• Follow NativePlanet
Share
Menu
» »ವರ್ಕಳದ ದೇವಾಲಯವನ್ನು ಜನಾರ್ಧನ ಸ್ವಾಮಿಯ ವಾಸಸ್ಥಾನವೆಂದು ಕರೆಯಲಾಗುತ್ತದೆ

ವರ್ಕಳದ ದೇವಾಲಯವನ್ನು ಜನಾರ್ಧನ ಸ್ವಾಮಿಯ ವಾಸಸ್ಥಾನವೆಂದು ಕರೆಯಲಾಗುತ್ತದೆ

Posted By: majula balaraj

ವರ್ಕಳವು ಜನಾರ್ಧನಪುರಂ ಎಂದು ಕರೆಯಲ್ಪಡುವ ಒಂದು ಕಡಲತಡಿಯ ಪಟ್ಟಣವಾಗಿದ್ದು, ಇಲ್ಲಿ ಜನಾರ್ಧನ ಎಂದು ಕರೆಯಲ್ಪಡುವ ವಿಷ್ಣು ದೇವರನ್ನು ಪೂಜಿಸಲ್ಪಡುವ ಪ್ರಾಚೀನ ಕಾಲದ ಹೆಸರುವಾಸಿಯಾದ ದೇವಸ್ಥಾನವಿದೆ. ಈ ದೇವಾಲಯದ ಬಗ್ಗೆ ಶ್ರೀಮದ್ ಭಾಗವತದಲ್ಲಿಯೂ ಕೂಡ ಉಲ್ಲೇಖಿಸಲ್ಪಟ್ಟಿದೆ.

ಇದರ ಪ್ರಕಾರ ದಕ್ಷಿಣ ಭಾರತದ ಕನ್ಯಾಕುಮಾರಿಯ ಮತ್ತುಇತರ ದೇವಸ್ಥಾನಗಳ ತೀರ್ಥಯಾತ್ರೆಯ ಸಂದರ್ಭದಲ್ಲಿ ಬಲರಾಮನು ಈ ದೇವಾಲಯವನ್ನು ಭೇಟಿ ಮಾಡಿದ್ದನೆಂದು ಹೇಳಲಾಗಿದೆ. . ಈ ಸ್ಥಳವು ವರ್ಷವಿಡೀ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಅನೇಕ ಆಕರ್ಷಣೆಯನ್ನು ಹೊಂದಿದೆ.

anardhana swamy temple in varkala

PC: Offical Site

ಜನಾರ್ಧನ ಸ್ವಾಮಿ ದೇವಸ್ಥಾನವು ಸಮುದ್ರದ ಮೇಲಿರುವ ಒಂದು ಮೇಜಿನಂತಿರುವ ಭೂಭಾಗದ ಮೇಲೆ ಇರುವ ಒಂದು ಬೆಟ್ಟದ ಮೇಲೆ ಇದೆ, ಈ ದೇವಾಲಯವನ್ನು ಕೇವಲ ಮೆಟ್ಟಿಲುಗಳ ಮೂಲಕ ತಲುಪಬಹುದು. ದೇವಾಲಯದ ಮುಖ್ಯ ಪ್ರವೇಶದ್ವಾರವನ್ನು ತಲುಪಿದಾಗ, ಎರಡೂ ಕಡೆಗಳಲ್ಲಿ ಸ್ವಾಗತ ಮಾಡುವಂತಹ ಹನುಮಾನ್ ಮತ್ತು ಗರುಡ ವಿಗ್ರಹಗಳನ್ನು ನೋಡಬಹುದು , ಅದರ ನಂತರ ಜನಾರ್ಧನನ ಮೂಲ ವಿಗ್ರಹವನ್ನುಅವರ ಸಂಗಾತಿಗಳಾದ ಶ್ರೀದೇವಿ ಮತ್ತು ಭೂ ದೇವಿಯರೊಂದಿಗೆ ನಿರ್ಮಿಸಲಾಗಿದೆ.

ದೇವಾಲಯದಲ್ಲಿ ಸಿಕ್ಕ ಶಾಸನಗಳ ಪ್ರಕಾರ ಈ ದೇವಾಲಯವನ್ನು 1677 ರಿಂದ 1684 AD ಸಮಯದಲ್ಲಿ, ಈ ಪ್ರದೇಶದ ಅಧಿಕಾರವನ್ನು ಹೊಂದಿದ್ದ ಉಮಾಯಮ್ಮ ರಾಣಿಯ ಆಳ್ವಿಕೆಯಲ್ಲಿ ನವೀಕರಣಗೊಂಡಿದೆ ಎಂದು ಹೇಳಲಾಗುತ್ತದೆ ಹಾಗೂ ಈ ದೇವಾಲಯವನ್ನು 2000 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ದೇವಾಲಯದ ಪ್ರಸ್ತುತ ರಚನೆಯು 12 ನೇ ಶತಮಾನದಷ್ಟು ಹಿಂದಿನದು ಎಂದು ಹೇಳಲಾಗುತ್ತದೆ.

ದೇವಸ್ಥಾನಕ್ಕೆ ಸಂಭಂದಿಸಿದ ದಂತಕಥೆಗಳು

anardhana swamy temple in varkala

PC: Dev

ಪುರಾಣಗಳ ಪ್ರಕಾರ, ಮಹಾ ವಿಷ್ಣುನಿಗೆ ಗೌರವ ಸಲ್ಲಿಸಿದ ನಂತರ ನಾರದನು ತನ್ನ ತಂದೆ ಬ್ರಹ್ಮನನ್ನು ಭೇಟಿ ಮಾಡಲು ವೈಕುಂಠವನ್ನು ಬಿಟ್ಟು ಹೋಗುತ್ತಾನೆ. ನಾರದರು ತಮ್ಮ ವೀಣೆಯಿಂದ ನುಡಿಸಿದ ಸಂಗೀತದಿಂದ ಆಕರ್ಷಿತನಾದ ವಿಷ್ಣು ದೇವನು ನಾರದರಿಗೆ ಗೊತ್ತಾಗದಂತೆ ಹಿಂಬಾಲಿಸುತ್ತಾನೆ.

ನಾರದನು ಬ್ರಹ್ಮಲೋಕವನ್ನು ತಲುಪಿದಾಗ, ಬ್ರಹ್ಮನು ತನ್ನ ಮಗನನ್ನು ಹಿಂಬಾಲಿಸುತ್ತಿರುವ ಮಹಾ ವಿಷ್ಣುವನ್ನು ನೋಡಿ ಮತ್ತು ಭಗವಂತನಿಗೆ ವಂದನೆಗಳನ್ನು ಸಲ್ಲಿಸುತ್ತಾನೆ. ಆಗ ಇಕ್ಕಟ್ಟಿನ ಪರಿಸ್ಥಿತಿಯನ್ನು ಅರಿತುಕೊಂಡು, ವಿಷ್ಣು ಕಣ್ಮರೆಯಾಗುತ್ತಾನೆ, ಆಗ ಬ್ರಹ್ಮನು ತಾನು ಗೌರವವನ್ನು ವ್ಯಕ್ತಪಡಿಸಿದ ವ್ಯಕ್ತಿಯು ತನ್ನ ಮಗ ನಾರದ ಎಂದು ಅರಿತುಕೊಳ್ಳುತ್ತಾನೆ.

ಪ್ರಜಾಪತಿಗಳು ಬ್ರಹ್ಮನ ಮೂರ್ಖತನದ ಬಗ್ಗೆ ನಗಲು ಪ್ರಾರಂಭಿಸಿದರು ಇವರಲ್ಲಾ ಬ್ರಹ್ಮನಿಂದ ಅವರು ಶಾಪಗ್ರಸ್ತರಾಗಿ ಭೂಮಿಯ ಮೇಲೆ ಜನಿಸುತ್ತಾರೆ ಮತ್ತು ಮಾನವರ ಎಲ್ಲಾ ಕಷ್ಟಗಳನ್ನು ಅನುಭವಿಸುತ್ತಾರೆ. ಶಾಪಕ್ಕೆ ಪರಿಹಾರವಾಗಿ, ನಾರದಾ ಅವರಿಗೆ ತಾನು ಆಯ್ಕೆ ಮಾಡಿದ ಒಂದು ಸ್ಥಳದಲ್ಲಿ ಪ್ರಾಯಶ್ಚಿತ್ತವನ್ನು ಮಾಡಲು ಸಲಹೆ ನೀಡಿದರು,

ಇದಕ್ಕಾಗಿ ನಾರದರು ತಮ್ಮ ಮೈ ಮೇಲೆ ಇರುವ ವಾಲ್ಕಾಲಂ ಅಥವಾ ಉಡುಪನ್ನು ಗಾಳಿಯಲ್ಲಿ ಎಸೆದ ಅದು ಬಿದ್ದ ಸ್ಥಳದಲ್ಲಿ ಅವರು ಜನಾರ್ದನ ಸ್ವಾಮಿಯ ಗೌರವಾರ್ಥವಾಗಿ ದೇವಾಲಯವನ್ನು ನಿರ್ಮಿಸಿದರು. ವರ್ಕಲಾ ವಲ್ಕಲಾದ ಆಡುಭಾಷೆಯ ಆವೃತ್ತಿಯಾಗಿದ್ದು, ಈ ಹೆಸರು ಜನಪ್ರಿಯವಾಗಿ ಬಳಸಲ್ಪಡುತ್ತದೆ.

ದೇವತೆಯ ವಿಗ್ರಹ

anardhana swamy temple in varkala

ಈಗಿನ ವಿಗ್ರಹವನ್ನು ಹತ್ತಿರದ ಸಮುದ್ರದಲ್ಲಿ ಪಾಂಡ್ಯ ರಾಜನಿಗೆ ಕಂಡದ್ದಾಗಿ ಹೇಳಲಾಗಿದೆ. ಅರಸನು ತನಗೆ ಬಿದ್ದ ಕನಸಿನ ಪ್ರಕಾರ ಮರುದಿನ ಸಮುದ್ರಕ್ಕೆ ಹೋಗುತ್ತಾನೆ ಮತ್ತು ದೇವಸ್ಥಾನದ ಮುಂದೆ ನಿಂತಿರುತ್ತಾನೆ, ಅಲ್ಲಿಂದ ಅವನು ನೀರಿನಲ್ಲಿ ತೇಲುವ ದೊಡ್ಡ ಹೂವುಗಳನ್ನು ನೋಡುತ್ತಾನೆ. ಆ ಸ್ಥಳದ ಸುತ್ತಲೂ ಹುಡುಕಿದಾಗ, ಅವನಿಗೆ ಒಂದು ವಿಗ್ರಹ ಕಂಡುಬರುತ್ತದೆ. ತನಗೆ ಕನಸಲ್ಲಿ ಬಂದ ನಿರ್ದೇಶನದಂತೆ ಈ ವಿಗ್ರಹಕ್ಕೆ ಬಂಗಾರದ ಕೈ ಮಾಡಿ ವಿಗ್ರಹಕ್ಕೆ ಅದನ್ನು ಲಗತ್ತಿಸುವ ಸೂಚನೆಯನ್ನು ಅವರಿಗೆ ಕನಸಿನಲ್ಲಿ ನೀಡಲಾಗಿತ್ತು.

ಜನಾರ್ದನ ಸ್ವಾಮಿ ಅವರ ವಿಗ್ರಹವು ತನ್ನ ಬಲಗೈಯಲ್ಲಿ ಆಭೋಜಾನವನ್ನು ಹೊಂದಿದೆ. ಈ ಕೈಯು ನಿಧಾನವಾಗಿ ದೇವರ ಬಾಯಿಯ ಕಡೆಗೆ ಏರುತ್ತಿದೆ ಎಂದು ಭಕ್ತರು ನಂಬುತ್ತಾರೆ. ದೇವರು ಆಭೋಜಾನವನ್ನು ಸೇವಿಸುವ ದಿನ, ಕಲಿಯುಗ ಕೊನೆಗೊಳ್ಳುತ್ತದೆ ಮತ್ತು ಪ್ರಪಂಚವನ್ನು ಪ್ರವಾಹವು ನುಂಗುತ್ತದೆ ಎಂದು ಹೇಳಲಾಗುತ್ತದೆ.

ಡಚ್ ಬೆಲ್

anardhana swamy temple in varkala

PC: Raji.srinivas

1757 ನೇ ವರ್ಷ ಎಂದು ಕೆತ್ತಲಾಗಿರುವ ಈ ದೇವಸ್ಥಾನದಲ್ಲಿ ಒಂದು ದೊಡ್ಡ ಘಂಟೆಯನ್ನು ಕಾಣಬಹುದು, ಬಹುಶಃ ಇದನ್ನು ತಯಾರಿಸಲ್ಪಟ್ಟ ವರ್ಷವಾಗಿರಬಹುದು.ಯುರೋಪಿಗೆ ನೌಕಾಯಾನ ಮಾಡುತ್ತಿರುವಾಗ, ಹಡಗನ್ನು ಓಡಿಸುವ ಡಚ್ ಕ್ಯಾಪ್ಟನ್ ನಿಂದ ದೇವರಿಗೆ ಉಡುಗೊರೆಯಾಗಿ ಈ ಘಂಟೆಯನ್ನು ನೀಡಲಾಯಿತು.

ದೇವಸ್ಥಾನದ ಘಂಟೆಯ ಸದ್ದು ಕೇಳಿ ದೇವಸ್ಥಾದ ಬಳಿಯಿಂದ ಹಾದು ಹೋಗುವಾಗ ಹಡಗನ್ನು ಮುಂದೆ ಸರಿಸಲು ಆಗಲಿಲ್ಲ , ಆವಾಗ ಹಡಗಿನ ಕ್ಯಾಪ್ಟನ್, ಹಡಗು ತನ್ನ ಪ್ರಯಾಣ ಮುಂದುವರಿಸಲು ಅವಕಾಶ ನೀಡಿದರೆ ತನ್ನ ಹಡಗಿನ ಘಂಟೆಯನ್ನು ದೇವರಿಗೆ ಅರ್ಪಿಸುತ್ತಾರೆಂದು ಪ್ರತಿಜ್ಞೆ ಮಾಡಿದ್ದನಂತೆ.

ಶೀಘ್ರದಲ್ಲೇ ಒಂದು ಗಾಳಿ ಬೀಸಿತು ಮತ್ತು ಹಡಗು, ಅದರ ಸಿಬ್ಬಂದಿ ಜೊತೆಗೆ, ಮುಂದಿನ ಬಂದರನ್ನು ಸುರಕ್ಷಿತವಾಗಿ ತಲುಪಿತು. ದೇವಾಲಯಕ್ಕೆ ಗಂಟೆಗೆ ಉಡುಗೊರೆಯನ್ನು ನೀಡುವ ಮೂಲಕ ತನ್ನ ವಾಗ್ದಾನವನ್ನು ಹಡಗಿನ ನಾಯಕ ಪೂರ್ಣಗೊಳಿಸಿದ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ