Search
  • Follow NativePlanet
Share
» »ಶಿರದಲ್ಲಿ ಲಿಂಗವನ್ನು ಧರಿಸಿರುವ ಮಹಿಮಾನ್ವಿತ ದೇವಿ ಇವಳು...

ಶಿರದಲ್ಲಿ ಲಿಂಗವನ್ನು ಧರಿಸಿರುವ ಮಹಿಮಾನ್ವಿತ ದೇವಿ ಇವಳು...

By Sowmyabhai

ಎಲ್ಲಿಯೂ ಇಲ್ಲದ ವಿಧವಾಗಿ ಅಕ್ಷರಗಳ ವಿಗ್ರಹ ರೂಪದಲ್ಲಿ ದರ್ಶನ ನೀಡುವ ದೇವಾಲಯದ ಬಗ್ಗೆ ನಿಮಗೆ ಗೊತ್ತ? ಇಲ್ಲಿನ ದೇವಾಲಯದಲ್ಲಿ 2 ವಿಶೇಷತೆಗಳು ಇವೆ. ಈ ದೇವಾಲಯದಲ್ಲಿ ನೆಲೆಸಿರುವ ದೇವಿಯ ಶಿರದ ಮೇಲೆ ಶಿವಲಿಂಗವಿದೆ ಹಾಗು ಅಕ್ಷರಗಳನ್ನು ಹೊಂದಿದೆ. ಹೀಗಾಗಿಯೇ ದೇವಾಲಯವನ್ನು ಅತ್ಯಂತ ಭಕ್ತಿಯಿಂದ ಪೂಜಿಸುತ್ತಾರೆ. ಹಾಗಾದರೆ ಈ ವಿಭಿನ್ನವಾದ ದೇವಾಲಯ ಎಲ್ಲಿದೆ? ಮತ್ತು ಅಲ್ಲಿರುವ ವಿಶೇಷತೆಗಳೇನು ಎಂಬುದನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

ಅಮರಲಿಂಗೇಶ್ವರಕ್ಕೆ ಬೇಜವಾಡ ಕನಕದುರ್ಗಮ್ಮ ದೇವಾಲಯದ ಮಧ್ಯೆ ಕೃಷ್ಣಾನದಿತೀರದಲ್ಲಿ ಪೆದ್ದ ಪುಲಿಪಾಕ ಗ್ರಾಮದಲ್ಲಿ ನೆಲೆಸಿರುವ ಈ ದೇವಾಲಯವಿದೆ. ಈ ದೇವಾಲಯದ ಪ್ರಾಂಗಣದಲ್ಲಿ ವಿಘ್ನಗಳು ತೊಲಗಿಸಿ ವಿಜಯವನ್ನು ನೀಡುವ ವಿಜಯಗಣಪತಿ, ಸಕಲಜೀವಿಗಳಿಗೆ ಜ್ಞಾನವನ್ನು ಪ್ರಸಾದಿಸುವ ಸರಸ್ವತಿ ದೇವಿ, ಐಶ್ವರ್ಯವನ್ನು ನೀಡುವ ವಿಜಯಲಕ್ಷ್ಮೀ, ಸಕಲಕಾರ್ಯಸಿದ್ಧಿಯನ್ನು ಪ್ರಸಾದಿಸುವ ವಿಜಯ ಆಂಜನೇಯಸ್ವಾಮಿ ಮೂರ್ತಿಯನ್ನು ದರ್ಶಿಸಿಕೊಳ್ಳುವುದು ಪುಣ್ಯ ಪ್ರಧಾನವಾದುದು.

1. ಎಲ್ಲಿದೆ?

1. ಎಲ್ಲಿದೆ?

ಆಂಧ್ರ ಪ್ರದೇಶ ರಾಜ್ಯದಲ್ಲಿನ ಕೃಷ್ಣಾಜಿಲ್ಲೆಯಲ್ಲಿ ಪೆದ್ದಪುಲಿಪಾಕ ಗ್ರಾಮದಲ್ಲಿ ಶ್ರೀ ವಿಜಯರಾಜೇಶ್ವರಿ ದೇವಾಲಯವಿದೆ. ಪರಮಹಂಸ ವಾಸುದೇವಾನಂದ ಸ್ವಾಮಿವಾರಿ ಕೃಷಿಯಿಂದ ಪೂರ್ತಿಯಾಗಿ ದಕ್ಷಿಣ ಭಾರತ ವಾಸ್ತು ಶಿಲ್ಪ ಶೈಲಿಯಲ್ಲಿ ನಿರ್ಮಾಣವಾಗಿದೆ ಈ ದೇವಾಲಯ.

2. ಶಿರದಲ್ಲಿ ಲಿಂಗವನ್ನು ಧರಿಸಿರುವ ಮಹಿಮಾನ್ವಿತ ದೇವಿ ಇವಳು...

2. ಶಿರದಲ್ಲಿ ಲಿಂಗವನ್ನು ಧರಿಸಿರುವ ಮಹಿಮಾನ್ವಿತ ದೇವಿ ಇವಳು...

ಅಮರಲಿಂಗೇಶ್ವರ ಬೆಜವಾಡ ಕನಕದುರ್ಗಮ್ಮ ಮಧ್ಯ ಕೃಷ್ಣಾನದಿತೀರದಲ್ಲಿನ ದೊಡ್ಡ ಪುಲಿಪಾಕ ಗ್ರಾಮದಲ್ಲಿ ನೆಲೆಸಿರುವ ಈ ದೇವಾಲಯದ ಪ್ರಾಂಗಣದಲ್ಲಿ ವಿಘ್ನಗಳನ್ನು ತೊಲಗಿಸುವ ವಿಜಯಗಣಪತಿ, ಸಕಲಜೀವಿಗಳಿಗೆ ಜ್ಞಾನವನ್ನು ಪ್ರಸಾದಿಸುವ ಜ್ಞಾನದಾತೆ ಸರಸ್ವತಿದೇವಿ. ಐಶ್ವರ್ಯವನ್ನು ನೀಡುವ ವಿಜಯಲಕ್ಷ್ಮೀ, ಸಕಲ ಕಾರ್ಯ ಸಿದ್ಧಿ ಪ್ರಸಾದಿಸುವ ವಿಜಯ ಆಂಜನೇಯಸ್ವಾಮಿ ಮೂರ್ತಿಗಳನ್ನು ಕೂಡ ದರ್ಶಿಸಿಕೊಳ್ಳಬಹುದು.

3.ಶಿರದಲ್ಲಿ ಲಿಂಗವನ್ನು ಧರಿಸಿರುವ ಮಹಿಮಾನ್ವಿತ ದೇವಿ ಇವಳು...

3.ಶಿರದಲ್ಲಿ ಲಿಂಗವನ್ನು ಧರಿಸಿರುವ ಮಹಿಮಾನ್ವಿತ ದೇವಿ ಇವಳು...

ದೇವಾಲಯದ ನಾಲ್ಕು ದಿಕ್ಕಿಗಳು ನಾಲ್ಕು ವೇದಗಳಿಗೆ ಪ್ರತೀಕವಾಗಿವೆ. ಇಲ್ಲಿನ ಎತ್ತರವಾದ ರಾಜಗೋಪರಗಳು ಭಕ್ತರನ್ನು ಹಾಗು ಪ್ರವಾಸಿಗರನ್ನು ಸ್ವಾಗತಿಸುತ್ತವೆ. ದೇವಾಲಯಕ್ಕೆ ವಾಯುವ್ಯ ದಿಕ್ಕಿಗೆ ಗೋಶಾಲ ಪ್ರಕಾರವಿದೆ. ಮಂಡಲದಲ್ಲಿ ಅ ನಿಂದ ಕ್ಷ ವರೆವಿಗೂ ಅಕ್ಷರದೇವತೆಗಳು, ಒಳಭಾಗದಲ್ಲಿ ಅಷ್ಟಾದಶ ಶಕ್ತಿಪೀಠಗಳಲ್ಲಿ ದೇವಿ ದೇವತೆಗಳ ವಿಗ್ರಹಗಳಿವೆ. ದಶಾವತಾರದ ರೂಪವನ್ನು ಇಲ್ಲಿನ ಜಗನ್ ಮಾತೆ ನೆಲೆಸಿದ್ದಾಳೆ.

4.ಶಿರದಲ್ಲಿ ಲಿಂಗವನ್ನು ಧರಿಸಿರುವ ಮಹಿಮಾನ್ವಿತ ದೇವಿ ಇವಳು...

4.ಶಿರದಲ್ಲಿ ಲಿಂಗವನ್ನು ಧರಿಸಿರುವ ಮಹಿಮಾನ್ವಿತ ದೇವಿ ಇವಳು...

ಈ ವಿಗ್ರಹಗಳು ತಂಜಾವೂರು ಶಿಲ್ಪಕಲೆಗಳನ್ನು ಪ್ರತಿಬಿಂಬಿಸುತ್ತವೆ. ಇಲ್ಲಿ ದೇವಿಯ ಹೆಸರು ಶ್ರೀ ವಿಜಯರಾಜರಾಜೇಶ್ವರಿ ದೇವಿ. ಈ ತಾಯಿಯ ಶಿರದ ಮೇಲೆ ಲಿಂಗಾಕಾರವಾಗಿ ಮಹಾಶಿವನು ನೆಲೆಸಿದ್ದಾನೆ. ಪರಮಶಿವನು ಗಂಗೆಯನ್ನು ತನ್ನ ಶಿರದ ಮೇಲೆ ಧರಿಸಿದ್ದರೆ ಇಲ್ಲಿನ ದೇವಿಯು ಸಾಕ್ಷಾತ್ ಮಹಾಶಿವನನ್ನೇ ತನ್ನ ಶಿರದ ಮೇಲೆ ಇರಿಸಿಕೊಂಡಿರುವುದು ಆಶ್ಚರ್ಯವನ್ನು ಉಂಟು ಮಾಡುತ್ತದೆ.

5.ಶಿರದಲ್ಲಿ ಲಿಂಗವನ್ನು ಧರಿಸಿರುವ ಮಹಿಮಾನ್ವಿತ ದೇವಿ ಇವಳು...

5.ಶಿರದಲ್ಲಿ ಲಿಂಗವನ್ನು ಧರಿಸಿರುವ ಮಹಿಮಾನ್ವಿತ ದೇವಿ ಇವಳು...

ತಲೆಯ ಮೇಲೆ ನೆಲೆಸಿರುವ ಸ್ವಾಮಿಗಾಗಿ ಸೋಮವಾರದಂದು ಹಾಗು ದೇವಿಗಾಗಿ ಶುಕ್ರವಾರದಂದು ಅಭಿಷೇಕಗಳು ನಡೆಸುತ್ತಾರೆ. ಪ್ರಾಕಾರ ಮಂಡಲದಲ್ಲಿ ಅ ನಿಂದ ಕ್ಷ ವರೆವಿಗೂ ಅಕ್ಷರ ದೇವತೆಗಳು ಅಕ್ಷರಾಭಿಷೇಕ ಮಾಡುತ್ತಾರೆ. ಎಲ್ಲಿಯೂ ಇಲ್ಲದ ವಿಧವಾಗಿ ಅಕ್ಷರ ದೇವತೆಗಳನ್ನು ಇಲ್ಲಿ ವಿಗ್ರಹ ರೂಪದಲ್ಲಿ ಪ್ರತಿಷ್ಟಾಪಿಸಿದ್ದಾರೆ.

6.ಶಿರದಲ್ಲಿ ಲಿಂಗವನ್ನು ಧರಿಸಿರುವ ಮಹಿಮಾನ್ವಿತ ದೇವಿ ಇವಳು...

6.ಶಿರದಲ್ಲಿ ಲಿಂಗವನ್ನು ಧರಿಸಿರುವ ಮಹಿಮಾನ್ವಿತ ದೇವಿ ಇವಳು...

ದೇವಾಲಯದ ಒಳ ಭಾಗದಲ್ಲಿ ಅಷ್ಟಾದಶ ಶಕ್ತಿಪೀಠಗಳ ದೇವತೆಗಳ ವಿಗ್ರಹಗಳು, ನವದುರ್ಗಿಗಳು, ದಶಮಹಾವಿಗ್ರಹಗಳನ್ನು ಹೊಂದಿರುವ ದೇವತಾವಿಗ್ರಹಗಳು, ಇನ್ನು ಹಲವಾರು ಆಧ್ಯಾತ್ಮಿಕ ಆಕರ್ಷಣೆಗಳಿವೆ.

7.ಶಿರದಲ್ಲಿ ಲಿಂಗವನ್ನು ಧರಿಸಿರುವ ಮಹಿಮಾನ್ವಿತ ದೇವಿ ಇವಳು...

7.ಶಿರದಲ್ಲಿ ಲಿಂಗವನ್ನು ಧರಿಸಿರುವ ಮಹಿಮಾನ್ವಿತ ದೇವಿ ಇವಳು...

ಆ ಎಲ್ಲಾ ವಿಗ್ರಹಗಳು ತಂಜಾವೂರು ಶಿಲ್ಪಕಲೆಗಳನ್ನು ಪ್ರತಿಬಿಂಬಿಸುತ್ತದೆ. ಮುಖ್ಯವಾಗಿ ನೀಲಿ ಸರಸ್ವತಿ, ಚಿನ್ನಮಸ್ತಾದೇವಿ, ಅಕ್ಷರದೇವತಾ ಮೂರ್ತಿಯಂತಹ ವಿಗ್ರಹಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಬಹುದು. ದೇವಾಲಯವು ವಾಯುವ್ಯ ದಿಕ್ಕಿಗೆ ಗೋಶಾಲೆಗಳು ಪವಿತ್ರವಾದ ಸ್ಥಳವೇ ಆಗಿದೆ. ಹೀಗೆ ಎಷ್ಟೊ ವಿಶೇಷತೆಗಳನ್ನು ಹೊಂದಿರುವ ಈ ದೇವಾಲಯವನ್ನು ದರ್ಶಿಸಿದರೆ ವಿಜಯವು ಹಿಂದೆಯೇ ಬರುತ್ತದೆ ಎಂದು ಭಕ್ತರ ಅಚಲವಾದ ನಂಬಿಕೆಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X