Search
  • Follow NativePlanet
Share
» »ವಿಶಾಖಪಟ್ಟಣಂ ನ ಬೀಚ್ ಗಳಲ್ಲಿ ಸನ್ ಬಾತ್ ನಿಂದ ಹೈಕಿಂಗ್ ವರೆಗೆ ಎಲ್ಲದರ ಅನುಭವ ಪಡೆಯಬಹುದು

ವಿಶಾಖಪಟ್ಟಣಂ ನ ಬೀಚ್ ಗಳಲ್ಲಿ ಸನ್ ಬಾತ್ ನಿಂದ ಹೈಕಿಂಗ್ ವರೆಗೆ ಎಲ್ಲದರ ಅನುಭವ ಪಡೆಯಬಹುದು

ಬಂದರು ನಗರವಾಗಿರುವ ವಿಶಾಖಪಟ್ಟಣಂ ಸಾಗರ ಚುಂಬಿ ಬೀಚ್ ಗಳು ಭವ್ಯವಾದ ಬೆಟ್ಟಗಳು ಮತ್ತು ಪ್ರಾಚೀನ ದೇವಾಲಯಗಳು ಇತ್ಯಾದಿಗಳಿಗೆ ಹೆಸರುವಾಸಿಯಾಗಿದೆ. ಆದುದರಿಂದ ಇದಕ್ಕೆ "ಪೂರ್ವ ಕಡಲತೀರದ ಆಭರಣ" (ಜ್ಯುವೆಲ್ ಆಫ್ ಈಸ್ಟ್ ಕೋಸ್ಟ್ ) ಎಂದು ಕರೆಯಲಾಗುತ್ತದೆ.

ವಿಶಾಖಪಟ್ಟಣಂನಲ್ಲಿ ಮಾಡಬಹುದಾದ ಅನೇಕ ಆಸಕ್ತಿದಾಯಕ ವಿಷಯಗಳಿವೆ. ಒಂದು ಕಡೆಯಲ್ಲಿ ದೊಡ್ಡ ದೊಡ್ಡ ಬೆಟ್ಟಗಳಾದರೆ ಇನ್ನೊಂದು ಕಡೆಯಲ್ಲಿ ಸುಂದರವಾದ ಬೀಚುಗಳನ್ನು ಮತ್ತು ಅದ್ಬುತವಾದ ಸ್ಥಳಗಳನ್ನು ಹೊಂದಿದ್ದು ಈ ಸ್ಥಳವು ಇಲ್ಲಿಗೆ ಭೇಟಿ ಕೊಡುವವರಿಗೆ ಎಂದೂ ನಿರಾಸೆಗೊಳಿಸಲಾರದು.

ರಾಮಕೃಷ್ಣ ಬೀಚ್

ರಾಮಕೃಷ್ಣ ಬೀಚ್

Adityamadhav83

ರಾಮಕೃಷ್ಣ ಆಶ್ರಮವು ಈ ಬೀಚ್ ನ ಹತ್ತಿರದಲ್ಲಿರುವುದರಿಂದ ಈ ಬೀಚ್ ಗೆ ಅದೇ ಹೆಸರನ್ನು ಇಡಲಾಗಿದೆ. ಈ ಬೀಚ್ ನಲ್ಲಿ ಮಾರಾಟ ಮಾಡುವವರನ್ನು ಕಾಣಬಹುದು ಇಲ್ಲಿ ಹಣಕ್ಕಾಗಿ ಮಾರಾಟಗಾರರು ತಿಂಡಿಗಳು, ಬಲೂನುಗಳು ಮತ್ತು ಆಟಿಕೆಗಳನ್ನು ಮಾರಾಟ ಮಾಡುವುದನ್ನು ಕಾಣಬಹುದು.

ಇಲ್ಲಿಗೆ ಭೇಟಿ ನೀಡುವ ಸಂದರ್ಶಕರು ಸೂರ್ಯನ ಬೆಳಕು ಅಲ್ಲಿಯ ಮರಳು ಮತ್ತು ಬೀಚ್ ನ ನೀರಿನ ಆನಂದವನ್ನು ಪಡೆದ ನಂತರ ಈ ಬೀಚ್ ನಲ್ಲಿ ಸರ್ಫಿಂಗ್ ಮಾಡುವ ಒಂದು ರೋಚಕ ಅನುಭವವನ್ನು ಪಡೆಯಬಹುದಾಗಿದೆ. ಅಲ್ಲದೆ ಇಲ್ಲಿಯ ಕಡಲತೀರದ ಉದ್ದಕ್ಕೂ ಡಚ್ಚರ ಸ್ಮಶಾನವನ್ನು ಅನ್ವೇಷಣೆ ಮಾಡಬಹುದಾಗಿದೆ.

ಇಲ್ಲಿಯ ಬೀಚ್ ಗಳ ದಡದಲ್ಲಿ ಸುತ್ತಲೂ ತೆಂಗಿನ ಮರಗಳಿರುವುದು ಈ ಸ್ಥಳಕ್ಕೆ ಇನ್ನಷ್ಟು ಸೌಂದರ್ಯತೆಯನ್ನು ತಂದುಕೊಟ್ಟಿದೆ. ತಂಪಾದ ಸಾಗರದಿಂದ ಬರುವ ತಂಗಾಳಿ, ನೀಲಾಕಾಶ, ಹೊಂಬಣ್ಣದ ಮರಳು ಮತ್ತು ನಿಮ್ಮನ್ನು ಆಹ್ವಾನ ಮಾಡುವ ಸಮುದ್ರದ ಅಲೆಗಳು ಇವೆಲ್ಲದರ ಸಮ್ಮಿಲನವನ್ನು ಹೊಂದಿರುವ ಈ ಬೀಚ್ ಅನುಭವಿಸಲು ಯೋಗ್ಯವಾದುದಾಗಿದೆ.

ರುಶಿಕೊಂಡಾ ಬೀಚ್

ರುಶಿಕೊಂಡಾ ಬೀಚ್

ಬಂದರು ನಗರವಾದ ವಿಶಾಖಪಟ್ಟಣಂ ನಿಂದ ಕೇವಲ ಎಂಟು ಕಿ.ಮೀ ಅಂತರದಲ್ಲಿರುವ ರುಶಿಕೊಂಡಾ ಬೀಚು ವಿಶಾಖಪಟ್ಟಣಂಗೆ ಪ್ರವಾಸ ಮಾಡುವ ಪ್ರಯಾಣಿಕರಿಂದ ಅತಿ ಹೆಚ್ಚು ಭೇಟಿ ಕೊಡಲ್ಪಡುವ ಬೀಚುಗಳಲ್ಲೊಂದೆನಿಸಿದೆ . ಇದೂ ಕೂಡಾ ಪೂರ್ವ ಕಡಲ ಆಭರಣವೆನಿಸಿದ್ದು ಇದರ ಜೊತೆಗೆ ನೈಸರ್ಗಿಕ ಸೌಂದರ್ಯತೆಯನ್ನೂ ಹೊಂದಿದೆ ಇದರ ಮಲಿನವಾಗದ ಸೌಂದರ್ಯತೆಯೇ ಈ ಬೀಚಿನ ಪ್ರಮುಖವಾದ ಆಕರ್ಷಣೆಯಾಗಿದೆ.

ಇಲ್ಲಿಯ ಹೊಂಬಣ್ಣದ ಮರಳು ಮತ್ತು ಕಡಲ ಅಲೆಗಳೊಂದಿಗೆ ವಿಶ್ರಾಂತಿ ಪಡೆಯುವ ಮತ್ತು ಆನಂದಿಸುವ ಒಂದು ವಿಭಿನ್ನ ಅವಕಾಶವನ್ನು ಸಂದರ್ಶಕರಿಗೆ ಒದಗಿಸುತ್ತದೆ. ಬೀಚು ಗಳನ್ನು ಅನ್ವೇಶಿಸಲು ಇಷ್ಟಪಡುವ ಆಫ್ಬೀಟ್ ಪ್ರಯಾಣಿಕರಿಗೆ ಮತ್ತು ಇಲ್ಲಿಯ ಕಡಲತೀರದಲ್ಲಿಯ ಸುಂದರ ದೃಶ್ಯಗಳನ್ನು ವೀಕ್ಷಿಸುತ್ತಾ ಉತ್ತಮ ಸಮಯವನ್ನು ಕಳೆಯ ಬಯಸುವವರಿಗೆ ಇದು ನಿಜವಾಗಿಯೂ ಒಂದು ರಸದೌತಣವನ್ನು ನೀಡುತ್ತದೆ ಎನ್ನಬಹುದು. ಈ ಸ್ಥಳವು ನಿಜವಾಗಿಯೂ ಪ್ರಕೃತಿ ತಾಯಿಯಿಂದ ಆಶೀರ್ವದಿಸಲ್ಪಟ್ಟು ಭೂಮಿಯಲ್ಲಿ ನೆಲೆಸಿದೆ ಎನ್ನುವಂತಿದೆ.

ಈ ಬೀಚ್ ಗೆ ಬಂದು ಇಲ್ಲಿಯ ಸೂರ್ಯನ ಬೆಳಕು ಮರಳು ಮತ್ತು ಸಮುದ್ರದಲ್ಲಿ ಆನಂದಿಸುತ್ತಾ ನಿಮ್ಮ ಇಡೀ ದಿನವನ್ನು ಉಲ್ಲಾಸದಿಂದ ಕಳೆಯಬಹುದು. ವಿಶ್ರಾಂತಿ ತೆಗೆದುಕೊಂಡ ನಂತರ ನೀವು ಇಲ್ಲಿಯ ಬೀಚ್ ಗಳಲ್ಲಿ ಒದಗಿಸಲಾಗುವ ಕೆಲವು ಸಾಹಸಮಯ ಚಟುವಟಿಕೆಗಳಲ್ಲಿ ಮತ್ತು ಜಲಕ್ರೀಡೆಗಳಲ್ಲಿ ಭಾಗವಹಿಸಬಹುದು.

ಜಲಕ್ರೀಡೆಯನ್ನು ಇಷ್ಟ ಪಡುವವರಿಗೆ ಈ ಬೀಚ್ ಸ್ವರ್ಗ ಎನ್ನಬಹುದು. ಇದು ವಿಂಡ್ ಸರ್ಫ್ ಮಾಡುವವರು ಮತ್ತು ಜೆಟ್ ಸ್ಕೈ ಮಾಡುವವರಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ. ಇಲ್ಲಿಯ ಹಸಿರು ವಾತಾವರಣ ಹೊಂಬಣ್ಣದ ಮರಳುಗಳು ಮತ್ತು ಮನಸೆಳೆಯುವಂತಹ ನೀರಿನ ಮಧ್ಯೆ ತಮ್ಮ ಸಮಯವನ್ನು ಆನಂದದಿಂದ ಕಳೆಯಲು ಇಚ್ಚಿಸುವ ಪ್ರಯಾಣಿಕರಿಗೆ ಇಲ್ಲಿಯ ಕಡಲಿನ ಸುಂದರವಾದ ದೃಶ್ಯವು ವರ್ಷವಿಡೀ ತನ್ನತ್ತ ಸೆಳೆಯುತ್ತದೆ.

ಆದುದರಿಂದ ಈ ಸುಂದರವಾದ ಕಡಲತೀರವು ಕೇವಲ ದೇಶದ ವಿವಿಧ ಭಾಗಗಳ ಪ್ರವಾಸಿಗರನ್ನು ಮಾತ್ರ ತನ್ನತ್ತ ಸೆಳೆಯುವುದಲ್ಲದೆ ಜಗತ್ತಿನ ಇನ್ನಿತರ ಭಾಗಗಳ ಜನರನ್ನೂ ತನ್ನತ್ತ ಸೆಳೆಯುತ್ತದೆ. ಇಲ್ಲಿ ಆಚರಿಸಲಾಗುವ ಹೋಳಿ ಹಬ್ಬವು ರಿಶಿಕೊಂಡಾ ಬೀಚಿನ ಒಂದು ಪ್ರಮುಖ ಆಕರ್ಷಣೆಯಾಗಿದ್ದು ಈ ಕಡಲ ತೀರವನ್ನು ಇನ್ನೂ ಜನಪ್ರಿಯಗೊಳಿಸಿದೆ.

ಕೈಲಾಸಗಿರಿ ಬೆಟ್ಟ

ಕೈಲಾಸಗಿರಿ ಬೆಟ್ಟ

kmdangi

ಸಮುದ್ರಕ್ಕೆ ಎದುರುಗಡೆ ಮುಖವಾಗಿ ನಿಂತಿರುವ ಕೈಲಾಸಗಿರಿ ಬೆಟ್ಟವು ವಿಸ್ತಾರವಾದ ಬೆಟ್ಟದ ಉದ್ಯಾನವನಕ್ಕೆ ಹೆಸರುವಾಸಿಯಾಗಿದೆ.360 ಅಡಿ ಎತ್ತರವಿರುವ ಇದು ವಿಶಾಖಪಟ್ಟಣಂ ನ ಬೀಚ್ , ಬಂಗಾಳಕೊಲ್ಲಿ ಮತ್ತು ಸುತ್ತ ಮುತ್ತಲಿನ ಕಾಡುಗಳ ಸುಂದರ ನೋಟವನ್ನು ನೀಡುತ್ತದೆ. ಇದು ಸುಮಾರು 380 ಎಕರೆಗಳಷ್ಟು ಪ್ರದೇಶಗಳಲ್ಲಿ ಹರಡಿದೆ ಮತ್ತು ಸುಂದರ ತೋಟಗಳ ಭೂದೃಶ್ಯಗಳನ್ನು, ಅನೇಕ ದೃಶ್ಯಾವಳಿಗಳನ್ನು ವೀಕ್ಷಿಸುವ ಸ್ಥಳಗಳನ್ನು, ಹಲವಾರು ರೆಸ್ಟೋರೆಂಟುಗಳು, ಮತ್ತು ಎತ್ತರವಾದ ಮಾರ್ಬಲ್ ನ ಶಿವ ಪಾರ್ವತಿಯರ ಪ್ರತಿಮೆಗಳನ್ನು ಹೊಂದಿದೆ. ನೀವು ಈ ಬೆಟ್ಟದ ತುದಿಯವರೆಗೆ ಹೋಗಬಹುದು ರೋಪ್ ವೇ ಸೇವೆಯು ನಗರವನ್ನು ಬೆಟ್ಟದೊಂದಿಗೆ ಸಂಪರ್ಕಿಸುತ್ತದೆ ಆದುದರಿಂದ ನೀವು ಬೆಟ್ಟದ ತುದಿಯವರೆಗೆ ಹೋಗಬಹುದು.

ಸಬ್ ಮರೈನ್ ಮ್ಯೂಸಿಯಂ (ಜಲಾಂತರ್ಗಾಮಿ ವಸ್ತು ಸಂಗ್ರಹಾಲಯ )

ಸಬ್ ಮರೈನ್ ಮ್ಯೂಸಿಯಂ (ಜಲಾಂತರ್ಗಾಮಿ ವಸ್ತು ಸಂಗ್ರಹಾಲಯ )

ವೈಜಾಗ್ ನಿಂದ 6 ಕಿ.ಮೀ ದೂರದಲ್ಲಿರುವ ಸಬ್ ಮೆರೈನ್ ಮ್ಯೂಸಿಯ ಆರ್ ಕೆ ಬೀಚ್ ನಲ್ಲಿದೆ . ಭಾರತೀಯ ನೌಕಾಪಡೆಯ (INS ಕುರುಸುರ) ರಷ್ಯನ್ ನಿರ್ಮಿತ ಜಲಾಂತರ್ಗಾಮಿಯು 2001 ರಲ್ಲಿ ಮ್ಯೂಸಿಯಂ ಆಗಿ ಮಾರ್ಪಾಡಾಯಿತು. ವೈಜಾಗ್ ನಗರದ ಪ್ರಮುಖ ಆಕರ್ಷಣೆಗಳಲ್ಲಿ ಸಬ್ ಮೆರೈನ್ ಮ್ಯೂಸಿಯಂ ಕೂಡಾ ಒಂದಾಗಿದೆ.

ಒಂದು ಸಬ್ ಮೆರೈನ್ ಮ್ಯೂಸಿಯಂ ಆಗಿ ಪರಿವರ್ತಿತ ಗೊಂಡಿರುವುದರಲ್ಲಿ ಇದು ಏಷ್ಯಾ ಖಂಡದಲ್ಲಿಯೇ ಮೊದಲನೆಯದಾಗಿದ್ದು ಇಡೀ ಜಗತ್ತಿನಲ್ಲಿ ಎರಡನೆ ಸ್ಥಾನವನ್ನು ಪಡೆದಿದೆ. ಐಎನ್ ಎಸ್ ಕುರುಸುರವು ಸೋವಿಯತ್ ನಿರ್ಮಿತವಾದುದಾಗಿದ್ದು I-641 ವರ್ಗದ ಜಲಾಂತರ್ಗಾಮಿಯಾಗಿದ್ದು, ಭಾರತೀಯ ನೌಕಾಪಡೆಗೆ 1969 ರ ಡಿಸೆಂಬರ್ 18 ರಂದು ಸೇರ್ಪಡೆಯಾಯಿತು ಮತ್ತು ನಂತರ ಇದನ್ನು ರಾಷ್ಟ್ರವೊಂದಕ್ಕೆ 31 ವರ್ಷಗಳ ಅದ್ಭುತ ಸೇವೆ ನೀಡಿದುದಕ್ಕಾಗಿ 28 ಫೆಬ್ರುವರಿ 2001 ರಂದು ಅದನ್ನು ಸ್ಥಗಿತಗೊಳಿಸಲಾಯಿತು.

ಈ ಸಬ್ ಮೆರಿನ್ ಅನ್ನು ಸಮುದ್ರದಿಂದ ಮೇಲೆ ನೆಲಕ್ಕೆ ರಾಮಕೃಷ್ಣ ಬೀಚ್ ನ ನೆಲಕ್ಕೆ ತಂದು ಇದನ್ನು ಒಂದು ಕಾಂಕ್ರೀಟ್ ಅಡಿಪಾಯದ ಮೇಲೆ ನಿಲ್ಲಿಸಲಾಗಿದ್ದು ಮ್ಯೂಸಿಯಂ ಮಾಡಲು ಅನುಕೂಲವಾಗುವಂತೆ ಮಾಡಲಾಗಿದೆ. ಸಬ್ ಮೆರಿನ್ ಗಳು ಯುದ್ದದ ಸಮಯದಲ್ಲಿ ಹೇಗೆ ಕೆಲಸ ಮಾಡುತ್ತವೆ ಮತ್ತು ಇದರ ಒಳಗಿನ ಜೀವನ ಹೇಗೆ ಇತ್ಯಾದಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಗುರಿಯೊಂದಿಗೆ ಇದನ್ನು ಸ್ಥಾಪಿಸಲಾಗಿದೆ.

ಭೀಮುನಿ ಪಟ್ಟಣಂ

ಭೀಮುನಿ ಪಟ್ಟಣಂ

Adityamadhav83

ಈ ನಗರವು ಗೋಸ್ತಾನಿ ನದಿ ಮತ್ತು ಬಂಗಾಳಕೊಲ್ಲಿಯ ಸಂಗಮದಲ್ಲಿರುವ ಈ ಮೀನುಗಾರಿಕಾ ನಗರವು ಅದ್ಬುತವಾದ ಬೀಚ್ ಗಳನ್ನು ಹೊಂದಿದೆ. ಈ ಮರಳಿನ ವಿಸ್ತಾರವು ನಿಶ್ಯಬ್ದವಾಗಿ ಮತ್ತು ಮೂಲರೂಪವನ್ನು ಹೊಂದಿರುವುದರ ಜೊತೆಗೆ ಕೆಲವು ರೆಸ್ಟೋರೆಂಟ್ ಗಳು ಮತ್ತು ಹೊಟೇಲುಗಳನ್ನು ಒಳಗೊಂಡಿದೆ.

ಇದು ಬೀಮಿಲ್ ಎಂದೂ ಕೂಡ ಕರೆಯಲ್ಪಡುತ್ತದೆ. ವಿಶಾಖಪಟ್ಟಣಂ ನಿಂದ 32 ಕಿ.ಮೀ ಅಂತರದಲ್ಲಿರುವ ಇದು ಶ್ರೀಮಂತ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದೆ. ಇಲ್ಲಿಯ ಪ್ರಮುಖ ಆಕರ್ಷಣೆಯ ವಿಷಯವೆಂದರೆ ಇಲ್ಲಿರುವ ಪವುರಾಲಕೊಂಡ ಬೆಟ್ಟದ ಮೇಲೆ ನೆಲೆಸಿರುವ 12ನೇ ಶತಮಾನದ ನರಸಿಂಹ ಸ್ವಾಮಿ ದೇವಾಲಯ. ಒಂದು ಕಾಲದ ಡಚ್ಚರ ವಸಾಹಾತುವಾಗಿದ್ದು ಇದು 17ನೇ ಶತಮಾನಕ್ಕೆ ಸೇರಿದ ಡಚ್ಚರ ಕೋಟೆ, ಸುಂದರವಾದ ಹಳೆಯ ಚರ್ಚುಗಳು, ಸ್ಮಶಾನ ಮತ್ತು ಲೈಟ್ ಹೌಸನಂತಹ ಅವಶೇಷಗಳನ್ನು ಇಂದಿಗೂ ಹೊಂದಿದೆ .

ಅತ್ಯಂತ ವಿಲಕ್ಷಣವಾದ ಬೀಚ್ ಗಳಲ್ಲಿ ಒಂದಾಗಿದ್ದು , ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯವೆನಿಸಿದೆ ಭೀಮುನಿ ಪಟ್ಟಣಂ ಬೀಚ್ ಗೆ ಹೋಗಿ ನೀವು ನಿಮ್ಮ ಅಮೂಲ್ಯ ಸಮಯವನ್ನು ಆನಂದಮಯವಾಗಿ ಕಳೆಯಬಹುದಾಗಿದೆ. ಈ ಬೀಚ್ ಭೇಟಿ ಕೊಡುವ ತನ್ನ ಅತಿಥಿಗಳಿಗೆ ಶಾಂತಿಯುತವಾದ ವಾತಾವರಣವನ್ನು ಒದಗಿಸುವುದಲ್ಲದೆ ಸ್ಥಳೀಯರಿಗೆ ಅನೇಕ ಮೋಜಿನ ಚಟುವಟಿಕೆಗಳನ್ನು ಕೂಡ ಒದಗಿಸುತ್ತದೆ.

ಭೀಮುನಿ ಪಟ್ಟಣಂ ಬೀಚ್ ಸ್ವಚ್ಚವಾದುದಾಗಿದ್ದು ಉತ್ತಮವಾಗಿ ನಿರ್ವಹಿಸಲ್ಪಟ್ಟಿದೆ. ಆದುದರಿಂದ ಪ್ರತಿಯೊಬ್ಬರಿಗೂ ಇಲ್ಲಿಗೆ ಭೇಟಿ ಕೊಡಲು ಪ್ರೇರೇಪಿಸುತ್ತದೆ. ಮೂವತ್ತು ಕಿ.ಮೀ ಉದ್ದಕ್ಕಿರುವ ಇದು ಪಟ್ಟಣದಿಂದ ಹೋಗಬಹುದಾದ ಒಂದು ಆಕರ್ಷಕ ಸ್ಥಳವೆನಿಸಿದೆ. ಭೀಮುನಿ ಪಟ್ಟಣಂ ನೆರೆಹೊರೆಯು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿದೆ ಮತ್ತು ಇಲ್ಲಿ ಕ್ರಿ.ಪೂ 3 ನೇ ಶತಮಾನದ ಕ್ಕೆ ಸಂಬಂಧಿಸಿದ ಕೆಲವು ಬೌದ್ಧ ಇತಿಹಾಸವನ್ನು ಕಾಣಬಹುದಾಗಿದೆ.

ಇದು ಭೀಮಿಲಿ ಬೀಚ್ ಎಂದು ಜನಪ್ರಿಯವಾಗಿದೆ. ಸಮುದ್ರದ ದೃಶ್ಯಾವಳಿಗಳು ಇಲ್ಲಿಗೆ ಬರುವ ಅತಿಥಿಗಳನ್ನು ಸಮ್ಮೋಹನಗೊಳಿಸುತ್ತದೆ ಅಲ್ಲದೆ ಇಲ್ಲಿ ಕುಳಿತು ಕಡಲಿನ ಸುರುಳಿಯಂತೆ ಬರುವ ಅಲೆಗಳ ಶಬ್ದವನ್ನು ಕೇಳುವುದೂ ಕೂಡಾ ಒಂದು ಉತ್ತಮವಾದ ವಿಷಯವೇ ಸರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more