Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಹಿಮಾ » ಹವಾಮಾನ

ಕೊಹಿಮಾ ಹವಾಮಾನ

ಕೊಹಿಮಾ ಆರ್ದ್ರ ಉಪ ಉಷ್ಣವಲಯದ ಹವಾಮಾನವನ್ನು ಹೊಂದಿದ್ದು, ವರ್ಷದ ಎಲ್ಲಾ ಸಮಯ ಹಿತಕರ ಹವಾಮಾನವಿರುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಬೇಸಿಗೆ ಋತುವಿನಲ್ಲಿ ಇಲ್ಲಿಗೆ ಗರಿಷ್ಠ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರುವುದರಿಂದ ಹವಾಮಾನ ಹಿತಕರವಾಗಿರುತ್ತದೆ.

ಮಳೆಗಾಲ

(ಜೂನ್ ನಿಂದ ಸಪ್ಟೆಂಬರ್): ಜಫು ಬರೈಲ್ ಛೇದಕದ ಒಂದು ಭಾಗವಾಗಿರುವ ಕೊಹಿಮಾದಲ್ಲಿ ಜೂನ್ ನಿಂದ ಸಪ್ಟೆಂಬರ್ ತನಕ ಭಾರೀ ಮಳೆಯಾಗುತ್ತದೆ. ಪ್ರತೀ ತಿಂಗಳು ಇಲ್ಲಿ 300 ಮಿ.ಮೀ. ಮಳೆಯಾಗುತ್ತದೆ. ಇದು ನಗರದ ಪ್ರಾಕೃತಿಕ ಸೌಂದರ್ಯಕ್ಕೆ ಜೀವ ತುಂಬುತ್ತದೆ ಮತ್ತು ಈ ವೇಳೆ ಇದನ್ನು ನೋಡುವುದೇ ಕಣ್ಣಿಗೊಂದು ಹಬ್ಬ.

ಚಳಿಗಾಲ

(ನವಂಬರ್ ನಿಂದ ಫೆಬ್ರವರಿ): ಚಳಿಗಾಲ ಕೊಹಿಮಾದಲ್ಲಿ ತುಂಬಾ ಕಠೋರವಾಗಿರುತ್ತದೆ. ನವಂಬರ್ ನಿಂದ ಆರಂಭವಾಗಿ ಫೆಬ್ರವರಿ ತನಕ ಅತ್ಯಂತ ಕಡಿಮೆ ತಾಪಮಾನವಿರುತ್ತದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನ 8 ಡಿಗ್ರಿ ಸೆಲ್ಸಿಯಸ್ ನಿಂದ 16 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ. ಕೆಲವೊಮ್ಮೆ ಮಳೆಯಾಗುತ್ತದೆ. ಇದೇ ಸಮಯದಲ್ಲಿ ವಾರ್ಷಿಕ ಹಾರ್ನ್ ಬಿಲ್ ಉತ್ಸವ ನಡೆಯುತ್ತದೆ.