Search
  • Follow NativePlanet
Share
» »ಪರ್ವತಗಳ ರಾಣಿ ಎನಿಸಿರುವ ಶಿಮ್ಲಾಗೆ ಭೇಟಿ ಕೊಡಿ

ಪರ್ವತಗಳ ರಾಣಿ ಎನಿಸಿರುವ ಶಿಮ್ಲಾಗೆ ಭೇಟಿ ಕೊಡಿ

ತಂಪಾದ ಗಾಳಿ, ಅದ್ಬುತವಾದ ಪರ್ವತಗಳು, ಹಿಮಪಾತ ಮತ್ತು ಪ್ರಕೃತಿಯ ಅತ್ಯುತ್ತಮ ರೂಪ ಇವೆಲ್ಲವನ್ನೂ ಒಂದೇ ಸ್ಥಳದಲ್ಲಿ ನೋಡಬೇಕೆಂದರೆ ಮೊದಲು ಬರುವ ಹೆಸರೆಂದರೆ ಅದು ಶಿಮ್ಲಾ.ಇನ್ನೊಂದು ರಾಜಧಾನಿ ಧರ್ಮಶಾಲಾ, ಇದು ಶಿಮ್ಲಾದಿಂದ ಸುಮಾರು 240 ಕಿಮೀ ದೂರದಲ್ಲಿದೆ. ಈ ಭವ್ಯವಾದ ಗಿರಿಧಾಮವು ಮಂಡಿ, ಕುಲು ಮತ್ತು ಕಿನ್ನೌರ್‌ಗಳಿಂದ ಸುತ್ತುವರೆದಿದೆ, ಇದು ಭೇಟಿ ನೀಡಲು ಅದ್ಭುತವಾದ ಸ್ಥಳವಾಗಿದೆ.

 ಶಿಮ್ಲಾ

ಶಿಮ್ಲಾ

ಶಿಮ್ಲಾದಲ್ಲಿ ರಜಾದಿನವನ್ನು ಕಳೆಯುವುದು ಖಚಿತವಾಗಿಯೂ ನಿಮಗೆ ಮೋಜು ಮತ್ತು ಪ್ರಕೃತಿಯ ಮಡಿಲಲ್ಲಿ ಉಲ್ಲಾಸವನ್ನು ನೀಡುವುದರಲ್ಲಿ ಸಂಶಯವೇ ಇಲ್ಲ.ಇದು ಬೇಸಿಗೆಯ ತಾಣವಾಗಿದ್ದರೂ ಕೂಡ ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ಕೊಡುವುದು ಅತ್ಯಂತ ಕುತೂಹಲಭರಿತವಾಗಿರುತ್ತದೆ ಏಕೆಂದರೆ ಈ ಸಮಯದಲ್ಲಿ ಇಡೀ ನಗರವು ಬಿಳಿಯ ಹಿಮಪಾತವನ್ನು ಅನುಭವಿಸುತ್ತದೆ. ಆದುರಿಂದ ಇದು ಸುಂದರವಾಗಿ ಕಾಣುತ್ತದೆ.

ಬ್ರಿಟೀಷ್ ರಾಜ್‌ ನ ಪ್ರಮುಖ ಉಪಸ್ಥಿತಿಯಿಂದಾಗಿ ಇಲ್ಲಿ ನಿಯೋ-ಗೋಥಿಕ್ ವಾಸ್ತುಶಿಲ್ಪ ಶೈಲಿಯ ಕಟ್ಟಡಗಳನ್ನು ವೀಕ್ಷಿಸಬಹುದು. ದೃಶ್ಯವೀಕ್ಷಣೆಯ ಹೊರತಾಗಿ, ಶಿಮ್ಲಾವು ಅದರ ಕಡಿದಾದ ಭೂಪ್ರದೇಶ ಮತ್ತು ಚಳಿಗಾಲದಲ್ಲಿ ಸ್ಕೀಯಿಂಗ್‌ನಿಂದ ಮೌಂಟೇನ್ ಬೈಕಿಂಗ್‌ಗೆ ಸೂಕ್ತವಾದ ಸ್ಥಳವಾಗಿದೆ. ಶಿಮ್ಲಾದಲ್ಲಿ ನೀವು ನೋಡಬಹುದಾದ ಸ್ಥಳಗಳು ಇಲ್ಲಿವೆ.

ಜಕೂ ದೇವಾಲಯ

ಜಕೂ ದೇವಾಲಯ

ಶಿಮ್ಲಾದಲ್ಲಿರುವ ಜಕೂ ದೇವಾಲಯದ ಹನುಮಂತ ದೇವರ ಪ್ರತಿಮೆಯು ಇಲ್ಲಿಯ ಅತ್ಯಂತ ದೊಡ್ಡ ಆಕರ್ಷಣೆಯಾಗಿದೆ. ಈ ಪ್ರತಿಮೆಯು ಅತ್ಯಂತ ಎತ್ತರದಲ್ಲಿದ್ದು, ನಗರದ ಎಲ್ಲಾ ಭಾಗಗಳಿಗೂ ಕಾಣುವಂತೆ ಇದೆ.

ಈ ದೇವಾಲಯವು ಸಾಮಾನ್ಯವಾಗಿ ದಸರಾ ಸಮಯದಲ್ಲಿ ಅಂದರೆ ಅಕ್ಟೋಬರ್‌ನಲ್ಲಿ ಹೆಚ್ಚು ಜನಸಂದಣಿಯಿಂದ ಕೂಡಿರುತ್ತದೆ. ಈ ಪ್ರತಿಮೆಯು 8000 ಅಡಿ ಎತ್ತರದಲ್ಲಿ ಜಖೂ ಬೆಟ್ಟದ ಮೇಲೆ ನೆಲೆಗೊಂಡಿದೆ.

ರಿಡ್ಜ್

ರಿಡ್ಜ್

ಶಿಮ್ಲಾದ ಎಲ್ಲಾ ಚಟುವಟಿಕೆಗಳಲ್ಲಿ ರಿಡ್ಜ್ ಪ್ರಮುಖ ಪಾತ್ರವನ್ನು ವಹಿಸುತ್ತದೆ ಏಕೆಂದರೆ ಇದು ನಗರದ ಹೃದಯಭಾಗದಲ್ಲಿದೆ. ಇದು ಬೃಹತ್, ತೆರೆದ ರಸ್ತೆಯಾಗಿದ್ದು, ನಗರದ ಇತರ ಎರಡು ಜನಪ್ರಿಯ ತಾಣಗಳನ್ನು ಸಂಪರ್ಕಿಸುತ್ತದೆ, ಅಂದರೆ ಪಶ್ಚಿಮದಲ್ಲಿ ಸ್ಕ್ಯಾಂಡಲ್ ಪಾಯಿಂಟ್ ಮತ್ತು ಪೂರ್ವದಲ್ಲಿ ಲಕ್ಕರ್ ಬಜಾರ್, ಮಾಲ್ ರಸ್ತೆಯು ರಿಡ್ಜ್‌ಗೆ ಸಮಾನಾಂತರವಾಗಿದೆ.

ರಸ್ತೆಯು ಅಂಗಡಿಗಳು ಮತ್ತು ಸುಂದರವಾದ ಪೈನ್ ಮತ್ತು ದೇವದಾರು ಮರಗಳಿಂದ ಕೂಡಿದೆ, ಚಳಿಗಾಲದಲ್ಲಿ ಹಿಮದಿಂದ ಆವೃತವಾಗಿರುತ್ತದೆ, ಇಡೀ ಸ್ಥಳವು ಕನಸಿನಂತೆ ಕಾಣುತ್ತದೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ

ಈಗ ಸಂಶೋಧನಾ ಕೇಂದ್ರವಾಗಿ ಮಾರ್ಪಟ್ಟಿರುವ ಈ ಕಟ್ಟಡವು 1884-1888 ರ ಅವಧಿಯಲ್ಲಿ ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಡಫರಿನ್ ಅವರ ನಿವಾಸವಾಗಿತ್ತು. ಹಿಂದೆ ಇದನ್ನು ವೈಸರೆಗಲ್ ಲಾಡ್ಜ್ ಎಂದು ಕರೆಯಲಾಗುತ್ತಿತ್ತು.

ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಈ ಸ್ಥಳದಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ಮಾಡಿದ್ದರಿಂದ ಈ ಕಟ್ಟಡವು ಹೆಚ್ಚಿನ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಇದನ್ನು ಹೆನ್ರಿ ಇರ್ವಿನ್ ಅವರು ಜಾಕೋಬೆತ್ ಶೈಲಿಯ ವಾಸ್ತುಶಿಲ್ಪದಲ್ಲಿ ವಿನ್ಯಾಸಗೊಳಿಸಿದ್ದಾರೆ.

 ಹಿಮಾಚಲ ರಾಜ್ಯ ವಸ್ತುಸಂಗ್ರಹಾಲಯ

ಹಿಮಾಚಲ ರಾಜ್ಯ ವಸ್ತುಸಂಗ್ರಹಾಲಯ

ಶಿಮ್ಲಾ ಸ್ಟೇಟ್ ಮ್ಯೂಸಿಯಂ ಎಂದೂ ಕರೆಯಲ್ಪಡುವ ಹಿಮಾಚಲ ರಾಜ್ಯ ವಸ್ತುಸಂಗ್ರಹಾಲಯವನ್ನು 1974 ರಲ್ಲಿ ನಿರ್ಮಿಸಲಾಯಿತು ಮತ್ತು ಇದು ಕರಕುಶಲ ವಸ್ತುಗಳು, ಶಿಲ್ಪಗಳು, ವರ್ಣಚಿತ್ರಗಳು ಮತ್ತು ಹೆಚ್ಚಿನವುಗಳ ರೂಪದಲ್ಲಿ ಪ್ರದೇಶದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಸಂರಕ್ಷಿಸುತ್ತಿದೆ. ಮೊದಲ ನೋಟದಲ್ಲಿ, ವಸ್ತುಸಂಗ್ರಹಾಲಯವು ಅದರ ವಸಾಹತುಶಾಹಿ ಶೈಲಿಯ ವಾಸ್ತುಶಿಲ್ಪದಿಂದಾಗಿ ಬ್ರಿಟಿಷರ ಉಪಸ್ಥಿತಿಯ ಒಳನೋಟವನ್ನು ನೀಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X