Search
  • Follow NativePlanet
Share
» »ಮೈಸೂರಿನ ಈ ಐದು ಸರೋವರಗಳಿಗೆ ಭೇಟಿ ನೀಡಿದ್ದೀರಾ?

ಮೈಸೂರಿನ ಈ ಐದು ಸರೋವರಗಳಿಗೆ ಭೇಟಿ ನೀಡಿದ್ದೀರಾ?

By Manjula Balaraj Tantry

ಮೈಸೂರಿನ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಮೈಸೂರು ಅನೇಕ ಸರೋವರ ಮತ್ತು ಕೊಳಗಳಂತಹ ನೈಸರ್ಗಿಕ ಸೌಂದರ್ಯತೆಗಳ ನೆಲೆಯಾಗಿದೆ ಅಲ್ಲದೆ ಪ್ರಾಚೀನ ಭಾರತದ ಅನೇಕ ವಾಸ್ತುಶಿಲ್ಪ ಅದ್ಬುತಗಳನ್ನು ಇಲ್ಲಿ ಕಾಣಬಹುದಾಗಿದೆ. ಅದಕ್ಕಾಗಿಯೇ ಪ್ರವಾಸಿಗರು ಇಲ್ಲಿಗೆ ಇದರ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಬಂದರೂ ಕೂಡಾ ಮೈಸೂರಿನಲ್ಲಿ ಅನೇಕ ನೈಸರ್ಗಿಕ ತಾಣಗಳಿವೆ ಎಂಬುದನ್ನೂ ಕೂಡಾ ಅಲ್ಲಗಳೆಯುವಂತಿಲ್ಲ.

ನೀವೇನಾದರೂ ಮೈಸೂರಿನ ಆಸು ಆಸು ಅಥವಾ ಮೈಸೂರಿನಲ್ಲಿದ್ದಲ್ಲಿ ಇಲ್ಲಿಯ ಕೆಲವು ಸರೋವರಗಳಿಗೆ ಭೇಟಿ ಕೊಡಲು ಮರೆಯದಿರಿ . ಈ ಸರೋವರಗಳು ಹಚ್ಚ ಹಸಿರಿನಿಂದ ಕೂಡಿದ್ದು ನೈಸರ್ಗಿಕವಾದ ವಾತಾವರಣವನ್ನು ಒದಗಿಸಿ ನಗರಕ್ಕೆ ಹೃದಯದಂತೆ ಇವೆ. ಮೈಸೂರಿನ ಈ ಅಗ್ರಮಾನ್ಯ ಸರೋವರಗಳ ಬಗ್ಗೆ ಓದಿ.

ಕಾರಂಜಿ ಸರೋವರ

ಕಾರಂಜಿ ಸರೋವರ

PC- Nagesh Kamath

ಕಾರಂಜಿ ಸರೋವರವು ಹೆಚ್ಚು ಪ್ರಸಿದ್ದವಾದುದಾಗಿದೆ ಮತ್ತು ನಿರಂತರವಾಗಿ ಭೇಟಿಕೊಡಲ್ಪಡುವ ಮೈಸೂರಿನ ಸರೋವರ ಎನಿಸಿದೆ ಇದು ಪ್ರತೀ ದಿನ ನೂರಾರು ಸಂದರ್ಶಕರಿಂದ ಭೇಟಿ ಕೊಡಲ್ಪಡುತ್ತದೆ. ಭಾರತದ ಅತೀ ದೊಡ್ಡ ಪಂಜರಗಳಿಂದ ಹಿಡಿದು ಚಿಟ್ಟೆ ಉದ್ಯಾನವನಗಳು ಮತ್ತು ಸುಂದರವಾದ ತೋಟಗಳಿಂದ ಹಿಡಿದು ಬಿದಿರು ಕಾಡುಗಳವರೆಗೆ ಎಲ್ಲವೂ ಕಾರಂಜಿ ಸರೋವರದ ಗಡಿಗಳ ಒಳಗೆ ಇದ್ದು ಇದರಿಂದಾಗಿ ಮೈಸೂರಿನಲ್ಲಿ ಭೇಟಿ ಕೊಡಲೇ ಬೇಕೆನಿಸುವ ಸ್ಥಳವೆನಿಸಿದೆ. ಇದರ ಜೊತೆಗೆ ಪ್ರಾದೇಶಿಕ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಗೆ ನೀವು ಭೇಟಿ ನೀಡಬಹುದು. ಇದು ಸುಮಾರು 90 ಎಕರೆಗಳಷ್ಟು ಪ್ರದೇಶದಲ್ಲಿ ಹರಡಿದ್ದು, ಸರೋವರದ ಮೇಲ್ಮೈ ಯು ಸುಮಾರು 35 ಎಕರೆಗಳಷ್ಟು ಜಾಗದಲ್ಲಿ ಹರಡಿದೆ.ನೀವೇನಾದರೂ ಮೈಸೂರಿನ ನೈಸರ್ಗಿಕ ಸೌಂದರ್ಯವನ್ನು ಅನ್ವೇಷಿಸಲು ಯೋಜಿಸಿದ್ದಲ್ಲಿ ಕಾರಂಜಿ ಸರೋವರದಿಂದಲೇ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಬೇಕು. ಇಲ್ಲಿ ಕಾಣ ಸಿಗುವ ಪ್ರಮುಖ ಪಕ್ಷಿಗಳೆಂದರೆ ಎಗ್ರೆಟ್, ಪೆಲಿಕಾನ್ಸ್, ಕಾರ್ಮೊರಂಟ್ ಮತ್ತು ಬಣ್ಣದ ಕೊಕ್ಕರೆ ಇತ್ಯಾದಿಗಳು

ಕುಕ್ಕರಹಳ್ಳಿ ಸರೋವರ

ಕುಕ್ಕರಹಳ್ಳಿ ಸರೋವರ

PC- Pratheep P S

ಮೈಸೂರಿನ ಇನ್ನೊಂದು ಸೌಂದರ್ಯವೆನಿಸಿರುವ ಕುಕ್ಕರಹಳ್ಳಿ ಸರೋವರವು ನಗರದ ಹೃದಯ ಭಾಗದಲ್ಲಿದೆ ಮತ್ತು ಪ್ರತೀ ವರ್ಷ ಸಾವಿರಾರು ಜನ ಪ್ರವಾಸಿಗರಿಂದ ಭೇಟಿ ಕೊಡಲ್ಪಡುತ್ತದೆ. 150 ಎಕರೆ ಪ್ರದೇಶಗಳಲ್ಲಿ ಹರಡಿರುವ ಕುಕ್ಕರಹಳ್ಳಿ ಸರೋವರವು ಇಲ್ಲಿಯ ಸ್ಥಳೀಯರಿಗೆ ಸಾಯಂಕಾಲದ ಸಮಯದಲ್ಲಿ ಅಡ್ಡಾಡಲು ಒಂದು ಸೂಕ್ತವಾದ ಸ್ಥಳವಾಗಿದ್ದು ಜನರು ತಮ್ಮ ಶ್ವಾಸಕೋಶಗಳಿಗೆ ಸ್ವಚ್ಚವಾದ ಮತ್ತು ಶುದ್ದವಾದ ಗಾಳಿಯ ಸೇವನೆಗಾಗಿ ಬರುತ್ತಾರೆ.ಇದು ಅನೇಕ ಅಳಿವಂಚಿನಲ್ಲಿರುವ ವಲಸೆ ಬಂದಿರುವ ಹಕ್ಕಿಗಳ ನೆಲೆಯಾಗಿದೆ ಅಲ್ಲದೆ ಇದು ಪಕ್ಷಿ ಪ್ರೇಮಿಗಳು ಮತ್ತು ಛಾಯಾಗ್ರಾಹಕರಿಗೆ ಸ್ವರ್ಗವೆನಿಸಿದೆ. ಇಲ್ಲಿರುವ ಪ್ರಮುಖವಾದ ಜಾತಿಯ ಪಕ್ಷಿಗಳಲ್ಲಿ ಪೆಲಿಕನ್ಸ್,ಡಾರ್ಟರ್, ನೈಟ್ ಹೆರನ್ ಮತ್ತು ಬಣ್ಣದ ಕೊಕ್ಕರೆಗಳು ಸೇರಿದ್ದು ಇವು ಇಲ್ಲಿಯ ಸೊಂಪಾದ ಹಸಿರು ಮತ್ತು ಕಳಂಕವಿಲ್ಲದ ಪರಿಸರದಲ್ಲಿ ನೋಡಬಹುದಾಗಿದೆ. ಇಲ್ಲಿಗೆ ಪಿಕ್ನಿಕ್ ಬರುವವರಿಂದ ಹಿಡಿದು ಛಾಯಾಗ್ರಾಹಕರು ಪಕ್ಷಿವೀಕ್ಷಕರವರೆಗೆ ಎಲ್ಲರೂ ಈ ಭವ್ಯವಾದ ಕುಕ್ಕರಹಳ್ಳಿ ಸರೋವರದಲ್ಲಿ ವೀಕ್ಷಿಸುವುದನ್ನು ಕಾಣಬಹುದಾಗಿದೆ.

ಲಿಂಗಾಂಬುಧಿ ಸರೋವರ

ಲಿಂಗಾಂಬುಧಿ ಸರೋವರ

PC- Eric Gropp

ಮೈಸೂರಿನ ಹೃದಯ ಭಾಗದಿಂದ ಸುಮಾರು 6 ಕಿಮೀ ದೂದರಲ್ಲಿ ಲಿಂಗಾಂಬುಧಿ ಸರೋವರವು ಇದ್ದು ಈ ಪ್ರದೇಶದ ಒಂದು ಅತ್ಯಂತ ಸುಂದರವಾದ ಸರೋವರಗಳಲ್ಲೊಂದಾಗಿದೆ. ಇದು ಮಾಲಿನ್ಯಕ್ಕೆ ಒಳಪಡದೇ ಇರುವುದರಿಂದ ಲಿಂಗಾಂಬುಧಿ ಸರೋವರದ ಒಟ್ಟು ಸೌಂದರ್ಯವು ಅದರ ಸುಸಜ್ಜಿತವಾದ ಪರಿಸರದಲ್ಲಿದೆ. ಪ್ರಕೃತಿಯ ಹಸಿರು ಹಾಸಿನಿಂದ ಸುತ್ತುವರಿಯಲ್ಪಟ್ಟ ಈ ಸರೋವರವು ಸ್ವಚ್ಚ ನೀರಿನ ಸರೋವರವಾಗಿದೆ ಮತ್ತು ಇದನ್ನು 19ನೇ ಶತಮಾನದಲ್ಲಿ ಒಡೆಯರ್ ಆಡಳಿತದ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಯಿತು ಎಂದು ನಂಬಲಾಗುತ್ತದೆ. ಇದು ಪ್ರವಾಸಿಗರಲ್ಲಿ ಮತ್ತು ಸ್ಥಳೀಯರಲ್ಲಿ ಇಲ್ಲಿಯ ಪಕ್ಷಿಗಳು ಮತ್ತು ವರ್ಣಮಯ ಚಿಟ್ಟೆಗಳಿಗಾಗಿ ಜನಪ್ರೀಯವಾಗಿದೆ. ಬೇಸಿಗೆ ಕಾಲದಲ್ಲಿ ಈ ಸರೋವರವು ಸ್ವಲ್ಪ ಭಾಗ ಒಣಗಿದರೂ ಇದು ಅನೇಕ ತಳಿಯ ಪಕ್ಷಿಗಳನ್ನು ಆಕರ್ಷಿಸಿ ಇಲ್ಲಿ ನೆಲೆಸುವಂತೆ ಮಾಡುತ್ತದೆ. ಇದು ಜೀವವೈವಿಧ್ಯಗಳ ಶ್ರೀಮಂತ ಕೇಂದ್ರವೆನಿಸಿದ್ದು ಪಕ್ಷಿ ವೀಕ್ಷಕರು, ಪ್ರಕೃತಿ ಪ್ರೇಮಿಗಳು ಮತ್ತು ಛಾಯಾಗ್ರಾಹಕರಿಗೆ ಭೇಟಿ ಕೊಡಲೇ ಬೇಕೆನಿಸುವಂತಹ ಸ್ಥಳವಾಗಿದೆ. ಆದುದರಿಂದ ಚಿಟ್ಟೆಗಳು ಮತ್ತು ಪಕ್ಷಿಗಳಿರುವ ನೆಲಕ್ಕೆ ಭೇಟಿ ಕೊಟ್ಟರೆ ಹೇಗಿರಬಹುದು?

ಬೊಗಾಧಿ ಸರೋವರ

ಬೊಗಾಧಿ ಸರೋವರ

PC- DorianeM1FLERéunion

ಕುಕ್ಕಾರಹಳ್ಳಿ ಸರೋವರದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಬೋಗಾಧಿ ಸರೋವರವು ಇನ್ನೊಂದು ಪ್ರವಾಸಿ ಕೇಂದ್ರವಾಗಿದೆ. ಇದು ಇನ್ನೂ ಅನ್ವೇಷಣೆಗೊಳಗಾಗಬೇಕಿದೆ. ಇದು ಸ್ಥಳೀಯರು ಮತ್ತು ಕೆಲವು ಪ್ರವಾಸಿಗರಿಂದ ಮಾತ್ರ ಭೇಟಿ ಕೊಡಲ್ಪಡುತ್ತಿದ್ದು ಈ ಸರೋವರದ ನಿಜವಾದ ಸೌಂದರ್ಯತೆಯು ಇನ್ನೂ ಬೆಳಕಿಗೆ ಬರಬೇಕಿದೆ. ನೀವು ಪ್ರಕೃತಿ ಪ್ರೇಮಿಗಳಾಗಿದ್ದು, ಬೆಳಕಿಗೆ ಬರದ ಕೆಲವು ಸೌಂದರ್ಯತೆಗಳನ್ನು ನೋಡಬೇಕೆಂದಿದ್ದರೆ ಬೋಗಾಧಿ ಸರೋವರವು ನಿಮ್ಮ ಮುಂದಿನ ಸ್ಥಳವಾಗಿರಬೇಕು. ಈ ಸರೋವರದ ನಿರ್ವಹಣೆಯು ಅಷ್ಟೊಂದು ಸರಿಯಿಲ್ಲವಾದ ಕಾರಣ ಇಲ್ಲಿ ಕೆಲವೇ ಕೆಲವು ಸ್ಥಳಿಯರನ್ನು ಇಲ್ಲಿಯ ಪ್ರಕೃತಿಯಲ್ಲಿ ವಿಹರಿಸುವುದನ್ನು ಕಾಣಬಹುದಾಗಿದೆ. ಅಲ್ಲದೆ ಈ ಸರೋವರದ ಸುತ್ತ ಕೆಲವು ಸುಂದರವಾದ ಪಕ್ಷಿಗಳು ಗೂಡು ಕಟ್ಟಿರುವುದನ್ನು ಕಾಣಬಹುದಾಗಿದೆ.

ಹೆಬ್ಬಾಳ ಸರೋವರ

ಹೆಬ್ಬಾಳ ಸರೋವರ

PC- innacoz

ಒಂದು ಕಾಲದಲ್ಲಿ ಪ್ರಮುಖ ನೀರಿನ ಅಗತ್ಯಗಳನ್ನು ಪೂರೈಸುತ್ತಿದ್ದ ಮೈಸೂರಿನ ಹೆಬ್ಬಾಳ್ ಸರೋವರವು ಕ್ರಮೇಣವಾಗಿ ಸರಿಯಾದ ನಿರ್ವಹಣೆ ಇಲ್ಲದೆ ಅದರ ಸೌಂದರ್ಯವನ್ನು ಕಳೆದುಕೊಂಡಿರುವುದಕ್ಕೆ ಇನ್ನೊಂದು ಸಾಕ್ಷಿಯಾಗಿದೆ. ಕಾಲದ ಬದಲಾವಣೆಯಿಂದ ಬಳಲುತ್ತಿದ್ದರೂ ಹೆಬ್ಬಾಳ್ ಸರೋವರವು ಅನೇಕ ಸ್ಥಳೀಯರು ಮತ್ತು ಗುಪ್ತ ಸೌಂದರ್ಯತೆಯನ್ನು ಅನ್ವೇಷಿಸುವ ಉತ್ಸಾಹಿಗಳನ್ನು ಆಕರ್ಷಿಸುತ್ತದೆ. ಅನೇಕ ಮರಗಳು, ಪೊದೆಗಳು ಮತ್ತು ಹುಲ್ಲುಗಾವಲು ನೆಲಗಳಿಂದ ಸುತ್ತುವರಿಯಲ್ಪಟ್ಟ ಈ ಸರೋವರವು ಅದರ ಸಂದರ್ಶಕರಿಗೆ ಒಂದು ಶಾಂತಿಯುತವಾದ ಮತ್ತು ಪ್ರಶಾಂತವಾದ ವಾತಾವರಣವನ್ನು ಕಲ್ಪಿಸಿಕೊಡುತ್ತದೆ. ಆದುದರಿಂದ ಮೈಸೂರಿಗೆ ಭೇಟಿ ಕೊಟ್ಟು ಈ ಗುಪ್ತ ಮತ್ತು ಜನಪ್ರೀಯವಾದ ಸರೋವರಗಳ ಅನ್ವೇಷಣೆ ಮಾಡಿದರೆ ಹೇಗಿರಬಹುದು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X