Search
  • Follow NativePlanet
Share
» »ಪವಾಡ ಹಿನ್ನಿಲೆಯಿರುವ ವೇಲಾಂಕಣ್ಣಿ ಕ್ರೈಸ್ತ ದೇವಾಲಯ

ಪವಾಡ ಹಿನ್ನಿಲೆಯಿರುವ ವೇಲಾಂಕಣ್ಣಿ ಕ್ರೈಸ್ತ ದೇವಾಲಯ

By Vijay

ನಮ್ಮ ನಾಡಿನಲ್ಲಿ ಇಂದಿಗೂ ಕೆಲವು ಸ್ಮಾರಕಗಳು, ದೇವಾಲಯಗಳು ಅಥವಾ ಪುಣ್ಯ ಸ್ಥಳಗಳು ಯಾವುದೇ ಭೇದ ಭಾವವಿಲ್ಲದೆ ಸರ್ವರನ್ನೂ ಸ್ವಾಗತಿಸುವುದನ್ನು ನಾವು ನೋಡಬಹುದಾಗಿದೆ. ಕೇವಲ ನಿರ್ದಿಷ್ಟ ಧರ್ಮದವರಲ್ಲದೆ ಅನ್ಯ ಧರ್ಮಿಯರೂ ಸಹ ಭೇಟಿ ನೀಡುವ ಸಾಕಷ್ಟು ದೇವಾಲಯ, ದೇಗುಲಗಳು ದೇಶದ ತುಂಬೆಲ್ಲ ಕಂಡುಬರುತ್ತವೆ.

ಈ ನಿಟ್ಟಿನಲ್ಲಿ ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯ ವೇಲಾಂಕಣ್ಣಿ ಕ್ರೈಸ್ತ ದೇವಾಲಯವೂ ಸಹ ಒಂದು. "ಬೆಸಿಲಿಕಾ ಆಫ್ ಅವರ್ ಲೇಡಿ ಆಫ್ ಗುಡ್ ಹೆಲ್ತ್" ಅಥವಾ ಉತ್ತಮ ಆರೋಗ್ಯ ಕರುಣಿಸುವ ಮಾತೆಯ ಬೆಸಿಲಿಕಾ ಎಂದು ಕರೆಯಲ್ಪಡುವ ಈ ಕ್ರೈಸ್ತ ದೇವಾಲಯವು 16 ನೆಯ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದ್ದು ಭಾರತದ ಅತಿ ಪುರಾತನ ಕ್ರೈಸ್ತ ದೇವಾಲಯ ಅಥವಾ ಚರ್ಚ್ ಗಳ ಪೈಕಿ ಒಂದಾಗಿದೆ.

ಕ್ರಿಸ್ಮಸ್ ಕೊಡುಗೆ : ಹೋಟೆಲ್ ಬುಕಿಂಗ್ ಮೇಲೆ 50% ರಷ್ಟು ಕಡಿತ

ಭಾರತದಲ್ಲೆ ಕ್ಯಾಥೋಲಿಕ್ ಕ್ರೈಸ್ತರ ದ.ಭಾರತದಲ್ಲಿರುವ ಅತಿ ಪವಿತ್ರ ತೀರ್ಥ ಕ್ಷೇತ್ರವಾಗಿ ವೇಲಾಂಕಣ್ಣಿ ಪ್ರಖ್ಯಾತವಾಗಿದೆ. ಕೇವಲ ಕ್ರೈಸ್ತರಲ್ಲದೆ ಅನ್ಯ ಧರ್ಮದವರೂ ಸಹ ಮಾತೆಯನ್ನು ಪ್ರಾರ್ಥಿಸಿ ಆರೋಗ್ಯವನ್ನು ಪಡೆಯುವ ಉದ್ದೇಶದಿಂದ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ವೇಲಾಂಕಣ್ಣಿಯನ್ನು ರಸ್ತೆ ಹಾಗೂ ರೈಲಿನ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಚೆನ್ನೈನಿಂದ ಕಡಲೂರಿಗಿರುವ ಈಸ್ಟ್ ಕೋಸ್ಟ್ ಹೆದ್ದಾರಿಯು ವೇಲಾಂಕಣ್ಣಿಯ ಸಂಪರ್ಕ ಹೊಂದಿದೆ. ಅಲ್ಲದೆ ಚೆನ್ನೈನ ಎಗ್ಮೋರ್ ರೈಲು ನಿಲ್ದಾಣದಿಂದ ಪ್ರತಿನಿತ್ಯ ವೇಲಾಂಕಣ್ಣಿಗೆ ರೈಲಿನ ವ್ಯವಸ್ಥೆಯಿದೆ. ಚೆನ್ನೈನಿಂದ ವೇಲಾಂಕಣ್ಣಿ ಸುಮಾರು 350 ಕಿ.ಮೀ ಗಳಷ್ಟು ಅಂತರದಲ್ಲಿದೆ.

ವೇಲಾಂಕಣ್ಣಿ ಕ್ರೈಸ್ತ ದೇವಾಲಯ:

ವೇಲಾಂಕಣ್ಣಿ ಕ್ರೈಸ್ತ ದೇವಾಲಯ:

ಹಾಗಾದರೆ ಪ್ರಸ್ತುತ ಲೇಖನದ ಮೂಲಕ ಈ ಕ್ರೈಸ್ತ ದೇವಾಲಯದ ಕುರಿತು ಕೆಲವು ಆಸಕ್ತಿ ಭರಿತ ವಿಚಾರಗಳನ್ನು ತಿಳಿಯಿರಿ.

ವೇಲಾಂಕಣ್ಣಿ ಕ್ರೈಸ್ತ ದೇವಾಲಯ:

ವೇಲಾಂಕಣ್ಣಿ ಕ್ರೈಸ್ತ ದೇವಾಲಯ:

16 ನೆಯ ಶತಮಾನದ ಒಂದು ದಿನ. ಹಿಂದೂ ಬಾಲಕನೊಬ್ಬ ಗ್ರಾಹಕರಿಗೆ ಹಾಲು ವಿತರಿಸಲು ತೆರಳುತ್ತಿದ್ದ. ರಸ್ತೆಯಲ್ಲಿ ನಡೆದು ನಡೆದು ದಣಿವುಂಟಾಗಿ ವಿಶ್ರಾಂತಿ ಪಡೆಯಲು ಒಂದು ಕೊಳದ ಹತ್ತಿರವಿದ್ದ ಆಲದ ಮರವೊಂದರ ಕೆಳಗೆ ಕುಳಿತುಕೊಂಡ.

ಚಿತ್ರಕೃಪೆ: Koshy Koshy

ವೇಲಾಂಕಣ್ಣಿ ಕ್ರೈಸ್ತ ದೇವಾಲಯ:

ವೇಲಾಂಕಣ್ಣಿ ಕ್ರೈಸ್ತ ದೇವಾಲಯ:

ಆ ಸಮಯದಲ್ಲಿ ಮೇರಿ ಮಾತೆಯು ಬಾಲಕ ಜೀಸಸ್ ನೊಂದಿಗೆ ಪ್ರತ್ಯಕ್ಷಳಾಗಿ ತನಗೆ ಸ್ವಲ್ಪ ಹಾಲು ಬೇಕೆಂದು ಕೇಳಿಕೊಂಡಳು. ಅದಕ್ಕೆ ಬಾಲಕನು ತನ್ನ ಬಳಿಯಿದ್ದ ಹಾಲಿನಲ್ಲಿ ಸ್ವಲ್ಪ ಮಾತೆಗೆ ಕೊಟ್ಟು ಮಿಕ್ಕ ಹಾಲನ್ನು ತನ್ನ ಗ್ರಾಹಕನ ಬಳಿ ತೆಗೆದುಕೊಂಡು ಹೋಗಿ ನಡೆದ ಪ್ರಸಂಗದ ಕುರಿತು ವಿವರಿಸಿದ ಹಾಗೂ ಹಾಲಿನ ಪ್ರಮಾಣವು ಕಡಿಮೆಯಿರುವುದರ ಕುರಿತು ತಿಳಿಸಿ ಕ್ಷಮಾಪಣೆ ಕೇಳಿದ.

ಚಿತ್ರಕೃಪೆ: Sukumaran sundar

ವೇಲಾಂಕಣ್ಣಿ ಕ್ರೈಸ್ತ ದೇವಾಲಯ:

ವೇಲಾಂಕಣ್ಣಿ ಕ್ರೈಸ್ತ ದೇವಾಲಯ:

ಅಚ್ಚರಿಯೆಂದರೆ ಗ್ರಾಹಕನು ಹಾಲನ್ನು ವೀಕ್ಷಿಸಿದಾಗ ಪ್ರಮಾಣದಲ್ಲಿ ಸ್ವಲ್ಪವೂ ವ್ಯತ್ಯಾಸವಿಲ್ಲದಿದ್ದುದು ಗಮನಕ್ಕೆ ಬಂದಿತು.

ಚಿತ್ರಕೃಪೆ: Waiting For The Word

ವೇಲಾಂಕಣ್ಣಿ ಕ್ರೈಸ್ತ ದೇವಾಲಯ:

ವೇಲಾಂಕಣ್ಣಿ ಕ್ರೈಸ್ತ ದೇವಾಲಯ:

ಆಗ ಗ್ರಾಹಕನಿಗೆ ಕುತೂಹಲ ಉಂಟಾಗಿ ಇಬ್ಬರೂ ಆ ಸ್ಥಳದ ಬಳಿ ತೆರಳಿದರು. ಆ ಸ್ಥಳಕ್ಕೆ ಮತ್ತೆ ಬಂದಾಗ ಮಾತೆಯು ಪ್ರತ್ಯಕ್ಷಳಾಗಿ ಇಬ್ಬರಿಗೂ ದರುಶನ ಕೊಟ್ಟಳು. ಈ ಸುದ್ದಿ ಹಬ್ಬುತ್ತಿದ್ದಂತೆಯೆ ಸ್ಥಳೀಯ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದವರು ಹರ್ಷಚಕಿತರಾದರು. ಮೇರಿ ಮಾತೆಯು ಪ್ರತ್ಯಕ್ಷಳಾಗಿದ್ದ ಆ ಕೊಳವನ್ನು ಮಾತಾ ಕೊಳ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: dixon

ವೇಲಾಂಕಣ್ಣಿ ಕ್ರೈಸ್ತ ದೇವಾಲಯ:

ವೇಲಾಂಕಣ್ಣಿ ಕ್ರೈಸ್ತ ದೇವಾಲಯ:

ಇನ್ನೊಂದು ಸಮಯದಲ್ಲಿ, ಈ ಸ್ಥಳದ ಹೊರವಲಯದಲ್ಲಿ ಒಬ್ಬ ಕುಂಟನು ಮಜ್ಜಿಗೆ ಮಾರಿ ಜೀವನ ನಡೆಸುತ್ತಿದ್ದನು. ಒಮ್ಮೆ ಮೇರಿ ಮಾತೆಯು ಪ್ರತ್ಯಕ್ಷಳಾಗಿ ಆತನಿಂದ ಮಜ್ಜಿಗೆಯನ್ನು ಬೇಡಿ ಕುಡಿದಳು. ತರುವಾಯ ತನ್ನ ಪ್ರತ್ಯಕ್ಷಳಾಗಿರುವ ಕುರಿತು ಆ ಗ್ರಾಮದ ಸಿರಿವಂತನೊಬ್ಬನಿಗೆ ತಿಳಿಸಲು ಸೂಚಿಸಿದಳು.

ಚಿತ್ರಕೃಪೆ: Waiting For The Word

ವೇಲಾಂಕಣ್ಣಿ ಕ್ರೈಸ್ತ ದೇವಾಲಯ:

ವೇಲಾಂಕಣ್ಣಿ ಕ್ರೈಸ್ತ ದೇವಾಲಯ:

ತನ್ನ ಕಾಲು ಕುಂಟವಾಗಿದ್ದರೂ ಸಹ ಆತ ಯಾವುದೆ ತೊಂದರೆಗಳಿಲ್ಲದೆ ಸಹಜವಾಗಿ ಎದ್ದು ಸ್ರಿವಂತನಿಗೆ ಈ ವಿಷಯ ತಿಳಿಸಲು ಹೊರಟೇ ಬಿಟ್ಟ. ಅದರಂತೆ ಅಲ್ಲಿ ಸಿರಿವಂತನಿಗೂ ಸಹ ಹಿಂದಿನ ದಿನ ರಾತ್ರಿ ಮೇರಿ ಮಾತೆಯು ಪ್ರತ್ಯಕ್ಷಳಾಗಿದ್ದಳು. ನಂತರ ಆ ಸಿರಿವಂತ ಮಜ್ಜಿಗೆ ಮಾರುವವನ ಜೊತೆ ಆ ಸ್ಥಳಕ್ಕೆ ಬಂದಾಗ ಮತ್ತೊಮ್ಮೆ ಮೇರಿ ಮಾತೆಯು ಇಬ್ಬರಿಗೂ ದರುಶನ ನೀಡಿದಳು.

ಚಿತ್ರಕೃಪೆ: angelofsweetbitter2009

ವೇಲಾಂಕಣ್ಣಿ ಕ್ರೈಸ್ತ ದೇವಾಲಯ:

ವೇಲಾಂಕಣ್ಣಿ ಕ್ರೈಸ್ತ ದೇವಾಲಯ:

ಅಂತರ ಅಲ್ಲಿ ಮಾತೆಗೆ ಒಂದು ಮಂದಿರವನ್ನು ಕಟ್ಟಲಾಯಿತು. ಕುಂಟನು ತನ್ನ ಕಾಲುಗಳನ್ನು ಮರಳಿ ಪಡೆದು ಉತ್ತಮ ಆರೋಗ್ಯ ಹೊಂದಿದ್ದಕ್ಕಾಗಿ ಆ ಮಾತೆಯನ್ನು ಆರೋಗ್ಯ ಮಾತಾ ಅಥವಾ ಆರೋಗ್ಯ ಕರುಣಿಸುವ ಮಾತಾ ಎಂದು ಕರೆದು ಪೂಜಿಸಹತ್ತಿದರು.

ಚಿತ್ರಕೃಪೆ: Krrishnah

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more