Search
  • Follow NativePlanet
Share
» »ಗುಜರಾತಿನ ಪ್ರಾಚೀನ ಬಂದರು ನಗರ ಭರೂಚ್ ಗೆ ಭೇಟಿ ನೀಡಿ

ಗುಜರಾತಿನ ಪ್ರಾಚೀನ ಬಂದರು ನಗರ ಭರೂಚ್ ಗೆ ಭೇಟಿ ನೀಡಿ

ಭಾರತವು ಅನೇಕ ಪ್ರಾಚೀನ ನಗರಗಳ ಭೂಮಿಯಾಗಿದೆ. ಗುಜರಾತಿನ ಇಂತಹ ಒಂದು ಸ್ಥಳವು 2000 ವರ್ಷಗಳ ಹಿಂದೆ ಒಂದು ಪ್ರಮುಖ ಬಂದರು ನಗರವಾಗಿದ್ದ ಭರೂಚ್ ಬಗ್ಗೆ ಓದಿ.

By Majula Balaraj

ವಾರಾಣಾಸಿ ನಂತರ, ಭರೂಚ್ ಭಾರತದ ಸುಂದರ ನಗರವಾಗಿದ್ದು, ಗುಜರಾತ್ ರಾಜ್ಯದಲ್ಲಿದೆ. ಇದು ನರ್ಮದಾ ನದಿಯ ಬದಿಯಲ್ಲಿ ಇದ್ದು 2000 ವರ್ಷಗಳ ಹಿಂದೆಯೇ ಒಂದು ಪ್ರಮುಖ ಬಂದರು ನಗರವಾಗಿ ಮಾರ್ಪಟ್ಟಿತ್ತು. ನಗರದ ವಾಸ್ತುಶಿಲ್ಪದ ಅದ್ಭುತಗಳು ಮತ್ತು ಐತಿಹಾಸಿಕ ಪ್ರಾಮುಖ್ಯತೆಗಳನ್ನು ಈಗ ಮರೆಯಲಾಗಿದ್ದರೂ ಸಹ, ಇತಿಹಾಸ ಉತ್ಸಾಹಿಗಳಿಗೆ ಭರೂಚ್ ನಗರದ ಭೇಟಿ ಉಲ್ಲಾಸಕರ ಎನಿಸುವುದರಲ್ಲಿ ಸಂಶಯವಿಲ್ಲ.

ಭರೂಚ್ ನಲ್ಲಿ ಪ್ರವಾಸೋದ್ಯಮವು ಮುಂದುವರಿದಿಲ್ಲ ಹಾಗಾಗಿ, ಭರೂಚ್ ಗೆ ಭೇಟಿ ನೀಡುವವರು ಸ್ವಂತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಈ ಪ್ರಾಚೀನ ನಗರವು ಪ್ರಯಾಣಿಕರಿಗಾಗಿ, ಹೊಸ ಅನ್ವೇಷಣೆಗಾರರಿಗೆ ಪರಿಪೂರ್ಣ ಸ್ಥಳವಾಗಿದೆ. ಇದು ಅಹಮದಾಬಾದ್ ನಿಂದ ಸುಮಾರು 190 ಕಿ.ಮೀ ದೂರದಲ್ಲಿದೆ ಮತ್ತು ಇದು ಪ್ರಸ್ತುತ ಕೈಗಾರಿಕಾ ನಗರವಾಗಿದ್ದು, ರಸಗೊಬ್ಬರ, ಹತ್ತಿ, ಬಣ್ಣ ಇತ್ಯಾದಿಗಳನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ಹೊಂದಿದೆ.

ಈ ಹೆಸರು ಈ ನಗರಕ್ಕೆ ಬಂದಿದ್ದು ಹೇಗೆ?

Bharuch

PC: Pablo Ares Gastesi

ಭರೂಚ್ ನ ಪ್ರಾಚೀನ ಹೆಸರು ಬ್ರೋಚ್ ಎಂದಾಗಿತ್ತು. ಆದರೆ ಶತಮಾನಗಳ ಹಿಂದೆ ಬರೆದ ಪುರಾತನ ರೋಮನ್ ಮತ್ತು ಗ್ರೀಕರ ಗ್ರಂಥಗಳಲ್ಲಿ ಈ ನಗರವನ್ನು ಬರ್ಯಗಾಜ ಎಂದು ಉಲ್ಲೇಖಿಸಲಾಗಿದೆ. ಪ್ರಸಿದ್ಧ ಸಂತ ಭೃಗುವು ಈ ನಗರಕ್ಕೆ ಭೇಟಿ ಮಾಡಿದ್ದರು ಎಂದು ನಂಬಲಾಗಿದೆ, ಈ ಕಾರಣಕ್ಕಾಗಿ ನಗರವು ಭೃಗು ಕಚ್ಚಾ ಎಂದು ಹೆಸರಿಸಲ್ಪಟ್ಟಿದೆ, ಇದು ಕ್ರಮೇಣವಾಗಿ ಬರುಚ್ ಎಂಬ ಹೆಸರಿನ ರೂಪದಲ್ಲಿ ವಿಕಸನಗೊಂಡಿತು.

ಭರೂಚ್ ನ ಬೀದಿಗಳತ್ತ ಒಂದು ನಡೆ

ಭರೂಚ್ ನಗರವು ಗುಪ್ತರ ರಾಜವಂಶ, ರಜಪೂತರು ಮತ್ತು ಮೊಘಲರಂತಹ ಹಲವಾರು ಶಕ್ತಿಶಾಲಿ ಸಾಮ್ರಾಜ್ಯಗಳಿಂದ ಆಳಲ್ಪಟ್ಟಿದೆ. ಅವರವರ ಆಡಳಿತದ ಸಮಯವನ್ನು ನಿರ್ಮಿಸಿದ ಕೆಲವು ವಾಸ್ತುಶೈಲಿಯ ರಚನೆಗಳ ಮೂಲಕ ಅವರ ಅಸ್ತಿತ್ವಕ್ಕೆ ಸಾಕ್ಷಿಯಾಗಿದೆ. ಉಂದೈ ದರ್ವಾಜಾ ನಗರದ 9 ಮುಖ್ಯ ದ್ವಾರಗಳು(ಗೇಟ್ವೆ) ಇದರಲ್ಲಿ ಒಂದಾಗಿದೆ, ಈಗ ಕೆಲವು ಅವಶೇಷಗಳನ್ನು ನರ್ಮದಾ ನದಿಯ ಬಳಿ ಕಾಣಬಹುದು.

Bharuch

PC: સતિષચંદ્ર

ವಾಮನಾ,ದೇವರ ದೇವಾಲಯವಿಲ್ಲಿದೆ. ಪ್ರಸಿದ್ಧ ಹಿಂದೂ ಪೌರಾಣಿಕ ಪಾತ್ರವಾದ ವಾಮನನು ಬಲಿ ಚಕ್ರವರ್ತಿಯಿಂದ ತನಗೆ ವಾಸಿಸಲು ಮೂರು ಹೆಜ್ಜೆಯಿಂದ ವಿಭಿನ್ನ ರೀತಿಯಲ್ಲಿ ಜಗತ್ತನ್ನು ತೆಗೆದುಕೊಂಡ ಸ್ಥಳ ಇದಾಗಿದೆ ಎಂದು ನಂಬಲಾಗಿದೆ.

ಸ್ವಾಮಿನಾರಾಯಣ ದೇವಾಲಯವು ಭರೂಚ್ ನಲ್ಲಿರುವ ಪ್ರಸಿದ್ಧ ಆಕರ್ಷಣೆಯಾಗಿದ್ದು, ದೇವರ ಅಂತಿಮ ಅವತಾರವೆಂದು ನಂಬಲಾದ ಸ್ವಾಮಿ ನಾರಾಯಣನಿಗೆ ಸಮರ್ಪಿಸಲಾಗಿದೆ. ಈ ಸುಂದರವಾದ ದೇವಸ್ಥಾನವು ಬೆಳಗ್ಗೆ 7.30 ರಿಂದ ಸಂಜೆ 8.15 ರವರೆಗೆ ತೆರೆದಿರುತ್ತದೆ, 12 ರಿಂದ 4 ರವರೆಗೆ ದೇವಾಲಯ ತೆರೆದಿರುವುದಿಲ್ಲ. ಹತ್ತಿರದಲ್ಲಿಯೇ ಪುಸ್ತಕಗಳು, ಪೂಜಾ ಸಾಮಗ್ರಿಗಳು ಮತ್ತು ಉಡುಗೊರೆ ವಸ್ತುಗಳುಳ್ಳ ಅಂಗಡಿಗಳ ಸಾಲುಗಳಿವೆ.

Bharuch

PC 3: Vimleshchandra

ಭರೂಚ್ ನ ಬೀದಿಗಳಲ್ಲಿ ಸಾನ್ಟರ್ ಮತ್ತು ಹಿಂದಿನ ಆಡಳಿತಗಾರರಾದ ಮತ್ತು ಗ್ರೀಕ್, ರೋಮನ್ನರಂತಹ ಇತರ ಪರಿಣಾಮಕಾರಿ ವಾಸ್ತುಶಿಲ್ಪ ಹೊಂದಿರುವ ಹಳೆಯ, ಹಳ್ಳಿಗಾಡಿನ ಕಟ್ಟಡಗಳನ್ನು ಗಮನಿಸಿ.1858 ರಲ್ಲಿ ನಿರ್ಮಿಸಲಾದ ಪ್ರಾಚೀನ ಗ್ರಂಥಾಲಯವಾದ ರಾಯಚಂದ್ ದೀಪ್ಚಂದ್ ಗ್ರಂಥಾಲಯವಿದೆ. ಇದು ನಿಮ್ಮನ್ನು ಹಳೆಯಕಾಲದ ಅಪರೂಪದ ಗುಜರಾತಿ ಹಸ್ತಪ್ರತಿಗಳು ಮತ್ತು ಲಕ್ಷಾಂತರ ಪುಸ್ತಕಗಳ ಕಡೆಗೆ ಕರೆದೊಯ್ಯುತ್ತದೆ.

ಅಂಕಲೇಶ್ವರಕ್ಕೆ ಭರೂಚ್ ಅನ್ನು ಸಂಪರ್ಕಿಸುವ ಗೋಲ್ಡನ್ ಸೇತುವೆಯು 1881 ರಲ್ಲಿ ಬ್ರಿಟಿಷರು ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಿದ ಪ್ರಾಚೀನ ಸೇತುವೆಯಾಗಿದೆ. ಕಬ್ಬಿಣದ ಸೇತುವೆಯನ್ನು ಸುಕ್ಕುಗಟ್ಟದಂತೆ ಕಾಪಾಡಲು ಚಿನ್ನದ ಬಣ್ಣವನ್ನು ಕೊಡಲಾಗಿದೆ. ಗೋಲ್ಡನ್ ಸೇತುವೆಯ ಪಕ್ಕದಲ್ಲಿಯೇ, ಮುಂಬೈ ಮತ್ತು ಅಹಮದಾಬಾದ್ ಗಳನ್ನು ಸಂಪರ್ಕಿಸಲು ನಿರ್ಮಿಸಿದ ಸಿಲ್ವರ್ ಸೇತುವೆಯನ್ನು ನೀವು ನೋಡಬಹುದು.

ದಶಾಶ್ವಮೇಧ ಘಾಟ್, ನರ್ಮದಾ ಪಾರ್ಕ್ ಮತ್ತು ಲಾಲುಭಾಯಿ ಹವೇಲಿ, ಭರೂಚ್ ನಲ್ಲಿ ಭೇಟಿ ನೀಡಬಹುದಾದ ಇತರ ಕೆಲವು ಸ್ಥಳಗಳಾಗಿವೆ.

ಭರೂಚ್ ತಲುಪುವುದು ಹೇಗೆ
ವಿಮಾನದ ಮೂಲಕ: ಬರೋಚ್ ನಿಂದ 90 ಕಿ.ಮೀ ದೂರದಲ್ಲಿರುವ ವಡೋದರಾ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಮುಂಬೈ, ಚೆನ್ನೈ, ಅಹ್ಮದಾಬಾದ್ ಮುಂತಾದ ಪ್ರಮುಖ ನಗರಗಳಿಂದ ವಿಮಾನಗಳ ಸಂಪರ್ಕವಿದೆ.

Bharuch

PC: Gulam Ahmed Dagia

ರೈಲು ಮೂಲಕ: ಭರೂಚ್ ರೈಲ್ವೆ ನಿಲ್ದಾಣವನ್ನು ಹೊಂದಿದೆ, ಶತಾಬ್ದಿ ಎಕ್ಸ್ಪ್ರೆಸ್, ಗುಜರಾತ್ ಮೇಲ್ ಮುಂತಾದ ಪ್ರಮುಖ ರೈಲುಗಳು ಇಲ್ಲಿಂದ ಹಾದುಹೋಗುತ್ತದೆ. ಈ ರೈಲುಗಳು ನಗರವನ್ನು ಮುಂಬೈ, ದೆಹಲಿ, ಮುಂತಾದ ಸ್ಥಳಗಳಿಗೆ ಸಂಪರ್ಕಿಸುತ್ತವೆ.

ರಸ್ತೆಯ ಮೂಲಕ: ನಗರವು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಮೂಲಕ ನೆರೆಹೊರೆಯ ರಾಜ್ಯಗಳ ಜೊತೆಗೆ ಹಾಗೂ ರಾಜ್ಯದ ಇತರ ಭಾಗಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಮುಂಬೈ, ಪುಣೆ, ಬೆಂಗಳೂರು ಮುಂತಾದ ನಗರಗಳಿಂದ ಭರೂಚ್ ಗೆ ರಾಜ್ಯ ಸರ್ಕಾರಿ ಬಸ್ಸುಗಳು ಸೌಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X