Search
  • Follow NativePlanet
Share
» »ಈ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ರೆ ಪುತ್ರ ಭಾಗ್ಯ ಪ್ರಾಪ್ತಿಯಾಗುತ್ತಂತೆ!

ಈ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ರೆ ಪುತ್ರ ಭಾಗ್ಯ ಪ್ರಾಪ್ತಿಯಾಗುತ್ತಂತೆ!

ಕಳ್ಳತನ ಮಾಡುವುದು ಪಾಪ ಎನ್ನಲಾಗುತ್ತದೆ. ಹಾಗಾಗಿ ಎಲ್ಲಾ ಧರ್ಮ ಗ್ರಂಥಗಳಲ್ಲಿ ಕಳ್ಳತನ ಮಾಡಬಾರದು ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಂದು ವಿಶೇಷ ದೇವಾಲಯವಿದೆ. ಇಲ್ಲಿ ಕಳ್ಳತನ ಮಾಡೋದು ಒಳ್ಳೆಯದಂತೆ. ಅರೇ ಕಳ್ಳತನ ಮಾಡಿ ಅಂತ ಯಾವ ದೇವಸ್ಥಾನದಲ್ಲಾದರೂ ಹೇಳುತ್ತಾರಾ ಅಂತಾ ನೀವು ಯೋಚಿಸಬಹುದು. ಆದರೆ ಇದು ನಿಜ. ಅಂತಹ ದೇವಸ್ಥಾನವೊಂದು ನಮ್ಮ ದೇಶದಲ್ಲೇ ಇದೆ.

ಸಿದ್ಧಪೀಠ ಚೂಡಾಮಣಿ ದೇವಿ

ಸಿದ್ಧಪೀಠ ಚೂಡಾಮಣಿ ದೇವಿ

PC: MANISH03

ಭಾರತವು ತನ್ನ ವಿವಿಧ ರೀತಿ ನೀತಿಗಳು ಹಾಗೂ ಪರಂಪರೆಗಳಿಗೆ ಹೆಸರುವಾಸಿಯಾಗಿದೆ. ದೇವ ಭೂಮಿ ಎನ್ನಲಾಗುವ ಉತ್ತರಖಂಡದಲ್ಲಿ ಅನೇಕ ಮಂದಿರಗಳಿವೆ. ಉತ್ತರಖಂಡದಲ್ಲಿರುವ ಅನೇಕ ದೇವಾಲಯಗಳಲ್ಲಿ ಸಿದ್ಧಪೀಠ ಚೂಡಾಮಣಿ ದೇವಿ ಮಂದಿರವೂ ಒಂದು. ಈ ದೇವಸ್ಥಾನದ ವಿಶೇಷತೆ ಏನೆಂದು ತಿಳಿದರೆ ನೀವು ಆಶ್ಚರ್ಯಕ್ಕೊಳಗಾಗುತ್ತೀರಾ. ಯಾವ ದೇವಸ್ಥಾನದಲ್ಲೂ ನೀವು ಇಂತಹದೊಂದು ಆಚರಣೆಯನ್ನು ಕೇಳಿರಲಿಕ್ಕಿಲ್ಲ.

ವಿಷಜಂತು ಕಚ್ಚಿದ್ರೆ ಇಲ್ಲಿನ ಬಾವಿಯ ನೀರಿನಿಂದ ಗುಣಮುಖವಾಗುತ್ತಂತೆ!ವಿಷಜಂತು ಕಚ್ಚಿದ್ರೆ ಇಲ್ಲಿನ ಬಾವಿಯ ನೀರಿನಿಂದ ಗುಣಮುಖವಾಗುತ್ತಂತೆ!

ಗಂಡು ಮಗುವಿಗಾಗಿ ಕಳ್ಳತನ

ಗಂಡು ಮಗುವಿಗಾಗಿ ಕಳ್ಳತನ

ಈ ದೇವಾಲಯದಲ್ಲಿ ಕಳ್ಳತನ ಮಾಡಿದರೆ ಆ ವ್ಯಕ್ತಿಯ ಮನೋಕಾಮನೆ ಈಡೇರುತ್ತದಂತೆ. ರೂಡ್‌ಕಿಯ ಚೂಡಿಯಾಲ್‌ ಎನ್ನುವ ಹಳ್ಳಿಯಲ್ಲಿ ಹಳೇಯ ಸಿದ್ಧಪೀಠ ಚೂಡಾಮಣಿ ದೇವಿ ಮಂದಿರದಲ್ಲಿ ಇಂತಹದ್ದೊಂದು ಆಚರಣೆಯನ್ನು ನಂಬಲಾಗುತ್ತಿದೆ. ಗಂಡು ಮಗುವನ್ನು ಪಡೆಯಲಿಚ್ಚಿಸುವ ದಂಪತಿಗಳು ಈ ಮಂದಿರದಲ್ಲಿ ಬಂದು ಪ್ರಾರ್ಥಿಸಿದರೆ ಗಂಡು ಮಗುವಿನ ಪ್ರಾಪ್ತಿಯಾಗುತ್ತದಂತೆ.

ಮರದ ದಿಮ್ಮಿ ಕಳ್ಳತನ ಮಾಡುವ ಸಂಪ್ರದಾಯ

ಮರದ ದಿಮ್ಮಿ ಕಳ್ಳತನ ಮಾಡುವ ಸಂಪ್ರದಾಯ

ಇಲ್ಲಿನ ನಂಬಿಕೆಯ ಪ್ರಕಾರ , ಯಾವ ದಂಪತಿಗಳಿಗೆ ಪುತ್ರ ಪ್ರಾಪ್ತಿಯಾಗಬೇಕೆಂಬ ಹಂಬಲ ಇರುತ್ತದೋ ಅವರು ಈ ಮಂದಿರಕ್ಕೆ ಬಂದು ಮರದ ದಿಮ್ಮಿಯನ್ನು ಕದ್ದು ಕೊಂಡುಹೋದರೆ ಅವರಿಗೆ ಪುತ್ರ ಸಂತಾನವಾಗುತ್ತದಂತೆ. ಪುತ್ರ ಪ್ರಾಪ್ತಿಯಾದ ನಂತರ ದಂಪತಿಗಳು ಮಗುವಿನ ಜೊತೆ ಈ ಮಂದಿರಕ್ಕೆ ಬಂದು ಪ್ರಾರ್ಥನೆ ಸಲ್ಲಿಸಬೇಕಂತೆ.

ಬಯಕೆ ಈಡೇರಿದ ನಂತರ ಏನು ಮಾಡಬೇಕು?

ಬಯಕೆ ಈಡೇರಿದ ನಂತರ ಏನು ಮಾಡಬೇಕು?

PC:ASHUTOSH RAWAT

ಪುತ್ರ ಸಂತಾನವಾದ ನಂತರ ದಂಪತಿಗಳು ಖುಷಿಯಿಂದ ಅನ್ನಸಂತರ್ಪಣೆ ಮಾಡುವ ಕ್ರಮವೂ ಇದೆ. ನಂತರ ದಂಪತಿಗಳು ತಾವು ಕದ್ದುಕೊಂಡು ಹೋಗಿದ್ದ ಮರದ ದಿಮ್ಮಿಯ ಜೊತೆಗೆ ಇನ್ನೊಂದು ಮರದ ದಿಮ್ಮಿಯನ್ನು ಇಲ್ಲಿ ತಂದು ಮಗನ ಕೈಯಿಂದಲೇ ದೇವಿಗೆ ಸಮರ್ಪಿಸಬೇಕಾಗುತ್ತದೆ.

ಯಾವಾಗ ನಿರ್ಮಿಸಲಾಯಿತು?

ಯಾವಾಗ ನಿರ್ಮಿಸಲಾಯಿತು?

ಈ ಮಂದಿರವನ್ನು 1805ರಲ್ಲಿ ನಿರ್ಮಿಸಲಾಗಿದೆಯಂತೆ. ಲಂಟೋರ ಸಂಸ್ಥಾನದ ರಾಜ ಈ ಮಂದಿರದ ನಿರ್ಮಾಣ ಮಾಡಿದ್ದನಂತೆ. ಈ ದೇವಸ್ಥಾನದ ವಿಶೇಷತೆಯಿಂದಾಗಿ ಅನೇಕ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಮಿಸ್ ಮಾಡಲೇಬಾರದ ದೇವಾಲಯಗಳಿವು; ಇಲ್ಲಿ ಪ್ರಾರ್ಥಿಸಿದ್ರೆ ಕಾಯಿಲೆ ಗುಣವಾಗುತ್ತಂತೆ! ಮಿಸ್ ಮಾಡಲೇಬಾರದ ದೇವಾಲಯಗಳಿವು; ಇಲ್ಲಿ ಪ್ರಾರ್ಥಿಸಿದ್ರೆ ಕಾಯಿಲೆ ಗುಣವಾಗುತ್ತಂತೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X