• Follow NativePlanet
Share
» »ಭಾರತದ ಗತಕಾಲದ ಬಗ್ಗೆ ಅನ್ವೇಷಿಸಲು ಮೊಘಲ್ ಸಾಮ್ರಾಜ್ಯದ ಈ ರಾಜಧಾನಿಗೆ ಭೇಟಿ ನೀಡಿ

ಭಾರತದ ಗತಕಾಲದ ಬಗ್ಗೆ ಅನ್ವೇಷಿಸಲು ಮೊಘಲ್ ಸಾಮ್ರಾಜ್ಯದ ಈ ರಾಜಧಾನಿಗೆ ಭೇಟಿ ನೀಡಿ

Posted By: Manjula Balaraj Tantry

ಶತಮಾನಗಳಿಂದಲೂ ಭಾರತ ಹೇಗೆ ಪ್ರಗತಿ ಸಾಧಿಸುತ್ತಿದೆ ಎಂಬುದನ್ನು ಎಂದಾದರೂ ಯೋಚಿಸಿರುವಿರಾ? ಭಾರತವು ಪ್ರಾರಂಭದಿಂದಲೂ ಅದರ ಅಭಿವೃದ್ದಿ ಮತ್ತು ಸಮೃದ್ದಿಯಲ್ಲಿ ಏರುಪೇರುಗಳನ್ನು ಕಂಡುಕೊಳ್ಳುತ್ತಾ ಬಂದಿದೆ ಮತ್ತು ಅಭ್ಯುದಯ ಕಂಡುಕೊಳ್ಳುತ್ತಿದೆ.

ಶಿಲಾಯುಗದಿಂದ ಇಂದಿನ ಸ್ವತಂತ್ರ ಭಾರತದವರೆಗೆ, ಬೇರೆ ಬೇರೆ ಆಡಳಿತಗಾರರ ಕಾಲದಲ್ಲಿಯೂ ಅವರ ಇಚ್ಚೆಗೆ ಅನುಗುಣವಾಗಿ ಭಾರತದ ಗಡಿಗಳಲ್ಲಿ ಬದಲಾವಣೆಯಾಗುತ್ತಾ ಬಂದಿದೆ.ಭಾರತವನ್ನಾಳಿದ ಪ್ರಮುಖ ಸಾಮ್ರಾಜ್ಯಗಳ ಪೈಕಿ ಮೊಘಲ್ ಸಾಮ್ರಾಜ್ಯವೂ ಒಂದಾಗಿದ್ದು ಇಲ್ಲೂ ಅಭಿವೃದ್ದಿ ಮತ್ತು ವಿಸ್ತರಣೆಯು ಬದಲಾಗುತ್ತಾ ಬಂತು.

1526 ರ ಪಾಣಿಪತ್ ಕದನದಲ್ಲಿ ಇಬ್ರಾಹಿಂ ಲೂದಿಯವರನ್ನು ಸೋಲಿಸಿದ ನಂತರ ಬಾಬರ್ ನಿಂದ ಮೊಘಲ್ ಸಾಮ್ರ್ಯಾಜ್ಯವು ಸ್ಥಾಪಿಸಲಾಯಿತು ಮತ್ತು ಸುಮಾರು 300 ವರ್ಷಗಳ ಕಾಲ ಅಂದರೆ ಬ್ರಿಟಿಷ್ ಸಾಮ್ರಾಜ್ಯದ ಇದರ ಆಳ್ವಿಕೆಯನ್ನು ಕೊನೆಗೊಳಿಸಿ ತಮ್ಮ ಆಳ್ವಿಕೆ ಪ್ರಾರಂಭಿಸುವವರೆಗೂ ಮೊಘಲ್ ಸಾಮ್ರಾಜ್ಯವು ಅಸ್ತಿತ್ವದಲ್ಲಿತ್ತು. ಮೊಘಲ್ ಸಾಮ್ರಾಜ್ಯದ ರಾಜಧಾನಿಗಳಿಗೆ ಭೇಟಿ ನೀಡಿ ಅವರ ಆಳ್ವಿಕೆಯಲ್ಲಿ ಭಾರತದ ವಿಕಾಸದ ಬಗ್ಗೆ ತಿಳಿದುಕೊಳ್ಳುವುದು ಹೇಗಿರಬಹುದು?

ನೀವು ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ಮಾಡಲು ಬಯಸುತ್ತಿದ್ದಲ್ಲಿ, ನೀವು ಸರಿಯಾದ ಲೇಖನವನ್ನು ಓದುತ್ತಿರುವಿರಿ.ಈ ಸ್ಥಳಗಳ ಬಗ್ಗೆ ತಿಳಿದುಕೊಳ್ಳಲು ಇನ್ನಷ್ಟು ಓದಿ.

1) ಆಗ್ರಾ

1) ಆಗ್ರಾ

ಆಗ್ರಾವು ಜಗತ್ತಿನ ಏಳು ಅದ್ಬುತಗಳಲ್ಲಿ ಒಂದಾದ ತಾಜ್ ಮಹಲ್ ಇರುವ ಸ್ಥಳವಾಗಿದ್ದು, ಮೊಘಲ್ ಆಳ್ವಿಕೆಯ ಸಮಯದಲ್ಲಿ ಆಗ್ರಾ ಯಾವಾಗಲೂ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿತ್ತು ಯಮುನಾ ನದಿ ದಂಡೆಯಲ್ಲಿರುವ ಆಗ್ರಾವು ಬಾಬರನು ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದ ನಂತರದ ಮೊಘಲರ ಮೊದಲ ರಾಜಧಾನಿಯಾಗಿತ್ತು.

ಸಾಮ್ಯಾಜ್ಯದ ಅತ್ಯಂತ ಹೆಸರುವಾಸಿಯಾದ ಚಕ್ರಾಧಿಪತಿ ಅಕ್ಬರನ ಆಳ್ವಿಕೆಯ ನೆನಪಿಗಾಗಿ ಈ ಸ್ಥಳವನ್ನು ಅಕ್ಬರಾಬಾದ್ ಎಂದೂ ಕರೆಯಲಾಗುತ್ತದೆ. ಆಗ್ರಾವು ತನ್ನಲ್ಲಿ ಅನೇಕ ದಂತಕಥೆಗಳನ್ನು ಹುದುಗಿಸಿಕೊಂಡಿವೆ ಅವು ಇಲ್ಲಿಯ ಮೊಘಲರ ಕಾಲದ ಕಟ್ಟಡಗಳಲ್ಲಿ ಕಾಣಬಹುದಾಗಿದೆ. ಹಾಗಾಗಿ, ಭಾರತದ ಇತಿಹಾಸದ ನಿಜವಾದ ಬೇರುಗಳನ್ನು ಆಗ್ರಾ ಹೊಂದಿದೆಯೆಂದರೆ ತಪ್ಪಾಗಲಾರದು.

ಭಾರತ ಹಾಗೂ ಮೊಘಲರ ಹಿಂದಿನ ಮಹತ್ತರವಾದ ಇತಿಹಾಸವನ್ನು ಅನ್ವೇಷಿಸುವುದು ಮತ್ತು ಮೊಘಲರ ಈ ರಾಜಧಾನಿಯ ಬಗ್ಗೆ ತಿಳಿದರೆ ಹೇಗಿರಬಹುದು? ಪ್ರವಾಸಿಗರಿಗೆ ಆಗ್ರಾದಲ್ಲಿ ನೋಡಬಹುದಾದ ಪ್ರಮುಖ ಸ್ಥಳಗಳೆಂದರೆ ತಾಜ್ ಮಹಲ್, ಕೆಂಪುಕೋಟೆ, ಅಕ್ಬರನ ಗೋರಿ, ದಿವಾನ್-ಎ- ಖಾಸ್ ಇತ್ಯಾದಿ.

2) ಫತೇಪುರ್ ಸಿಕ್ರಿ

2) ಫತೇಪುರ್ ಸಿಕ್ರಿ

ಭಾರತದ ಆಗ್ರಾ ಜಿಲ್ಲೆಯಲ್ಲಿ ಒಂದು ಸುಂದರವಾದ ವಾಸ್ತುಶಿಲ್ಪ ಮತ್ತು ವಿಜಯದ ಸಂಕೇತವಾದ ಫತೇಪುರ್ ಸಿಕ್ರಿ ಎಂಬ ಪ್ರಸಿದ್ಧ ಪಟ್ಟಣವು ನೆಲೆಸಿದೆ 1571 ರಿಂದ 1585, ರವರೆಗೆ ಮೊಘಲರ ಚಕ್ರವರ್ತಿ ಅಕ್ಬರನ ಆಳ್ವಿಕೆಯಲ್ಲಿ ಫತೇಪುರ್ ಸಿಕ್ರಿ ಮೊಘಲರ ರಾಜಧಾನಿಯಾಗಿ ಕಾರ್ಯನಿರ್ವಹಿಸಿತ್ತು. ಗುಜರಾತ್ ನಲ್ಲಿ ಅಕ್ಬರನ ಯಶಸ್ವಿ ಅಭಿಯಾನದ ನಂತರ ಮತ್ತು ಅವರ ಮೊದಲ ಮಗ ಜಹಾಂಗೀರ್ ಹುಟ್ಟಿದ ನಂತರ ಈ ನಗರವನ್ನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.

ಇಂದು ಈ ನಗರವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲೊಂದಾಗಿದ್ದು ಹೆಚ್ಚಿನ ಪ್ರವಾಸಿಗರು ಭೇಟಿಕೊಡುವ ಸ್ಥಳಗಳಲ್ಲೊಂದಾಗಿದೆ. ಪ್ರವಾಸಿಗರು ಈ ಭವ್ಯವಾದ ಸ್ಥಳವನ್ನು ಭೇಟಿ ಮಾಡಿ ಇಲ್ಲಿನ ವಾಸ್ತುಶಿಲ್ಪ ಮತ್ತು ಐತಿಹಾಸಿಕ ಸೌಂದರ್ಯತೆಯನ್ನು ಪ್ರಶಂಸಿಸದೆ ಇರಲು ಸಾಧ್ಯವಿಲ್ಲ. ಇಲ್ಲಿಯ ಪ್ರಮುಖ ಆಕರ್ಷಕ ಪ್ರವಾಸಿ ಸ್ಥಳಗಳಲ್ಲಿ ಬುಲಂದ್ ದರ್ವಾಜಾ, ಪಂಚ ಮಹಲ್, ಜಾಮಾ ಮಸೀದಿ ಇತ್ಯಾದಿಗಳು ಸೇರಿವೆ.

3) ಷಹಜಹಾನಾಬಾದ್

3) ಷಹಜಹಾನಾಬಾದ್

PC- Tim Moffatt

1638ರಲ್ಲಿ ಸ್ಥಾಪಿಸಲಾದ ಷಹಜಹಾನಾಬಾದ್ ಮೊಘಲ್ ಚಕ್ರವರ್ತಿ ಶಹಜಹಾನನ ಆಳ್ವಿಕೆಯ ಸಮಹದಲ್ಲಿ ಇದು ಮೊಘಲ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಸ್ಥಳವು ಮೊಘಲರ ಅವನತಿ ಹಾಗೂ1857,ರಲ್ಲಿ ಬ್ರಿಟಿಷರು ಈ ರಾಜಧಾನಿಯನ್ನು ಸಂಪೂರ್ಣವಾಗಿ ವಶಪಡಿಸಿಕೊಂಡು ದೇಶದಲ್ಲಿ ಬಿಟೀಷರ ಆಳ್ವಿಕೆ ಪ್ರಾರಂಭವಾಗುವವರೆಗೂ ಮೊಘಲ ಸಾಮ್ರಾಜ್ಯದ ರಾಜಧಾನಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಇಂದು ಶಹಜಹಾನಾಬಾದ್ ಹಳೆ ದೆಹಲಿಯ ಒಂದು ಭಾಗವಾಗಿದೆ ಮತ್ತು ಮೊಘಲರ ಕಾಲಕ್ಕೆ ಸಂಬಂಧಿಸಿದ ಅನೇಕ ಐತಿಹಾಸಿಕ ಕಟ್ಟಡಗಳನ್ನು ಹೊಂದಿದೆ.

ನೀವು ಮೊಘಲರ ಸಾಮ್ರಾಜ್ಯದ ನಂತರದ ದಿನಗಳನ್ನು ನೋಡಿದರೆ ಅಂದರೆ ಈ ಸಾಮ್ರಾಜ್ಯದ ದುರ್ಬಲ ಚಕ್ರವರ್ತಿಗಳ ಕಡೆಗೆ ಗಮನ ಹರಿಸಿದರೆ ಶಹಜಹಾನಾಬಾದ್ ನಿಮಗೆ ಅಂತಿಮ ಸ್ಥಳವಾಗಿರುವುದು ಜಾಮಾ ಮಸೀದಿಯಿಂದ ಕೆಂಪು ಕೋಟೆಯವರೆಗೆ ಮತ್ತು ಝೀನತ್ ಮಹಲ್ ನಿಂದ ಚಾಂದನಿ ಚೌಕ್ ತನಕ , ಷಹಜಹಾನಾಬಾದ್ ನಲ್ಲಿ ಪ್ರವಾಸಿಗರು ಸಾಕಷ್ಟು ಅನ್ವೇಷಣೆ ಮಾಡಬಹುದಾದ ವಿಷಯಗಳನ್ನು ತನ್ನಲ್ಲಿ ಹೊಂದಿದೆ.

4) ಲಾಹೋರ್ (ಪ್ರಸ್ತುತ ಪಾಕಿಸ್ತಾನ)

4) ಲಾಹೋರ್ (ಪ್ರಸ್ತುತ ಪಾಕಿಸ್ತಾನ)

ಅಕ್ಬರನ ಆಳ್ವಿಕೆಯ ಅವಧಿಯಲ್ಲಿ ಲಾಹೋರ್ ಮೊಘಲ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಅಕ್ಬರನು ಇದ್ದುಕೊಂಡು ಅನೇಕ ಹಾಳುಗೆಡವಲಾದ ಸ್ಮಾರಕಗಳನ್ನು ಪುನ: ಕಟ್ಟಿಸಲು ಪ್ರಾರಂಭ ಮಾಡಿದನು ಮತ್ತು ಅದರ ಸುರಕ್ಷತೆ ಮತ್ತು ಪ್ರಗತಿಗಾಗಿ ಅಲ್ಲಿಯೇ ಇದ್ದರು.

1584 ರಲ್ಲಿ ಪ್ರಾರಂಭವಾದ ಲಾಹೋರ್ 1598 ರವರೆಗೆ ಮೊಘಲ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ನಂತರ ಇದು ಅಕ್ಬರನ ಮೊಮ್ಮಗ ಷಹಜಹಾನ್ ಆಳ್ವಿಕೆಯಲ್ಲಿ ಈ ರಾಜಧಾನಿಯನ್ನು ಷಹಜಹಾನಾಬಾದ್ ಗೆ ಸ್ಥಳಾಂತರಿಸಲಾಯಿತು.

ಇಂದು ಇದು ಪ್ರಪ್ರಂಚದ ಆಲ್ಫಾ ನಗರಗಳಲ್ಲೊಂದಾಗಿದೆ ಮತ್ತು ಇದನ್ನು ರಾಜಕೀಯ ಮತ್ತು ಐತಿಹಾಸಿಕ ಮಹತ್ವದಿಂದ ಪಾಕಿಸ್ತಾನದ ಪ್ರಮುಖ ನಗರವೆಂದು ಪರಿಗಣಿಸಲಾಗಿದೆ. ಲಾಹೋರಿನಲ್ಲಿ ಅಗ್ರ ಪ್ರವಾಸಿ ಆಕರ್ಷಣೆಗಳಲ್ಲಿ ಲಾಹೋರ್ ಕೋಟೆ, ವಾಜೀರ್ ಖಾನರ ಮಸೀದಿ, ಜಹಾಂಗೀರನ ಗೋರಿ,ಶಾಹಿ ಹಮ್ಮಮ್,ಇತ್ಯಾದಿ ಸೇರಿವೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ