Search
  • Follow NativePlanet
Share
ಮುಖಪುಟ » ಸ್ಥಳಗಳು» ಕೊಹಿಮಾ

ಕೆವಹಿ ಪುಷ್ಪಗಳ ನಾಡು ಕೊಹಿಮಾ

26

ನಾಗಾಲ್ಯಾಂಡ್ ನ ರಾಜಧಾನಿಯಾಗಿರುವ ಕೊಹಿಮಾ ಈಶಾನ್ಯ ಭಾರತದ ಅತ್ಯಂತ ರಮ್ಯರಮಣೀಯ ಸ್ಥಳಗಳಲ್ಲಿ ಒಂದಾಗಿದೆ. ತನ್ನ ಅಗಾಧ ಸೌಂದರ್ಯದಿಂದ ಈ ಪ್ರದೇಶವು ತಲೆಮಾರುಗಳಿಂದ ಜನರನ್ನು ವಶೀಕರಣ ಮಾಡಿಕೊಂಡಿದೆ. ಬೆಟ್ಟಗಳಲ್ಲಿ ಕಂಡುಬರುವ ಕೆವಹಿ ಹೂಗಳಿಂದಾಗಿ ಬಂದಿರುವ ಹೆಸರಾದ ಕೆವಹಿಮಾ ಅಥವಾ ಕೆವಹಿರಾ ಎಂದು ಬ್ರಿಟಿಷರಿಗೆ ಉಚ್ಛರಿಸಲು ಸಾಧ್ಯವಾಗದ ಕಾರಣ ಅವರು ಕೊಹಿಮಾ ಎಂದು ಕರೆಯಲು ಆರಂಭಿಸಿದರು. ಒಂದೊಮ್ಮೆ ಅನ್ಗಮಿ ಬುಡಕಟ್ಟು ನೆಲೆಸಿತ್ತು.(ನಾಗಾ ಬುಡಕಟ್ಟಿನ ದೊಡ್ಡ ಜನಾಂಗ) ಇಂದು ಕೊಹಿಮಾದಲ್ಲಿ ನಾಗಾಲ್ಯಾಂಡ್ ನ ಎಲ್ಲಾ ಭಾಗದ ಜನರು ಮತ್ತು ನೆರೆಯ ರಾಜ್ಯಗಳ ಜನರು ವಾಸವಾಗಿದ್ದಾರೆ.

ಕೊಹಿಮಾ ನಾಗಾಲ್ಯಾಂಡ್ ನ ಘೋಷಿತ ರಾಜಧಾನಿ

ಇಲ್ಲಿನ ಹೆಚ್ಚಿನ ಇತಿಹಾಸದಲ್ಲಿರುವಂತೆ ನಾಗಾಗಳು ನೆಲೆಸಿದಂತಹ ಇತರ ಭಾಗಗಳಂತೆ ಈ ಸ್ಥಳವು ವಿಶ್ವದ ಇತರ ಭಾಗಗಳಿಗಿಂತ ಪ್ರತ್ಯೇಕವಾಗಿಯೇ ಉಳಿದಿತ್ತು. 1840ರಲ್ಲಿ ಬ್ರಿಟಿಷರು ಇಲ್ಲಿಗೆ ಆಗಮಿಸಿದಾಗ ನಾಗಾ ಬುಡಕಟ್ಟು ಜನಾಂಗದವರು ಭಾರೀ ಪ್ರತಿರೋಧ ವ್ಯಕ್ತಪಡಿಸಿದ್ದರು. ಆದರೆ ನಾಲ್ಕು ದಶಕದ ಕದನದ ಬಳಿಕ ಅಂತಿಮವಾಗಿ ಬ್ರಿಟಿಷರು ಇಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿದರು ಮತ್ತು ಆಗ ಅಸ್ಸಾಂನ ನಾಗಾ ಹಿಲ್ಸ್ ನ ಜಿಲ್ಲೆಯ ಕೇಂದ್ರಾಡಳಿತವನ್ನಾಗಿ ಕೊಹಿಮಾವನ್ನು ಸ್ಥಾಪಿಸಿದರು. 1963ರ ಡಿಸೆಂಬರ್ 1ರಂದು ಭಾರತದ 16ನೇ ರಾಜ್ಯವಾದ ನಾಗಾಲ್ಯಾಂಡ್ ನ ರಾಜ್ಯ ರಾಜಧಾನಿಯೆಂದು ಕೊಹಿಮಾವನ್ನು ಘೋಷಿಸಲಾಯಿತು.

ಎರಡನೇ ವಿಶ್ವ ಯುದ್ಧದ ವೇಳೆ ಕೊಹಿಮಾ ಕೆಲವು ಪ್ರಮುಖ ಯುದ್ಧಗಳಿಗೆ ಸಾಕ್ಷಿಯಾಯಿತು. ಕೊಹಿಮಾ ಕದನ ಮತ್ತು ಟೆನಿಸ್ ಕೋರ್ಟ್ ಕದನ ಜಪಾನಿನ ಸೇನೆ ಮತ್ತು ಮೈತ್ರಿ ಪಕ್ಷಗಳ ಮಧ್ಯೆ ನಡೆಯಿತು. ಜಪಾನಿ ಸಾಮ್ರಾಜ್ಯದ ಬರ್ಮಾ ದಂಡಯಾತ್ರೆ ಇಲ್ಲಿ ತಿರುಗಿ ಬಿತ್ತು ಮತ್ತು ಆಗ್ನೇಯ ಏಷ್ಯಾದಲ್ಲಿ ಯುದ್ಧದ ಸಂಪೂರ್ಣ ಪರಿಪಾಠವೇ ಬದಲಾಯಿತು. ಜಪಾನಿ ಸೇನೆಯ ಪ್ರಗತಿಯನ್ನು ಮೈತ್ರಿ ಪಡೆಗಳು ಇಲ್ಲಿಯೇ ಸಮಾಪ್ತಿಗೊಳಿಸಿದವು. ಕೊಹಿಮಾ ಯುದ್ಧ ಸ್ಮಾರಕವನ್ನು ಕಾಮನ್ವೆಲ್ತ್ ಯುದ್ಧ ಸಮಾಧಿ ಸಮಿತಿ ನಿರ್ವಹಣೆ ಮಾಡುತ್ತಿದ್ದು, ಸಾವಿರಾರು ಯೋಧರು ಸಮಾಧಿಯಾಗಿರುವ ಈ ಪ್ರದೇಶವು ಇಂದು ಪ್ರವಾಸಿಗರ ಆಕರ್ಷಣೆಯಾಗಿದೆ.

ಪ್ರವಾಸಿಗಳಿಗೆ ರಮಣೀಯ ದೃಶ್ಯ ಭಾವನೆ

ಎಲ್ಲಾ ಪ್ರದೇಶಗಳಲ್ಲಿ ಪ್ರಾಕೃತಿಕ ಸೌಂದರ್ಯದ ಚಿತ್ರಗಳನ್ನೊಳಗೊಂಡ ಸಂಪೂರ್ಣವಾಗಿ ಪ್ರಯಾಣವನ್ನು ಆನಂದಿಸುವಂತಹ ಅವಕಾಶ ಒದಗಿಸುತ್ತದೆ. ತೀಕ್ಷ್ಣವಾದ ಶಿಖರಗಳು, ಹರಿದ ಮೋಡಗಳು ಮತ್ತು ಅಸ್ಪಷ್ಟ ಗಾಳಿ ಈ ಸ್ಥಳಕ್ಕೆ ಭೇಟಿ ನೀಡುವ ಯಾವುದೇ ಪ್ರವಾಸಿಗನನ್ನು ಮುದಗೊಳಿಸುತ್ತದೆ. ರಾಜ್ಯ ಮ್ಯೂಸಿಯಂ, ಕೊಹಿಮಾ ಮೃಗಾಲಯ, ಜಫೂ ಪೀಕ್ ಪ್ರಪಂಚದ ಎಲ್ಲಾ ಭಾಗಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಕೊಹಿಮಾದಲ್ಲಿರುವ ಝುಕೊ ವ್ಯಾಲಿ ಮತ್ತು ಝಲೆಕಿ ಹೊಳೆಯನ್ನು ನೋಡಲೇಬೇಕು. ಕೊಹಿಮಾದಲ್ಲಿರುವ ಕ್ಯಾಥೋಲಿಕ್ ಚರ್ಚ್ ರಾಷ್ಟ್ರದಲ್ಲಿರುವ ಅತ್ಯಂತ ದೊಡ್ಡ ಮತ್ತು ಸುಂದರ ಚರ್ಚ್ ಗಳಲ್ಲಿ ಒಂದಾಗಿದೆ ಮತ್ತು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುವುದನ್ನು ತಪ್ಪಿಸಬಾರದರು

ಸಂಸ್ಕೃತಿ, ಪಾಕಪದ್ಧತಿ ಮತ್ತು ಆರಾಧನಾ ಪದ್ಧತಿಗಳು

ನಾಗಾಲ್ಯಾಂಡ್ ನ ವಿಶೇಷವಾಗಿ ಕೊಹಿಮಾದ ಜನರು ತಮ್ಮ ಪ್ರೀತಿಪೂರತೆ ಮತ್ತು ಆತಿಥ್ಯಕ್ಕೆ ಹೆಸರುವಾಸಿ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಸ್ಥಳೀಯ ಪಾಕಪದ್ಧತಿಯ ಸವಿಯುನ್ನುವುದನ್ನು ಮರೆಯಬಾರದು. ನಾಗಾ ಜನರು ಹೆಚ್ಚಾಗಿ ಮಾಂಸ ಹಾಗೂ ಮೀನನ್ನು ಇಷ್ಟಪಡುತ್ತಾರೆ ಮತ್ತು ಇದರಿಂದ ಹಲವಾರು ಬಗೆಯ ರುಚಿಕರ ಆಹಾರವನ್ನು ತಯಾರಿಸುತ್ತಾರೆ. ನಾಗಾಲ್ಯಾಂಡ್ ಅದರ ಶ್ರೀಮಂತ ಹಾಗೂ ಸ್ಪಂದನಶೀಲ ಸಂಸ್ಕೃತಿಗೆ ಹೆಸರುವಾಸಿ ಮತ್ತು ಕೊಹಿಮಾ ಭೇಟಿ ವೇಳೆ ಪ್ರವಾಸಿಗರು ಇದರ ನಸುನೋಟವನ್ನು ಅನುಭವಿಸಬಹುದು. ನಾಗಾಲ್ಯಾಂಡ್ ನಲ್ಲಿರುವ ಪ್ರತಿಯೊಂದು ಹಾಗೂ ಎಲ್ಲಾ ಬುಡಕಟ್ಟು ಜನಾಂಗದವರು ತನ್ನದೇ ಆದ ಔಪಚಾರಿಕ ಉಡುಪನ್ನು ಹೊಂದಿದ್ದು, ಇದರಲ್ಲಿ ಬಹುವರ್ಣದ ಈಟಿಗಳು, ಬಣ್ಣ ಹಚ್ಚಿದ ಮೇಕೆ ಕೂದಲು, ಪಕ್ಷಿ ವೈಶಿಷ್ಟ್ಯಗಳು, ಆನೆ ದಂತ ಇತ್ಯಾದಿಗಳಿವೆ.

ಪ್ರವಾಸಿಗರಿಗೆ ಆಂತರಿಕ ರೇಖೆಯ ಅನುಮತಿ

ಪ್ರಮುಖ ವಿಚಾರವೆಂದರೆ ಕೊಹಿಮಾ ಸಂರಕ್ಷಿತ ಪ್ರದೇಶ ಕಾಯ್ದೆಯಡಿಯಲ್ಲಿ ಬರುವ ಕಾರಣ ದೇಶೀಯ ಪ್ರವಾಸಿಗರು ಇಲ್ಲಿಗೆ ಪ್ರಯಾಣಿಸಲು ಐಎಲ್ ಪಿ(ಇನ್ನರ್ ಲೈನ್ ಪರ್ಮಿಟ್) ನ್ನು ಪಡೆಯಬೇಕು. ಇದು ಪ್ರಯಾಣದ ಸುಲಭ ದಾಖಲೆಯಾಗಿದೆ. ವಿದೇಶಿ ಪ್ರವಾಸಿಗರಿಗೆ ಐಎಲ್ ಪಿ ಪಡೆಯುವ ಅಗತ್ಯವಿಲ್ಲ. ಆದರೆ ಅವರು ಜಿಲ್ಲೆಯ ವಿದೇಶಿಗರ ನೋಂದಣಿ ಅಧಿಕಾರಿ(ಎಫ್ ಆರ್ ಒ)ಯನ್ನು ಆಗಮಿಸಿದ 24 ಗಂಟೆಯೊಳಗೆ ಭೇಟಿಯಾಗಬೇಕು. ದೇಶೀಯ ಪ್ರವಾಸಿಗಳಿಗೆ ಎಲ್ ಎಲ್ ಪಿ ಸಿಗುವ ಕೆಲವು ಸ್ಥಳಗಳು...

ಉಪಾಯುಕ್ತರ ನಿವಾಸ, ನಾಗಾಲ್ಯಾಂಡ್ ಹೌಸ್, ದೆಹಲಿಉಪಾಯುಕ್ತರ ನಿವಾಸ, ನಾಗಾಲ್ಯಾಂಡ್ ಹೌಸ್, ಕೊಲ್ಕತ್ತಾಗುವಾಹಟಿ ಮತ್ತು ಶಿಲ್ಲಾಂಗ್ ನಲ್ಲಿರುವ ಸಹಾಯಕ ಆಯುಕ್ತರ ನಿವಾಸದಿಮಾಪುರ, ಕೊಹಿಮಾ ಮತ್ತು ಮೊಕೊಚುಂಗ್ ನಲ್ಲಿರುವ ಉಪಾಯಕ್ತರು

ಕೊಹಿಮಾ ಪ್ರಸಿದ್ಧವಾಗಿದೆ

ಕೊಹಿಮಾ ಹವಾಮಾನ

ಉತ್ತಮ ಸಮಯ ಕೊಹಿಮಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕೊಹಿಮಾ

  • ರಸ್ತೆಯ ಮೂಲಕ
    ಗುವಾಹಟಿ, ಇಂಫಾಲ್, ಶಿಲ್ಲಾಂಗ್ ಮತ್ತು ದಿಮಾಪುರ್ ಸೇರಿದಂತೆ ಈಶಾನ್ಯ ಭಾರತದ ಎಲ್ಲಾ ಭಾಗಗಳಿಗೆ ಕೊಹಿಮಾದಿಂದ ರಸ್ತೆ ಸಂಪರ್ಕವಿದೆ. ರಾಷ್ಟ್ರೀಯ ಹೆದ್ದಾರಿ 39 ದಿಮಾಪುರ್ ಗೆ ಸಂಪರ್ಕಿಸುವ ಪ್ರಮುಖ ರಸ್ತೆ. ಇದು ರಾಷ್ಟ್ರೀಯ ಹೆದ್ದಾರಿ 37ನ್ನು ಮತ್ತು ಕೊಹಿಮಾವನ್ನು ಗುವಾಹಟಿಗೆ ಸಂಪರ್ಕಿಸುತ್ತದೆ. ಇದು 345 ಕಿ.ಮೀ ದೂರದಲ್ಲಿದ್ದು, ಈಶಾನ್ಯದ ರಹದಾರಿಯಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ನಾಗಾಲ್ಯಾಂಡ್ ನ ಪ್ರಮುಖ ರೈಲು ನಿಲ್ದಾಣ ದಿಮಾಪುರ್ ನಲ್ಲಿದ್ದು, ಇದು ಕೊಹಿಮಾದಿಂದ 75 ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಗುವಾಹಟಿ, ಕೊಲ್ಕತ್ತಾ, ದೆಹಲಿ ಮತ್ತು ರಾಷ್ಟ್ರದ ಇತರ ನಗರಗಳಿಗೆ ದೈನಂದಿನ ರೈಲುಗಳಿವೆ. ಕೊಹಿಮಾಗೆ ತೆರಳಲು ದಿಮಾಪುರ್ ರೈಲು ನಿಲ್ದಾಣದಿಂದ ಟ್ಯಾಕ್ಸಿ ಮತ್ತು ಬಸ್ ಗಳಿಗೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಿಮಾಪುರ್ ವಿಮಾನ ನಿಲ್ದಾಣ ನಾಗಾಲ್ಯಾಂಡ್ ನಲ್ಲಿರುವ ಏಕೈಕ ವಿಮಾನ ನಿಲ್ದಾಣ ಮತ್ತು ಇದು ಕೊಹಿಮಾ ನಗರದಿಂದ 68 ಕಿ.ಮೀ. ದೂರದಲ್ಲಿದೆ. ಕೊಲ್ಕತ್ತಾ ಮತ್ತು ಗುವಾಹಟಿಯಿಂದ ದೈನಂದಿನ ವಿಮಾನಗಳಿದ್ದು, ಇಲ್ಲಿಂದ ದೇಶದ ವಿವಿಧ ಭಾಗಗಳಿಗೆ ತೆರಳಬಹುದು. ಟ್ಯಾಕ್ಸಿ ಮತ್ತು ಶಟ್ಲ್ ಸೇವೆ ದಿಮಾಪುರ್ ವಿಮಾನ ನಿಲ್ದಾಣದಿಂದ ಕೊಹಿಮಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri