Search
  • Follow NativePlanet
Share
» »ವಿಶಾಖಪಟ್ಟಣಂ ನಿಂದ ಯಾಣಂ - ಒಂದು ಸಾಟಿಯಿಲ್ಲದ ವಾರಾಂತ್ಯದ ತಾಣ

ವಿಶಾಖಪಟ್ಟಣಂ ನಿಂದ ಯಾಣಂ - ಒಂದು ಸಾಟಿಯಿಲ್ಲದ ವಾರಾಂತ್ಯದ ತಾಣ

By Manjula Balaraj Tantry

ನೀವು ವಿಶಾಖಪಟ್ಟಣಂ ನಿಂದ ಯಾವುದಾದರೂ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ ತಾಣಕ್ಕಾಗಿ ನೋಡುತ್ತಿದ್ದಲ್ಲಿ ಹಾಗೂ ಇಲ್ಲಿ ನಿಮಗೆ ಬೇಕಾಗುವ ಎಲ್ಲವೂ ಸಿಗುವ ಅಂದರೆ ಬೀಚ್ ನಿಂದ ದೇವಾಲಯಗಳವರೆಗೆ ಮತ್ತು ಉದ್ಯಾನವನಗಳಿಂದ ಸ್ಮಾರಕಗಳವರೆಗೆ ನೋಡಲು ಬಯಸುತ್ತಿದ್ದಲ್ಲಿ ನೀವು ಖಂಡಿತವಾಗಿಯೂ ನಿಮ್ಮ ಪ್ರವಾಸವನ್ನು ಯಾಣಂಗೆ ಆಯೋಜಿಸಿ . ಇದೊಂದು ಪಾಂಡಿಚೇರಿಯಲ್ಲಿರುವ ಒಂದು ನಯನ ಮನೋಹರವಾದ ಸಣ್ಣ ಪಟ್ಟಣವಾಗಿದೆ. ಪಾಂಡಿಚೇರಿಯಂತಹ ದೊಡ್ಡ ಪಟ್ಟಣದಿಂದ ದೂರದಲ್ಲಿ ನೆಲೆಸಿದ್ದರೂ ಇದು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಒಂದು ಪ್ರಾಂತ್ಯವನ್ನು ರೂಪಿಸುತ್ತಿದೆ ಮತ್ತು ಶತಮಾನಗಳವರೆಗೆ ಅದು ಫ್ರೆಂಚ್ ವಸಾಹತು ಪ್ರದೇಶವಾಗಿ ಪರಿಗಣಿಸಲ್ಪಡುತ್ತಿತ್ತು, ಇದು ಪಾಂಡಿಚೇರಿಯ ಮೂಲವನ್ನು ಇನ್ನೂ ಪ್ರತಿಬಿಂಬಿಸುತ್ತಿದೆ.

ಇಂದು ಯಾಣಂಗೆ ಇಲ್ಲಿಯ ವಿರಳ ಜನಸಂದಣಿಯಿರುವ ಬೀಚ್ ಗಳು ಮತ್ತು ಪೌರಾಣಿಕ ದೇವಾಲಯಗಳನ್ನು ನೋಡಿ ಆನಂದಿಸಲು ಬರುವ ಸ್ಥಳೀಯ ಪ್ರವಾಸಿಗರಿಗೆ ಒಂದು ಅತ್ಯಂತ ಜನಪ್ರಿಯವಾದ ವಾರಾಂತ್ಯದ ರಜಾದಿನ ತಾಣವೆನಿಸಿದೆ. ಆದುದರಿಂದ ವಿಶಾಖಪಟ್ಟಣಂ ನಿಂದ ಯಾಣಂಗೆ ಈ ಋತುವಿನಲ್ಲಿ ಒಂದು ಪ್ರವಾಸ ಆಯೋಜಿಸಿದರೆ ಹೇಗಿರಬಹುದು? ಯಾಣಂಗೆ ಮತ್ತು ಅದರ ಇನ್ನಿತರ ಪ್ರವಾಸಿ ಸ್ಥಳಗಳನ್ನು ತಲುಪುವ ಬಗ್ಗೆ ಓದಿ ತಿಳಿಯಿರಿ.

1. ಯಾಣಂ ಗೆ ಭೇಟಿ ನೀಡಲು ಸೂಕ್ತ ಸಮಯ

1. ಯಾಣಂ ಗೆ ಭೇಟಿ ನೀಡಲು ಸೂಕ್ತ ಸಮಯ

PC: Klsateeshvarma

ಕಡಲತಡಿಯ ಪಟ್ಟಣವಾಗಿರುವ ಯಾಣಂ ಬೇಸಿಗೆಯಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣವನ್ನು ಅನುಭವಿಸುತ್ತದೆ ಆದುದರಿಂದ ಈ ಸಮಯದಲ್ಲಿ ಭೇಟಿ ಕೊಡಲು ಕಡಿಮೆ ಆದ್ಯತೆ ಕೊಡುವ ವಾರಾಂತ್ಯದ ತಾಣಗಳಲ್ಲೊಂದಾಗಿದೆ. ಯಾಣಂ ಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅದು ನವೆಂಬರ್‌ನಿಂದ ಮಾರ್ಚ್ ತಿಂಗಳ ಕೊನೆಯವರೆಗೆ ಈ ಸಮಯದಲ್ಲಿ ಹವಾಮಾನವು ತಂಪಾಗಿ ಮತ್ತು ಆಹ್ಲಾದಕರವಾಗಿದ್ದು ನಿಮಗೆ ಇಲ್ಲಿಯ ಬೀಚ್ ಗಳು ಮತ್ತು ದೇವಾಲಯಗಳ ಅನ್ವೇಷಣೆ ಮಾಡಲು ಅನುಕೂಲ ಮಾಡಿಕೊಡುತ್ತದೆ.

2. ವಿಶಾಖಪಟ್ಟಣಂ ನಿಂದ ಯಾಣಂ ಗೆ ತಲುಪುವುದು ಹೇಗೆ?

2. ವಿಶಾಖಪಟ್ಟಣಂ ನಿಂದ ಯಾಣಂ ಗೆ ತಲುಪುವುದು ಹೇಗೆ?

PC: Ravikiranr

ವಾಯು ಮಾರ್ಗದ ಮೂಲಕ: ಯಾಣಂ ನಿಂದ ಹತ್ತಿರವಿರುವ ವಿಮಾನ ನಿಲ್ದಾಣವೆಂದರೆ ಅದು ರಾಜಮಂಡ್ರೀ ನಿಲ್ದಾಣವಾಗಿದ್ದು ಇದು ಸುಮಾರು 70 ಕಿ.ಮೀ ಅಂತರದಲ್ಲಿದೆ. ಇಲ್ಲಿಂದ ಯಾಣಂ ಗೆ ನೇರವಾಗಿ ಕ್ಯಾಬ್ ಮೂಲಕ ಪ್ರಯಾಣ ಮಾಡಬಹುದು ಅಥವಾ ರಾಜಮಂಡ್ರೀ ಪಟ್ಟಣಕ್ಕೆ ಬಸ್ಸಿನ ಮೂಲಕ ಪ್ರಯಾಣಿಸಬಹುದು ನಂತರ ಅಲ್ಲಿಂದ ಬಸ್ಸಿನ ಮೂಲಕ ಯಾಣಂಗೆ ಪ್ರಯಾಣ ಮಾಡಬಹುದಾಗಿದೆ.

ರೈಲು ಮೂಲಕ: ಯಾಣಂ ತನ್ನ ಸ್ವಂತ ರೈಲು ನಿಲ್ದಾಣವನ್ನು ಹೊಂದಿಲ್ಲ ಆದ್ದರಿಂದ ನೀವು ಕಾಕಿನಾಡ ಜಂಕ್ಷನ್ ಗೆ ರೈಲು ಹಿಡಿಯಬೇಕು. ಒಮ್ಮೆ ನೀವು ನಿಲ್ದಾಣಕ್ಕೆ ತಲುಪಿದ ನಂತರ ನೀವು ಯಾಣಂ ಗೆ ಪ್ರಯಾಣ ಮಾಡಲು ಕ್ಯಾಬ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು.
ರಸ್ತೆಯ ಮೂಲಕ: ಯಾಣಂ ನಗರದಿಂದ ಇತರ ಎಲ್ಲಾ ನಗರಗಳಿಗೆ ಮತ್ತು ಪಟ್ಟಣಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ ಆದ್ದರಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.

3. ವಿಶಾಖಪಟ್ಟಣಂ, ನಕ್ಕಪಲ್ಲಿ, ಕಾಕಿನಾಡ ,

3. ವಿಶಾಖಪಟ್ಟಣಂ, ನಕ್ಕಪಲ್ಲಿ, ಕಾಕಿನಾಡ ,

PC: Captaingunadeep

ಮಾರ್ಗ 1: ವಿಶಾಖಪಟ್ಟಣಂ - ನಕ್ಕಪಲ್ಲಿ - ಕಾಕಿನಾಡ - ಯಾಣಂ

ಮಾರ್ಗ 2: ವಿಶಾಖಪಟ್ಟಣಂ - ನಕ್ಕಪಲ್ಲಿ - ರಾಜಮಂಡ್ರಿ - ಯಾಣಂ

ಬೇರೆ ಮಾರ್ಗಗಳಿಗೆ ಹೋಲಿಸಿದರೆ ಮಾರ್ಗ1 ರಲ್ಲಿ ಪ್ರಯಾಣಿಸಿದರೆ ಬೇರೆ ಮಾರ್ಗಗಳಿಗಿಂತ 1 ಗಂಟೆ ಕಡಿಮೆ ಅವಧಿ ತೆಗೆದುಕೊಳ್ಳುವುದರಿಂದ ಈ ಮಾರ್ಗದಲ್ಲಿ ಪ್ರಯಾಣಿಸುವುದು ಅನುಕೂಲಕರ. ಮಾರ್ಗ ಒಂದರಲ್ಲಿ ಪ್ರಯಾಣಿಸಿದರೆ ನೀವು 4 ಗಂಟೆಯೊಳಗೆ ನಿಮ್ಮ ಗಮ್ಯಸ್ಥಾನವನ್ನು ತಲುಪಬಹುದು.ಈ ಮಾರ್ಗದಲ್ಲಿ, ಪ್ರಯಾಣಿಸುವಾಗ ನೀವು ಈ ಕೆಳಗಿನ ಸ್ಥಳಗಳನ್ನು ಭೇಟಿ ಮಾಡಬಹುದು, ಏಕೆಂದರೆ ಅವೆಲ್ಲವೂ ಅನ್ವೇಷಿಸಲು ಆಸಕ್ತಿದಾಯಕ ಸ್ಥಳಗಳಾಗಿವೆ.

4. ನಕ್ಕಪಲ್ಲಿ

4. ನಕ್ಕಪಲ್ಲಿ

PC: Spattadar

ವಿಶಾಖ ಪಟ್ಟಣಂ ನಿಂದ 70 ಕಿ.ಮೀ ಹಾಗೂ ಯಾಣಂ ನಿಂದ 113 ಕಿ,ಮೀ ಅಂತರದಲ್ಲಿರುವ ನಕ್ಕಪಲ್ಲಿಯ ಗಡಿಯೊಳಗೆ ಅನ್ವೇಷಿಸಲು ಬಹಳಷ್ಟು ಸ್ಥಳಗಳಿಲ್ಲದಿದ್ದರೂ ಕೂಡಾ ಈ ಸುಂದರ ಪಟ್ಟಣದಲ್ಲಿ ಆನಂದಿಸುವಂತಹ ಅನೇಕ ವಿಷಯಗಳಿವೆ ಪ್ರವಾಸಿಗರಲ್ಲಿ ಜನಪ್ರಿಯವಾದವುಗಳಲ್ಲಿ ಉಪಮಾಕ ಗುಹಾಂತರ ದೇವಾಲಯವೂ ಒಂದು. ಇದು ಒಂದು ಪ್ರಾಚೀನ ದೇವಾಲಯವಾಗಿದ್ದು ಈ ಪ್ರಾಂತ್ಯದ ಹಿಂದೂ ಧರ್ಮದವರ ಒಂದು ಪವಿತ್ರ ಯಾತ್ರೀ ಸ್ಥಳವೆನಿಸಿದೆ. ಈ ದೇವಾಲಯದ ಪಕ್ಕದಲ್ಲಿ ಒಂದು ಸರೋವರವು ಇದ್ದು ಇದು ನಿಮಗೆ ಖಂಡಿತವಾಗಿಯೂ ಶಾಂತವಾದ ಮತ್ತು ಪ್ರಶಾಂತವಾದ ವಾತವರಣವನ್ನು ಒದಗಿಸಿಕೊಡುತ್ತದೆ.

5. ಕಾಕಿನಾಡ

5. ಕಾಕಿನಾಡ

PC: Tisissid

ಕಾಕಿನಾಡ, ಯಾಣಂಗೆ ಹೋಗುವ ಮಾರ್ಗದಲ್ಲಿ ಸಿಗುವ ಇನ್ನೊಂದು ಸುಂದರವಾದ ಸ್ಥಳವಾಗಿದೆ. ಕಾಕಿನಾಡವು ಅದರ ಬೀಚ್ ಗಳಿಗೆ ಮತ್ತು ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಇದು ಆಂಧ್ರಪ್ರದೇಶದ ಅತ್ಯಂತ ಪ್ರಮುಖ ನಗರ ಕೇಂದ್ರಗಳಲ್ಲಿ ಒಂದಾಗಿದ್ದರೂ ಕೂಡಾ ಈ ಪ್ರದೇಶವು ತನ್ನ ನೈಸರ್ಗಿಕ ಸೌಂದರ್ಯತೆಯನ್ನು ಇನ್ನೂ ಉಳಿಸಿಕೊಂಡಿದೆ. ನೀವು ಕಾಕಿನಾಡದಲ್ಲಿ ವಿಶ್ರಾಂತಿ ಪಡೆಯಲು ಮುಖ್ಯ ಕಾರಣವೇ ಇದು. ಇಲ್ಲಿಯ ಪ್ರಮುಖ ಸ್ಥಳಗಳಲ್ಲಿ ಕಾಕಿನಾಡ ಬೀಚ್, ಸರ್ಪವರಮ್ ದೇವಾಲಯ, ಪುರಾತತ್ವ ಮ್ಯೂಸಿಯಂ, ಮತ್ತು ಗಾಂಧೀ ನಗರ ಉದ್ಯಾನವನ ಇವೆಲ್ಲವೂ ಸೇರಿವೆ. ಕಾಕಿನಾಡವು ವಿಶಾಖಪಟ್ಟಣಂ ನಿಂದ 152 ಕಿ.ಮೀ ಮತ್ತು ಯಾಣಂ ನಿಂದ 32 ಕಿ.ಮೀ ಅಂತರದಲ್ಲಿದೆ.

6. ಅಂತಿಮ ಗಮ್ಯಸ್ಥಾನ- ಯಾಣಂ

6. ಅಂತಿಮ ಗಮ್ಯಸ್ಥಾನ- ಯಾಣಂ

PC: Sivad115

ಯಾಣಂ ವಿಶಾಖಪಟ್ಟಣಂ ನಿಂದ ಸುಮಾರು 182 ಕಿ.ಮೀ ಅಂತರದಲ್ಲಿದೆ ಮತ್ತು ಇದು ಸುಲಭವಾಗಿ ತಲುಪಬಹುದಾದಂತಹ ಸ್ಥಳವಾಗಿದ್ದು ಇದೊಂದು ಸ್ಥಳೀಯ ಪ್ರವಾಸಿಗರು ಭೇಟಿಕೊಡ ಬಯಸುವಂತಹ ಒಂದು ವಾರಾಂತ್ಯದ ಗಮ್ಯಸ್ಥಾನವೆನಿಸಿದೆ. ಇಲ್ಲಿಯ ಫ್ರೆಂಚ್ ಕಾಲೊನಿ ಮತ್ತು ಐತಿಹಾಸಿಕ ತಾಣಗಳ ಅನ್ವೇಷಣೆಯ ಹೊರತಾಗಿಯೂ ಹಿಂದಿನ ಕಾಲದಿಂದಲೂ ಪ್ರವಾಸಿಗರಲ್ಲಿ ಹೆಸರುಪಡೆದಿರುವ ಸುಂದರವಾದ ಬೀಚ್ ಗಳು ಮತ್ತುಪ್ರಾಚೀನ ದೇವಾಲಯಗಳಿಗೆ ಭೇಟಿ ಕೊಡಬಹುದಾಗಿದೆ. ಈ ಕೆಳಗಿನ ಕೆಲವು ಸ್ಥಳಗಳು ನೀವು ಯಾಣಂ ನಲ್ಲಿರುವಾಗ ಭೇಟಿ ಕೊಡಲು ತಪ್ಪಿಸಲೇ ಬಾರದೆನ್ನುವಂತವುಗಳು.

7. ವೆಂಕಣ್ಣ ಬಾಬು ದೇವಾಲಯ

7. ವೆಂಕಣ್ಣ ಬಾಬು ದೇವಾಲಯ

PC: Bsskchaitanya a

15ನೇ ಶತಮಾನಗಳಲ್ಲಿ ಚಾಲುಕ್ಯರಿಂದ ನಿರ್ಮಿತವಾದ ವೆಂಕಣ್ಣ ಬಾಬು ದೇವಾಲಯವು ಯಾಣಂ ನಲ್ಲಿಯ ಒಂದು ಅತ್ಯಂತ ಪೂಜಿಸಲ್ಪಡುವ ದೇವಾಲಯಗಳಲ್ಲೊಂದಾಗಿದೆ. ಇಲ್ಲಿಯ ವಿಗ್ರಹವು ಅಸಮಾನ್ಯವಾದ ಮೀಸೆಯನ್ನು ಹೊಂದಿರುವುದೇ ಈ ದೇವಾಲಯದ ವಿಗ್ರಹದ ವಿಶೇಷತೆ ಇದಕ್ಕಾಗಿ ಪ್ರವಾಸಿಗರಲ್ಲಿ ಈ ದೇವಾಲಯವು ಪ್ರಸಿದ್ದಿಯನ್ನು ಪಡೆದಿದೆ.ಶತಮಾನಗಳವರೆಗೆ ಬಾಲ್ಯವಿವಾಹ ನಡೆಯುತ್ತಿದ್ದ ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಈ ದೇವಾಲಯವೂ ಒಂದಾಗಿದೆ. ಇಂದಿಗೂ ಈ ದೇವಾಲಯವು ಬಾಲ್ಯವಿವಾಹ ನಡೆಸುವ ಒಂದು ಪ್ರಮುಖ ಸ್ಥಳವಾಗಿದೆ ಮತ್ತು ನೆರೆಹೊರೆ ರಾಜ್ಯಗಳ ಜನರು ತಮ್ಮ ಮಕ್ಕಳ ವಿವಾಹವನ್ನು ನೆರವೇರಿಸುವ ಸಲುವಾಗಿ ಇಂದಿಗೂ ಇಲ್ಲಿಗೆ ಭೇಟಿ ಕೊಡುತ್ತಾರೆ.

8. ದ್ರಾಕ್ಷಾರಾಮಂ

8. ದ್ರಾಕ್ಷಾರಾಮಂ

PC: Vinay kumar malyam upadyaya

ಯಾಣಂನ ಸುತ್ತಮುತ್ತಲಿನ ಪ್ರದೇಶಗಳಲ್ಲಿಯ ಇನ್ನೊಂದು ಮಹತ್ವವುಳ್ಳ ದೇವಾಲಯವೆಂದರೆ ಅದು ದ್ರಾಕ್ಷಾರಾಮಂ ದೇವಾಲಯ ಇದು ಈ ಪ್ರದೇಶದ ಅತ್ಯಂತ ಹಳೇಯ ದೇವಾಲಯಗಳಲ್ಲೊಂದಾಗಿದ್ದು ಲಿಂಗದ ರೂಪದಲ್ಲಿರುವ ಶಿವದೇವರಿಗೆ ಸಮರ್ಪಿತವಾದುದಾಗಿದೆ.ಇದರ ಐತಿಹಾಸಿಕ ಮಹತ್ವದ ಕಾರಣದಿಂದಾಗಿ ಇದು ಹಿಂದೂ ಧರ್ಮದವರ ಜನಪ್ರಿಯ ಯಾತ್ರೀ ಸ್ಥಳವೆನಿಸಿದೆ. ಆದುದರಿಂದ ಈ ದೇವಾಲಯವು ಲಕ್ಷಾಂತರ ಭಕ್ತರಿಂದ ಭೇಟಿ ಕೊಡಲ್ಪಡುತ್ತದೆ. ದೇವಾಲಯದ ಸುತ್ತಲೂ ದಟ್ಟವಾದ ಹಸಿರುಮಯ ವಾತಾವರಣವಿದ್ದು ಇವುಗಳಲ್ಲಿ ಉದ್ಯಾನವನಗಳೂ ಸೇರಿವೆ ಇದು ದೇವಾಲಯದ ಪರಿಸರವನ್ನು ಮಾಲಿನ್ಯ ರಹಿತ ಮತ್ತು ಶಾಂತಿಯುತವಾಗಿ ಇರುವಂತೆ ಕಾಪಾಡುವಲ್ಲಿ ಸಹಾಯಮಾಡುತ್ತದೆ.

9. ರಾಜೀವ್ ಗಾಂಧೀ ಬೀಚ್

9. ರಾಜೀವ್ ಗಾಂಧೀ ಬೀಚ್

PC: Pranayraj1985

ಯಾಣಂನಲ್ಲಿರುವ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ರಾಜೀವ್ ಗಾಂಧಿ ಬೀಚ್ ಪಿಕ್ನಿಕ್, ಬೀಚ್ ಪ್ರೇಮಿಗಳು ಮತ್ತು ಛಾಯಾಗ್ರಾಹಕರಿಗೆ ಪರಿಪೂರ್ಣ ಸ್ಥಳವಾಗಿದೆ. ಇಲ್ಲಿಯ ಆಕರ್ಷಿಸುವ ಮತ್ತು ಅದರ ವಿಸ್ಮಯಕರ ನೀರಿನಿಂದ ಮತ್ತು ಹೊಳೆಯುವ ಮರಳಿನೊಂದಿಗೆ ನಿಮ್ಮನ್ನು ನೀವು ತೊಡಗಿಸಿಕೊಂಡರೆ ಹೇಗಿರಬಹುದು?

10. ಕೋರಿಂಗಾ ವನ್ಯಜೀವಿ ಧಾಮ

10. ಕೋರಿಂಗಾ ವನ್ಯಜೀವಿ ಧಾಮ

PC: Srikanth Mannepuri

ಕೊರಿಂಗಾ ವನ್ಯಜೀವಿ ಅಭಯಾರಣ್ಯವು ಯಾಣಂನ ಮಧ್ಯಭಾಗದಿಂದ 18 ಕಿ.ಮೀ ದೂರದಲ್ಲಿದೆ ಮತ್ತು ಶ್ರೀಮಂತ ಪ್ರಕೃತಿ ಮತ್ತು ವಿವಿಧ ವನ್ಯಜೀವಿಗಳನ್ನು ಆಸ್ವಾದಿಸಲು ಸೂಕ್ತವಾದ ನಿಲುಗಡೆಯಾಗಿದೆ. ಮ್ಯಾಂಗ್ರೋವ್ ಕಾಡುಗಳನ್ನು ಪತ್ತೆ ಹಚ್ಚುವುದರಿಂದ, ಹಿಡಿದು ಅಪರೂಪದ ಜಾತಿಯ ಪಕ್ಷಿಗಳನ್ನು ವೀಕ್ಷಿಸಬಹುದಾಗಿದೆ.ಇಲ್ಲಿ ಮಾಡಬಹುದಾದ ಅನೇಕ ವಿಷಯಗಳಿವೆ. ಈ ಧಾಮವು 1978 ಸ್ಥಾಪಿಸಲಾಗಿದ್ದು ಸುಮಾರು 235 ಚದರ ಕಿಲೋ ಮೀಟರುಗಳಷ್ಟು ಪ್ರದೇಶದಲ್ಲಿ ಹರಡಿದೆ. ಉತ್ತಮವಾದ ಸಮಯವನ್ನು ಮಾಲಿನ್ಯರಹಿತ ಪ್ರಕೃತಿಯ ಮಧ್ಯೆ ಕಳೆಯಬೇಕೆಂದು ಬಯಸುವಿರಾದಲ್ಲಿ ಕೋರಿಂಗಾ ವನ್ಯಜೀವಿ ಧಾಮಕ್ಕೆ ಭೇಟಿ ಕೊಡುವುದನ್ನು ನಿಮ್ಮ ಪ್ರವಾಸ ಪಟ್ಟಿಯಲ್ಲಿ ಸೇರಿಸುವುದು ಉತ್ತಮ. ಮೇಲಿನ ಎಲ್ಲಾ ಸ್ಥಳಗಳ ಹೊರತಾಗಿ, ನೀವು ಗ್ರ್ಯಾಂಡ್ ಮಸೀದಿ, ಕ್ಯಾಥೋಲಿಕ್ ಚರ್ಚ್, ಶಿವಾಲಯಂ, ಪಿಥಪುರಂ ಮತ್ತು ಗೋದಾವರಿ ನದಿಗಳನ್ನು ಸಹ ಭೇಟಿ ಮಾಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X