• Follow NativePlanet
Share
Menu
» »ಭಾರತದ ಗ್ರೇಟ್ ಲಿವಿಂಗ್ ಚೋಳ ಟೆಂಪಲ್ಸ್ ಯಾವುದು ಗೊತ್ತೆ?

ಭಾರತದ ಗ್ರೇಟ್ ಲಿವಿಂಗ್ ಚೋಳ ಟೆಂಪಲ್ಸ್ ಯಾವುದು ಗೊತ್ತೆ?

Written By: Sowmyabhai

ಬ್ರಹದೇಶ್ವರ ದೇವಾಲಯವು ದಕ್ಷಿಣ ಭಾರತದ ಪ್ರಖ್ಯಾತ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ತಮಿಳುನಾಡಿನ ತಂಜಾವೂರ್‍ನಲ್ಲಿದೆ. ಈ ದೇವಾಲಯಕ್ಕೆ ಇನ್ನೋಂದು ಹೆಸರಿದೆ ಅದುವೇ ರಾಜರಾಜೇಶ್ವರಂ ದೇವಾಲಯ. ಇದರ ವಾಸ್ತು ಶಿಲ್ಪವು ವಿಶ್ವದಲ್ಲಿಯೇ ಸಂಪೂರ್ಣವಾಗಿ ಬೆಣಚು ಶಿಲೆ ಅಥವಾ ಗ್ರ್ಯಾನೈಟ್‍ನಲ್ಲಿ ನಿರ್ಮಿತವಾದ ಏಕೈಕ ದೇವಾಲಯ ಈ ಬ್ರಹದೇಶ್ವರ ಚೋಳರ ಅರಸ ರಾಜಾ ರಾಜಾ ಚೋಳನ ಸ್ಮರಣಾರ್ಥಕ್ಕೆ 19 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ದೇವಾಲಯವಿದು. ಈ ಕಟ್ಟಡವು ತನ್ನ ವಾಸ್ತುಶಿಲ್ಪದಿಂದ ವೈಭವಯುತವಾಗಿದೆ. ಈ ದೇವಾಲಯವನ್ನು ಯೊನೆಸ್ಕುದ ವಿಶ್ವ ಪರಂಪರೆ ಸ್ಥಳಗಳಲ್ಲಿ ಇದು ಒಂದಾಗಿದ್ದು, "ಗ್ರೇಟ್ ಲಿವಿಂಗ್ ಚೋಳ ಟೆಂಪಲ್ಸ್" ಎಂದೂ ಬಣ್ಣಿಸಲಾಗಿದೆ. ಇಲ್ಲಿಗೆ ಹಲವಾರು ಭಕ್ತರು, ಪ್ರವಾಸಿಗರು ದಿನ ನಿತ್ಯ ಭೇಟಿ ನೀಡುತ್ತಿರುತ್ತಾರೆ. ಇದೊಂದು ಪುಣ್ಯ ಕ್ಷೇತ್ರವಾಗಿದ್ದು ಮಹಾ ದೇವ ಶಿವನು ಲಿಂಗದ ರೂಪದಲ್ಲಿ ಬ್ರಹದೇಶ್ವರ ದೇವಾಲಯದಲ್ಲಿ ನೆಲೆಸಿದ್ದಾನೆ.

ಬ್ರಹದೇಶ್ವರ ದೇವಾಲಯ

ಬ್ರಹದೇಶ್ವರ ದೇವಾಲಯ

ದೇವಾಲಯದ ಸ್ವಾಗತ ದ್ವಾರದಲ್ಲಿ ನಂದಿಯ ಮೂರ್ತಿ ಇದ್ದು, ಇದನ್ನು ಒಂದೇ ಒಂದು ಬಂಡೆಯಲ್ಲಿ ಕೆತ್ತಲಾಗಿದೆ. ನಂದಿಯು 16 ಅಡಿ ಉದ್ದ ಹಾಗೂ 13 ಅಡಿ ಎತ್ತರದಲ್ಲಿದ್ದಾನೆ. ಈ ಬ್ರಹದೇಶ್ವರ ದೇವಾಲಯವು ತಮಿಳನಾಡಿನ ಒಂದು ಅಪರೂಪದ ಗ್ರ್ಯಾನೆಟ್‍ನಿಂದ ನಿರ್ಮಿಸಲಾದ ಸುಂದರವಾದ ದೇವಾಲಯವಾಗಿದೆ. ಇದನ್ನು ದೊಡ್ಡ ದೇವಾಲಯವೆಂದೂ ಸಹಾ ಕರೆಯುತ್ತಾರೆ ಹಾಗೇಯೆ 1000 ವರ್ಷಗಳ ಇತಿಹಾಸ ಈ ಬ್ರಹದೇಶ್ವರ ದೇವಾಲಯ ಹೊಂದಿದೆ. ಇಲ್ಲಿಗೆ ಹಲವಾರು ಭಕ್ತರು, ಪ್ರವಾಸಿಗರು ದಿನ ನಿತ್ಯ ಭೇಟಿ ನೀಡುತ್ತಿರುತ್ತಾರೆ. ಇದೊಂದು ಪುಣ್ಯ ಕ್ಷೇತ್ರವಾಗಿದ್ದು ಮಹಾ ದೇವ ಶಿವನು ಲಿಂಗದ ರೂಪದಲ್ಲಿ ಬ್ರಹದೇಶ್ವರನಾಗಿ ದೇವಾಲಯದಲ್ಲಿ ನೆಲೆಸಿದ್ದಾನೆ.
PC:MADHURANTHAKAN JAGADEESAN

ಬ್ರಹದೇಶ್ವರ ದೇವಾಲಯದ ಇತಿಹಾಸ

ಬ್ರಹದೇಶ್ವರ ದೇವಾಲಯದ ಇತಿಹಾಸ

ಈ ದೇವಾಲಯವನ್ನು ಚೋಳರ ಪ್ರಸಿದ್ದ ಅರಸ ರಾಜಾ ರಾಜಾ ಚೋಳನು ಶಂಕು ಸ್ಥಾಪನೆ ಮಾಡಿದ ಎನ್ನಲಾಗಿದೆ. ಒಂದು ದಿನ ರಾತ್ರಿ ಈ ಅರಸನಿಗೆ ಕನಸಿನಲ್ಲಿ ದೈವವು ದೇವಾಲಯವನ್ನು ನಿರ್ಮಿಸುವಂತೆ ಆದೇಶ ಬಂದಿತು. ಹಾಗಾಗಿ ಅರಸನು ಈ ದೇವಾಲಯವನ್ನು ನಿರ್ಮಿಸಿದ ಎಂಬ ಪ್ರತೀತಿ ಇದೆ. ಈ ಬ್ರಹದೇಶ್ವರದಲ್ಲಿ ಮಹಾ ಶಿವನು ಗರ್ಭಗುಡಿಯಲ್ಲಿ ನೆಲೆಸಿದ್ದಾನೆ.
PC:Vengolis

ವಾಸ್ತು ಶಿಲ್ಪ

ವಾಸ್ತು ಶಿಲ್ಪ

ಈ ದೇವಾಲಯವು ದ್ರಾವಿಡ ಶೈಲಿಯ ವಾಸ್ತು ಶಿಲ್ಪವನ್ನು ಹೊಂದಿದೆ. ಈ ದೇವಾಲಯದ ಪ್ರಧಾನ ದೇವಾಲಯವು ಅತ್ಯಂತ ವಿಶಾಲವಾಗಿದೆ. ದೇವಾಲಯದ ಒಳಭಾಗದಲ್ಲಿ ದೊಟ್ಟ ಮಂಟಪವಿದೆ. ಈ ಗರ್ಭಗೃಹವು ಚತುಭುರ್ಜದ್ದಾಗಿದ್ದು ಎರಡು ಭಿತ್ತಿ ಕಂಬಗಳ ಮೇಲೆ ನಿಂತಿದೆ. ಮಧ್ಯಭಾಗದ ಕೇಂದ್ರೀಕೃತ ಸ್ಥಳದಲ್ಲಿ ಲಿಂಗದ ಪ್ರತಿಷ್ಟಾಪನೆ ಮಾಡಲಾಗಿದೆ. ದೇವಾಲಯದ ಎಲ್ಲಾ ಭಾಗದಲ್ಲೂ ವರ್ಣಿಸಲಾಗದಂತಹ ಸುಂದರವಾದ ವಾಸ್ತುಶಿಲ್ಪದಿಂದ ಬ್ರಹದೇಶ್ವರ ದೇವಾಲಯವು ಕಂಗೊಳಿಸುತ್ತಿದೆ. ಬ್ರಹದೇಶ್ವರ ದೇವಾಲಯದ ಹಿಂಭಾಗ ಮೈದಾನವಿದೆ. ಇದು ರಾಜಮನೆತನದವರು ಸ್ನಾನಗೃಹವನ್ನಾಗಿ ಬಳಸುವ ವಿಶಾಲವಾದ ಮನೆಯಾಗಿತ್ತು.
PC:.Adityashashtri

ದೇವಾಲಯದ ಒಳಭಾಗದಲ್ಲಿರುವ ದೇವಾಲಯಗಳು

ದೇವಾಲಯದ ಒಳಭಾಗದಲ್ಲಿರುವ ದೇವಾಲಯಗಳು

ಬ್ರಹದೇಶ್ವರ ದೇವಾಲಯದ ಒಳಭಾಗದಲ್ಲಿ ಪ್ರಧಾನ ಮೂರ್ತಿ ಶಿವನ ಜೊತೆಗೆ ಇನ್ನಿತರ ದೇವತಾ ಮೂರ್ತಿಗಳಾದ ದಕ್ಷಿಣ ಮೂರ್ತಿ ಸೂರಿಯನ್(ಸೂರ್ಯ), ಚಂದ್ರನ್(ಚಂದ್ರ) ಹಾಗೇಯೆ ಅಷ್ಟ ದಿಕ್ಕುಗಳ ಪಾಲಕರ ಮೂರ್ತಿಗಳನ್ನು ಕಾಣಬಹುದಾಗಿದೆ. ಈ ವಿಗ್ರಗಳೂ ಕೂಡ 6 ಅಡಿಗಿಂತ ಎತ್ತರದಲ್ಲಿರುವುದನ್ನು ಕಾಣಬಹುದಾಗಿದೆ.
PC:MADHURANTHAKAN JAGADEESAN

ದೇವಾಲಯ ವಿಶಿಷ್ಟ ಲಕ್ಷಣಗಳು

ದೇವಾಲಯ ವಿಶಿಷ್ಟ ಲಕ್ಷಣಗಳು

ಬ್ರಹದೇಶ್ವರ ದೇವಾಲಯವನ್ನು ಸುಮಾರು 130,000 ಟನ್ನಗಳಷ್ಟು ಗ್ರ್ಯಾನೈಟ್ ಬಳಕೆಯಿಂದ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಸುಮಾರು 60 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗಿದೆ. ವಿಶೇಷವೆನೆಂದರೆ ಈ ದೇವಾಲಯದ ಅತ್ಯಂತ ಮಹತ್ವದ ಅಂಶವೆಂದರೆ ಗೋಪುರದ ನೆರಳು ಇದರ ಅವರಣದಲ್ಲೇ ಆಗಲಿ, ನೆಲಕ್ಕೆ ಆಗಲಿ ಬೀಳುವುದಿಲ್ಲ ಎಂದು ನಂಬಲಾಗಿದೆ.
PC:MADHURANTHAKAN JAGADEESAN

ದರ್ಶನ ವೇಳಾಪಟ್ಟಿ

ದರ್ಶನ ವೇಳಾಪಟ್ಟಿ

ಬ್ರಹದೇಶ್ವರ ದೇವಾಲಯದ ದರ್ಶನವು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12:30 ರವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 8:30 ರವರೆಗೆ ತೆರೆದಿರಲಾಗಿತ್ತದೆ.
PC:Vengolis

 ವಿಮಾನ ಮಾರ್ಗದ ಮೂಲಕ:

ವಿಮಾನ ಮಾರ್ಗದ ಮೂಲಕ:

ಬೆಂಗಳೂರಿನಿಂದ ಬ್ರಹದೇಶ್ವರ ದೇವಾಲಯಕ್ಕೆ ವಿಮಾನದ ಮೂಲಕ ತೆರಳಲು ಹತ್ತಿರವಾದ ನಿಲ್ದಾಣವೆಂದರೆ ತಿರುಚಿನಾಪಲ್ಲಿ ಇಲ್ಲಿಂದ ಸುಮಾರು 65 ಕಿ,ಮೀ ದೂರದಲ್ಲಿದೆ.

PC:Vengolis

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ

ಬೆಂಗಳೂರಿನಿಂದ ತಮಿಳುನಾಡಿ ಪ್ರಮುಖ ನಗರಗಳಿಗೆ ರೈಲು ಸಂಪರ್ಕವಿರುವುದರಿಂದ ಸುಲಭವಾಗಿ ತೆರಳಬಹುದು.
PC:Vengolis

ರಸ್ತೆ ಮಾರ್ಗದ ಮೂಲಕ

ರಸ್ತೆ ಮಾರ್ಗದ ಮೂಲಕ

ಬೆಂಗಳೂರಿನಿಂದ ತಮಿಳುನಾಡಿನ ನಗರಗಳಿಗೆ ನೇರವಾದ ಖಾಸಗಿ ಹಾಗೂ ಸರ್ಕಾರದ ಬಸ್ಸುಗಳಿದ್ದು, ಈ ದೇವಾಲಯದ ಸಂಪರ್ಕ ಕಲ್ಪಿಸಬಹುದು.
PC:MADHURANTHAKAN JAGADEESAN

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ