Search
  • Follow NativePlanet
Share
» »ಈ ಸೀಸನ್‌ನಲ್ಲಿ ಜಮ್ಮು&ಕಾಶ್ಮೀರಕ್ಕೆ ಯಾಕೆ ಹೋಗ್ಬೇಕು ಅನ್ನೋದನ್ನು ರೇಸ್‌- 3 ತಿಳಿಸುತ್ತೆ

ಈ ಸೀಸನ್‌ನಲ್ಲಿ ಜಮ್ಮು&ಕಾಶ್ಮೀರಕ್ಕೆ ಯಾಕೆ ಹೋಗ್ಬೇಕು ಅನ್ನೋದನ್ನು ರೇಸ್‌- 3 ತಿಳಿಸುತ್ತೆ

ಸೋನಾಮಾರ್ಗ್ ಹೆಸರು ಕೇಳಿದ್ದೀರಾ ಇಲ್ಲಾ ಅಂದ್ರೆ ಇಂದು ಬಿಡುಗಡೆಯಾಗಿರೋ ಸಲ್ಮಾನ್‌ಖಾನ್ ಅಭಿನಯದ ರೇಸ್‌- 3 ಸಿನಿಮಾ ನೋಡಿ. ಈ ಸಿನಿಮಾದಲ್ಲಿ ಜಮ್ಮು ಹಾಗೂ ಕಾಶ್ಮೀರದಲ್ಲಿರುವ ಸೋನಾಮಾರ್ಗ್‌ನ್ನು ಕಾಣಬಹುದು. ರೇಸ್‌- 3 ಸಿನಿಮಾವನ್ನು ಸೋನಮಾರ್ಗ್‌ನಲ್ಲಿ ಚಿತ್ರೀಕರಿಸಲಾಗಿದೆ.

ಇಲ್ಲಿ ರಾತ್ರಿ ಉಳಿಯಲು ಹೆದರ್ತಾರಂತೆ ಜನ್ರು, ಒಂದು ವೇಳೆ ಉಳ್ಕೊಂಡ್ರೆ ನೀವೂ ಹೀಗಾಗ್ಬಿಡ್ತೀರಾ !ಇಲ್ಲಿ ರಾತ್ರಿ ಉಳಿಯಲು ಹೆದರ್ತಾರಂತೆ ಜನ್ರು, ಒಂದು ವೇಳೆ ಉಳ್ಕೊಂಡ್ರೆ ನೀವೂ ಹೀಗಾಗ್ಬಿಡ್ತೀರಾ !

ಸೋನಾಮಾರ್ಗ್‌ನಲ್ಲಿ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವುದಕ್ಕೆ ಸಲ್ಮಾನ್‌ಖಾನ್ ಟ್ವಿಟ್ಟರ್‌ನಲ್ಲಿ ಜಮ್ಮುಕಾಶ್ಮೀರದ ಪ್ರವಾಸೋಧ್ಯಮಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ. ಸಹ ನಟಿ ಜೊತೆ ಫೋಸ್‌ ನೀಡಿರುವ ಫೋಟೋ ಅಪ್‌ಲೋಡ್ ಮಾಡಿರುವ ಸಲ್ಮಾನ್ ಸೋನಾಮಾರ್ಗ್‌ ಹಿಲ್‌ಸ್ಟೇಶನ್‌ನಲ್ಲಿ ನಡೆದ ರೇಸ್‌ 3 ಶೂಟಿಂಗ್ ನಿಜಕ್ಕೂ ಒಂದು ಅದ್ಭುತ ಅನುಭವ ಎಂದು ಹೇಳಿಕೊಂಡಿದ್ದಾರೆ.

ಜಮ್ಮುವಿನಲ್ಲಿ ಸಲ್ಲೂ ಶೂಟಿಂಗ್

ಜಮ್ಮುವಿನಲ್ಲಿ ಸಲ್ಲೂ ಶೂಟಿಂಗ್

PC:Hidden macy

ಜಮ್ಮು ಹಾಗೂ ಕಾಶ್ಮೀರದಲ್ಲಿ ಸಲ್ಮಾನ್ ಶೂಟಿಂಗ್‌ ನಡೆಸುತ್ತಿರುವುದು ಇದೇನೂ ಮೊದಲಬಾರಿಯಲ್ಲ. ಈ ಹಿಂದೆ ಭಜರಂಗಿ ಭಾಯಿಜಾನ್ ಸಿನಿಮಾದಲ್ಲೂ ಸಲ್ಲೂ ಜಮ್ಮು ಹಾಗೂ ಕಾಶ್ಮೀರದಲ್ಲಿ ಶೂಟಿಂಗ್ ನಡೆಸಿದ್ದಾರೆ. ಸೋನಮಾರ್ಗ್ ಹಾಗು ಲೇಹ್‌ ಲಡಾಖ್ ಸಿನಿಮಾ ನಿರ್ದೇಶಕರ ನಡುವೆ ಚಿತ್ರೀಕರಣ ನಡೆಸುವ ಪ್ರಸಿದ್ಧ ತಾಣವಾಗಿದೆ.

ಕೊಡಚಾದ್ರಿ, ಆಗುಂಬೆ, ಮರವಂತೆಯಲ್ಲಿ ಸೂರ್ಯಾಸ್ತ ಹೇಗಿರುತ್ತೆ ನೋಡಿಕೊಡಚಾದ್ರಿ, ಆಗುಂಬೆ, ಮರವಂತೆಯಲ್ಲಿ ಸೂರ್ಯಾಸ್ತ ಹೇಗಿರುತ್ತೆ ನೋಡಿ

ಸೋನಾಮಾರ್ಗ್

ಸೋನಾಮಾರ್ಗ್

ಭಾರತದ ಸ್ವಿಜರ್‌ಲ್ಯಾಂಡ್‌ ಎಂದೇ ಕರೆಯಲಾಗುವ ಸೋನಾಮಾರ್ಗ್ ನೈಸರ್ಗಿಕ ಸೌಂದರ್ಯದಿಂದ ಕೂಡಿದ್ದು ಇದರ ಸುತ್ತಲು ಇನ್ನೂ ಅನೇಕ ಪ್ರವಾಸಿ ತಾಣಗಳಿವೆ. ಹಿಮನದಿ, ಬಾಲ್ಟಾಲ್ ಮತ್ತು ಜೊಜಿಲಾ ಪಾಸ್, ಶ್ರೀನಗರ-ಲೇಹ್ ರಸ್ತೆಯಲ್ಲಿರುವ ಝೀರೋ ಪಾಯಿಂಟ್‌ ನಿಜಕ್ಕೂ ಸುಂದರವಾಗಿದೆ. ಲೇಹ್ ಮತ್ತು ಲಡಾಖ್‌ಗೆ ಸಂಬಂಧಿಸಿದಂತೆ, ಈ ಅವಳಿ ಸ್ಥಳಗಳನ್ನು ಎಷ್ಟು ಹೊಗಳಿದರೂ ಕಡಿಮೆ ಅನಿಸಬಹುದು.

ಸೋನಾಮಾರ್ಗ್ ಹವಾಮಾನ

ಸೋನಾಮಾರ್ಗ್ ಹವಾಮಾನ

PC: Mehrajmir13

ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಎರಡು ಅಥವಾ ಮೂರು ದಿನಗಳವರೆಗೆ ಹೊರತುಪಡಿಸಿ ಭಾರೀ ಪ್ರಮಾಣದಲ್ಲಿ ಮಳೆಯಾಗಿಲ್ಲ. ಸೋನಾಮಾರ್ಗ್‌ನಿಂದ ಟ್ರೆಕ್ಕಿಂಗ್ ಮಾರ್ಗಗಳು ವಿಶಾನ್ಸರ್ ಸರೋವರದ ಹಿಮಾಲಯನ್ ಸರೋವರಗಳು, ಕೃಷ್ಸಾರ್ ಸರೋವರ, ಗಂಗಾಬಾಲ್ ಸರೋವರ ಮತ್ತು ಗಡ್ಸರ್ ಸರೋವರ, ಸ್ನೋಟ್ರಾಟ್ ಮತ್ತು ಬ್ರೌನ್ ಟ್ರೌಟ್‌ಗೆ ಹೋಗಬಹುದು.

ತಲುಪುದು ಹೇಗೆ?

ತಲುಪುದು ಹೇಗೆ?

PC: Hidden macy

ಕಾಶ್ಮೀರ ರಾಜಧಾನಿಯಾದ ಶ್ರೀನಗರ ಅಥವಾ ಶ್ರೀನಗರ ವಿಮಾನ ನಿಲ್ದಾಣದಿಂದ (SXR) 3 ಗಂಟೆಗಳ ಒಳಗಾಗಿ ಕಾರು ಅಥವಾ ಬಸ್ ಮೂಲಕ NH 1D 87 ಕಿಲೋಮೀಟರ್ ನಿಂದ ಸುಲಭವಾಗಿ ಸೋನಾಮಾರ್ಗ್ ತಲುಪಬಹುದು. ಇದು ನಲ್ಲಾ ಸಿಂಧ್ ನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಭಾರೀ ಹಿಮಪಾತ ಮತ್ತು ಹಿಮಕುಸಿತದಿಂದಾಗಿ ಚಳಿಗಾಲದಲ್ಲಿ ಸೋನಾಮಾರ್ಗ್‌ಗೆ ಹೋಗಲಾಗುವುದಿಲ್ಲ, NH 1Dಯನ್ನು ಪ್ರತಿವರ್ಷ ಡಿಸೆಂಬರ್‌ನಲ್ಲಿ ಮುಚ್ಚಲಾಗಿರುತ್ತದೆ. ಸ್ಥಳೀಯ ಗ್ರಾಮದವರಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.

ಇಲ್ಲಿನ ಜನಸಂಖ್ಯೆ

ಇಲ್ಲಿನ ಜನಸಂಖ್ಯೆ

ಸಿಂಧ್‌ ನದಿಯ ತೀರದಲ್ಲಿರುವ ಈ ಸ್ಥಳವು ಒಂದು ಪ್ರಸಿದ್ಧ ಪ್ರವಾಸಿತಾಣವಾಗಿದೆ. ಇದು ಸಮುದ್ರಮಟ್ಟಕ್ಕಿಂತ 2800 ಮಿ. ಎತ್ತರದಲ್ಲಿದೆ. 2011ರ ಜನಗಣತಿ ಪ್ರಕಾರ ಸೋನಾಮಾರ್ಗ್‌ನಲ್ಲಿ ಕೇವಲ 392 ಜನಸಂಖ್ಯೆ ಇತ್ತು ಅದರಲ್ಲಿ 51ಶೇ ಪುರುಷರು ಹಾಗೂ 49ಶೇ ಮಹಿಳೆಯರು.

ಮುಖ್ಯ ಆಕರ್ಷಣೆಗಳು

ಮುಖ್ಯ ಆಕರ್ಷಣೆಗಳು

PC: Skmishraindia

ಈ ಸ್ಥಳದ ಮುಖ್ಯ ಆಕರ್ಷಣೆ ಎಂದರೆ ತಜಿವಾಸ್ ಗ್ಲೇಸಿಯರ್. ಇಲ್ಲಿ ನೀವು ಕುದುರೆ ಸವಾರರು ಹಾಗೂ ಕಾರು ಚಾಲಕರಿಂದ ಬಹಳ ಎಚ್ಚರಿಕೆಯಿಂದಿರಿ. ಯಾಕೆಂದರೆ ಇವರು ನಿಮ್ಮನ್ನು ಗ್ಲೇಸಿಯರ್ ತಲುಪಿಸಲು ತಮ್ಮ ಮನಬಂದಂತಹ ಬೆಲೆಯನ್ನು ಹೇಳುತ್ತಾರೆ. ನೀವು ಗ್ಲೇಸಿಯರ್ ತಲುಪಲು ಎಸ್‌ಯುವಿ ಬಾಡಿಗೆ ಪಡೆಯಬಹುದು. ಕೇವಲ 5 ನಿಮಿಷದ ಪ್ರಯಾಣಕ್ಕೆ ಕುದುರೆಗೆ ಓರ್ವ ವ್ಯಕ್ತಿಗೆ 900 ರೂ. ಕೇಳಿದರೆ ಕಾರಿಗೆ 5,000 ರೂ. ಹೇಳುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X