಿಕ್ಷಣವು ಒಂದು ಪ್ರಮುಖ ಪಾತ್ರವಹಿಸಿದೆ. ಮತ್ತು ಶಿಕ್ಷಣವು ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಪಾತ್ರವನ್ನು ಪ್ರತಿಬಿಂಬಿಸುವ ಚೌಕಟ್ಟು ಎಂದು ಪರಿಗಣಿಸಲಾಗುತ್ತದೆ. ವೇದಗಳ ಪ್ರಾರಂಭದಿಂದಲೂ, ಗುರುಕುಲಗಳು ಮತ್ತು ಆಶ್ರಮಗಳು ವಿವಿಧ ವಿಷಯಗಳ ಬಗ್ಗೆ ಮತ್ತು ಪ್ರಾಯೋಗಿಕ ಜೀವನವನ್ನು ಕಲಿಸುವ ಪ್ರಾಥಮಿಕ ಮೂಲಗಳಾಗಿದ್ದವು.

ನೀವು ಶಿಕ್ಷಣದ ಇತಿಹಾಸಗಳ ಬಗ್ಗೆ ತಿಳಿಯಬೇಕೆಂದಿದ್ದಲ್ಲಿ ಮತ್ತು ಅವುಗಳತ್ತ ಒಂದು ಹತ್ತಿರದ ನೋಟ ಹರಿಸಬೇಕೆಂದಿದ್ದಲ್ಲಿ ಮತ್ತು ಪ್ರಾಚೀನ ಭಾರತದ ಈ ಮಹತ್ವಾಕಾಂಕ್ಷೆಯ ವಿಶ್ವ ವಿದ್ಯಾಲಯಗಳ ಕಾರಿಡಾರ್ ಮೂಲಕ ಮತ್ತು ಮತ್ತೆ ಜೀವನದಲ್ಲಿ ಮರುಕಳಿಸದೇ ಇರುವ ಈ ವಿಶ್ವ ವಿದ್ಯಾಲಯಗಳಲ್ಲಿ ನೀವು ನಡೆಯಬಯಸಿದಲ್ಲಿ ಸರಿಯಾದ ಸ್ಥಳಕ್ಕೆ ತಲುಪಿರುವಿರಿ.

1) ನಳಂದ ವಿಶ್ವವಿದ್ಯಾಲಯ (ಬಿಹಾರ)

1) ನಳಂದ ವಿಶ್ವವಿದ್ಯಾಲಯ (ಬಿಹಾರ)

ಪಾಟ್ನಾದಿಂದ ದೂರ - 2 ಗಂಟೆ ಪ್ರಯಾಣ

ಇದೊಂದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು ವಿಶ್ವದ ಅತ್ಯಂತ ಹಳೆಯ ವಿಶ್ವ ವಿದ್ಯಾಲಯಗಳಲ್ಲೊಂದಾಗಿದೆ. ಈ ವಿಶ್ವವಿದ್ಯಾಲಯವು ಜಗತ್ತಿನಾದ್ಯಂತದ ಸಾವಿರಾರು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಲಿಕೆಯ ಕೇಂದ್ರವಾಗಿದೆ. 5 ನೇ ಶತಮಾನದಲ್ಲಿ ಶಕ್ರಾಧಿತ್ಯ ಸ್ಥಾಪಿಸಿದ್ದು, ಇದು ಸುಮಾರು 700 ವರ್ಷಗಳವರೆಗೆ ಗುಪ್ತರ ಸಾಮ್ರಾಜ್ಯದ ಅಡಿಯಲ್ಲಿ ಮತ್ತು 12 ನೇ ಶತಮಾನದ ಅಂತ್ಯದವರೆಗೂ ಹರ್ಷನ ಸಾಮ್ರಾಜ್ಯದ ಅಡಿಯಲ್ಲಿ ಅಭಿವೃದ್ಧಿ ಹೊಂದಿತು.

ಈ ವಿಶ್ವದ ಅತಿ ದೊಡ್ಡ ಗ್ರಂಥಾಲಯಕ್ಕೆ ದೊಡ್ಡ ಕೊಠಡಿಗಳು ಮತ್ತು ಉಪನ್ಯಾಸ ಸಭಾಂಗಣಗಳಿವೆ, ನಳಂದವು ಎಲ್ಲವನ್ನೂ ಹೊಂದಿದ್ದು ಇದೊಂದು ಆದರ್ಶಪ್ರಾಯವಾಗಿದ್ದು, ಇಲ್ಲಿ ಆಸಕ್ತ ಸಾವಿರಾರು ವಿದ್ಯಾರ್ಥಿಗಳು ಮತ್ತು ಕಲಿಯುವವರನ್ನು ಒಳಗೊಂಡಿದೆ. ಚೀನಾ, ಜಪಾನ್, ಟಿಬೆಟ್, ಇಂಡೋನೇಷಿಯಾ ಮತ್ತು ಇತರ ಹಲವು ದೇಶಗಳು ಈ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಲು ಬಳಸಿದವು.

ನಳಂದ ಗ್ರಂಥಾಲಯವು ವ್ಯಾಕರಣ, ಸಾಹಿತ್ಯ, ಜ್ಯೋತಿಷ್ಯ, ಖಗೋಳವಿಜ್ಞಾನ, ಔಷಧ ಮತ್ತು ವಿಜ್ಞಾನದಂತಹ ವಿಷಯಗಳ ಮೇಲೆ ಲಕ್ಷಾಂತರ ಲಿಪಿಗಳು ಮತ್ತು ಪಠ್ಯಗಳ ವ್ಯಾಪಕ ಸಂಗ್ರಹವನ್ನು ಹೊಂದಿತ್ತು. ಧರ್ಮಾಗ್ನಜ ಎಂದು ಕರೆಯಲ್ಪಡುವ ಈ ಗ್ರಂಥಾಲಯವು ರತ್ನಸಾಗರ, ರತ್ನೋದದಿ ಮತ್ತು ರತ್ನಾರಂಜಕ ಎಂಬ ಮೂರು ಬಹುಮಹಡಿ ಕಟ್ಟಡಗಳನ್ನು ಒಳಗೊಂಡಿದೆ. ಬಕ್ತಿಯಾರ್ ಖಿಲ್ಜಿಯವರ ಆಕ್ರಮಣದಿಂದ ಹಾನಿಗೊಳಗಾಗುವ ಮೊದಲು ನಳಂದ ವಿಶ್ವವಿದ್ಯಾಲಯವು ಸುಮಾರು ಏಳು ಶತಮಾನಗಳವರೆಗೆ ಬೆಳೆದಿತ್ತು. ಇಂದು, ಇದು ಇತಿಹಾಸ ಪ್ರೇಮಿಗಳಿಗೆ ಕೇವಲ ಒಂದು ಪ್ರವಾಸಿ ತಾಣವಾಗಿದ್ದು, ಈಗಲೂ ಅದರ ವಿಶಾಲತೆಗಳನ್ನು ಕಂಡುಹಿಡಿಯಲು ಪ್ರಯತ್ನ ನಡೆಯುತ್ತಿದೆ.

PC- Amannikhilmehta

2) ತಕ್ಷಶಿಲಾ ವಿಶ್ವವಿದ್ಯಾಲಯ (ಪ್ರಸ್ತುತ ಪಾಕಿಸ್ತಾನ)

2) ತಕ್ಷಶಿಲಾ ವಿಶ್ವವಿದ್ಯಾಲಯ (ಪ್ರಸ್ತುತ ಪಾಕಿಸ್ತಾನ)

ಇಸ್ಲಾಮಾಬಾದ್ನಿಂದ ದೂರ - 2 ಗಂಟೆಗಳ ಡ್ರೈವ್

ಇಂದು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಪಡೆದಿರುವ ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲ್ಪಡುವ ತಕ್ಷಶಿಲ ವಿಶ್ವವಿದ್ಯಾಲಯವು ಜಗತ್ತಿನ ಅತ್ಯಂತ ಹಳೆಯದಾದ ವಿಶ್ವವಿದ್ಯಾಲಯಗಳಲ್ಲೊಂದು ಎಂದು ಗುರುತಿಸಲಾಗಿದೆ. ಇದು ಸುಮಾರು 10000 ವಿದ್ಯಾರ್ಥಿಗಳಿಗೆ ನೆಲೆಯಾಗಿದ್ದು ಈ ಬೃಹತ್ ವಿಶ್ವ ವಿದ್ಯಾಲಯವು ಪ್ರಾಚೀನ ಭಾರತದ ಒಂದು ಅತೀ ದೊಡ್ಡ ಕಲಿಕೆಯ ಕೇಂದ್ರವಾಗಿತ್ತು. ಇದು ಶಿಕ್ಷಣ ಮತ್ತು ಕಲಿಕೆಯ ಕೇಂದ್ರವಾಗಿತ್ತು ಆದುದುರಿಂದ ಇಲ್ಲಿಗೆ ಗ್ರೀಸ್, ಚೈನಾ, ಜಪಾನ್ ಅರೇಬಿಯ ಮತ್ತು ಇನ್ನಿತರ ದೇಶಗಳಿಂದ ವಿದ್ಯಾರ್ಥಿಗಳು ತಕ್ಷಶಿಲೆಗೆ ಕಲೆಯ ವಿವಿಧ ರೂಪವನ್ನು ಕಲಿಯಲು ಬರುತ್ತಿದ್ದರು.

ಈ ತಕ್ಷಶಿಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅಭಿರುಚಿಯನ್ನು ವಿಜ್ಞಾನ, ಖಗೋಳಶಾಸ್ತ್ರ, ಜ್ಯೋತಿಷ್ಯ, ಆಯುರ್ವೇದ, ತತ್ವಶಾಸ್ತ್ರ, ವ್ಯಾಕರಣ, ಬಿಲ್ಲುಗಾರಿಕೆ, ರಾಜಕೀಯ, ಕೃಷಿ, ಇತ್ಯಾದಿಗಳ ವಿವಿಧ ಕ್ಷೇತ್ರಗಳಲ್ಲಿ ತೋರಿಸುತ್ತಿದ್ದರು. ಬೌದ್ಧ ಜಾತಕ ಕಥೆಗಳಲ್ಲಿ ಚೀನಾದ ಪ್ರವಾಸಿಗರು ಮತ್ತು ಪುರಾಣಗಳ ಬರಹಗಳು, ಭಾರತದ ಪ್ರಾಚೀನ ಗ್ರಂಥಗಳು ಮುಂತಾದುವುಗಳಲ್ಲಿ ತಕ್ಷಶಿಲದ ಹಲವಾರು ಉಲ್ಲೇಖಗಳು ಕಂಡುಬರುತ್ತವೆ,

800 ವರ್ಷಗಳ ಸಮೃದ್ಧತೆ ಮತ್ತು ಯಶಸ್ಸಿನ ಈ ಸರ್ವೋನ್ನತ ಕಲಿಕಾ ಕೇಂದ್ರವು ಕೆಲವು ಆಕ್ರಮಣಕಾರರ ಆಕ್ರಮಣದಿಂದ ಅವನತಿಗೆ ಒಳಗಾಯಿತು ಎಂದು ಹೇಳಲಾಗುತ್ತದೆ. ತಕ್ಷಶಿಲೆಯು ನಿಸ್ಸಂಶಯವಾಗಿ ತನ್ನ ಅವಧಿಯಲ್ಲಿ ಚಾಣಕ್ಯ, ಚಂದ್ರಗುಪ್ತಮೌರ್ಯ ಮತ್ತು ವಿಷ್ಣು ಶರ್ಮಾರಂತಹ ಅನೇಕ ಬುದ್ದಿವಂತ ಪುರುಷರಿಗೆ ಜನ್ಮ ನೀಡಿತ್ತು.


PC- Sasha Isachenko

3) ಸೋಮಾಪುರ ವಿಶ್ವವಿದ್ಯಾಲಯ (ಪ್ರಸ್ತುತ ಬಾಂಗ್ಲಾದೇಶ)

3) ಸೋಮಾಪುರ ವಿಶ್ವವಿದ್ಯಾಲಯ (ಪ್ರಸ್ತುತ ಬಾಂಗ್ಲಾದೇಶ)

ದೂರ- ಢಾಕಾದಿಂದ 7ಗಂಟೆಗಳ ಪ್ರಯಾಣ

ಈ ಸ್ಮಾರಕವು ಬೌದ್ದ ಮಠವಾಗಿದ್ದು ಸೋಮಪುರವನ್ನು ಪಾಲಾ ಸಾಮ್ರ್ಯಾಜ್ಯ ದವರು ಆಳುತ್ತಿದ್ದು ಈ ವಿಶ್ವವಿದ್ಯಾಲಯವನ್ನು 8ನೇ ಶತಮಾನದಲ್ಲಿ ಧರ್ಮಪಾಲರವರು ನಿರ್ಮಿಸಿದರು. ಇದೊಂದು ಚತುರ್ಭುಜ ರಚನೆಯಾಗಿದ್ದು, ಮಧ್ಯದಲ್ಲಿಒಂದು ದೈತ್ಯ ಸ್ತೂಪದೊಂದಿಗೆ ಸುಮಾರು 27 ಎಕರೆ ಭೂಪ್ರದೇಶದಲ್ಲಿ ಹರಡಿಕೊಂಡಿದೆ. ಬೌದ್ಧಧರ್ಮ, ಜೈನ ಧರ್ಮ ಮತ್ತು ಹಿಂದೂ ಧರ್ಮಗಳಂತಹ ಧಾರ್ಮಿಕ ಸಂಪ್ರದಾಯಗಳಿಗೆ ಕೇಂದ್ರವಾಗಿದ್ದ ಈ ಶಾಂತಿಯುತ ಧಾರ್ಮಿಕ ಕೇಂದ್ರವು ಕಲಿಕೆಯ ಪ್ರಮುಖ ಕೇಂದ್ರವಾಗಿತ್ತು.

177 ಕೋಣೆಗಳು, ಹಲವಾರು ದೇವಾಲಯಗಳು, ಸ್ತೂಪಗಳು ಮತ್ತು ಸುಂದರ ಕಟ್ಟಡಗಳು ಮತ್ತು ಧಾರ್ಮಿಕ ಕೆತ್ತನೆಗಳಿಂದ ಅಲಂಕರಿಸಲಾದ ಹಲವಾರು ಕಟ್ಟಡಗಳು ಸೋಮಪುರವು ಆ ಸಮಯದಲ್ಲಿ ಅತೀ ದೊಡ್ಡಾ ಮಹಾವಿಹಾರ ಕೇಂದ್ರವಾಗಿತ್ತು.400 ವರ್ಷಗಳ ನಂತರ ಅದರ ಐತಿಹಾಸಿಕ ಅಸ್ತಿತ್ವವು 12 ನೇ ಶತಮಾನದ ಅಂತ್ಯದ ವೇಳೆಗೆ ಅವನತಿಗೆ ಒಳಗಾಯಿತು. ನಳಂದದಲ್ಲಿನ ದಾಖಲೆಗಳು ಸೋಮಪುರವನ್ನು ವಿದೇಶಿಯರ ಆಕ್ರಮಣದ ಸಂದರ್ಭದಲ್ಲಿ ಬೆಂಕಿಯಿಂದ ನಾಶಗೊಳಿಸಲಾಯಿತು ಎಂದು ಹೇಳುತ್ತಾರೆ.

ಇಂದು ಇದು ಕೇವಲ ಪ್ರವಾಸಿ ತಾಣವಾಗಿದ್ದು, ಅದರ ಅವಶೇಷಗಳನ್ನು ವೀಕ್ಷಿಸಬಹುದು ಮತ್ತು ಅದರ ಶಾಶ್ವತ ಇತಿಹಾಸವನ್ನು ಇಲ್ಲಿಯ ಹಾದಿಗಳ ಮೂಲಕ ನಡೆದಾಡುವ ಮೂಲಕ ವೀಕ್ಷಿಸಬಹುದು.


PC- Sharifuliea

4) ವಿಕ್ರಮ ಶಿಲಾ ವಿಶ್ವವಿದ್ಯಾಲಯ (ಬಿಹಾರ)

4) ವಿಕ್ರಮ ಶಿಲಾ ವಿಶ್ವವಿದ್ಯಾಲಯ (ಬಿಹಾರ)

ದೂರ- ಭಾಗಲ್ಪುರದಿಂದ ಒಂದು ಗಂಟೆಗಳ ಪ್ರಯಾಣ

ಬಿಹಾರದ ನಳಂದದಲ್ಲಿಯ ಶೈಕ್ಷಣಿಕ ಗುಣಮಟ್ಟದಲ್ಲಿ ಕುಸಿತದ ಪರಿಣಾಮವಾಗಿ ವಿಕ್ರಮ್ ಶಿಲಾ ಅಸ್ತಿತ್ವಕ್ಕೆ ಬಂತು. ಇದನ್ನೂ ಕೂಡಾ ಪಾಲಾ ಆಡಳಿತಗಾರನಾದ ಧರ್ಮಪಾಲ ಅವರಿಂದ ನಿರ್ಮಿಸಲಾಗಿದ್ದು, ಈ ಸುಂದರವಾದ ಮಠವು ಸುಮಾರು 100 ಕ್ಕೂ ಹೆಚ್ಚಿನ ಶಿಕ್ಷಕರು ಮತ್ತು 1000 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿದ್ದು ನಳಂದಾ ಗೆ ಒಂದು ಕಠಿಣ ಸವಾಲನ್ನು ನೀಡಿತ್ತು. ಪಾಲಾ ರಾಜವಂಶದ ಅವಧಿಯಲ್ಲಿ ವಿಕ್ರಮಾಶಿಲಾ ಅತಿದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿತ್ತು, ಇನ್ನಿತರ ವಿಶ್ವವಿದ್ಯಾಲಯಗಳೆಂದರೆ ಸೋಮಪುರ, ನಳಂದ ಮತ್ತು ಒಡಂತಪುರಿ.

ಪ್ರಸ್ತುತ ಇದು ಬಿಹಾರದ ಭಾಗಲ್ಪುರ್ ಜಿಲ್ಲೆಯಲ್ಲಿದ್ದು ಇದು ಅನೇಕ ದೇಶಗಳಿಗೆ ಕಲಿಕಾ ಕೇಂದ್ರವಾಗಿತ್ತು ಮತ್ತು ವಿಶ್ವದಾದ್ಯಂತದ ವಿದ್ಯಾರ್ಥಿಗಳಿಗೆ ಇಲ್ಲಿಯ ಪ್ರವೀಣ ಮತ್ತು ಪರಿಣತರಾದ ಗುರುಗಳಿಂದ ವಿಧ್ಯಾಭ್ಯಾಸ ಕಲಿಸಲಾಗುತ್ತಿತ್ತು. ತತ್ವಶಾಸ್ತ್ರ, ವ್ಯಾಕರಣ, ತತ್ತ್ವಶಾಸ್ತ್ರ ಮತ್ತು ತರ್ಕಶಾಸ್ತ್ರದ ಹೊರತಾಗಿ, ತಂತ್ರಭ್ಯಾಸ ಇಲ್ಲಿ ಅತ್ಯಂತ ಪ್ರಮುಖ ವಿಷಯವಾಗಿತ್ತು.

ವಿಕ್ರಮಶಿಲಾ ಕೂಡಾ ಭಕ್ತಿಯಾರ್ ಖಿಲ್ಜಿಯ ಆಕ್ರಮಣಕ್ಕೆ ಗುರಿಯಾದುದಕ್ಕೆ ಸಾಕ್ಷಿಯಾಗಿದೆ. ಹಲವಾರು ಆಕ್ರಮಣಗಳ ಕಾರಣದಿಂದಾಗಿ 12 ನೆಯ ಶತಮಾನದ ಅಂತ್ಯದ ವೇಳೆಗೆ ಇದು ಸಂಪೂರ್ಣವಾಗಿ ನಾಶವಾಯಿತು.ಇಂದು, ಈ ಸ್ಥಳದಲ್ಲಿ ಅವಶೇಷಗಳು ಮತ್ತು ವಿನಾಶದ ಭೀಕರವಾದ ಭೂಮಿ ಮಾತ್ರವೇ ಹೊಂದಿದೆ. ಇದರ ಇತಿಹಾಸದ ಬಗ್ಗೆ ಹತ್ತಿರದಿಂದ ತಿಳಿಯಲು ಹುರುಪುಳ್ಳವರಾಗಿದ್ದಲ್ಲಿ ಇಲ್ಲಿಗೆ ಪ್ರಯಾಣ ಬೆಳೆಸಿ.


PC- Tonandada

5) ಪುಷ್ಪಗಿರಿ ವಿಶ್ವವಿದ್ಯಾಲಯ (ಒಡಿಶಾ)

5) ಪುಷ್ಪಗಿರಿ ವಿಶ್ವವಿದ್ಯಾಲಯ (ಒಡಿಶಾ)

ದೂರ- ಒಡಿಶಾಗೆ ಜೈಪುರದಿಂದ 1.5 ಗಂಟೆಗಳ ಪ್ರಯಾಣ

ಪುರಾತನ ಭಾರತದ ಮತ್ತೊಂದು ಪ್ರಮುಖ ಕಲಿಕೆಯ ಕೇಂದ್ರವಾವಾಗಿದ್ದ ಪುಷ್ಪಗಿರಿಯನ್ನು 3 ನೆಯ ಶತಮಾನದಲ್ಲಿ ಸ್ಥಾಪಿಸಲಾಯಿತು ಮತ್ತು 12 ನೆಯ ಶತಮಾನದ ಅಂತ್ಯದವರೆಗೂ ಅಭಿವೃದ್ಧಿ ಪಡಿಸಲಾಯಿತು. ಈ ವಿಶ್ವವಿದ್ಯಾಲಯವು ಲಗುಂಡಿ ಬೆಟ್ಟದ ಮೇಲಿದ್ದು ಈ ವಿಶ್ವವಿದ್ಯಾಲಯವೂ ಕೂಡಾ ಅನೇಕ ಶಿಕ್ಷರರು ಮತ್ತು ಅವರ ಶಿಷರುಗಳಿಗೆ ನೆಲೆಯಾಗಿತ್ತು. ಇಲ್ಲಿ ಆಯುರ್ವೇದ ಮತ್ತು ಔಷಧಗಳ ಕ್ಷೇತ್ರದ ಸಂಶೋಧನೆಗಳಿಗೆ ಹೆಚ್ಚಿನ ಪ್ರ್ಯಾಮುಖ್ಯತೆ ಕೊಡಲಾಗುತ್ತಿತ್ತು.

ಇತ್ತೀಚಿನ ಸಂಶೋಧನೆಯ ಪ್ರಕಾರ ಅಶೋಕ ಮಹಾರಾಜನು ಈ ಕಲಿಕಾ ಕೇಂದ್ರವನ್ನು ನಿರ್ಮಿಸಿದನು ಎಂದು ಹೇಳಲಾಗುತ್ತದೆ. ಚೀನೀ ಪ್ರವಾಸಿ ಕ್ಸುವಾನ್ಜಾಂಗ್ ನ ಬರಹಗಳಲ್ಲಿ ಪುಷ್ಪಗಿರಿಯ ಹಲವಾರು ಉಲ್ಲೇಖಗಳು ಕಂಡುಬರುತ್ತವೆ.ಇಂದು ಇಲ್ಲಿರುವ ಅವಶೇಷಗಳ ಜೊತೆಗೆ ಪ್ರಮುಖ ಕಲಿಕಾ ಕೇಂದ್ರಗಳು ಮತ್ತು ಬೌದ್ದ ಮಠಗಳನ್ನು ಮಾತ್ರ ಪುಷ್ಪಗಿರಿಯಲ್ಲಿ ಕಾಣಬಹುದಾಗಿದೆ.

ಇವುಗಳು ಮತ್ತೆ ಮತ್ತೆ ಜೀವನಕ್ಕೆ ಮರಳಲು ಸಾಧ್ಯವಿಲ್ಲದ .ಪ್ರಾಚೀನ ಭಾರತದ ಪ್ರಮುಖ ವಿಶ್ವ ವಿದ್ಯಾನಿಲಯಗಳಾಗಿವೆ, ದುರದೃಷ್ಟವಶಾತ್, ಇವುಗಳ ಅವಶೇಷಗಳನ್ನು ಮಾತ್ರ ಇಂದು ಕಾಣಬಹುದು.ಆದರೂ ಈ ಅವಶೇಷಗಳು ತಮ್ಮ ಮುಂದುವರಿಸಲಾಗದ ಯಶಸ್ವೀ ಪ್ರಯಾಣದ ಜೊತೆಗೆ ತಮ್ಮ ಸ್ಥಗಿತಗೊಂಡು ಹತಾಶೆಗೊಳಗಾದ ಕಥೆಯನ್ನು ಸಾರುತ್ತವೆ.

ಈ ಇತಿಹಾಸಕ್ಕೆ ಆಳಕ್ಕೆ ಧುಮಿಕಿದ ಬುದ್ದಿವಂತಿಕೆಯ ಲೋಕದ ಕಡೆಗೆ ಒಂದು ನೋಟ ಹರಿಸೋಣ

PC- Ashishkumarnayak

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more