• Follow NativePlanet
Share
Menu
» »ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

Written By:

ರಾಚಕೊಂಡ ಕೋಟೆ ಒಂದು ಪದ್ಮವ್ಯೂಹದ ರೀತಿಯಲ್ಲಿ ಇರುತ್ತದೆ. ಒಂದು ಕಾಲದಲ್ಲಿ ಅತ್ಯಂತ ವೈಭವವಾಗಿ ಬಾಳಿ ಬದುಕಿದ ಈ ಸುಂದರವಾದ ತಾಣ ರಾಚಕೊಂಡ ಕೋಟೆಯಾಗಿದೆ. ಈ ಕೋಟೆಯು ನಲ್ಗೊಂಡ ಜಿಲ್ಲೆಯ, ನಾರಾಯಣಪುರ ಮಂಡಲಕ್ಕೆ ಸೇರಿದ ಗ್ರಾಮದಲ್ಲಿದೆ. ನಲ್ಗೊಂಡದಿಂದ ಸುಮಾರು 64 ಕಿ.ಮೀ ದೂರದಲ್ಲಿರುವ ಈ ರಾಚಕೊಂಡ ಒಂದು ಸುಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಪಟ್ಟಾಭಿಗುಡ್ಡದ ಸಮೀಪದಲ್ಲಿ ಒಂದು ಗುಹೆಯಲ್ಲಿನ "ದಶಾವತಾರ" ಶಿಲ್ಪಗಳು, ಇಲ್ಲಿನ ಅದ್ಭುತವಾದ 5 ದೇವಾಲಯಗಳು ಕಾಕತೀಯ ರಾಜವಂಶಿಕರ ಶಿಲ್ಪಕಲೆಗೆ ಉತ್ತಮವಾದ ಉದಾಹರಣೆಯಾಗಿದೆ.

ಈ ರಾಚಕೊಂಡವನ್ನು ಶತ್ರು ಸೈನ್ಯವನ್ನು ಅಲ್ಲಿಂದ ಅಲ್ಲಿಯೇ ಮಟ್ಟ ಹಾಕುವ ಹಾಗೆ ಈ ಕೋಟೆಯನ್ನು ಅದ್ಭುತವಾಗಿ ನಿರ್ಮಾಣ ಮಾಡಿದ್ದಾರೆ. ರಾಚಕೊಂಡ ಕೋಟೆಯ ಸುತ್ತ ಸುಮಾರು 40 ಕಿ.ಮೀ ಉದ್ದದ ಕಲ್ಲಿನ ಗೋಡೆಯನ್ನು ಗ್ರಾನೈಟ್ ಕಲ್ಲಿನಿಂದ ನಿರ್ಮಾಣ ಮಾಡಿದ್ದಾರೆ. ಆಶ್ಚರ್ಯ ಏನಪ್ಪ ಎಂದರೆ ಈ ಕೋಟೆಯು ಅನೇಕ ಪದ್ಮವ್ಯೂಹವನ್ನು ಹೊಂದಿದೆ. ಹಾಗೆಯೇ ಗುಪ್ತನಿಧಿಗಳನ್ನು ಕೂಡ ಹೊಂದಿದೆ. ಇದರ ಬಗ್ಗೆ ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿಯೋಣ ಬನ್ನಿ.

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

12 ನೇ ಶತಮಾನದಿಂದ ಕಾಕತೀಯ ರಾಜವಂಶಿಕರಿಗೆ ಸಾಮಂತವಾಗಿದ್ದ, ಪದ್ಮನಾಯಕ ವಂಶಿಕರಿಗೆ ಸಂಬಂಧಿಸಿದ ಸಿಂಗನಾಯಕನು 14 ನೇ ಶತಮಾನದಲ್ಲಿ ಈ ಕೋಟೆಯನ್ನು ನಿರ್ಮಾಣ ಮಾಡಲು ಬುನಾದಿಯನ್ನು ಹಾಕಿದನು. ಇಲ್ಲಿ ರಾಜರಿರುವ ಅಂತಃಪುರವನ್ನು ಹಾಗು ಬಾವಿಯ ಸುತ್ತಲೂ ಗೋಡೆಗಳನ್ನು ಭದ್ರವಾಗಿ ನಿರ್ಮಾಣ ಮಾಡಿದ್ದಾರೆ. ಇದನ್ನು ತೆಲುಗು ಬಾಷೆಯಲ್ಲಿ ರಾಜುಗಾರ ಗುಟ್ಟ ಎಂದು ಕೂಡ ಕರೆಯುತ್ತಾರೆ.

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಸುಮಾರು 10 ಗುಡ್ಡಗಳ ನಡುವೆ ರ್ದುಬೈದ್ಯವಾಗಿ ನಿರ್ಮಾಣ ಮಾಡಿದ 4 ಪ್ರಧಾನವಾದ ದ್ವಾರಗಳಲ್ಲಿ 24 ಗಂಟೆಗಳ ಕಾಲ ಪ್ರಹಾರವಿರುತ್ತಿತ್ತು. ಶತ್ರುಗಳು ಯಾರು ಕೂಡ ಈ ಕೋಟೆಗಳನ್ನು ದಾಟಿ ಒಳಗೆ ಪ್ರವೇಶ ಮಾಡಲು ಯಾವುದೇ ಅವಕಾಶವಿರಲಿಲ್ಲ. 1000 ವರ್ಷಗಳಿಗಿಂತ ಹಳೆಯದಾದ ಈ ಕೋಟೆಯ ಕಲ್ಲುಗಳು ಮಾತ್ರ ಇಂದಿಗೂ ಹಾಗೆ ಬಲಿಷ್ಟವಾಗಿರುವುದು ಆಶ್ಚರ್ಯಕ್ಕೆ ಗುರಿಯಾಗಿದೆ.

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಕೋಟೆಯ ಪ್ರಹಾರ ಗೋಡೆಯನ್ನು ಅಂತಃಕಪುರಕ್ಕೆ ಸೇರಿಕೊಳ್ಳಲು ಕನಿಷ್ಟ 3 ಕಿ.ಮೀ ಆದರೂ ನಡೆಯಬೇಕಾಗಬಹುದು. ಈ ಮೂರು ಕಿ.ಮೀಗಳ ಪ್ರದೇಶದಲ್ಲಿ ಎಷ್ಟೋ ಅದ್ಭುತವಾದ ನಿರ್ಮಾಣಗಳು ಪ್ರವಾಸಿಗರಿಗೆ ಆಶ್ಚರ್ಯಗೊಳಿಸದೇ ಇರಲಾರದು. ಅಂತಃಪುರಕ್ಕೆ ತೆರಳುವ ದಾರಿಯಲ್ಲಿ 2 ರಹದಾರಿಗಳು ಇರುತ್ತವೆ. ನಡೆದುಕೊಂಡು ಹೋಗುವವರಿಗೆ ಮೆಟ್ಟಿಲು ಮಾರ್ಗಗಳು ಹಾಗೆಯೇ ರಾಜರು ಹಾಗು ಅವರ ಪರಿವಾರ ಜೊತೆಗೆ ಕುದುರೆಯ ಮೂಲಕ ತೆರಳಲು ಮತ್ತೊಂದು ಮಾರ್ಗ ಕೂಡ ಇಲ್ಲಿದೆ.

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಕೋಟೆಗೆ ಪ್ರವೇಶಿಸಿದ ಹೊಸ ಶತ್ರುಗಳಿಗೆ ಯಾವುದೇ ರೀತಿಯ ಅರ್ಥವಾಗದ ರೀತಿಯಲ್ಲಿ ಮಾರ್ಗವನ್ನು ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಹೋಗುಬೇಕಾಗಿರುವ ಮಾರ್ಗ ತಿಳಿದೇ ಇರುವಾಗ ರಾಜರ ಸೈನ್ಯವು ಅವರ ಮೇಲೆ ದಾಳಿ ಮಾಡಬಹುದಾಗಿತ್ತು. ಇಲ್ಲಿ ಪ್ರತಿಯೊಂದು ದಾರಿಯೂ ಕೂಡ ಯಾರಿಗೂ ಅರ್ಥವಾಗದ ಮಾರ್ಗವಾಗಿರುತ್ತದೆ.

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

4 ಮಹಾದ್ವಾರಗಳು ಕೂಡ ವಿಚಿತ್ರವಾದ ಪದ್ಮವ್ಯೂಹವನ್ನು ಹೊಂದಿದೆ ಎಂದೇ ಹೇಳಬಹುದು. 3 ಪ್ರವೇಶ ದ್ವಾರವನ್ನು ದಾಟಿದ ನಂತರ ರಾಜರ ಅಂತಃಪುರಕ್ಕೆ ಪ್ರವೇಶವನ್ನು ಪಡೆಯಬಹುದು. ಇಂಥಹ ತಿಳಿಯದ ಮಾರ್ಗಗಳು ಈ ರಾಚಕೊಂಡ ಕೋಟೆಯಲ್ಲಿ ಅನೇಕವಿವೆ ಎಂದೇ ಹೇಳಬಹುದು.

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಇಲ್ಲಿನ ಅದ್ಭುತವಾದ ಕೋಟೆಯ ಸೌಂದರ್ಯಕ್ಕೆ ಅಂದಿನ ಶಿಲ್ಪಿಗಳ ಕಲಾ ಸೌಂದರ್ಯಕ್ಕೆ ಪ್ರತೀಕವೆಂದೇ ಹೇಳಬಹುದು. ಇಲ್ಲಿ ಸೈನಿಕರ ಕೊಠಡಿಗಳನ್ನು ಕೂಡ ನೀವು ವಿಕ್ಷೀಸಬಹುದು. 7 ಅಥವಾ 8 ನೇ ಶತಮಾನದ ಕಾಲದಲ್ಲಿ ರಾಚಕೊಂಡವನ್ನು ರಾಜಾಛಲ ಎಂದು ಕೂಡ ಕರೆಯುತ್ತಿದ್ದರು ಎಂದು ಚರಿತ್ರೆಕಾರರು ಹೇಳುತ್ತಾರೆ.

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಭದ್ರಾಚಲಂ, ಶೇಷಾಚಲಂ, ಸಿಂಹಾಚಲಂ, ಅರುಣಾಚಲಂ ಈ ವಿಧವಾಗಿ ಪುಣ್ಯಕ್ಷೇತ್ರವಾಯಿತೋ ಅದೇ ವಿಧವಾಗಿ ಆಗಿನ ಕಾಲದಲ್ಲಿ ರಾಜಛಲವು ಕೂಡ ಪುಣ್ಯಕ್ಷೇತ್ರದ ಕೇಂದ್ರವಾಗಿ ನೆಲೆಸಿತ್ತು ಎಂದು ಚರಿತ್ರೆಕಾರರು ಭಾವಿಸುತ್ತಾರೆ. ಒಂದು ವಿಧವಾಗಿ ಹೇಳಬೇಕೆಂದರೆ ಇದು ಕೇವಲ ರಾಚಕೊಂಡ ಅಲ್ಲ, ಬದಲಾಗಿ ರತ್ನಾಲ ಕೊಂಡ. ಏಕೆಂದರೆ ಈ ಬೆಟ್ಟದಲ್ಲಿನ ಪ್ರತಿಯೊಂದು ಕಲ್ಲಿಗೂ ಒಂದು ಚರಿತ್ರೆ ಇದೆ.

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಈ ಕೋಟೆಯು ಸಮುದ್ರ ಮಟ್ಟದಿಂದ ಸುಮಾರು 600 ಮೀಟರ್ ಎತ್ತರದಲ್ಲಿದೆ ನಿರ್ಮಾಣ ಮಾಡಿದ ಅದ್ಭುತವಾದ ಕೋಟೆಯ ನಿರ್ಮಾಣವು ತೆಲಂಗಾಣ ರಾಜ್ಯದ ರಾಜಧಾನಿಗೆ ಅತ್ಯಂತ ಸಮೀಪದಲ್ಲಿಯೇ ಇದೆ. ರಾಜರು ನಿವಾಸಿಸುತ್ತಿದ್ದ ಅಂತಃಪುರದಲ್ಲಿ ಕಾಲು ಇಡವ ಮೊದಲು 3 ಸೆಕ್ಯೂರಿಟಿ ಪಾಯಿಂಟ್‍ಗಳನ್ನು ದಾಟಬೇಕಾಗುತ್ತದೆ.

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಕೋಟೆಯಲ್ಲಿ ಎಲ್ಲಿ ನೋಡಿದರೂ ಕೂಡ ಅಲ್ಲೆಲ್ಲಾ ಶೈವ ಕ್ಷೇತ್ರಗಳು ದರ್ಶನವನ್ನು ನೀಡುತ್ತದೆ. ಪ್ರತಿ ದೇವಾಲಯದಲ್ಲಿಯೂ ಶಿವಲಿಂಗ, ವೀರಭದ್ರ, ಗಣಪತಿ ವಿಗ್ರಹಗಳು ಇರುತ್ತವೆ. ಆದರೆ ಅವೆಲ್ಲಾ ಪ್ರಸ್ತುತ ಶಿಥಿಲಾವಸ್ಥೆಗೆ ಸೇರಿಕೊಂಡಿವೆ. ದೇವಾಲಯದ ನಿರ್ಮಾಣದ ಶೈಲಿಯು ಕಲಾತ್ಮಕವಾಗಿ ನಿರ್ಮಾಣ ಮಾಡಿದ್ದಾರೆ. ಈ ನಿರ್ಮಾಣವನ್ನು ನೋಡಿದರೆ ಆ ಕಾಲದ ರಾಚಕೊಂಡ ರಾಜರ ಕಲಾ ದೃಷ್ಟಿ ಹಾಗು ಅಭಿರುಚಿಯನ್ನು ಕಾಣಬಹುದು.

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಇಲ್ಲಿನ ಶಿವಾಲಯದಲ್ಲಿ ಮಹಾಶಿವರಾತ್ರಿಯ ಹಬ್ಬದಂದು ಸ್ಥಳೀಯ ಭಕ್ತರು ಪೂಜೆಗಳನ್ನು ನಿರ್ವಹಿಸುತ್ತಾರೆ. ಕೋಟೆಯಲ್ಲಿ ಬೋಲೆ ಸಾಹೇಬ್ ಎಂಬ ವೀರ ಯೋಧನ ಸಮಾಧಿ ಕೂಡ ಕಾಣಿಸುತ್ತದೆ. ರಾಚಗುಡ್ಡದ ಮೇಲೆ ಇಂದಿಗೂ 5 ಮನೆ ನಿರ್ಮಾಣ ಕೂಡ ಇವೆ. ಇದರ ಮುಂಭಾಗದಲ್ಲಿ ಈಜು ಕೊಳವನ್ನು ಕೂಡ ನಾವು ಕಾಣಬಹುದಾಗಿದೆ. ಆಶ್ಚರ್ಯ ಏನಪ್ಪ ಎಂದರೆ ಯಾವುದೇ ಕಾಲದಲ್ಲಿಯೂ ಕೂಡ ಇಲ್ಲಿನ ನೀರು ಮಾತ್ರ ಹಾಗೆಯೇ ಇರುತ್ತದೆ.

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ರಾಜ ಮನೆತನದ ಬಾರಿಕೆಯನ್ನು ತೀರಿಸಿದ ಕೊಳ ಎಂದು ಭಾವಿಸಲಾಗಿದೆ. ಕೋಟೆಯಲ್ಲಿ ಹಲವಾರು ಪುಷ್ಪ ತೋಟಗಳನ್ನು ನಿರ್ಮಾಣ ಮಾಡಿದ್ದರು. ಆ ಕಾಲದಲ್ಲಿ ಎಲ್ಲಿ ನೋಡಿದರು ಆಹ್ಲಾದಕರವಾದ ವಾತಾವರಣವು ಇತ್ತು ಎಂದು ಚರಿತ್ರೆಕಾರರು ಹೇಳುತ್ತಿದ್ದಾರೆ. ಇಲ್ಲಿಂದ ಸ್ವಲ್ಪ ದೂರದಲ್ಲಿ ಮಂತ್ರಿಗಳಿಗೆ ಸಂಬಂಧಿಸಿದಂತೆ ನಿವಾಸಗಳು ಇದ್ದವಂತೆ. ಇಲ್ಲಿ ಆಶ್ಚರ್ಯಕರವಾದ ಸಂಕಿಳ್ಳ ಬಾವಿ ಕೂಡ ಇದೆ.

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಆ ಬಾವಿಯ ಬಗ್ಗೆ ಯಾರಿಗೂ ಅಷ್ಟಾಗಿ ಅವಗಹನೆ ಇಲ್ಲ. ಈ ಬಾವಿಯಲ್ಲಿ ಗುಪ್ತ ನಿಧಿಗಳು ಇವೆ ಎಂದು ಸ್ಥಳೀಯರ ಕಥನವಾಗಿದೆ. ಇದರಲ್ಲಿನ ನಿಧಿಯ ಆಸೆಗಾಗಿ ಬಾವಿಯಲ್ಲಿ ಇಳಿದು ಅನೇಕ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರಂತೆ. ಆ ಕಾಲದಲ್ಲಿ ಶತ್ರು ಸೈನಿಕರು ಮಾಡಿದ ಶಿಕ್ಷೆಗಾಗಿ ಈ ಬಾವಿಯಲ್ಲಿ ತಳ್ಳುತ್ತಿದ್ದರು ಎಂದು ಹೇಳುತ್ತಾರೆ. ರಾಚಕೊಂಡ ಗುಟ್ಟದಲ್ಲಿ ಈ ಬಾವಿಗೆ ವಿಶೇಷವಾದ ಚರಿತ್ರೆ ಕೂಡ ಇದೆ.

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಪದ್ಮವ್ಯೂಹವನ್ನು ಹಾಗು ಗುಪ್ತನಿಧಿಯನ್ನು ಹೊಂದಿರುವ ಅದ್ಭುತವಾದ ಕೋಟೆ ಇದು....

ಈ ಕಟ್ಟಡಗಳ ಸ್ತಂಭಗಳ ನಿರ್ಮಾಣದ ಮೇಲೆ ಕಾಕತೀಯ ವಂಶಸ್ಥರ ರಾಜ ಮುದ್ರೆಗಳು ಕಾಣಿಸುತ್ತವೆ. ಬೆಟ್ಟದ ಮೇಲೆ ಅಂತಃಪುರಕ್ಕೆ ನೇರವಾಗಿ ನೀರಿನ ಮಾರ್ಗವನ್ನು ಕೂಡ ಇಲ್ಲಿ ಏರ್ಪಾಟು ಮಾಡಿದ್ದಾರೆ. ಇದನ್ನು ನೋಡಿದರೆ ಅವರ ಸಂಕೇತಿಕ ನೈಪುಣ್ಯತೆಯನ್ನು ಎಷ್ಟು ಪ್ರಭಾವದುದು ಊಹಿಸಿಕೊಳ್ಳಬಹುದು. ಈ ಕೋಟೆಯು ಹೈದ್ರಾಬಾದ್‍ನಿಂದ ನಾಗರ್ಜುನ ಸಾಗರಕ್ಕೆ ತೆರಳುವ ಪ್ರಧಾನ ಮಾರ್ಗದಲ್ಲಿ ಇಬ್ರಹಿಂ ಪಟ್ಟಣ ಮಂಡಲದಲ್ಲಿ ಮಂಚಾಲಗ್ರಾಮಕ್ಕೆ 8 ಕಿ.ಮೀ ದೂರದಲ್ಲಿದೆ. ಹೈದ್ರಾಬಾದ್‍ನಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಈ ಕೋಟೆಗೆ ಸುಲಭವಾಗಿ ಸೇರಿಕೊಳ್ಳಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ