• Follow NativePlanet
Share
» »ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

Written By:

ಉತ್ತರ ಭಾರತ ದೇಶದಲ್ಲಿನ ಉತ್ತರಖಂಡದ ಒಂದು ಪ್ರಸಿದ್ಧವಾದ ಪ್ರವಾಸಿ ಕೇಂದ್ರವಾಗಿದೆ. ಈ ಪ್ರದೇಶವು ಪ್ರಪಂಚ ವ್ಯಾಪಕವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ದೇವತೆಗಳು ಭೂಮಿ ಎಂದೇ ಪ್ರಸಿದ್ಧಿ ಹೊಂದಿರುವ ಉತ್ತರಖಂಡವು ಭೂಮಿಯ ಮೇಲೆ ಇರುವ ಸ್ವರ್ಗ ಎಂದೇ ಕರೆಯುತ್ತಾರೆ. ಪ್ರಪಂಚದಲ್ಲಿನ ಅದ್ಭುತವಾದ ದೃಶ್ಯವನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಉತ್ತರ ಖಂಡ ರಾಜ್ಯಕ್ಕೆ ಉತ್ತರದಲ್ಲಿ ಟಿಬೆಟ್ ಇದ್ದು, ಪೂರ್ವದ ಕಡೆ ನೇಪಾಳ್ ದೇಶದ ಸರಿಹದ್ದುವಿನಲ್ಲಿದೆ. ಉತ್ತರ ಖಂಡದಲ್ಲಿ ವಾತಾವಣರವು 2 ಪ್ರಧಾನವಾದ ಕಾಲಗಳು ಇರುತ್ತವೆ. ಅವುಗಳೆಂದರೆ ಅದು ಚಳಿಗಾಲ ಮತ್ತು ಮಳೆಗಾಲ. ಈ ಪ್ರದೇಶದ ವಾತಾವರಣವು ಅತ್ಯಂತ ಆಹ್ಲಾದಕರವಾಗಿರುತ್ತದೆ.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ಪ್ರದೇಶದ ಪ್ರವಾಸಕ್ಕೆ ಬೇಸಿಗೆ ಕಾಲ ಅತ್ಯುತ್ತಮವಾದುದು. ಚಳಿಗಾಲದಲ್ಲಿಯೂ ಕೂಡ ಪ್ರವಾಸ ಮಾಡಬಹುದು. ಆದರೆ ಈ ಕಾಲದಲ್ಲಿ ಕೆಲವು ಪ್ರದೇಶದಲ್ಲಿ ಅಧಿಕ ಮಂಜಿನಿಂದ ಕೂಡಿರುವುದರಿಂದ ತಾಣಗಳನ್ನು ಸಂಪೂರ್ಣವಾಗಿ ಅಸ್ವಾಧಿಸಲು ಸಾಧ್ಯವಾಗುವುದಿಲ್ಲ. ಉತ್ತರಾಖಂಡದಲ್ಲಿ ಅಧಿಕಾರ ಭಾಷೆ ಹಿಂದಿ. ಆದರೆ ವಿವಿಧ ಭಾಗಗಳಲ್ಲಿ ಅನೇಕ ಸ್ಥಳೀಯ ಭಾಷೆಗಳನ್ನು ಮಾತನಾಡುತ್ತಾರೆ.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಇಲ್ಲಿನ ಹಚ್ಚ ಹಸಿರಿನ ಪ್ರಕೃತಿಗಳು, ಮಂಜಿನಿಂದ ಕೂಡಿರುವ ಹಿಮಾಲಯ ಪರ್ವತಗಳು, ದಕ್ಷಿಣ ದಿಕ್ಕಿಗೆ ಇರುವ ಡೂನ್ ಕಣಿವೆಗಳು ಎಂಥವರನ್ನು ಮಂತ್ರ ಮುಗ್ಧರನ್ನಾಗಿಸದೇ ಬಿಡದು. ಯಮನಾ ಬ್ರಿಡ್ಜ್, ನಾಗ್ ಟಿಬ್ಬಾ, ಧನೋಲ್ತಿ ಇನ್ನು ಅನೇಕ ಆಕರ್ಷಣೆಗಳಿಗೂ ಕೂಡ ಇಲ್ಲಿ ಭೇಟಿ ನೀಡಿ ಬರಬಹುದು.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಆ ನಾಲ್ಕು ಪುಣ್ಯಕ್ಷೇತ್ರಗಳ ಪ್ರವಾಸವನ್ನು ಚಾರ್ ಧಾಂ ಯಾತ್ರಾ ಎಂದು ಕರೆಯುತ್ತಾರೆ. ಚಾರ್ ಎಂದರೆ 4 ಎಂದರ್ಥ. ಆ ನಾಲ್ಕು ಕ್ಷೇತ್ರಗಳು ಯಾವುವು ಎಂದರೆ ಬದ್ರಿನಾಥ್, ದ್ವಾರಕೆ, ಪೂರಿ ಮತ್ತು ರಾಮೇಶ್ವರ.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಶ್ರೀ ಮಹಾವಿಷ್ಣು ದೇವನಾಗಿ, ಮಂಜಿನಿಂದ ಕೂಡಿರುವ ನೀಲಕಂಠ ಶಿಖರದ ಮೇಲೆ ನೆಲೆಸಿದ್ದಾನೆ. ಇದನ್ನು ಹರಿದ್ವಾರದಿಂದ ಒಂದು ದಿನದ ಪ್ರವಾಸದಲ್ಲಿಯೂ ಕೂಡ ಸಂದರ್ಶಿಸಬಹುದು. ಈ ನಾಲ್ಕು ತೀರ್ಥಕ್ಷೇತ್ರವನ್ನು ದರ್ಶನ ಮಾಡಿಕೊಳ್ಳಬಹುದು. ಈ 4 ಕ್ಷೇತ್ರವನ್ನು ದರ್ಶನ ಮಾಡಿದರೆ ಮೋಕ್ಷ ನಿಮ್ಮ ಸ್ವಂತ! ಈ ದೇವಾಲಯಕ್ಕೆ ಹರಿದ್ವಾರ ಅಥವಾ ರಿಷಿಕೇಶ್‍ನಿಂದ ಜೋಷಿ ಮಠಕ್ಕೆ ತಲುಪಬೇಕು. ಸುಮಾರು 10 ರಿಂದ 12 ಗಂಟೆಗಳ ದೀರ್ಘವಾದ ಪ್ರಯಾಣ ಇದಾಗಿದೆ. ಬಸ್ಸುಗಳು ಬೆಳಗ್ಗೆ 4 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ದೊರೆಯುತ್ತವೆ.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಜೋಷಿ ಮಠದಿಂದ ಬದರಿನಾಥ್‍ಗೆ ಕೇವಲ 2 ಗಂಟೆಯ ಪ್ರಯಾಣ. ಒಂದೇ ದಾರಿಯಾದ್ದರಿಂದ ಕೆಲವು ಸಮಯಗಳ ಕಾಲ ಮಾತ್ರವೇ ಈ ಮಾರ್ಗದಲ್ಲಿ ಅನುಮತಿಯನ್ನು ನೀಡುತ್ತಾರೆ. ಸರೋವರ್ ಪೋರ್ಟಿಕೊ ಅಥವಾ ಗರ್ವಾಲ್ ಮಂಡಲ ವಿಕಾಸ ನಿಗಮ್‍ನಲ್ಲಿ ವಸತಿಯನ್ನು ಹೊಂದಬಹುದು.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಇಲ್ಲಿ ವಾಲಿ ಆಫ್ ಫ್ಲವರ್ಸ್ ಕೂಡ ನೋಡಬಹುದು. ಬಸ್ಸಿನಲ್ಲಿ ಜೋಷಿ ಮಠದಿಂದ ಗೋವಿಂದ ಘಾಟ್‍ವರೆಗೆ ಹೋಗುತ್ತದೆ. ಅಲ್ಲಿಂದ ಟ್ರೆಕ್ಕಿಂಗ್ ಪ್ರಾರಂಭವಾಗುತ್ತದೆ. ಟ್ರೆಕ್ಕಿಂಗ್ ಪ್ರೇಮಿಗಳು ಇಲ್ಲಿ ಟ್ರೆಕ್ಕಿಂಗ್‍ಗೆ ತೆರಳಬಹುದಾಗಿದೆ.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ನಾಲ್ಕು ಪುಣ್ಯ ಕ್ಷೇತ್ರಗಳ ಪ್ರವಾಸವನ್ನು ಚಾರ್ ಧಾಂ ಯಾತ್ರೆ ಎಂದು ಕರೆಯುತ್ತಾರೆ. ಅವುಗಳು ಯಾವುವು ಎಂದರೆ ಬದರಿನಾಥ, ದ್ವಾರಕ, ಪೂರಿ ಮತ್ತು ರಾಮೇಶ್ವರಂ. ಆದರೆ ಇಷ್ಟು ವಿಸೃತ ಪರಿಧಿಯಲ್ಲಿ ಪ್ರವಾಸ ಮಾಡದೇ ಇರುವವರು ಉತ್ತರಖಂಢದಲ್ಲಿನ ಚಾರ್ ಧಾಂ ಯಾತ್ರೆ ಸುಲಭವಾಗಿ ಮಾಡಬಹುದು.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಉತ್ತರಖಂಢದಲ್ಲಿನ ಚಾರ್ ಧಾಂ ಯಾತ್ರೆ ಎಂದರೆ, ನಾಲ್ಕು ಪವಿತ್ರವಾದ ನದಿಗಳು ಇರುವ ಪುಣ್ಯ ಸ್ಥಳವೇ ಆಗಿದೆ. ಇಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ತೊಲಗಿ ಪುಣ್ಯ ಲಭಿಸುತ್ತದೆ ಎಂದು ಭಕ್ತರ ಪ್ರಬಲವಾದ ನಂಬಿಕೆಯಾಗಿದೆ.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಆ ನದಿಗಳು ಯಮುನಾದಲ್ಲಿ ಹುಟ್ಟಿದ ಯಮುನೋತ್ರಿ, ಗಂಗದಲ್ಲಿ ಹುಟ್ಟಿದ ಗಂಗೋತ್ರಿ, ಮಂದಾಕಿನಿ ಮೂಲವಾದ ಕೇದಾರನಾಥ, ಅಲಕಾನಂದದಲ್ಲಿರುವ ಬದರಿನಾಥ. ಈ ನಾಲ್ಕು ನದಿಗಳನ್ನು ದರ್ಶನ ಮಾಡಿದರೆ... ಮೋಕ್ಷ ಲಭಿಸುತ್ತದೆ. ಈ ಅದ್ಭುತವಾದ ದೇವಾಲಯಕ್ಕೆ ದಿನನಿತ್ಯ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಗಂಗೋತ್ರಿ ಪವಿತ್ರ ಗಂಗಾ ನದಿ ಹುಟ್ಟಿದ ಪ್ರದೇಶ. ಪ್ರತಿ ವರ್ಷ ಸುಮಾರು 3 ಲಕ್ಷಕ್ಕಿಂತ ಹೆಚ್ಚು ಯಾತ್ರಿಕರು ಭೇಟಿ ನೀಡುತ್ತಾರೆ. ಏಪ್ರಿಲ್‍ನ ಕೊನೆಯ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಅಕ್ಷಯ ತೃತೀಯದ ದಿನದಂದು ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿರುತ್ತದೆ.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ದಿನ ಮುಖ್ಯ ಮಠ ದೇವಾಲಯದಿಂದ ಮಾತ ಗಂಗಾ ದೇವಿಯನ್ನು ಒಂದು ಉತ್ಸವಕ್ಕೆ ತೆಗೆದುಕೊಂಡು ಬರುತ್ತಾರೆ. ಪ್ರತಿ ವರ್ಷ ದೀಪಾವಳಿ ಹಬ್ಬವಾದ ನಂತರ ಮಾತ ಗಂಗಾ ಮಾತೆಯನ್ನು ಮುಖ್ಯಮಠ ದೇವಾಲಯಕ್ಕೆ ತಲುಪಿಸುತ್ತಾರೆ.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಗಂಗೋತ್ರಿ ದೇವಾಲಯವು ರಿಷಿಕೇಶ್ ನಿಂದ ಉತ್ತರಕಾಶಿಯ ಮೂಲಕ ಸೇರಿಕೊಳ್ಳಬಹುದು. ಬಸ್ಸು ಅಥವಾ ಜೀಪ್‍ಗಳು ದೊರೆಯುತ್ತವೆ. ವಸತಿ ಸೌಕರ್ಯವನ್ನು ಇತರ ಗೆಸ್ಟ್ ಹೌಸ್‍ನ ಮೂಲಕ ತೆಗೆದುಕೊಳ್ಳಬಹುದು.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಗಂಗೆ ಹುಟ್ಟಿದ ಗೋಮುಖ್ ಪ್ರದೇಶಕ್ಕೂ ಕೂಡ ಟ್ರೆಕ್ಕಿಂಗ್‍ಗೆ ತೆರಳಬಹುದು. ಆದರೆ ದಿನಕ್ಕೆ 6 ಗಂಟೆಗಳ ಕಾಲ ಟ್ರೆಕ್ಕಿಂಗ್ ಸತತ ಮೂರು ದಿನಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಯಮುನೋತ್ರಿ ಪ್ರದೇಶವು ಇತರ ಮೂರು ಪ್ರದೇಶಗಳಿಗಿಂತ ಕಡಿಮೆ ಅಭಿವೃದ್ಧಿಯನ್ನು ಹೊಂದಿದೆ. ಈ ಪ್ರದೇಶವು ಯಮುನಾ ನದಿ ಮೂಲಸ್ಥಾನಕ್ಕೆ ಸಮೀಪದಲ್ಲಿರುತ್ತದೆ. ತಾಜ್ ಮಹಲ್ ಪ್ರದೇಶದ ಸಮೀಪದಲ್ಲಿ ಪ್ರವಹಿಸುವ ಈ ನದಿ ಭಾರತ ದೇಶದಲ್ಲಿಯೇ 2 ನೇ ಪವಿತ್ರವಾದ ನದಿ.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಯಮುನೋತ್ರಿ ದೇವಾಲಯವು ಹನುಮಾನ್ ಚಟ್ಟಿಗೆ 14 ಕಿ.ಮೀ ದೂರದಲ್ಲಿದೆ. ರಿಷಿಕೇಶ್‍ನಿಂದ 8 ಗಂಟೆ, ಮುಸ್ಸೂರಿ ಹಿಲ್ ಸ್ಟೇಷನ್‍ನಿಂದ 6 ಗಂಟೆ ಪ್ರಯಾಣ ಮಾಡಬೇಕಾಗುತ್ತದೆ.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಯಮುನೋತ್ರಿಯಲ್ಲಿ ರಾತ್ರಿ ತಂಗಿದ್ದರೆ ಸಾಯಂಕಾಲ ಹಾರತಿ ನೋಡಬಹುದು. ನಿವಾಸ ಅಥವಾ ವಸತಿ ದೇವಾಲಯ ಸಮೀಪ ಅಥವಾ ಜಾನಕಿ ಚಟ್ಟಿ, ಹನುಮಾನ್ ಚಟ್ಟಿಯಲ್ಲಿ ತೆಗೆದುಕೊಳ್ಳಬಹುದು.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಕೇದಾರನಾಥದಲ್ಲಿ ಶಿವ ಭಗವಾನನ ದೇವಾಲಯವಿದೆ. ದ್ವಾದಶ ಜ್ಯೋತಿರ್‍ಲಿಂಗದಲ್ಲಿ ಇದು ಪ್ರಧಾನವಾದುದು. ಚಾರ್ ಧಾಂನಲ್ಲಿ ಇದು ಅತ್ಯಂತ ಪ್ರಾಚೀನವಾದುದು. ಹಾಗಾಗಿಯೇ ಈ ಸ್ವಾಮಿ ದರ್ಶನ ಕೋರಿ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಬದರಿನಾಥ ದೇವಾಲಯವು ಚಾರ್ ಧಾಂ ಯಾತ್ರೆ ದೇವಾಲಯದಲ್ಲಿ ಪ್ರಸಿದ್ಧವಾದುದು. ಹಾಗೆಯೇ ಸುಲಭವಾಗಿ ಸೇರಿಕೊಳ್ಳಬಹುದು.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ರಸ್ತೆ ಮಾರ್ಗವಾಗಿ
ಗಂಗೋತ್ರಿ ಸಮೀಪದಲ್ಲಿರವ ನಗರದಿಂದ ಬಸ್ಸುಗಳು ದೊರೆಯುತ್ತವೆ. ಎಲ್ಲಾ ನಗರಗಳಿಂದ ಸರ್ಕಾರಿ ಹಾಗು ಖಾಸಗಿ ಬಸ್ಸುಗಳು ಲಭ್ಯವಿವೆ. ಇದರಿಂದ ಸುಲಭವಾಗಿ ತಲುಪಬಹುದಾಗಿದೆ.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ರೈಲ್ವೆ ಮಾರ್ಗವಾಗಿ
ಗಂಗೋತ್ರಿಯಿಂದ ಸುಮಾರು 250 ಕಿ.ಮೀ ದೂರದಲ್ಲಿ ರಿಷಿಕೇಷ್ ರೈಲ್ವೆ ನಿಲ್ದಾಣವಿದೆ. ಈ ರೈಲ್ವೆ ನಿಲ್ದಾಣವು ಭಾರತದಲ್ಲಿನ ಅತಿ ಮುಖ್ಯವಾದ ನಗರಗಳಿಗೆಲ್ಲಾ ಸಂಪರ್ಕ ಸಾಧಿಸುತ್ತದೆ. ಇಲ್ಲಿನಿಂದ ಟ್ಯಾಕ್ಸಿಯ ಮೂಲಕ ಅಥವಾ ಕ್ಯಾಬ್‍ನ ಮೂಲಕ ಸುಲಭವಾಗಿ ತೆರಳಬಹುದಾಗಿದೆ.

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ

ವಿಮಾನ ಮಾರ್ಗದ ಮೂಲಕ
ಗಂಗೋತ್ರಿಗೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಜೋಲಿ ಗ್ರಾಂಟ್ ಏರ್ ಪೋರ್ಟ್. ಇದು ನಗರದಿಂದ ಸುಮಾರು 280 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯ ಮೂಲಕ ಸುಲಭವಾಗಿ ಗಂಗೋತ್ರಿಗೆ ಸೇರಿಕೊಳ್ಳಬಹುದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ