Search
  • Follow NativePlanet
Share
» »ವಿಶೇಷತೆಗಳ ನಿಲಯ ರಾಮಪ್ಪ ದೇವಾಲಯ......

ವಿಶೇಷತೆಗಳ ನಿಲಯ ರಾಮಪ್ಪ ದೇವಾಲಯ......

ಕಾಕತೀಯರ ಶಿಲ್ಪಕಲೆಯ ವೈಭವಕ್ಕೆ ರಾಮಪ್ಪ ದೇವಾಲಯವು ಒಂದು ಪ್ರತ್ಯಕ್ಷವಾದ ನಿದರ್ಶನ. ರಾಮಪ್ಪ ದೇವಾಲಯವು ತೆಲಂಗಾಣ ರಾಜ್ಯದ ರಾಜಧಾನಿಯಾದ ಹೈದರಾಬಾದ್ ನಿಂದ ಸುಮಾರು 157 ಕಿಲೋಮೀಟರ್ ದೂರದಲ್ಲಿದೆ. ಇನ್ನೂ ವರಂಗಲ್ ಪಟ್ಟಣದಿಂದ ಕೇವಲ 70 ಕಿಲೋ ಮೀಟರ್ ದೂರದಲ್ಲಿ ಈ ಪುಣ್ಯಕ್ಷೇತ್ರವಿದೆ. ರಾಮಪ್ಪ ದೇವಾಲಯವು ಕೇವಲ ಶಿಲ್ಪಕಲೆಗೆ ಅಲ್ಲದೆ ಶಿವ ಲಿಂಗ ರೂಪದಲ್ಲಿ ನೆಲೆಸಿರುವ ಪರಮೇಶ್ವರನು ಕೂಡ ಅತ್ಯಂತ ಪ್ರಸಿದ್ಧಿಯನ್ನು ಹೊಂದಿದೆ. ಇಲ್ಲಿ ನೆಲೆಸಿರುವ ಪರಮೇಶ್ವರನು ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಾನೆ ಎಂದು ನಂಬಲಾಗಿದೆ.

ಆದ್ದರಿಂದಲೇ ಈ ರಾಮಪ್ಪ ದೇವಾಲಯವು ಪ್ರಮುಖ ಪುಣ್ಯ ಕ್ಷೇತ್ರ ಕೂಡ ಆಗಿದೆ. ಇಲ್ಲಿ ದೊರೆತಿರುವ ಕಲ್ಲಿನ ಶಾಸನಗಳ ಪ್ರಕಾರ ಈ ದೇವಾಲಯವನ್ನು ರೇಚಾರ್ಲ ರುದ್ರಯ್ಯ ನಿರ್ಮಿಸಿದರು. ಅನೇಕ ಶತಮಾನಗಳ ಚರಿತ್ರೆಯನ್ನು ಹೊಂದಿರುವ ಈ ದೇವಾಲಯದಲ್ಲಿ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.

ಆ ವಿಶೇಷಗಳನ್ನು ವಿವರವಾಗಿ ನೇಟಿವ್ ಪ್ಲಾನೆಟ್ ನ ಮೂಲಕ ತಿಳಿದುಕೊಳ್ಳಿ..

1. 800 ವರ್ಷಗಳಕ್ಕಿಂತ ಹಿಂದೆ....

1. 800 ವರ್ಷಗಳಕ್ಕಿಂತ ಹಿಂದೆ....

PC:YOUTUBE

ರಾಮಪ್ಪ ದೇವಾಲಯವನ್ನು ನಿರ್ಮಾಣ ಮಾಡಿ ಸುಮಾರು 800 ವರ್ಷಕ್ಕಿಂತ ಹೆಚ್ಚಾಗಿದೆ. ಆ ದೇವಾಲಯದ ನಿರ್ಮಾಣವು ಕ್ರಿಸ್ತ ಶಕ 1213 ರಿಂದ ಸುಮಾರು ನಲವತ್ತು ವರ್ಷಗಳವರೆಗೆ ಕಾಲಾವಧಿ ತೆಗೆದುಕೊಂಡಿತು. ದೇವಾಲಯದ ನಿರ್ಮಾಣವಾಗಿ ಸುಮಾರು ನೂರು ವರ್ಷಗಳ ನಂತರ ದೇವಾಲಯದಲ್ಲಿ ನಿತ್ಯ ಪೂಜೆಗಳು ನಡೆದವು. ಇನ್ನೂ ಕ್ರಿಸ್ತಶಕ 1910 ರವರೆಗೆ ಈ ದೇವಾಲಯದಲ್ಲಿ ಕನಿಷ್ಠ ದೀಪಾರಾಧನೆಯು ಕೂಡ ನಡೆಯಲಿಲ್ಲ ಆದರೆ 1911ರಲ್ಲಿ ಅಂದಿನ ನಿಜಾಂ ಸರ್ಕಾರ ರಾಮಪ್ಪ ದೇವಾಲಯದ ವಿಶೇಷತೆಯನ್ನು ಗುರುತಿಸಿ ಅಭಿವೃದ್ಧಿಗೊಳಿಸಿದರು.

 2. ನೀರಿನಲ್ಲಿ ತೇಲುವ ಇಟ್ಟಿಗೆಗಳು

2. ನೀರಿನಲ್ಲಿ ತೇಲುವ ಇಟ್ಟಿಗೆಗಳು

PC:YOUTUBE

ಮಧ್ಯ ಯುಗಕ್ಕೆ ಸೇರಿದ ಈ ಶಿವಾಲಯದಲ್ಲಿ ದೈವದ ಹೆಸರ ಬದಲಾಗಿ, ಶಿವಾಲಯದಲ್ಲಿನ ಶಿಲ್ಪವನ್ನು ಕೆತ್ತಿದ ಪ್ರಧಾನ ಶಿಲ್ಪಿ ರಾಮಪ್ಪ ಹೆಸರಿನ ಮೇಲೆ ದೇವಾಲಯವಿರುವುದು ವಿಶೇಷ. ಮುಖ್ಯವಾಗಿ ದೇವಾಲಯದ ಗೋಪುರವನ್ನು ಇಟ್ಟಿಗೆಗಳಿಂದ ನಿರ್ಮಿಸಿದ್ದಾರೆ. ಆಶ್ಚರ್ಯ ಏನಪ್ಪಾ ಎಂದರೆ ಇಲ್ಲಿನ ಇಟ್ಟಿಗೆಗಳು ನೀರಿನಲ್ಲಿ ಹಾಕಿದರೆ ತೇಲುತ್ತವೆಯಂತೆ. ಇಂತಹ ವಿಶೇಷವನ್ನು ದೇಶದಲ್ಲಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಈ ದೇವಾಲಯದ ಮತ್ತೊಂದು ವಿಶೇಷತೆ ಏನೆಂದರೆ ನಂದಿ ವಿಗ್ರಹ. ಈ ವಿಗ್ರಹವು ನಾವು ಯಾವ ಕಡೆಯಿಂದ ತಿರುಗಿ ನೋಡಿದರೂ ಕೂಡ ನಂದಿ ಮಾತ್ರ ನಮ್ಮನ್ನು ನೋಡುತ್ತಿದ್ದಾನೆ ಎಂಬಂತೆ ಭಾಸವಾಗುತ್ತದೆ.

 3. ಕಾಂತಿಯುಕ್ತವಾಗಿರುತ್ತದೆ

3. ಕಾಂತಿಯುಕ್ತವಾಗಿರುತ್ತದೆ

PC:YOUTUBE

ಅನೇಕ ದೇವಾಲಯದಲ್ಲಿನ ಗರ್ಭಗುಡಿಯಲ್ಲಿ ಬೆಳಕು ಸಾಮಾನ್ಯವಾಗಿ ಇರುವುದಿಲ್ಲ ಆದರೆ ಈ ದೇವಾಲಯದ ಗರ್ಭಗುಡಿಯಲ್ಲಿ ಮಾತ್ರ ಸೂರ್ಯೋದಯದಿಂದ ಸೂರ್ಯಾಸ್ತದ ಸಮಯದವರೆಗೂ ಗರ್ಭಗುಡಿಯಲ್ಲಿನ ರಾಮಲಿಂಗೇಶ್ವರ ಅತ್ಯಂತ ಕಾಂತಿಯುತವಾಗಿ ದರ್ಶನವನ್ನು ನೀಡುತ್ತಾನೆ. ದೇವಾಲಯದಲ್ಲಿ ಏರ್ಪಾಟು ಮಾಡಿರುವ ಮಂಟಪದಲ್ಲಿನ ಸ್ತಂಭಗಳ ಮೇಲೆ ಸೂರ್ಯಕಾಂತಿ ಪ್ರಸರಿಸಿ ಗರ್ಭಗುಡಿಯಲ್ಲಿನ ಶಿವಲಿಂಗ ಕಾಂತಿಯುತವಾಗಿ ದರ್ಶನವನ್ನು ನೀಡುತ್ತದೆ. ಇವರ ಪ್ರಕಾರ ಆ ಸ್ತಂಭಗಳು ಎಷ್ಟು ನುಣುಪಾಗಿವೆ ಎಂದು ಅರ್ಥಮಾಡಿಕೊಳ್ಳಬಹುದು.

4. ಈಜಿಪ್ಟ್ ನ ಮಮ್ಮಿಗಳು

4. ಈಜಿಪ್ಟ್ ನ ಮಮ್ಮಿಗಳು

PC:YOUTUBE

ರಾಮಪ್ಪ ದೇವಾಲಯವು ಶಿಲ್ಪಕಲೆಗೆ ಅತ್ಯಂತ ಪ್ರಸಿದ್ಧಿ ಹೊಂದಿದೆ. ಈ ದೇವಾಲಯದಲ್ಲಿನ ಶಿಲ್ಪಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ತ್ರೇತಾಯುಗ ದ್ವಾಪರ ಯುಗಕ್ಕೆ ಸೇರಿದ ಚರಿತ್ರೆ ಹಾಗೂ ಜೈನ ಮತ್ತು ಬೌದ್ಧ ಧರ್ಮಕ್ಕೆ ಸೇರಿದ ಎಷ್ಟೋ ಅಂಶಗಳು ನಮಗೆ ಆಕರ್ಷಿಸುತ್ತವೆ. ಮುಖ್ಯವಾಗಿ ಈಜಿಪ್ಟ್ ನ ಮಮ್ಮಿಗಳು ಕೂಡ ಇಲ್ಲಿನ ಶಿಲ್ಪ ಸಂಪತ್ತಿನಲ್ಲಿ ನಾವು ಗಮನಿಸಬಹುದು. ಇನ್ನು ದೇವಾಲಯದ ಪೂರ್ವ ಮುಖದ್ವಾರದ ದಿಕ್ಕಿನಲ್ಲಿ ಗಣಪತಿ ವಿಗ್ರಹವನ್ನು ಏರ್ಪಾಟು ಮಾಡಿದ್ದಾರೆ. ಗರ್ಭಗುಡಿಯ ಎಡ ಭಾಗದಲ್ಲಿರುವ ಶಿಲ್ಪವನ್ನು ಕೈ ಬೆರಳಿನಿಂದ ಕದಲಿಸಿದರೆ ಸರಿಗಮಪದನಿಸ ಎಂಬ ಸಂಗೀತ ಸ್ವರಗಳು ಕೇಳಿಸುತ್ತವೆ.

5. ತಲುಪುವ ಬಗೆ ಹೇಗೆ?

5. ತಲುಪುವ ಬಗೆ ಹೇಗೆ?

PC:YOUTUBE

ಹೈದ್ರಾಬಾದ್ ಗೆ ಬರುವ ಪ್ರವಾಸಿಗರು ಹನುಮಕುಂಡಕ್ಕೆ ಸೇರಿಕೊಂಡು ಅಲ್ಲಿಂದ ಸರ್ಕಾರಿ ಅಥವಾ ಖಾಸಗಿ ವಾಹನಗಳಿಂದ ತಲುಪಬಹುದು. ರಾಮಪ್ಪ ದೇವಾಲಯವನ್ನು ಸಂದರ್ಶಿಸುವ ಪ್ರವಾಸಿಗರಿಗಾಗಿ ಪ್ರವಾಸಿ ಶಾಖೆ ಈ ದೇವಾಲಯದ ಪಕ್ಕದಲ್ಲಿಯೇ ಅನೇಕ ವಸತಿ ಸೌಲಭ್ಯವನ್ನು ನಿರ್ಮಿಸಿದೆ. ಅಷ್ಟೇ ಅಲ್ಲದೆ ಹೋಟೆಲುಗಳು ಕೂಡ ಇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X