• Follow NativePlanet
Share
» »ನಾಗಾಲ್ಯಾಂಡ್‍ನ ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕಾರಿ ವಿಷಯಗಳು...!

ನಾಗಾಲ್ಯಾಂಡ್‍ನ ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕಾರಿ ವಿಷಯಗಳು...!

Posted By:

ನಾಗಾಲ್ಯಾಂಡ್ ಈಶಾನ್ಯ ಭಾರತ ರಾಜ್ಯಗಳಲ್ಲಿ ಒಂದಾಗಿದ್ದು, ಚಿಕ್ಕದಾದ ಗಿರಿಧಾಮಗಳ ರಾಜ್ಯವಾಗಿದೆ. ಇಲ್ಲಿನ ಜನರು ಅತ್ಯಂತ ಶಾಂತಿಯುತವಾದ ಜೀವನ ನಡೆಸುತ್ತಾರೆ. ಕೃಷಿಯನ್ನು ತಮ್ಮ ಜೀವನದ ಆಧಾರ ಕಸುಬಾಗಿ ನಿರ್ವಹಿಸುತ್ತಿದ್ದಾರೆ. ನಾಗಾಲ್ಯಾಂಡ್ ಸಂಪೂರ್ಣವಾದ ವಿಭಿನ್ನವಾದ ಆಚಾರ-ವಿಚಾರಗಳನ್ನು ಹೊಂದಿದ್ದಾರೆ. ಇಲ್ಲಿನ ಪ್ರವಾಸವು ಜೀವನದಲ್ಲಿ ಎಂದಿಗೂ ಮರೆಯಲಾಗದಂತಹ ಅನುಭೂತಿಯನ್ನು ಉಂಟು ಮಾಡುತ್ತದೆ.

ಈ ಸುಂದರವಾದ ಪ್ರದೇಶವು ಎಷ್ಟು ಸುಂದರವಾಗಿದೆಯೋ, ಅಷ್ಟೇ ಅಪಾಯಕಾರಿ ಕೂಡ ಆಗಿರುತ್ತದೆ. ಇಲ್ಲಿನ ಕೆಲವು ಗ್ರಾಮಗಳಲ್ಲಿ ಮುಖ್ಯವಾಗಿ ಬುಡಕಟ್ಟು ಪ್ರದೇಶಗಳಲ್ಲಿ ನೀವು ಪ್ರವೇಶಿಸಿದರೆ ತಲೆ ಕಡಿಯುaತ್ತಾರಂತೆ. ಹಾಗಾದರೆ ಆ ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದ ಮೂಲಕ ಪಡೆಯೋಣ.

1.ನಾಗಾಲ್ಯಾಂಡ್ ಪ್ರವಾಸ

1.ನಾಗಾಲ್ಯಾಂಡ್ ಪ್ರವಾಸ

PC: Angambou

ಈ ಸುಂದರವಾದ ಪ್ರವಾಸಿ ಯೋಜನೆ ಮಾಡುವ ಮೊದಲು ನೀವು ಸಾಕಷ್ಟು ಅದ್ಭುತವಾದ ದೃಶ್ಯಾವಳಿಗಳನ್ನು ಆನಂದಿಸುತ್ತೀರಿ. ಅಲ್ಲಿನ ಭವ್ಯವಾದ ಪರ್ವತ ಶ್ರೇಣಿಗಳು, ಹಚ್ಚ ಹಸಿರಿನ ಭೂದೃಶ್ಯಗಳನ್ನು ನೀವು ಕಾಣಬಹುದಾಗಿದೆ. ಈ ಪ್ರವಾಸವು ನಿಮ್ಮ ಜೀವನದಲ್ಲಿ ಎಂದಿಗೂ ಮರೆಯಲಾಗದಂತಹ ಅನುಭೂತಿಯನ್ನು ಉಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ. ಒಮ್ಮೆ ನಾಗಾಲ್ಯಾಂಡ್ ಎಂಬ ಸುಂದರವಾದ ಪ್ರವಾಸವನ್ನು ಕೈಗೊಳ್ಳಿ.

2.ಬುಡಕಟ್ಟು ಲೋಕ

2.ಬುಡಕಟ್ಟು ಲೋಕ

PC: Offical Site

ನೀವು ನಾಗಾಲ್ಯಾಂಡ್‍ನ ಟ್ರೈಬ್ಸ್ ವಲ್ರ್ಡ್ ಬಗ್ಗೆ ಸಾಕಷ್ಡು ಕೇಳಿರಬಹುದು. ಕೆಲವು ಸ್ವತಂತ್ರವಾಗಿ ಜೀವನ ಸಾಗಿಸುತ್ತಿದ್ದರೆ, ಇನ್ನು ಉಳಿದವರು ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಬಂಧವಿಲ್ಲದೇ ಜೀವನವನ್ನು ಸಾಗಿಸುತ್ತಿದ್ದಾರೆ. ಇಲ್ಲಿ ಮುಖ್ಯವಾಗಿ ಆಗ್ಯಾಮ್, ಆಂಗ್, ಚಿಂಗ್, ಸಿರಿ, ಕಿರಿಯಾಮುಂಗಾನನ್, ಕಾನ್ಯಾಕ್, ಲಿಯಾಂಗ್ಮಾಯಿ, ಲೋಥಾ, ಮಗುರಿ, ಭೋಚೋರಿ, ಫೋಮ್, ಪೊವಾಯ್, ರಿಂಗ್ಮಾ, ರಂಗೈಯಿ, ಸಂಗ್ಯಾಮ್, ಸುಮಿ, ಜಿಮ್ ಮುಂತಾದ ನ್ಯಾಗಾಲ್ಯಾಂಡ್‍ನ ಬುಡುಕಟ್ಟುಗಳು ವಾಸಿಸುತ್ತಿದ್ದಾರೆ. ಇವರ ಸಂಪ್ರದಾಯಗಳು ಭಾರತದ ಇತರ ಭಾಗಗಳಿಗಿಂತ ಭಿನ್ನವಾಗಿದೆ.

3.ಪ್ರವಾಸಿ ಆಕರ್ಷಣೆ

3.ಪ್ರವಾಸಿ ಆಕರ್ಷಣೆ

PC: Rwf-art

ನಾಗಾಲ್ಯಾಂಡ್ ರಾಜ್ಯದಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳಿವೆ. ಒಳ ಪ್ರದೇಶಗಳಲ್ಲಿ ಹಲವಾರು ಸ್ಥಳೀಯ ಗ್ರಾಮಗಳಿವೆ. ಈ ವಿಭಾಗದಲ್ಲಿ ಡಿಮಾಪುರ್, ಸೋಮ, ವೊಖಾ, ಪೆರೆನ್ ಮತ್ತು ಕೆಲವು ಕೂತುಹಲಕಾರಿ ಸ್ಥಳಗಳನ್ನು ಕಾಣಬಹುದು. ನಿಮಗೆ ಗೊತ್ತ ನಾಗಾಲ್ಯಾಂಡ್‍ಗೆ ತಿಳಿಯದೇ ಇರುವ ಸ್ಥಳಕ್ಕೆಲ್ಲಾ ಭೇಟಿ ನೀಡುವಂತಿಲ್ಲ. ಹಾಗೇನಾದರೂ ಭೇಟಿ ನೀಡಿದರೆ ಅಲ್ಲಿನ ಬುಡಕಟ್ಟು ಜನರು ತಲೆಯನ್ನು ತೆಗೆಯುತ್ತಾರಂತೆ. ನಿಮಗೆ ಆಶ್ಚರ್ಯವಾದರೂ ಇದು ಸತ್ಯ.

4.ಕೊಹಿಮಾ

4.ಕೊಹಿಮಾ

PC: Yves Picq

ಈ ಸುಂದರವಾದ ಸ್ಥಳವು ಎಲ್ಲಾ ಬುಡಕಟ್ಟು ಜನಾಂಗದವರು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಈ ಸ್ಥಳಗಳಲ್ಲಿ ನೀವು ಪ್ರಯಾಣಿಸಲು ಮುಕ್ತವಾಗಿ ಅನುಮತಿಯನ್ನು ನೀಡಲಾಗುವುದು. ಸ್ಥಳೀಯ ಗೈಡ್ ನಿಮಗೆ ಮಾರ್ಗದರ್ಶನವನ್ನು ನೀಡುತ್ತಾರೆ. ನೀವು ಇಲ್ಲಿಗೆ ಹೋಗುವಾಗ ಅವರ ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳಬಹುದು. ಪ್ರವಾಸೋದ್ಯಮದ ವಿಶಿಷ್ಟತೆಯ ಬಗ್ಗೆ ನೀವು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಬಹುದು.

5.ಕೊಹಿಮಾ

5.ಕೊಹಿಮಾ

PC: Yves Picq

ಕೊಹಿಮಾ ಮಾನ್ ಜಿಲ್ಲೆಯಲ್ಲಿದೆ. ನಾಗಾಲ್ಯಾಂಡ್‍ನಲ್ಲಿ ಇದು ಉತ್ತಮವಾದ ಸ್ಥಳವಾಗಿದೆ, ಇಲ್ಲಿ ವಾಸಿಸುವ ಬುಡಕಟ್ಟುಗಳು ನಿಮ್ಮನ್ನು ಪ್ರೀತಿಸುವರು ಹಾಗು ಸ್ಥಳೀಯ ವ್ಯಕ್ತಿಯು ನಿಮ್ಮೊಂದಿಗೆ ಸ್ಥಳಗಳ ಪರಿಚಯ ಮಾಡಿಸಲು ಬರುತ್ತಾನೆ. ಇಡೀ ಬುಡಕಟ್ಟು ಗ್ರಾಮಕ್ಕೆ ಭೇಟಿ ನೀಡಲು ಇದು ಉತ್ತಮವಾದ ಸ್ಥಳವಾಗಿದೆ. ಸುಮಾರು ಸಾವಿರ ವರ್ಷಗಳ ಹಿಂದೆ ಇಲ್ಲಿ ತಮಿಳರು ಜೀವನ ಸಾಗಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಇದೊಂದು ವರ್ಣರಂಜಿತವಾದ ಪ್ರದೇಶವಾದ್ದರಿಂದ ಅನೇಕ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

6.ಅಂಗಾಮಿ ನಗರ

6.ಅಂಗಾಮಿ ನಗರ

PC: Yves Picq

ಅಂಗಾಮಾಲಿ ಜನರು ಹಾಗು ನಾಗಸರು ಬಹಳ ಜನಪ್ರಿಯರು. ಇವರು ಕಲಾ ಪ್ರೇಮಿಗಳಾಗಿದ್ದು, ಉತ್ತಮವಾದ ಪ್ರವಾಸದ ಅನುಭವವನ್ನು ನೀಡುತ್ತಾರೆ. ಇವರ ಉತ್ಸವಗಳಲ್ಲಿ ಮುಖ್ಯವಾಗಿ ನೃತ್ಯ ಮತ್ತು ಭೋಜನವು ಅತ್ಯಾಕರ್ಷಕವಾಗಿರುತ್ತದೆ. ಅವರ ಸಮಾರಂಭವನ್ನು ಫೆಬ್ರವರಿಯಲ್ಲಿ ಆಚರಿಸಲಾಗುತ್ತದೆ. ಇವುಗಳಲ್ಲಿ ಕೆಲವು ಬಾಹ್ಯ ಜಗತ್ತಿಗೆ ಆಥುನಿಕವಾಗಿ ಕಂಡರು ಕೂಡ, ಈ ಹಳ್ಳಿ ಮಾತ್ರ ಈಗಲೂ ಹಳೆಯದೇ ಆಗಿದೆ. ಇಲ್ಲಿ ಬಿಬಿಬಾ, ಶಿಬಾಮಾ, ಕಿರ್ಹ, ಪೆರಿಮಾ ಎಂಬ ಕೆಲವು ವಿಶೇಷವಾದ ಹಳ್ಳಿಗಳಿವೆ.

7.ವ್ಯಾಪಾರ, ಕೃಷಿ

7.ವ್ಯಾಪಾರ, ಕೃಷಿ

PC: Isaxar

ಈ ಜನರು ಹೆಚ್ಚಾಗಿ ಬೆಟ್ಟದ ಮೇಲೆ ವಾಸಿಸುತ್ತಿರುತ್ತಾರೆ. ಇವರ ಮುಖ್ಯ ಕಸಬು ಕೃಷಿಯೇ ಆಗಿದೆ. ಇವರ ಅಕ್ಕಿಯ ಉತ್ಪಾದನೆಯು ಹಳೆಯ ತಮಿಳು ಉಳುಮೆಗಳನ್ನು ನೆನಪಿಸುತ್ತದೆ. ಪರ್ವತಗಳ ಮೇಲೆ ಬೆಳೆಯುವ ಕಲೆ ಇವರಲ್ಲಿ ಅಡಗಿದೆ.

8.ಕಲೆಗಳು

8.ಕಲೆಗಳು

PC: Wikipedia

ಬ್ರಿಟೀಷ್ ಆಳ್ವಿಕೆಯ ನಂತರ, ಕ್ರಿಶ್ಚಿಯನ್ ಧರ್ಮ ಅವರಲ್ಲಿ ಹರಡಿತು. ಆದರೂ ಕೂಡ ಅವರಲ್ಲಿ ಕೆಲವರು ಬೌದ್ಧ ಧರ್ಮಕ್ಕೆ ಬದ್ಧರಾಗಿದ್ದಾರೆ. ಜೊತೆಗೆ ಇವರ ನೃತ್ಯಗಳು ಮತ್ತು ಉತ್ಸವಗಳು ವಿಶೇಷವಾದುದು. ಇವರು ಅನೇಕ ತ್ಯಾಗಗಳ ಪ್ರತೀಕ ಎಂದು ಬಣ್ಣಿಸಲಾಗುತ್ತದೆ.

9.ದಿಮಾಪುರ್

9.ದಿಮಾಪುರ್

PC: rajkumar1220

ನಾಗಾಲ್ಯಾಂಡ್‍ನ ಕೇಂದ್ರ ಭಾಗವೆಂದರೆ ಅದು ದಿಮಾಪುರ್. ಇಲ್ಲಿ ಹಲವಾರು ಪ್ರವಾಸಿ ಆಕರ್ಷಣೆಗಳಿವೆ. ದೆಹಲಿ, ಚೆನ್ನೈ ಮತ್ತು ಕೊಲ್ಕತ್ತಾದಿಂದ ನೇರವಾಗಿ ರೈಲುಗಳಿವೆ. ದಿಮಾಪುರ್ ಕಚಾರಿ ಬುಡಕಟ್ಟು ಪ್ರದೇಶವಾಗಿದೆ.

10.ದಿಮಾಪುರ್‍ನ ಸಮೀಪದ ಪ್ರವಾಸಿ ತಾಣಗಳು

10.ದಿಮಾಪುರ್‍ನ ಸಮೀಪದ ಪ್ರವಾಸಿ ತಾಣಗಳು

pc: Homen Biswas

ದಿಮಾಪುರ್‍ನಿಂದ ಕೇವಲ 15 ಕಿ.ಮೀ ದೂರದಲ್ಲಿ ನಿಚುಗಾರ್ಡ್ ಹಳ್ಳಿ ಇದೆ. ಇದು ಜೀವ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ನಾಗಾಲ್ಯಾಂಡ್‍ನ ನೈಜ ವಾತಾವರಣವನ್ನು ತಿಳಿದುಕೊಳ್ಳಲು ಬಯಸುವವರು ಈ ಸ್ಥಳಕ್ಕೆ ಭೇಟಿ ನೀಡಬಹುದು.

11.ತಲೆಯನ್ನು ಕಡಿಯುತ್ತಾರೆ

11.ತಲೆಯನ್ನು ಕಡಿಯುತ್ತಾರೆ

pc: Yarzaryeni

ಇಲ್ಲಿನ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದಾಗ ಸ್ವಲ್ಪ ಜಾಗ್ರತೆಯಿಂದ ಇದ್ದರೆ ಒಳ್ಳೆಯದು. ಇಲ್ಲವಾದರೆ ತಲೆಯನ್ನು ಕಡಿಯಲು ಕೂಡ ಹಿಂದೆ-ಮುಂದೆ ನೋಡುವುದಿಲ್ಲ. 21 ನೇ ಶತಮಾನವಾದರೂ ಇಂತಹ ಜನರಿದ್ದಾರೆಯೇ ಎಂದು ಆಶ್ಚರ್ಯ ಪಡಬೇಡಿ. ಇದು ನಿಜ...ಯಾವುದೇ ಮಾಹಿತಿ ಇಲ್ಲದೇ ಎಲ್ಲೆಂದರಲ್ಲಿ ತಿರುಗಾಡುವುದು ಅಷ್ಟು ಉತ್ತಮವಾದುದು ಅಲ್ಲ.

12.ತೆರಳುವ ಬಗೆ ಹೇಗೆ?

12.ತೆರಳುವ ಬಗೆ ಹೇಗೆ?

PC: Unknown

ದಿಮಾಪುರ್ ನಾಗಾಲ್ಯಾಂಡ್‍ನಲ್ಲಿರುವ ಏಕೈಕ ರೈಲ್ವೆ ನಿಲ್ದಾಣವಾಗಿದೆ. ಆದರೆ ಇದು ಕೇವಲ ಕೊಲ್ಕತ್ತಾ ಮತ್ತು ಗುವಾಹಟಿಯೊಂದಿಗೆ ಸಂಪರ್ಕವನ್ನು ಹೊಂದಿದೆ. ನಾಗಾಲ್ಯಾಂಡಿನಿಂದ ಕೇವಲ 75 ಕಿ.ಮೀ ದೂರದಲ್ಲಿ ದಿಮಾಪುರ್ ದೇಶಿಯಾ ವಿಮಾನ ನಿಲ್ದಾಣವಿದೆ. ಗುವಾಹಟಿ ಮತ್ತು ಕೊಹಿಮಾ ನಡುವೆ ದಿನನಿತ್ಯ ನೇರ ಬಸ್ಸುಗಳ ಸಹ ನಡೆಸುತ್ತವೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ