Search
  • Follow NativePlanet
Share
» »ಹೊಸಪೇಟೆ - ಪರಂಪರೆ ಮತ್ತು ಸಂಸ್ಕೃತಿಯ ಪ್ರಪಂಚ

ಹೊಸಪೇಟೆ - ಪರಂಪರೆ ಮತ್ತು ಸಂಸ್ಕೃತಿಯ ಪ್ರಪಂಚ

ಕರ್ನಾಟಕದ ಹೊಸಪೇಟೆ ಪಟ್ಟಣದ ಧೂಳಿನಿಂದ ಕೂಡಿದ ಅವಶೇಷಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನ್ವೇಷಿಸಿ. ಸಾಮಾನ್ಯವಾಗಿ ಹೊಸಪೇಟೆ ಎಂದು ಕರೆಯಲ್ಪಡುವ ಈ ಪಟ್ಟಣವು ತುಂಗಭದ್ರಾ ನದಿ ದಂಡೆಯಲ್ಲಿದೆ. ಈ ಸಣ್ಣ ಪಟ್ಟಣವು ಅಗಾಧವಾದ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದ್ದು ಇದು ವಿಜಯನಗರವನ್ನು ಆಳಿದ ಕೃಷ್ಣದೇವ ರಾಯರ ಆಳ್ವಿಕೆಯ ಕಾಲದಿಂಲೂ ಅಸ್ತಿತ್ವದಲ್ಲಿದೆ. ಇಲ್ಲಿಯ ಪುರಾತನ ಸ್ಮಾರಕಗಳು ನಿಮ್ಮನ್ನು ಎಂದಿಗೂ ನಿರಾಸೆಗೊಳಿಸುವುದಿಲ್ಲ. ಆದುದರಿಂದ ಈ ಪಟ್ಟಣಕ್ಕೆ ಭೇಟಿ ಕೊಡಿ ಮತ್ತು ಇಲ್ಲಿಯ ಭೇಟಿ ನೀಡಲೇ ಬೇಕಾದಂತಹ ಸ್ಥಳಗಳ ಪಟ್ಟಿಯಲ್ಲಿ ಸೇರಿಸಿ

ಹೊಸಪೇಟೆಗೆ ತಲುಪುವುದು ಹೇಗೆ

ವಿಮಾನದ ಮೂಲಕ: ಹೊಸಪೇಟೆಗೆ ಹತ್ತಿರದ ವಿಮಾನ ನಿಲ್ದಾಣವು ಬಳ್ಳಾರಿಯಲ್ಲಿದೆ, ಇದು ಪಟ್ಟಣದಿಂದ ಸುಮಾರು 75 ಕಿ.ಮೀ ದೂರದಲ್ಲಿದೆ.

ರೈಲಿನ ಮೂಲಕ: ಹೊಸಪೇಟೆ ರೈಲು ನಿಲ್ದಾಣವು ಪಟ್ಟಣದ ಹೃದಯಭಾಗದಲ್ಲಿದೆ. ಈ ನಿಲ್ದಾಣವು ದೇಶದ ಎಲ್ಲಾ ಪ್ರಮುಖ ನಗರಗಳಿಂದ ರೈಲುಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

ರಸ್ತೆಯ ಮೂಲಕ: ಹೊಸಪೇಟೆಯಿಂದ ರಾಜ್ಯದ ಎಲ್ಲಾ ಹತ್ತಿರದ ನಗರಗಳು ಮತ್ತು ಪಟ್ಟಣಗಳಿಗೆ ಬಸ್‌ಗಳು ನಿಯಮಿತವಾಗಿ ಚಲಿಸುತ್ತವೆ. ಹೊಸಪೇಟೆಯ ಬಸ್ ನಿಲ್ದಾಣವು ದೇಶದ ಇತರ ಭಾಗಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿರುವುದರಿಂದ ಸಾಕಷ್ಟು ಕಾರ್ಯನಿರತವಾಗಿದೆ.

ಹೊಸಪೇಟೆಗೆ ಭೇಟಿ ನೀಡಲು ಉತ್ತಮ ಸಮಯ
ಹೊಸಪೇಟೆಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಸೆಪ್ಟೆಂಬರ್‌ನಿಂದ ಫೆಬ್ರವರಿ ತಿಂಗಳುಗಳು ಈ ಸಮಯದಲ್ಲಿ ಹವಾಮಾನವು 15 ° ಯಿಂದ 34 ° ಸೆಲ್ಸಿಯಸ್ ವರೆಗಿನ ಸರಾಸರಿ ತಾಪಮಾನದೊಂದಿಗೆ ಆಹ್ಲಾದಕರವಾಗಿರುತ್ತದೆ.

tungha badra dam

1.ತುಂಗಭದ್ರಾ ಅಣೆಕಟ್ಟು

1953ರಲ್ಲಿ ನಿರ್ಮಿಸಲ್ಪಟ್ಟಿರುವ ತುಂಗಭದ್ರಾ ಅಣೆಕಟ್ಟು ತುಂಗಭದ್ರಾ ನದಿಯುದ್ದಕ್ಕೂ ಇದ್ದು ಇದರ ದಡದಲ್ಲಿಯೇ ಹೊಸಪೇಟೆ ಪಟ್ಟಣವು ನೆಲೆಸಿದೆ. ಈ ಅಣೆಕಟ್ಟು ಕರ್ನಾಟಕದಲ್ಲಿಯ ಅತ್ಯಂತ ಪ್ರಮುಖವಾದ ಅಣೆಕಟ್ಟುಗಳಲ್ಲಿ ಒಂದಾಗಿದ್ದು, ಇದು ಸ್ಥಳೀಯರಿಂದ ಕೃಷಿ ನೀರಾವರಿಗೆ ಉಪಯೋಗಿಸಲ್ಪಡುತ್ತದೆ. ವಿದ್ಯುತ್ ಉತ್ಪಾದನೆಯ ಹೊರತಾಗಿಯೂ ಈ ಅಣೆಕಟ್ಟು ಈ ಸ್ಥಳದಲ್ಲಿಯ ಪ್ರವಾಹವನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.
ಈ ಜಲಾಶಯವು ಅತ್ಯಂತ ಹೆಸರುವಾಸಿತಾದ ಪ್ರವಾಸೀ ತಾಣವಾಗಿದ್ದು, ಇದು ಹಲವಾರು ಸಮೃದ್ದವಾದ ಜಲಚರ ಪ್ರಾಣಿಗಳು ಮತ್ತು ಸಾಕಷ್ಟು ಕಾಡುಪ್ರದೇಶಗಳಿಗೆ ನೆಲೆಯಾಗಿದೆ. ಅದರ ಸುಂದರವಾದ ಪರಿಸರದ ಜೊತೆಗೆ ಇಲ್ಲಿ ಫ್ಲೆಮಿಂಗೋಗಳು, ಪೆಲಿಕನ್ಗಳು ಮತ್ತು ಇನ್ನೂ ಹೆಚ್ಚಿನ ಸಂಖ್ಯೆಯ ಅಪರೂಪದ ಪಕ್ಷಿಗಳ ಜಾತಿಗಳನ್ನು ಹೊಂದಿದೆ.

virupakasha temple

2. ವಿರೂಪಾಕ್ಷ ದೇವಾಲಯ

ಯುನೆಸ್ಕೋ ವಿಶ್ವಪರಂಪರೆಯ ತಾಣವೆಂದು ಗುರುತಿಸಲ್ಪಡುವ ವಿರೂಪಾಕ್ಷ ದೇವಾಲಯವು ಅಸಾಮಾನ್ಯ ವಾಸ್ತುಶಿಲ್ಪ ಅದ್ಬುತಗಳಿಗೆ ಉತ್ತಮ ಉದಾಹರಣೆಯಾಗಿದೆ. ದೇವಾಲಯವು ಗರ್ಭಗುಡಿ, ಕಂಬಗಳಿರುವ ಹಾಲ್, ಮುಂಭಾಗದ ಕೋಣೆಗಳು, ಪ್ರವೇಶ ದ್ವಾರಗಳು, ಪ್ರಾಂಗಣ ಮತ್ತು ಸಣ್ಣ ದೇವಾಲಯಗಳನ್ನು ಹೊಂದಿದೆ.
ಪುರಾಣದಲ್ಲಿ ಬರುವ ಹಿಂದೂ ದೇವರಾದ ಶಿವ ದೇವರನ್ನು ಪೂಜಿಸಲ್ಪಡುವ ಈ ದೇವಾಲಯವು 50-ಮೀಟರ್-ಎತ್ತರದ ಗೋಪುರವನ್ನು ಹೊಂದಿದೆ, ಇದು ಹೇಮಕೂಟ ಬೆಟ್ಟದ ತಪ್ಪಲಿನಲ್ಲಿ ತುಂಗಭದ್ರಾ ನದಿಯ ದಕ್ಷಿಣ ದಂಡೆಯಲ್ಲಿದೆ.
ದೇವಾಲಯದ ಬಗ್ಗೆ ಅತ್ಯಂತ ಆಸಕ್ತಿದಾಯಕ ಸಂಗತಿಯೆಂದರೆ, ತುಂಗಭದ್ರಾ ನದಿಯು ತನ್ನ ತಾರಸಿಯ ಉದ್ದಕ್ಕೂ ಹರಿಯುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ, ನಂತರ ಕೆಳಗೆ ಹರಿಯುತ್ತಾ ಮತ್ತು ಅಂತಿಮವಾಗಿ ನಿರ್ಗಮನದ ಕಡೆಗೆ ದಾರಿ ಕಂಡುಕೊಳ್ಳುತ್ತದೆ.
ಗೋಡೆಗಳು ಮತ್ತು ಪ್ರವೇಶದ್ವಾರಗಳನ್ನು ಅಲಂಕರಿಸುವ ಕಲಾತ್ಮಕ ಶಿಲ್ಪಗಳ ಕೆಲವು ಅದ್ಭುತ ಮತ್ತು ಅತ್ಯುತ್ತಮ ಕರಕುಶಲತೆಯಿಂದ ತುಂಬಿರುವ ಈ ದೇವಾಲಯವು ನೋಡಲು ಒಂದು ಅದ್ಭುತವಾದ ಸ್ಮಾರಕವಾಗಿದೆ.

hospet museum

3. ಹೊಸಪೇಟೆಯ ಪುರಾತತ್ವ ವಸ್ತುಸಂಗ್ರಹಾಲಯ

ಈ ಪುರಾತತ್ವ ವಸ್ತು ಸಂಗ್ರಹಾಲಯವು ಇರುವ ಕಾರಣ ಹೊಸಪೇಟೆಯು ಭೇಟಿ ನೀಡಲೇ ಬೇಕಾದ ಸ್ಥಳವೆನಿಸಲು ಒಂದು ಕಾರಣವಾಗಿದೆ ಅದಲ್ಲದೆ ಇದು ಪ್ರವಾಸಿಗರು ಮತ್ತು ಪ್ರಯಾಣಿಕರಿಗೆ ಒಂದು ಹೆಸರುವಾಸಿಯಾದ ಪ್ರವಾಸಿ ತಾಣವಾಗಿದೆ.ವಸ್ತುಸಂಗ್ರಹಾಲಯವು ಅಸಾಮಾನ್ಯ ಶಿಲ್ಪಗಳು ಮತ್ತು ವಿಗ್ರಹಗಳ ಅವಶೇಷಗಳ ಜೊತೆಗೆ ವಿವಿಧ ಅನನ್ಯ ಕಲಾಕೃತಿಗಳ ಗಮನಾರ್ಹ ಸಂಗ್ರಹವನ್ನು ಹೊಂದಿದೆ. 1972 ರಲ್ಲಿ ಈ ಕಲಾಕೃತಿಗಳನ್ನು ವಸ್ತುಸಂಗ್ರಹಾಲಯಕ್ಕೆ ತರಲಾಯಿತು ಎಂದು ಹೇಳಲಾಗುತ್ತದೆ.
ಈ ವಸ್ತುಸಂಗ್ರಹಾಲಯವು ಶಸ್ತ್ರಾಸ್ತ್ರಗಳು ಮತ್ತು ಇತರ ಲೋಹದ ವಸ್ತುಗಳನ್ನು ಹೊಂದಿರುವ ನಾಲ್ಕು ಬೃಹತ್ ಗ್ಯಾಲರಿಗಳನ್ನು ಹೊಂದಿದೆ. ಐತಿಹಾಸಿಕ ಪ್ರಾಮುಖ್ಯತೆಯ ಹಿತ್ತಾಳೆಯ ಫಲಕಗಳಿಂದ ಹಿಡಿದು ಕಬ್ಬಿಣ ಮತ್ತು ಪಿಂಗಾಣಿಗಳ ಉತ್ಖನನದ ಗಾರೆ ಪ್ರತಿಮೆಗಳವರೆಗೆ, ಎಲ್ಲವನ್ನೂ ಹೊಂದಿರುವ ಈ ವಸ್ತುಸಂಗ್ರಹಾಲಯವು ಇತಿಹಾಸ ಪ್ರಿಯರಿಗೆ ಇದು ಡಿಸ್ನಿಲ್ಯಾಂಡ್ ಆಗಿದೆ.

kamalmahal

4. ಲೋಟಸ್ ಮಹಲ್

ಅವಶೇಷಗಳು ಮತ್ತು ಭಗ್ನಾವಶೇಷಗಳ ನಡುವೆ ನೆಲೆಗೊಂಡಿರುವ ಲೋಟಸ್ ಟೆಂಪಲ್, ಒಮ್ಮೆ ಜೆನಾನಾ ಆವರಣದ ಭಾಗವಾಗಿತ್ತು, ಇದು ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ, ರಾಜಮನೆತನದ ರಾಣಿಯರು ಮತ್ತು ಇತರ ಮಹಿಳೆಯರು ವಾಸಿಸುತ್ತಿದ್ದ ಸ್ಥಳವಾಗಿತ್ತು.
ಲೋಟಸ್ ಮಹಲ್ ಅನ್ನು ಸ್ಥಳೀಯರು ಕಮಲ್ ಮಹಲ್ ಅಥವಾ ಚಿತ್ರಗಣಿ ಮಹಲ್ ಎಂದು ಕರೆಯುತ್ತಾರೆ, ಅದರ ರಚನೆಯು ಕಮಲದ ಮೊಗ್ಗುಗಳನ್ನು ಪ್ರತಿಬಿಂಬಿಸುವ ಹಾಗೆ ವಿಶಿಷ್ಟ ರಚನೆಯನ್ನು ಹೊಂದಿರುವುದರಿಂದ ಈ ಹೆಸರನ್ನು ಪಡೆದುಕೊಂಡಿದೆ.
ಕಮಲದ ದಳಗಳ ಆಕಾರದಲ್ಲಿ ಮತ್ತು ಕೇಂದ್ರ ಗುಮ್ಮಟವನ್ನು ಕಮಲದ ಮೊಗ್ಗಿನ ಆಕಾರದಲ್ಲಿ ವಿನ್ಯಾಸಗೊಳಿಸಿದ ವಿಸ್ತಾರವಾದ ಕಮಾನು ಮಾರ್ಗಗಳೊಂದಿಗೆ, ವಾಸ್ತುಶಿಲ್ಪದ ವಿನ್ಯಾಸವು ಭಾರತೀಯ ಮತ್ತು ಇಸ್ಲಾಮಿಕ್ ಶೈಲಿಯ ಪ್ರಭಾವವನ್ನು ಹೊಂದಿದೆ. ಪಟ್ಟಣದಲ್ಲಿರುವಾಗ ಈ ವಾಸ್ತುಶಿಲ್ಪದ ಅದ್ಭುತಕ್ಕೆ ಭೇಟಿ ನೀಡಿ ಮತ್ತು ಸ್ಮಾರಕದ ಭವ್ಯತೆಯನ್ನು ಸಂಪೂರ್ಣ ವೀಕ್ಷಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X