Search
  • Follow NativePlanet
Share
» »ವಿಶಾಖಪಟ್ಟಣಂ ನಿಂದ ಪುರಿಗೆ - ಆಧ್ಯಾತ್ಮಿಕೆಯಲ್ಲಿ ಮುಳುಗಿಸುವಂತಹ ಸ್ಥಳ

ವಿಶಾಖಪಟ್ಟಣಂ ನಿಂದ ಪುರಿಗೆ - ಆಧ್ಯಾತ್ಮಿಕೆಯಲ್ಲಿ ಮುಳುಗಿಸುವಂತಹ ಸ್ಥಳ

By Manjula Balaraj Tantry

ಒರಿಸ್ಸಾದ ಆಧ್ಯಾತ್ಮಿಕಾ ನಗರವಾದ ಪುರಿಯು ಭಾರತದಲ್ಲಿ ಯಾತ್ರಾಸ್ಥಳ ಮತ್ತು ಧಾರ್ಮಿಕ ಸ್ಥಳದ ವಿಷಯ ಬಂದಾಗ ಹೆಚ್ಚಾಗಿ ಭೇಟಿ ನೀಡಲ್ಪಡುವ ಸ್ಥಳಗಳಲ್ಲಿ ಒಂದಾಗಿದೆ. ಇದು ಭಾರತದ ಪ್ರಸಿದ್ದ ಚಾರ್ (ನಾಲ್ಕು) ಧಾಮಗಳಲ್ಲಿ ಒಂದಾಗಿದೆ ಜಗನ್ನಾಥ ದೇವಾಲಯ.

ವಿಶ್ವದ ಅತ್ಯಂತ ಪೂಜ್ಯ ಹಿಂದೂ ಹಬ್ಬಗಳಲ್ಲಿ ಒಂದಾದ ರಥ ಯಾತ್ರೆಗೆ ಜಗತ್ತಿನಾದ್ಯಂತದ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಇಲ್ಲಿಯ ಪ್ರಮುಖ ದೇವರಾದ ಜಗನ್ನಾಥ ದೇವರನ್ನು ಮುಖ್ಯ ದೇವಾಲಯದಿಂದ ಹೊರತೆಗೆಯಲಾಗುತ್ತದೆ ಮತ್ತು ಗುಂಡಿಚಾ ದೇವಾಲಯದಲ್ಲಿ ಒಂಬತ್ತು ದಿನಗಳ ಕಾಲ ಇರಿಸಲಾಗುತ್ತದೆ. ಈ ದೊಡ್ಡ ಆಚರಣೆಯನ್ನು ಯಾವತ್ತಾದರೂ ವೀಕ್ಷಿಸಿರುವಿರಾ? ಇಲ್ಲವಾದಲ್ಲಿ ಪುರಿ ಪ್ರವಾಸಕ್ಕೆ ಹೋಗಲು ಯೋಜನೆಯನ್ನು ಹಾಕಿ ಮತ್ತು ಇಲ್ಲಿಯ ಶಾಂತಿಯುತ ಪರಿಸರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.

1. ಪುರಿಗೆ ಭೇಟಿ ಕೊಡಲು ಸೂಕ್ತ ಸಮಯ

1. ಪುರಿಗೆ ಭೇಟಿ ಕೊಡಲು ಸೂಕ್ತ ಸಮಯ

Vinayaksusruthan

ಮಧ್ಯಮ ಮತ್ತು ಉಷ್ಣವಲಯದ ಹವಾಮಾನವನ್ನು ಹೊಂದಿರುವ ಪುರಿಯಲ್ಲಿ ವರ್ಷವಿಡೀ ಸಹಿಸುವಂತಹ ಹವಾಗುಣವಿರುತ್ತದೆ. ಆದರೂ ಬೇಸಿಗೆಯಲ್ಲಿ ಇಲ್ಲಿಯ ಹವಾಮಾನವು ಬಿಸಿಯಾಗಿ ಮತ್ತು ತೇವವಾಗಿರುತ್ತದೆ. ಹೆಚ್ಚಿನ ಪ್ರವಾಸಿಗರೂ ಬೇರೆ ಬೇರೆ ರಾಜ್ಯಗಳಿಂದ ಮತ್ತು ನಗರಗಳಿಂದ ಈ ಸ್ಥಳಕ್ಕೆ ಬರುತ್ತಾರೆ ಆದುದರಿಂದ ಈ ಸಮಯದಲ್ಲಿ ಪುರಿಗೆ ಭೇಟಿ ನೀಡಲು ಹೋಗದಿರಿ.
ಭೇಟಿ ಮಾಡಲು ಅತ್ಯುತ್ತಮ ಸಮಯವೆಂದರೆ ಸೆಪ್ಟೆಂಬರ್ ನಿಂದ ಏಪ್ರಿಲ್ ಕೊನೆಯವರೆಗೆ. ನೀವು ಪುರಿ ರಥ ಯಾತ್ರೆಯ ಸೌಂದರ್ಯವನ್ನು ಆಸ್ವಾದಿಸಲು ಬಯಸಿದರೆ, ಜೂನ್ ಮತ್ತು ಜುಲೈ ತಿಂಗಳಲ್ಲಿ ಪುರಿಗೆ ಭೇಟಿ ನೀಡಲು ಸೂಕ್ತವಾಗಿದೆ.

2. ವಿಶಾಖಪಟ್ಟಣಂ ನಿಂದ ಪುರಿ ತಲುಪುವುದು ಹೇಗೆ?

2. ವಿಶಾಖಪಟ್ಟಣಂ ನಿಂದ ಪುರಿ ತಲುಪುವುದು ಹೇಗೆ?

PC: Bernard Gagnon

ವಾಯುಮಾರ್ಗ : ಪುರಿಯಿಂದ ಹತ್ತಿರವಿರುವ ವಿಮಾನ ನಿಲ್ದಾಣವೆಂದರೆ ಸುಮಾರು 60 ಕಿ.ಮೀ ಅಂತರದಲ್ಲಿರುವ ಭುವನೇಶ್ವರ್ ವಿಮಾನ ನಿಲ್ದಾಣವಾಗಿದೆ. ಒಮ್ಮೆ ನೀವು ವಿಮಾನ ನಿಲ್ದಾಣವನ್ನು ತಲುಪಿದ ನಂತರ ಅಲ್ಲಿಂದ ಪುರಿಗೆ ಬಾಡಿಗೆ ವಾಹನದ ಮೂಲಕ ಪ್ರಯಾಣಿಸಬಹುದಾಗಿದೆ ಇದು ನಿಮಗೆ ಭುವನೇಶ್ವರ್ ನಿಂದ ಪುರಿಗೆ ತಲುಪಲು ಸುಮಾರು 2 ತಾಸುಗಳ ಸಮಯವನ್ನು ತೆಗೆದುಕೊಳ್ಳುತ್ತದೆ.

ರೈಲು ಮಾರ್ಗದ ಮೂಲಕ: ಪುರಿಗೆ ಉತ್ತಮವಾದ ರೈಲ್ವೇ ಸಂಪರ್ಕವಿರುವುದರಿಂದ ನೀವು ವಿಶಾಖ ಪಟ್ಟಣಂ ನಿಂದ ಪುರಿಗೆ ರೈಲಿನ ಮೂಲಕ ಪ್ರಯಾಣಿಸಬಹುದಾಗಿದೆ ಇದು ಸುಮಾರು 8 ತಾಸುಗಳ ಕಾಲ ಗಮ್ಯಸ್ಥಾನವನ್ನು ತಲುಪಲು ತೆಗೆದುಕೊಳ್ಳುತ್ತದೆ.

ರಸ್ತೆ ಮೂಲಕ : ರಸ್ತೆ ಮೂಲಕ ಉತ್ತಮವಾದ ಸಾರಿಗೆ ಜಾಲದ ಸಂಪರ್ಕವಿರುವುದರಿಂದ ನೀವು ಪುರಿಗೆ ಸುಲಭವಾಗಿ ರಸ್ತೆ ಮೂಲಕ ತಲುಪಬಹುದಾಗಿದೆ. ಇಲ್ಲಿಂದ ನೀವು ನೇರವಾಗಿ ವಿಶಾಖಪಟ್ಟಣಂ ನಿಂದ ಬಸ್ಸಿನ ಮೂಲಕ ಅಥವಾ ನಿಮ್ಮ ಸ್ವಂತ ವಾಹನಗಳ ಮೂಲಕವೂ ಪ್ರಯಾಣಿಸಬಹುದಾಗಿದೆ.

3. ವಿಶಾಖಪಟ್ಟಣಂ- ಶ್ರೀಕಾಕುಲಂ- ಚಿಲಿಕಾ- ಪುರಿ

3. ವಿಶಾಖಪಟ್ಟಣಂ- ಶ್ರೀಕಾಕುಲಂ- ಚಿಲಿಕಾ- ಪುರಿ

PC: Kabita.singh

ಒಮ್ಮೆ ಇಲ್ಲಿಗೆ ನೀವು ಪ್ರಯಾಣ ಬೆಳೆಸಿದಲ್ಲಿ, ಈ ಮಾರ್ಗದಲ್ಲಿ ಕೆಲವು ಜಾಗಗಳಲ್ಲಿ ವಿಶ್ರಾಂತಿ ಪಡೆಯಬಹುದು ಮತ್ತು ಇದರ ಸೌಂದರ್ಯವನ್ನು ಅನ್ವೇಷಿಸಬಹುದಾಗಿದೆ.

ಶ್ರೀಕಾಕುಲಂ

ಪುರಿಗೆ ಪ್ರವೇಶಿಸುವ ಮುನ್ನವೇ ಆಧ್ಯಾತ್ಮಿಕತೆಯ ಒಂದು ಪ್ರಯಾಣ ನಡೆಸಿದರೆ ಹೇಗಿರಬಹುದು? ಹೌದು, ನೀವು ಒಂದು ವಿಶ್ರಾಂತಿದಾಯಕ ಮತ್ತು ಶಾಂತಿಯುತವಾದ ಪರಿಸರದ ಮಧ್ಯೆ ಇರಲು ಬಯಸುತ್ತಿದ್ದಲ್ಲಿ ಶ್ರೀಕಾಕುಲಂ ನಿಮಗೆ ಸೂಕ್ತವಾದ ಸ್ಥಳವಾಗಿದೆ. ವಿಶಾಖಪಟ್ಟಣಂ ನಿಂದ ಸುಮಾರು 116 ಮತ್ತು ಪುರಿಯಿಂದ 328ಕಿ.ಮೀ ಅಂತರದಲ್ಲಿರುವ ಈ ಪ್ರಾಚೀನ ಪಟ್ಟಣವು ದೇವಾಲಯಗಳು ಮತ್ತು ಇನ್ನಿತರ ಧಾರ್ಮಿಕ ತಾಣಗಳಿಗೆ ಪ್ರಸಿದ್ದವಾಗಿದೆ.

ಆದರು ಇದು ಅನೇಕ ಬೀಚುಗಳು , ಉದ್ಯಾನವನಗಳನ್ನು ಹೊಂದಿದ್ದು ನೈಸರ್ಗಿಕ ಸೌಂದರ್ಯತೆಗಳಿಗೂ ಸಾಕ್ಷಿಯಾಗಿದೆ. ಇಂತಹ ತಾಣಗಳನ್ನು ಶ್ಲಾಘನೆ ಮಾಡುವಾಗ ಈ ಸುಂದರ ತಾಣಗಳಲ್ಲಿ ವಿರಾಮ ಪಡೆಯಲು ನೀವು ಬಯಸುವುದಿಲ್ಲವೆ? ಇಲ್ಲಿಯ ಪ್ರಮುಖ ಸ್ಥಳಗಳಲ್ಲಿ ಅರಸಾವಲ್ಲಿ ಸೂರ್ಯ ದೇವಾಲಯ ಕಲ್ಲೆಪಲ್ಲಿ ಬೀಚ್ ಮತ್ತು ಶ್ರೀಕುರುಮಾಮ್ ಇವುಗಳು ಸೇರಿವೆ.

4. ಚಿಲಿಕಾ ಸರೋವರ

4. ಚಿಲಿಕಾ ಸರೋವರ

ಸರೋವರಗಳ ದಡದಲ್ಲಿ ಸಿಗುವ ಶಾಂತಿಯುತವಾದ ಸೆಳೆವನ್ನು ಬೇರೆ ಎಲ್ಲಿಯಾದರೂ ನೋಡಲು ಸಾಧ್ಯವೆ? ಆದುದರಿಂದ ಪುರಿಗೆ ಹೋಗುವ ದಾರಿಯಲ್ಲಿ ಸಿಗುವ ಚಿಲಿಕಾ ಸರೋವರಕ್ಕೆ ಭೇಟಿ ನೀಡಿ ಮತ್ತು ಇದರ ಸೌಂದರ್ಯತೆಯ ಅನ್ವೇಷಣೆ ಮಾಡುವುದನ್ನು ಮರೆಯದಿರಿ.
ಚಿಲಿಕಾ ಸರೋವರವು ಪುರಿಯಿಂದ 130ಕಿ.ಮೀ ಅಂತರದಲ್ಲಿದೆ ಮತ್ತು ವಿಶಾಖ ಪಟ್ಟಣಂ ನಿಂದ 315 ಕಿ.ಮೀ ಅಂತರದಲ್ಲಿದೆ ಮತ್ತು ಪ್ರಕೃತಿಯ ಭಾವಪರವಶತೆಯಲ್ಲಿ ಮುಳುಗಿ ಹೋಗಲು ಇದೊಂದು ಅತ್ಯಂತ ಸೂಕ್ತವಾದ ಸ್ಥಳವೆನಿಸಿದೆ. ಇಲ್ಲಿಯ ಅನುಕೂಲಕರ ಹವಾಮಾನದ ಜೊತೆಗೆ ತಂಪಾದ ತಂಗಾಳಿ ಇವೆಲ್ಲಾ ಸೇರಿ ಈ ಕಲುಷಿತವಾಗದ ಸರೋವರವನ್ನು ಒಡಿಶಾದ ಭೇಟಿ ನೀಡಲೇ ಬೇಕಾದ ತಾಣವನ್ನಾಗಿಸಿದೆ. ಇಲ್ಲಿ ನೀವು ಕೆಲವು ವಲಸೆ ಬಂದಿರುವ ಮತ್ತು ಸ್ಥಳೀಯ ಅನೇಕ ಜಾತಿಯ ಪಕ್ಷಿಗಳನ್ನೂ ಕಾಣಬಹುದಾಗಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಈ ಪ್ರದೇಶವು ಭಾರತದ ಅತಿ ದೊಡ್ಡ ಕರಾವಳಿ ತೀರವಾಗಿದೆ.

5. ಅಂತಿಮ ಗಮ್ಯಸ್ಥಾನ – ಪುರಿ

5. ಅಂತಿಮ ಗಮ್ಯಸ್ಥಾನ – ಪುರಿ

Indranilgupta94

ವಿಶಾಖಪಟ್ಟಣಂ ನಿಂದ ಪುರಿಯು ಸುಮಾರು 445 ಕಿ.ಮೀ ಅಂತರದಲ್ಲಿದೆ. ಆದುದರಿಂದ ಇಲ್ಲಿಗೆ ಸುಲಭವಾಗಿ ಸಂಪರ್ಕ ಹೊಂದಬಹುದಾಗಿದೆ. ಈ ಆಧ್ಯಾತ್ಮಿಕ ನಗರಕ್ಕೆ ಪ್ರವಾಸಿಗರು ಇಲ್ಲಿಯ ದೇವಾಲಯಗಳು ಮತ್ತು ಧಾರ್ಮಿಕ ತಾಣಗಳ ಅನ್ವೇಷಣೆ ಮಾಡಲು ಭೇಟಿಕೊಟ್ಟರೂ ಕೂಡಾ ಇದರ ಗಡಿಯೊಳಗೆ ಅನ್ವೇಷಣೆಗೆ ಇನ್ನೂ ಅನೇಕ ವಿಷಯಗಳಿರುವುದರಿಂದ ಇಲ್ಲಿಗೆ ನಿರಂತರವಾಗಿ ಬರುವ ಪ್ರವಾಸಿಗರು ಮತ್ತು ವಾರಾಂತ್ಯದಲ್ಲಿ ಭೇಟಿ ಕೊಡುವ ಪ್ರಯಾಣಿಕರಿಂದಲೂ ಭೇಟಿ ನೀಡಲು ಯೋಗ್ಯವಾದುದಾಗಿದೆ. ಈ ಕೆಳಗೆ ಇರುವ ಕೆಲವು ಪ್ರಮುಖವಾದ ಸ್ಥಳಗಳಿಗೆ ಭೇಟಿಕೊಡುವುದನ್ನು ತಪ್ಪಿಸಲೇ ಬಾರದು.

6. ಜಗನ್ನಾಥ ಪುರಿ ದೇವಾಲಯ

6. ಜಗನ್ನಾಥ ಪುರಿ ದೇವಾಲಯ

PC:Prudhvi.04cn006

ಜಗನ್ನಾಥ ದೇವಾಲಯಕ್ಕೆ ಭೇಟಿ ಕೊಡಬೇಕೆಂದು ಪ್ರತ್ಯೇಕವಾಗಿ ಹೇಳಬೇಕೆ? ಖಂಡಿತವಾಗಿಯೂ ಬೇಡ! ಒರಿಸ್ಸಾ ಪ್ರವಾಸೋದ್ಯಮದ ಬೆನ್ನೆಲುಬಾಗಿರುವ ಪುರಿಯಲ್ಲಿಯ ಮೌಲ್ಯಯುತವಾದ ಅದ್ಬುತಕ್ಕೆ ಭೇಟಿ ಕೊಡುವುದನ್ನು ತಪ್ಪಿಸುವುದು ಸಾಧ್ಯವೆ? ಈ ದೇವಾಲಯವು ವಿಷ್ಣು ದೇವರ ಒಂದು ರೂಪವಾಗಿರುವ ದೇವಾಲಯವು ಜಗನ್ನಾಥ ದೇವರಿಗೆ ಸಮರ್ಪಿತವಾದುದಾಗಿದೆ ಮತ್ತು ಭಾರತದ ಚಾರ್ ಧಾಮ ಕೇಂದ್ರಗಳಲ್ಲಿ ಇದೂ ಒಂದಾಗಿದೆ.

7. ದಂತಕಥೆ

7. ದಂತಕಥೆ

Pc: RJ Rituraj

ಇಲ್ಲಿಯ ಸ್ಥಳೀಯ ದಂತಕಥೆಗಳ ಪ್ರಕಾರ ಈ ದೇವಾಲಯವು ಸಾವಿರಾರು ವರ್ಷಗಳ ಹಿಂದೆ ಇಂದ್ರದ್ಯುಮ್ನ ಎಂಬ ರಾಜನಿಂದ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ . ಆದರೆ ದಾಖಲೆಗಳ ಪ್ರಕಾರ ಈ ದೇವಾಲಯವು 12ನೇ ಶತಮಾನದ ಅವಧಿಯಲ್ಲಿ ನಿರ್ಮಿತವಾಯಿತು ಎಂದು ಹೇಳಲಾಗುತ್ತದೆ. ಆದುದರಿಂದ ಇದರ ರಚನೆಯ ಬಗ್ಗೆ ಇನ್ನೂ ಚರ್ಚೆಯಲ್ಲಿಯೇ ಇದೆ. ಜಗನ್ನಾಥ ದೇವಾಲಯವು ಪುರಿ ರಥಯಾತ್ರೆಯ ಪ್ರಾರಂಭಿಕ ಕೇಂದ್ರವೂ ಆಗಿದೆ.

8. ಪುರಿ ಬೀಚ್

8. ಪುರಿ ಬೀಚ್

PC:Tierecke

ಪುರಿ ಬೀಚ್ ಎಲ್ಲಾ ತರಹದ ಪ್ರಯಾಣಿಕರಿಂದಲೂ ಜನಪ್ರಿಯತೆಗೆ ಒಳಗಾಗಿದ್ದು ಇದು ಪುರಿಯ ಜನಪ್ರಿಯತೆಗೆ ಮುಖ್ಯ ಕಾರಣವೂ ಆಗಿದೆ. ನೀವು ಇಲ್ಲಿಯ ದೇವಾಲಯಗಳ ಇತಿಹಾಸದ ಅನ್ವೇಷಣೆ ಮತ್ತು ಆಧ್ಯಾತ್ಮಿಕ ವಾತಾವರಣದ ಅನುಭವವನ್ನು ಪಡೆದಾದದಲ್ಲಿ ನಂತರ ಇಲ್ಲಿಯ ಪುರಿ ಬೀಚ್ ಗೆ ಭೇಟಿ ನೀಡಬಹುದು ಮತ್ತು ಇಲ್ಲಿಯ ಹೊಳೆಯುವ ಮರಳು ಮತ್ತು ಆಹ್ಲಾದಕರ ನೀರಿನ ಮಧ್ಯೆ ವಿಶ್ರಾಂತಿಯನ್ನು ಪಡೆಯಬಹುದು. ಪುರಿಯಲ್ಲಿ ಯಾವುದಾದರೂ ನಿಮ್ಮನ್ನು ನೀವು ಪ್ರಕೃತಿಯಲ್ಲಿ ತೊಡಗಿಸಿಕೊಳ್ಳಲು ಉತ್ತಮವಾದ ಸ್ಥಳವಾಗಿದೆ.

9. ಲೋಕನಾಥ ದೇವಾಲಯ

9. ಲೋಕನಾಥ ದೇವಾಲಯ

Gsuruchi06

ಇನ್ನೊಂದು ಪ್ರಾಚೀನ ಅದ್ಬುತವೆಂದರೆ ಅದೇ ಶಿವನಿಗೆ ಅರ್ಪಿತವಾಗಿರುವ ಲೋಕನಾಥ ದೇವಾಲಯ ಇದನ್ನು ಸಾವಿರಾರು ವರ್ಷಗಳ ಹಿಂದೆ ರಾಮ ದೇವರಿಂದ ಸ್ವತ: ನಿರ್ಮಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ. ಇದು ಒಡಿಶಾದ ಅತ್ಯಂತ ಮಹತ್ವವುಳ್ಳ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಇದು ದೇಶದಾದ್ಯಂತದ ಹಿಂದೂ ಯಾತ್ರಿಗಳಿಂದ ನಿರಂತರವಾಗಿ ಭೇಟಿ ನೀಡಲ್ಪಡುತ್ತದೆ.

10. ಪಂಚ ತೀರ್ಥ

10. ಪಂಚ ತೀರ್ಥ

Dinesh Sankar1729

ಪುರಿಯಲ್ಲಿರುವಾಗ ಇನ್ನೊಂದು ಮುಖ್ಯವಾಗಿ ನೀವು ಮಾಡಬೇಕಾದ ವಿಷಯವೆಂದರೆ ಪಂಚ ತೀರ್ಥಕ್ಕೆ ಭೇಟಿ ಕೊಡುವುದು.. ಇದು ಮೂಲತ: ವಾಗಿ ಪುರಿಯಲ್ಲಿರುವ ಐದು ಸ್ನಾನ ಮಾಡುವ ಸ್ಥಳಗಳಾಗಿದ್ದು ಈ ಪವಿತ್ರವಾದ ನೀರಿನಲ್ಲಿ ಸ್ನಾನ ಮಾಡಿದರೆ ತಮ್ಮ ಪಾಪವನ್ನು ಕಳೆದುಕೊಳ್ಳ ಬಹುದು ಎಂದು ನಂಬಲಾಗುತ್ತದೆ. ಈ ಸ್ಥಳಗಳಲ್ಲಿ ಇಂದ್ರದ್ಯುಮ್ನ ಟ್ಯಾಂಕ್ , ಮಾರ್ಕಂಡೇಯ ಟ್ಯಾಂಕ್, ಶ್ವೇತಗಂಗಾ ಟ್ಯಾಂಕ್ ಸ್ವರ್ಗದ್ವಾರ್ ಸಮುದ್ರ ಮತ್ತು ರೋಹಿಣಿ ಕುಂಡ್ ಗಳು ಸೇರಿವೆ.

ಇಲ್ಲಿ ಇನ್ನಿತರ ಆಸಕ್ತಿದಾಯಕ ಸ್ಥಳಗಳು

ಈ ಸ್ಥಳಗಳ ಹೊರತಾಗಿ ಇಲ್ಲಿ ನೀವು ಗುಂಡೀಚಾ ದೇವಾಲಯ ಗಾಂಧೀ ಪಾರ್ಕ್, ಜಿಲ್ಲಾ ವಸ್ತುಸಂಗ್ರಹಾಲಯ ಮತ್ತು ರಘುನಂದನ ಗ್ರಂಥಾಲಯ ಇತ್ಯಾದಿಗಳನ್ನು ಒಳಗೊಂಡಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X