• Follow NativePlanet
Share
» »ಭಾರತದ ಈ ಭವ್ಯವಾದ ಪುರಾತತ್ವ ಅದ್ಭುತಗಳನ್ನು ಭೇಟಿ ಮಾಡಿ

ಭಾರತದ ಈ ಭವ್ಯವಾದ ಪುರಾತತ್ವ ಅದ್ಭುತಗಳನ್ನು ಭೇಟಿ ಮಾಡಿ

Posted By: Manjula Balaraj Tantry

ಸಿಂಧೂ ಕಣಿವೆ ನಾಗರಿಕತೆ ಮತ್ತು ಹಲವಾರು ಇತರ ಪ್ರಗತಿಗಳ ಆಗಮನದಿಂದ ಭಾರತ ಯಾವಾಗಲೂ ಒಂದು ರಾಜಕೀಯ ಮತ್ತು ವಿಶ್ವದ ಪ್ರಮುಖ ರಾಜಕೀಯ ಮತ್ತು ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿದೆ. ದೇಶಾದ್ಯಂತ ಹರಡಿರುವ ಸಾವಿರಾರು ಪುರಾತತ್ತ್ವ ಶಾಸ್ತ್ರದ ಸ್ಥಳಗಳು ಭಾರತದ ಕಾಲದ ಸಮೃದ್ಧತೆ ಮತ್ತು ಅಭಿವೃದ್ಧಿಯನ್ನು ಸಾಬೀತುಪಡಿಸುತ್ತವೆ.

ಹಲವಾರು ಸಾಮ್ಯಾಜ್ಯಗಳು ಮತ್ತು ರಾಜವಂಶಗಳಿಂದ ಭಾರತದಲ್ಲಿ ಅಸಂಖ್ಯಾತ ಪುರಾತತ್ತ್ವ ಶಾಸ್ತ್ರ ಗಳನ್ನೊಳಗೊಂಡ ತಾಣಗಳು ಕೊಡುಗೆಯಾಗಿ ನೀಡಲ್ಪಟ್ಟಿವೆ. ಇಂದು ಈ ಐತಿಹಾಸಿಕ ದೇಶವು ಅನೇಕ ಪುರಾತತ್ವ ಶಾಸ್ತ್ರ ಕ್ಕೆ ಸಂಬಂಧಿಸಿದ ಅದ್ಬುತಗಳನ್ನೊಳಗೊಂಡಿದೆ. ಆದ್ದರಿಂದ ನಾವು ಇನ್ನೂ ಮುಂದೆ ಸಾಗಿ ಈ ಪ್ರಸಿದ್ದ ಪುರಾತನ ಮಧ್ಯಯುಗದಲ್ಲಿ ನಿರ್ಮಿಸಲಾದ ಭಾರತದ ಭವ್ಯ ಸ್ಮಾರಕಗಳ ಬಗ್ಗೆ ತಿಳಿಯೋಣ

1) ಜೈಸಲ್ಮೇರ್ ಕೋಟೆ (ರಾಜಸ್ಥಾನ)

1) ಜೈಸಲ್ಮೇರ್ ಕೋಟೆ (ರಾಜಸ್ಥಾನ)

PC- Manoj Vasanth

12 ನೇ ಶತಮಾನದಲ್ಲಿ ರಜಪೂತ ರಾಜ ರಾವಲ್ ಜೈಸಲ್ ಅವರಿಂದ ನಿರ್ಮಿಸಲ್ಪಟ್ಟ ಜೈಸಲ್ಮೇರ್ ಕೋಟೆಯು ಒಂದು ಉತ್ತಮ ರೀತಿಯಲ್ಲಿ ಆದರ್ಶಪ್ರಾಯವಾಗಿ ಕೆತ್ತಲ್ಪಟ್ಟ ಭಾರತದ ಅತ್ತ್ಯುತ್ತಮ ಕೋಟೆಗಳಲ್ಲೊಂದಾಗಿದೆ. ತಿಕೂಟಕ ಪರ್ವತದ ಮೇಲಿರುವ ಈ ಮೇರು ವಾಸ್ತುಶಿಲ್ಪವನ್ನು ಹೊಂದಿದ ಕೋಟೆಯು ಇದರ ಐತಿಹಾಸಿಕ ಮಹತ್ವ ಮತ್ತು ಉತ್ತಮ ಕಲಾ ನೈಪುಣ್ಯತೆಯಿಂದಾಗಿ ಭಾರತದ ಪುರಾತತ್ವಶಾಸ್ತ್ರದ ಅದ್ಬುತದಲ್ಲೊಂದಾಗಿದೆ

ಹಳದಿ ಮರಳುಗಲ್ಲಿನಿಂದ ನಿರ್ಮಾಣಗೊಂಡ ಕಾರಣ ಜೈಸಲ್ಮೇರ್ ಕೋಟೆಯನ್ನು ಗೋಲ್ಡನ್ ಫೋರ್ಟ್ ಎಂದೂ ಕರೆಯಲಾಗುತ್ತದೆ.ವೈಜ್ಞಾನಿಕವಾಗಿ, ಹಳದಿ ಬಣ್ಣದ ಬಣ್ಣವು ಸೂರ್ಯೋದಯವನ್ನು ಪ್ರತಿಬಿಂಬಿಸುತ್ತದೆ, ಇದರಿಂದಾಗಿ ಈ ಕೋಟೆಯ ಗೋಡೆಗಳನ್ನು ತಂಪಾಗಿ ಮತ್ತು ಆಹ್ಲಾದಕರವಾಗಿ ಇಟ್ಟುಕೊಳ್ಳುತ್ತದೆ. ಭಾರತದಲ್ಲಿನ ಈ ಪುರಾತತ್ತ್ವ ಶಾಸ್ತ್ರದ ರತ್ನವನ್ನು ಅನ್ವೇಷಿಸುವುದು ಹಾಗೂ ಪ್ರತಿ ಇತಿಹಾಸ ಪ್ರೇಮಿಗಳ ಪಟ್ಟಿಯಲ್ಲಿ ಹಾಕಿಕೊಂಡರೆ ಹೇಗಿರುತ್ತದೆ.?

2) ನಳಂದ ವಿಶ್ವವಿದ್ಯಾಲಯ (ಬಿಹಾರ)

2) ನಳಂದ ವಿಶ್ವವಿದ್ಯಾಲಯ (ಬಿಹಾರ)

PC- juggadery

ನಳಂದ ವಿಶ್ವವಿದ್ಯಾಲಯವು ಒಂದು ಅತ್ಯಂತ ಹಳೆಯ ವಿಶ್ವ ವಿದ್ಯಾಲಯವಾಗಿದ್ದು ಇದು ಇದೊಂದು ಕಲಿಕೆಯ ಕೇಂದ್ರವಾಗಿದ್ದು ಇಲ್ಲಿ ಸಾವಿರಾರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವೈದ್ಯಕೀಯ, ಜ್ಯೋತಿಷ್ಯ, ವಿಜ್ಞಾನ,ವ್ಯಾಕರಣ ಮುಂತಾದ ವಿಷಯಗಳಲ್ಲಿ ಜ್ಞಾನವನ್ನು ಪಡೆದಿದ್ದಾರೆ. ಇದನ್ನು 5ನೇ ಶತಮಾನದಲ್ಲಿ ಶಕ್ರಾಧಿತ್ಯ ಅವರ ಆಳ್ವಿಕೆಯ ಅವಧಿಯಲ್ಲಿ ನಿರ್ಮಿಸಲಾಯಿತು. ವಿಶ್ವದ ಶಿಕ್ಷಣವನ್ನು ಪಡೆಯಲು ನಳಂದವು ಪ್ರಾಥಮಿಕ ಮೂಲವಾಗಿದೆ.

ಇದು ಹಲವಾರು ಬೃಹತ್ ಕೋಣೆಗಳು, ದೊಡ್ಡದಾದ ಗ್ರಂಥಾಲಯ ಮತ್ತು ಹಲವಾರು ಪ್ರಯೋಗಾಲಯಗಳನ್ನು ಹೊಂದಿತ್ತು, ಅಲ್ಲಿ ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದರು ಮತ್ತು ಜೀವನದ ಮೂಲಭೂತ ಅಂಶಗಳನ್ನು ಅನುಭವಿಸಿದ್ದರು. ಇದು ಸುಮಾರು 700 ವರ್ಷಗಳ ವರೆಗೆ ಅಂದರೆ ಭಕ್ತಿಯಾರ್ ಖಿಲ್ಜಿಯ ಆಕ್ರಮಣದಿಂದ ಮತ್ತು ಇದರ ವಿನಾಶ ಮಾಡುವ ತನಕ ಚೆನ್ನಾಗಿ ನಡೆಸಲ್ಪಡುತ್ತಿತ್ತು

ಇಂದು, ನೀವು ಅದರ ಹಾನಿಗೊಳಗಾದ ರಚನೆ ಮತ್ತು ಅವಶೇಷಗಳನ್ನು ಅದರ ಕಾರಿಡಾರ್ ಮೂಲಕ ನಡೆದಾಡುವಾಗ ಮಾತ್ರ ಇದರ ಇತಿಹಾಸವನ್ನು ಕಾಣಬಹುದು. ಆದರೂ, ಇದು ಇತಿಹಾಸ ಪ್ರಿಯರಿಗೆ ನೆಚ್ಚಿನ ಸ್ಥಳವಾಗಿದೆ.

3) ಖಜುರಾಹೊ ದೇವಾಲಯಗಳು (ಮಧ್ಯ ಪ್ರದೇಶ)

3) ಖಜುರಾಹೊ ದೇವಾಲಯಗಳು (ಮಧ್ಯ ಪ್ರದೇಶ)

PC- Liji Jinaraj

10 ನೇ ಶತಮಾನದಲ್ಲಿ ರಜಪೂತ ರಾಜವಂಶದ ಆಳ್ವಿಕೆಯಲ್ಲಿ ನಿರ್ಮಿಸಲಾದ ಈ ಸ್ಮಾರಕಗಳು ಮಧ್ಯಪ್ರದೇಶದ ಚತ್ತರ್ಪುರ್ ಜಿಲ್ಲೆಯಲ್ಲಿ ನೆಲೆಗೊಂಡಿದ್ದು, ಭಾರತದ ಪುರಾತತ್ತ್ವ ಶಾಸ್ತ್ರದ ಅದ್ಭುತಗಳಲ್ಲಿ ಸೇರಿಕೊಂಡಿದೆ.ಖಜುರಾಹೊ ದೇವಸ್ಥಾನಗಳು ತಮ್ಮ ಅದ್ಭುತ ವಾಸ್ತುಶಿಲ್ಪಕ್ಕಾಗಿ ಮತ್ತು ಸಂಪೂರ್ಣವಾಗಿ ಕೆತ್ತಿದ ಕಲ್ಲಿನ ಚಿತ್ರಗಳೊಂದಿಗೆ ಪ್ರವಾಸಿಗರಲ್ಲಿ ಜನಪ್ರಿಯತೆಯನ್ನು ಪಡೆದಿವೆ. ದೇವಸ್ಥಾನಗಳು ಮತ್ತು ಸ್ಮಾರಕಗಳ ಮೇಲೆ ಕಾಣುವ ಪ್ರಚೋದಿಸಲ್ಪಡುವ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ.

ಈ ಸ್ಮಾರಕಗಳು ಹಿಂದು ಮತ್ತು ಜೈನ ಧರ್ಮಗಳಿಗೆ ಅರ್ಪಿತವಾಗಿದೆ. ಆದರೂ ಈ ಭವ್ಯವಾದ ವಾಸ್ತುಶಿಲ್ಪ ಕಲೆ ಮತ್ತು ಅದರಲ್ಲಿಯ ಕಾಣಿಸುವ ಕಲೆಯ ಕೌಶಲ್ಯ ವರ್ಣಿಸಲಾಸಾಧ್ಯವಾದುದು. ಇಂದು, ಇದು ಭಾರತದ ಪುರಾತತ್ವ ಸರ್ವೇಕ್ಷಣೆಯ ಅಡಿಯಲ್ಲಿ ನಿರ್ವಹಿಸಲ್ಪಡುತ್ತದೆ ಮತ್ತು ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿ ಸಹ ಪಟ್ಟಿಮಾಡಲಾಗಿದೆ.

4) ಹಂಪಿ (ಕರ್ನಾಟಕ)

4) ಹಂಪಿ (ಕರ್ನಾಟಕ)

PC- Hardeep Asrani

ಹಂಪಿ ಕರ್ನಾಟಕದ ಇತಿಹಾಸ. ಒಮ್ಮೆ ನೀವು ಹಂಪಿ ಯ ಈ ಅವಶೇಷಗಳ ಗಡಿಗಳಲ್ಲಿ ಪ್ರವೇಶಿಸಿದರೆ, ನೀವು ಖಚಿತವಾಗಿಯೂ ಈ ರಾಜ್ಯದ ಭವ್ಯ ಇತಿಹಾಸದ ದರ್ಶನವಾಗುತ್ತದೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯನ್ನು ವಿಜಯನಗರಕ್ಕೆ ಒಮ್ಮೆ ನೆಲೆಗೊಂಡ ನಂತರ, ಹಂಪಿ ಅದರ ರಚನೆಯ ನಂತರ ಗಮನಾರ್ಹ ಪಟ್ಟಣವಾಗಿದೆ.

ಇಂದು, ಹಂಪಿಯು ತನ್ನ ಪುರಾತತ್ತ್ವ ಶಾಸ್ತ್ರದ ಸ್ಥಳಗಳಿಗೆ ಹೆಸರುವಾಸಿಯಾಗಿದೆ, ಅಲ್ಲಿ ಸಾವಿರಾರು ಪಾಳುಬಿದ್ದ ಶಿಲ್ಪಗಳು, ಕಟ್ಟಡಗಳು, ದೇವಾಲಯಗಳು ಮತ್ತು ಹಲವಾರು ಇತರ ಐತಿಹಾಸಿಕ ಸ್ಮಾರಕಗಳನ್ನು ಕಾಣಬಹುದಾಗಿದೆ. ರಥಗಳ ರೂಪದಲ್ಲಿರುವ ದೇವಾಲಯಗಳಿಂದ ಹಿಡಿದು ಸಿವಿಲ್ ಕಟ್ಟಡಗಳವರೆಗೆ ಈ ಅತಿದೊಡ್ಡ ಪುರಾತತ್ವ ಸ್ಥಳವು ಅನೇಕ ಇತಿಹಾಸಕಾರರಿಗೆ ಎರಡನೇ ನೆಲೆಯಾಗಿದೆ.

5) ಕೊನಾರ್ಕ್ ಸೂರ್ಯ ದೇವಾಲಯ (ಒಡಿಶಾ)

5) ಕೊನಾರ್ಕ್ ಸೂರ್ಯ ದೇವಾಲಯ (ಒಡಿಶಾ)

PC- sukanta maity

ಯುನೆಸ್ಕೋ ವಿಶ್ವ ಪರಂಪರೆ ತಾಣ ಮತ್ತು ನಿಸ್ಸಂದೇಹವಾಗಿ, ಭಾರತದ ಪುರಾತತ್ತ್ವ ಶಾಸ್ತ್ರದ ರತ್ನಗಳಲ್ಲಿ ಒಂದಾದ ಕೊನಾರ್ಕಿನ ಸೂರ್ಯ ದೇವಾಲಯವನ್ನು 13ನೇ ಶತಮಾನದಲ್ಲಿ ಗಂಗಾ ರಾಜವಂಶದ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಇಂದು ಇದರ ವಾಸ್ತುಶಿಲ್ಪ ಸೌಂದರ್ಯತೆ ಮತ್ತು ಮಹತ್ವದಿಂದಾಗಿ ಎಲ್ಲಾ ಇತಿಹಾಸ ಪ್ರಿಯರ ಅನ್ವೇಷಣಾ ಪಟ್ಟಿಯಲ್ಲಿ ಸೇರಿಸಿಕೊಳ್ಳ ಬೇಕಾದಂತಹ ಸ್ಥಳವಾಗಿದೆ.

ಈ ದೇವಾಲಯವು ರಥದ ರೂಪದ ರಚನೆಯಲ್ಲಿ ನಿರ್ಮಿಸಲಾಗಿದ್ದು ಸೂರ್ಯದೇವರಿಗೆ ಸಮರ್ಪಿತವಾಗಿದೆ. ಜೊತೆಗೆ, ಇದೊಂದು ರಥದ ರೂಪದಲ್ಲಿ ಅತ್ತ್ಯುತ್ತಮವಾಗಿ ನಿರ್ಮಿಸಲಾದ ಕೆಲವೇ ಕೆಲವು ದೇವಾಲಯಗಳಲ್ಲೊಂದಾಗಿದೆ. ಗೋಡೆಗಳ ಪಕ್ಕದಲ್ಲಿ ದೇವಾಲಯದ ಹೊರಭಾಗದಲ್ಲಿ ಕಾಣುವ 12 ಜೋಡಿ ಚಕ್ರಗಳನ್ನು ಇದು ಹೊಂದಿದೆ.

ಈ ದೇವಾಲಯದ ಮೂಲೆ ಮೂಲೆಗಳೂ ಕೂಡಾ ದೇವಾಲಯದ ಕಲೆಗಳ ವೈಭವವನ್ನು ಸಾರುತ್ತವೆ. ಇಂತಹ ಸೂರ್ಯದೇವಾಲಯಕ್ಕೆ ಭೇಟಿ ಕೊಟ್ಟು ಅದರ ಆಸಕ್ತಿದಾಯಕ ಕಥೆಗಳು ಮತ್ತು ವೈಶಾಲ್ಯತೆಯ ಬಗ್ಗೆ ತಿಳಿದರೆ ಹೇಗಿರುತ್ತದೆ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ