• Follow NativePlanet
Share
Menu
» »ಕಡಿಮೆ ಪ್ರಚಾರದಲ್ಲಿರುವ ಮತ್ತು ಕಡಿಮೆ ಭೇಟಿ ಕೊಡಲ್ಪಡುವ ಕಲಾತ್ಮಕತೆಯ ಸ್ಥಳ ವರ್ಕಲಾ

ಕಡಿಮೆ ಪ್ರಚಾರದಲ್ಲಿರುವ ಮತ್ತು ಕಡಿಮೆ ಭೇಟಿ ಕೊಡಲ್ಪಡುವ ಕಲಾತ್ಮಕತೆಯ ಸ್ಥಳ ವರ್ಕಲಾ

Posted By: Manjula Balaraj Tantry

ಈ ಅನಿಶ್ಚಿತ ಪ್ರಪಂಚವು ಅನಿಶ್ಚಿತ ರೂಪಗಳಲ್ಲಿ ಅನೇಕ ಅನಿಶ್ಚಿತ ಆಶ್ಚರ್ಯಗಳಡಗಿದೆ. ನಾವು ಯಾವಾಗಲೂ ಭೂ ತಾಯಿಯ ಅಂತ್ಯವಿಲ್ಲದ ಕೆಲವು ವಿಸ್ತಾರವಾದ ಸೌಂದರ್ಯತೆ ಮತ್ತು ವಿಸ್ಮಯಗಳನ್ನು ನೋಡುತ್ತೇವೆ. ವಿಶ್ವದ ಅಸ್ತಿತ್ವವು ಪೂರ್ಣವಾದ ವಿಸ್ಮಯಕರ ಸ್ಥಳಗಳಿಂದ ತುಂಬಿದೆ ಎಂದು ನಿರಾಕರಿಸಲಾಗದು, ಅದು ನಮ್ಮ ಅಸ್ತಿತ್ವ, ಮತ್ತು ಬದುಕುಳಿಯುವಿಕೆಯ ಮೂಲಕ ನಮಗೆ ಒಂದಲ್ಲ ಒಂದು ರೀತಿಯಲ್ಲಿ ಆಶ್ಚರ್ಯವನ್ನು ನೀಡುತ್ತದೆ.

ಹಲವಾರು ಸ್ಥಳಗಳು ಇನ್ನೂ ಅನ್ವೇಷಣೆಗೆ ಬಂದಿಲ್ಲ ಮತ್ತು ಇಲ್ಲಿಯ ಪ್ರಾಕೃತಿಕ ಸೌಂದರ್ಯಗಳ ಬಗ್ಗೆ ಬೆಳಕಿಗೆ ಬರಬೇಕಾದ ಅನೇಕ ಸ್ಥಳಗಳಿವೆ. ವ್ಯಾಪಾರೀಕರಣದಿಂದ ಇನ್ನೂ ಮೈಲುಗಳಷ್ಟು ದೂರದಲ್ಲಿರುವ ಇಂತಹ ಸ್ಥಳಗಳು ಬೆಳಕಿಗೆ ಬಂದಿಲ್ಲ.ಅಂತಹ ಸ್ಥಳಗಳಲ್ಲಿ ವರ್ಕಲಾ ಕೂಡಾ ಒಂದು, ಈ ಸ್ಥಳವು ಕೆಲವು ಪ್ರಯಾಣಿಗರು ಮತ್ತು ಪ್ರವಾಸಿಗರ ಗಮನಕ್ಕೆ ಇನ್ನೂ ಬಂದಿಲ್ಲ. ಇದರ ಮಂತ್ರಮುಗ್ದ ಸೌಂದರ್ಯತೆ ಮತ್ತು ಆಕರ್ಷಣೆಗಳಿಂದ ಪ್ರಾಮುಖ್ಯತೆ ದಿನದಿಂದ ದಿನಕ್ಕೆ ಪ್ರವಾಸಿಗರಲ್ಲಿ ಹೆಚ್ಚುತ್ತಾ ಬರುತ್ತಿದೆ.

ಕೇರಳದ ಪಶ್ಚಿಮ ಭಾಗದಲ್ಲಿರುವ ಈ ಕರಾವಳಿ ಪಟ್ಟಣವು ಭಾರತದ ಹಲವು ಹಳೆಯ ದೇವಾಲಯಗಳಿಗೆ ನೆಲೆಯಾಗಿದೆ.ಕೇರಳದ ಪಶ್ಚಿಮ ಭಾಗದಲ್ಲಿರುವ ಈ ಕರಾವಳಿ ಪಟ್ಟಣವು ಭಾರತದ ಹಲವು ಹಳೆಯ ದೇವಾಲಯಗಳಿಗೆ ನೆಲೆಯಾಗಿದೆ. ಇದನ್ನು ದಕ್ಷಿಣಕಾಶಿಗೆ (ದಕ್ಷಿಣದ ಬನಾರಸ್) ಎಂದು ಕರೆಯಲಾಗುತ್ತದೆ. ವರ್ಕಲಾದಲ್ಲಿ ವಿಷ್ಣುದೇವರಿಗೆ ಸಮರ್ಪಿತವಾದ ಅನೇಕ ವೈಷ್ಣವ ದೇವಾಲಯಗಳಿವೆ

ಈ ಸ್ಥಳಕ್ಕೆ ಇತಿಹಾಸಕ್ಕೆ ಸಂಭಂದಿಸಿದ ಅನೇಕ ದೇವಾಲಯಗಳು ಮತ್ತು ಸ್ಮಾರಕಗಳು ಮಾತ್ರವಲ್ಲದೆ, ಈ ಪಟ್ಟಣವನ್ನು ಸುತ್ತುವರಿದಿರುವ ಹಿನ್ನೀರಿನ ನೆಲೆಗಳನ್ನು ನೋಡಬಹುದು. ಅಲ್ಲದೆ ಪಶ್ಚಿಮ ಭಾಗದಲ್ಲಿ ಬೀಚ್ ಗಳು, ಮತ್ತು ಉದ್ಯಾನವನಗಳನ್ನೂ ಕಾಣಬಹುದಾಗಿದೆ. ಇಲ್ಲಿ ನೀವು ಅರೆಬ್ಬಿ ಸಮುದ್ರದ ಪಕ್ಕದಲ್ಲಿ ಬಂಡೆಗಳನ್ನು ಕಾಣಬಹುದು
ಸರಿ, ಈ ಪಟ್ಟಣದಲ್ಲಿನ ಕೆಲವು ಪ್ರಮುಖ ಸ್ಥಳಗಳಿಗೆ ನಿಮ್ಮನ್ನು ಪರಿಚಯಿಸೋಣ.

 ಪಾಪನಾಶಮ್ ಬೀಚ್

ಪಾಪನಾಶಮ್ ಬೀಚ್

ಇದು ವರ್ಕಲಾ ಬೀಚ್ ನ ದಕ್ಷಿಣ ಭಾಗದಲ್ಲಿದೆ. ಪಾಪನಾಶಮ್ ಎಂಬ ಪದದಲ್ಲಿ ಎರಡು ಅರ್ಥವಿದೆ ಪಾಪ್ ಅಂದರೆ ಪಾಪ ನಾಶಂ ಅಂದರೆ ವಿದ್ವಂಸಕ ಅಥವಾ ತೊಳೆದುಕೊಳ್ಳುವುದು ಎಂದಾಗಿದೆ. ಆದುದರಿಂದ ಇದು ಎರಡನ್ನು ಸೇರಿಸಿ ಪಾಪಗಳನ್ನು ವಿಧ್ವಂಸ ಮಾಡುವುದು ಎಂದಾಗಿದೆ. ಈ ಬೀಚ್ ನ ನೀರನ್ನು ಪವಿತ್ರವಾದುದೆಂದು ಪರಿಗಣಿಸಲಾಗಿದ್ದುಇದು ಜನರ ಪಾಪ ತೊಳೆಯುತ್ತದೆ ಎಂಬ ನಂಬಿಕೆಯಿದೆ. ಆಧ್ಯಾತ್ಮಿಕ ಸಂಪರ್ಕದಿಂದಾಗಿ, ಇದನ್ನು ಮಹತ್ವದ ಆಯುರ್ವೇದ ಚಿಕಿತ್ಸಾ ಕೇಂದ್ರವೆಂದು ಪರಿಗಣಿಸಲಾಗಿದೆ.

PC- Binoyjsdk


 ವರ್ಕಲಾ ಬೀಚ್

ವರ್ಕಲಾ ಬೀಚ್

ನೀವು ಸುಮ್ಮನೆ ಕುಳಿತುಕೊಂಡು ಸುತ್ತಲಿನ ಸೌಂದರ್ಯವನ್ನು ವೀಕ್ಷಣೆ ಮಾಡಬಯಸುವಿರಾದಲ್ಲಿ ವರ್ಕಲಾ ಬೀಚ್ ಇದಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ನೋಟವು ನಿಮ್ಮನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ.


PC- Lukas Vacovsky

ಕಪ್ಪಿಲ್ ಸರೋವರ

ಕಪ್ಪಿಲ್ ಸರೋವರ

ಇದು ನದೀ ಮುಖವು ಅರೇಬ್ಬಿ ಸಮುದ್ರದೊಂದಿಗೆ ಸೇರುವ ಜಾಗವಾಗಿದ್ದು ಇದರ ಸುಂದರ ಪದರಗಳ ರಚನೆಯೊಂದಿಗೆ ಇದರ ನೋಟವು ವೀಕ್ಷಕರನ್ನು ದಿಗ್ಬ್ರಮೆಗೊಳಿಸುತ್ತದೆ. ಸರೋವರದ ಮೇಲಿರುವ ಸೇತುವೆಯಿಂದ ಈ ದೃಶ್ಯವನ್ನು ನೋಡುವುದರಿಂದ ಈ ಜಾಗದ ಸೌಂದರ್ಯ ಇನ್ನೂ ಎದ್ದು ಕಾಣುತ್ತದೆ.

PC- Ikroos

ಜನಾರ್ಧನಸ್ವಾಮಿ ದೇವಸ್ಥಾನ

ಜನಾರ್ಧನಸ್ವಾಮಿ ದೇವಸ್ಥಾನ

2000 ವರ್ಷ ಹಳೆಯದಾದ ಜನಾರ್ದನಸ್ವಾಮಿ ದೇವಸ್ಥಾನವು ಇಲ್ಲಿರುವ ಎಲ್ಲಾ ದೇವಾಲಯಗಳ ಪೈಕಿ ಅತ್ಯಂತ ಹಳೆಯದಾದುದು. ಇದು ವೈಷ್ಣವ ದೇವಾಲಯವಾಗಿದ್ದು ಪಾಪನಾಶಂ ಬೀಚ್ ಗೆ ಸಮೀಪದಲ್ಲಿದೆ. ಇದು ಪಟ್ಟಣದಲ್ಲಿನ ಅತ್ಯಂತ ಆಧ್ಯಾತ್ಮಿಕ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಸಾರ್ವಕಾಲಿಕ ದೈವಿಕ ಉಪಸ್ಥಿತಿಯ ಸ್ಥಳವೆಂದು ಎಂದು ಪರಿಗಣಿಸಲಾಗುತ್ತದೆ

PC- Dev

ವರ್ಕಲಾವನ್ನು ತಲುಪುವುದು ಹೇಗೆ?

ವರ್ಕಲಾ ಎಲ್ಲಾ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ ಮತ್ತು ನೀವು ವಿಮಾನ ಮೂಲಕ ಪ್ರಯಾಣಿಸಲು ಯೋಜಿಸುತ್ತಿದ್ದರೆ, ತಿರುವನಂತಪುರ ವಿಮಾನ ನಿಲ್ದಾಣವು ವಾರ್ಕಲಾದಿಂದ 51 ಕಿ.ಮೀ ದೂರದಲ್ಲಿದೆ. ಯಾವುದೇ ಪ್ರಮುಖ ಪಟ್ಟಣದಿಂದ ವರ್ಕಲಾ ರೈಲ್ವೆ ನಿಲ್ದಾಣಕ್ಕೆ ಕೂಡಾ ಒಂದು ರೈಲು ಪ್ರಯಾಣ ಮಾಡಬಹುದಾಗಿದೆ.

ವರ್ಕಲಾಕ್ಕೆ ಭೇಟಿ ಕೊಡಲು ಸೂಕ್ತ ಸಮಯ?

ಪ್ರಕೃತಿಯ ಆಕರ್ಷಕ ಸೃಜನಶೀಲತೆಯನ್ನು ವರ್ಷದ ಉದ್ದಕ್ಕೂ ಕಾಣಬಹುದು. ಆದರೂ, ವರ್ಕಲಾ ಭೇಟಿಗೆ ಅತ್ಯುತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್ ಅಂತ್ಯದವರೆಗೆ ಈ ಸಮಯದಲ್ಲಿ ಉಷ್ಣಾಂಶ ಪರಿಸ್ಥಿತಿಗಳು ಅತ್ಯುತ್ತಮ ಮತ್ತು ಅನುಕೂಲಕರವಾಗಿರುತ್ತದೆ.

ಆದ್ದರಿಂದ, ಇದು ವರ್ಕಲಾ, ಕಡಿಮೆ ಪ್ರಯಾಣದ ಸ್ಥಳವಾಗಿದ್ದರೂ ಆದರೆ ಕಲಾತ್ಮಕತೆಯನ್ನು ಒಳಗೊಂಡಿರುವ ಸ್ಥಳವಾಗಿದೆ. ಈಗ ನಿಮ್ಮ ಬ್ಯಾಗುಗಳನ್ನು ಪ್ಯಾಕ್ ಮಾಡಿ! ಪ್ರತಿಯೊಬ್ಬರೂ ಅದರ ಮಾರ್ಗವನ್ನು ಹಿಡಿಯುವುದರೊಳಗೆ ನೀವು ತಲುಪಿ .

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ