Search
  • Follow NativePlanet
Share
» »ವಿವಿಧ ಸ್ಥಳಗಳಲ್ಲಿ ಆರಾಧಿಸಲಾಗುವ ಶಿವನ ವಿಶಿಷ್ಟ ರೂಪಗಳು

ವಿವಿಧ ಸ್ಥಳಗಳಲ್ಲಿ ಆರಾಧಿಸಲಾಗುವ ಶಿವನ ವಿಶಿಷ್ಟ ರೂಪಗಳು

By Vijay

ಹಿಂದುಗಳು ನಂಬಿರುವಂತೆ ಲೋಕದ ಮೂರು ಪ್ರಮುಖ ದೈವಗಳ ಪೈಕಿ ಶಿವನೂ ಒಬ್ಬ. ತನ್ನ ಮುರನೆಯ ಕಣ್ಣಿನಿಂದ ಸರ್ವ ಲೋಕವನ್ನೆ ನಾಶ ಪಡಿಸುವ ಶಕ್ತಿಯುಳ್ಳಂತಹ ಶಿವನು ಭಾರತದ ಹಲವು ಸ್ಥಳಗಳಲ್ಲಿ ಸೌಮ್ಯ ಸ್ವಭಾವದಿಂದ ಹಿಡಿದು ರುದ್ರ ಭಯಂಕರವಾದ ಸ್ವಭಾವದ ಹಲವು ರೂಪಗಲಲ್ಲಿ ಆರಾಧಿಸಲ್ಪಡುತ್ತಾನೆ.

ಶಿವನ ವಿಭಿನ್ನ ರೂಪಗಳು ಆಕರ್ಷಕವಾಗಿದ್ದು ಕೆಲವೆಡೆ ನೃತ್ಯ ಭಾವದಲ್ಲಿದ್ದರೆ, ಹಲವೆಡೆ ಧ್ಯಾನ ರೂಪದಲ್ಲೂ, ಇನ್ನೂ ಕೆಲವೆಡೆ ಲಿಂಗ ಸ್ವರೂಪಿಯಾಗಿಯೂ ಆಯಾ ಸ್ಥಳಗಳ ವಿಶೇಷವಾದ ಹಿನ್ನಿಲೆ, ದಂತಕಥೆಗಳೊಂದಿಗೆ, ವಿವಿಧ ನಾಮಗಳೊಂದಿಗೆ ಪೂಜಿಸಲ್ಪಡುತ್ತಾನೆ. ಶಿವನ ಕೆಲವು ವಿಶೇಷವಾದ ರೂಪಗಳು ಕೇವಲ ಕೆಲ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರವೆ ಕಾಣಬಹುದಾಗಿದೆ.

ನಿಮಗಿಷ್ಟವಾಗಬಹುದಾದ : ಕರ್ನಾಟಕದಲ್ಲಿರುವ ಶಿವನ ಪುರಾತನ ಹಾಗೂ ಅನನ್ಯವಾದ ದೇವಾಲಯಗಳು

ಹೀಗೆ ವಿವಿಧ ನಾಮಗಳೊಂದಿಗೆ, ರೂಪಗಳೊಂದಿಗೆ ಪೂಜಿಸಲ್ಪಡುವ ಶಿವ ನೆಲೆಸಿರುವ ಕೆಲವು ವಿಶಿಷ್ಟವಾದ ಸ್ಥಳಗಳ ಕುರಿತು ಈ ಲೇಖನದ ಮೂಲಕ ತಿಳಿಯಿರಿ. ಮುಂದೊಮ್ಮೆ ಅವಕಾಶ ಸಿಕ್ಕರೆ ಆ ಸ್ಥಳಗಳಿಗೆ ಹೋಗಿ ಸ್ವಾರಸ್ಯಕರವಾದ ಶಿವನ ಸ್ವರೂಪಗಳನ್ನು ಮನಸಾರೆ ನೋಡಿ, ದರ್ಶಿಸಿ ಪುಳಕಿತಗೊಳ್ಳಿ.

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ಆಕಾಶ ಭೈರವ : ಭೈರವ ಎಂಬುದು ಶಿವನ ಒಂದು ಸ್ವರೂಪ. ಹಲವು ಭೈರವರ ಪೈಕಿ ಆಕಾಶ ಭೈರವ ಎಂಬುದು ಒಂದು ರುಪ. ಪ್ರಸ್ತುತ ನೇಪಾಳದ ಕಟ್ಮಂಡುವಿನಲ್ಲಿ ಇವನಿಗೆ ಮುಡಿಪಾದ ಸನ್ನಿಧಿಯಿದೆ. ಅಗಸ್ಟ್-ಸೆಪ್ಟಂಬರ್ ಸಮಯದಲ್ಲಿ ಜರುಗುವ ಇಂದ್ರ ಜಾತ್ರಾ ಉತ್ಸವದ ಸಂದರ್ಭದಲ್ಲಿ ಆಕಾಶಭೈರವನ ಮುಖವನ್ನು ಮೆರವಣಿಗೆ ಮಾಡಲಾಗುತ್ತದೆ.

ಚಿತ್ರಕೃಪೆ: Rabs003

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ಅರ್ಧನಾರೀಶ್ವರ : ಅರ್ಧ ಪುರುಷನಾಗಿಯೂ ಅರ್ಧ ಸ್ತ್ರೀರೂಪನಾಗಿಯೂ ಪೂಜಿಸುವ ಶಿವನೆ ಅರ್ಧನಾರೀಶ್ವರನಾಗಿದ್ದಾನೆ. ಒಂದೆ ದೇಹದಲ್ಲಿ ಶಿವ ಹಾಗೂ ಪಾರ್ವತಿಯ ಐಕ್ಯತೆಯನ್ನು ಸಾರುತ್ತದೆ ಶಿವನ ಈ ರೂಪ. ಶಿವನ ಈ ರೂಪಕ್ಕೆ ಮುಡಿಪಾದ ದೇವಾಲಯಗಳು ಕಡಿಮೆ ಸಂಖ್ಯೆಯಲ್ಲಿದ್ದು ಅದರಲ್ಲಿ ಪ್ರಮುಖವಾಗಿದೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿರುವ ತಿರುಚೆಂಗೋಡೆ ಎಂಬಲ್ಲಿನ ಬೆಟ್ಟವೊಂದರ ಮೇಲಿರುವ ದೇವಸ್ಥಾನ.

ಚಿತ್ರಕೃಪೆ: kurumban

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ಅಷ್ಟಮೂರ್ತಿ ಶಿವ : ವೇದಗಳ ಅನುಸಾರ, ರುದ್ರ ಅಥವಾ ಶಿವ ದೇವರು ಹಲವು ಗುಣವಿಶೇಷ, ನಾಮಗಳುಳ್ಳ ಚೈತನ್ಯ ದೈವ. ಅವನ ಬಹುಗುಣ ಲಕ್ಷಣಗಳಲ್ಲಿ ಎಂಟು ಗುಣ ಲಕ್ಷಣಗಳನ್ನು ವಿಶೇಷವಾಗಿ ಕೊಂಡಾಡಲಾಗುತ್ತದೆ. ಆ ಎಂಟು ಗುಣಲಕ್ಷಣಗಳ ಪ್ರತೀಕವಾಗಿ ಅಷ್ಟಮೂರ್ತಿ ಶಿವನನ್ನು ಪೂಜಿಸಲಾಗುತ್ತದೆ. ಛತ್ತೀಸಗಡ್ ರಾಜ್ಯದ ಜಂಜಗೀರ್-ಚಂಪಾ ಜಿಲ್ಲೆಯ ಖರೋದ್ ಎಂಬ ಪಟ್ಟಣದಲ್ಲಿದೆ ಅಷ್ಟಮುಖಿ ಶಿವನ ಅಪರೂಪದ ದೇವಾಲಯ.

ಚಿತ್ರಕೃಪೆ: Ashwini Kesharwani

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ಬೇತಾಳ/ವೇತಾಳ : ಗೋವಾದ ಕೊಂಕಣಿ ಪ್ರದೇಶಗಳು, ಮಹಾರಾಷ್ಟ್ರದ ಸಿಂಧುದುರ್ಗದ ಕೊಂಕಣ ಪ್ರದೇಶಗಳಲ್ಲಿ ಶಿವನ ಅವತಾರವನ್ನು ಮುಖ್ಯವಾಗಿ ಆರಾಧಿಸಲಾಗುತ್ತದೆ. ಶಿವನು ಈ ಭಾಗಗಳ ಜನರ ಗ್ರಾಮದೇವತೆಯಾಗಿ ಪೂಜಿಸಲ್ಪಡುತ್ತಾನೆ. ಈ ರೂಪದಲ್ಲಿ ಶಿವನು ಅರೆ ಬೆತ್ತಲೆಯಿದ್ದು ಒಂದು ಕೈಯಲ್ಲಿ ಖಡ್ಗವನ್ನೂ ಇನ್ನೊಂದು ಕೈಯಲ್ಲಿ ಬಟ್ಟಲನ್ನು ಹಿಡಿರುತ್ತಾನೆ.

ಚಿತ್ರಕೃಪೆ: Agawas

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ಸಾಮಾನ್ಯವಾಗಿ ಬಲಿ ಮುಂತಾದ ಪೂಜೆಗಳನ್ನು ಶಿವನಿಗೆ ನೆರವೇರಿಸಲಾಗುತ್ತದೆ. ಗೋವಾದಲ್ಲಿ ಹರಿದಿರುವ ಸಾಲ್ ನದಿಯ ತಟದಲ್ಲಿರುವ ಅಸ್ಸೋಲ್ನಾ ಪಟ್ಟಣದಲ್ಲಿರುವ ವೇತಾಳ ದೇವಾಲಯ.

ಚಿತ್ರಕೃಪೆ: Sukadker trupti

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ಕಾಳ ಭೈರವ : ಈ ರುಪದಲ್ಲಿ ಶಿವನು ಅವತರಿಸಿದುದರ ಕುರಿತು ಸ್ವಾರಸ್ಯಕರ ಹಿನ್ನಿಲೆಯಿದೆ. ಒಂದೊಮ್ಮೆ ಬ್ರಹ್ಮನು ಆಲೋಚಿಸಿದನಂತೆ, "ನನಗೂ ಸಹ ಶಿವನ ಹಾಗೆ ಐದು ತಲೆಗಳಿವೆ. ಶಿವನು ಏನು ಮಾಡಬಲ್ಲನೊ ನಾನೂ ಸಹ ಅದನು ಮಾಡಬಲ್ಲೆ...ಹೀಗಾಗಿ ನಾನೂ ಸಹ ಶಿವನೆ". ನಂತರ ಅಹಂಕಾರಗೊಂಡು ಶಿವನ ಕಾರ್ಯಗಳಲ್ಲೆಲ್ಲ ತನ್ನ ಹಸ್ತಕ್ಷೇಪ ಪ್ರಾರಂಭಿಸಿದ. ಇದರಿಂದ ಕೋಪಗೊಂಡ ಶಿವ ತನ್ನ ಬೆರಳಿನ ಉಗುರಿನ ಒಂದು ತುದಿಯನ್ನು ಎತ್ತಿ ಒಗೆದ. ಅದರಿಂದ ಉದ್ಭವಿಸಿದ ಅವತಾರವೆ ಕಾಳಭೈರವ.

ಚಿತ್ರಕೃಪೆ: Vitbaisa

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ಕಾಳಭೈರವ, ನೇರವಾಗಿ ಬ್ರಹ್ಮನ ಬಳಿ ಹೋಗಿ ಅಹಂಕಾರದಿಂದ ತುಂಬಿದ ಅವನ ಒಂದು ತಲೆಯನ್ನು ಕಡಿದುಬಿಟ್ಟ. ತದನಂತರ ಬ್ರಹ್ಮನಿಗೆ ಅಹಂಕಾರ ದೂರವಾಗಿ ಶಿವನ ಕೃಪೆ ಉಂಟಾಗಿ ಸಾಕ್ಷಾತ್ಕಾರ ಪಡೆದುಕೊಂಡನು. ಹೀಗಾಗಿ ಕಾಳಭೈರವ ತನ್ನ ನಾಲ್ಕು ಕೈಗಳ ಪೈಕಿ ಒಂದರಲ್ಲಿ ತ್ರಿಶೂಲ, ಒಂದರಲ್ಲಿ ಗಂಟು ಬಿಗಿದ ಹಗ್ಗ, ಇನ್ನೊಂದರಲ್ಲಿ ಬ್ರಹ್ಮಕಪಾಲ ಹಾಗೂ ಮತ್ತೊಂದರಲ್ಲಿ ಡಮರು ಹಿಡಿದಿರುತ್ತಾನೆ. ಕಾಳಭೈರವ ಶಕ್ತಿಪೀಠಗಳ ಕಾವಲುಗಾರ. ಹಾಗಾಗಿ ಇಂದಿಗೂ ಪ್ರತಿ ಶಕ್ತಿಪೀಠಗಳಲ್ಲಿ ಕಾಳಭೈರವನ ಒಂದು ದೇವಾಲಯವಿದ್ದೆ ಇರುತ್ತದೆ. ತಮಿಳುನಾಡಿನ ತಿರುವಣ್ಣಾಮಲೈನ ಕಾಗಾ ಆಶ್ರಮದಲ್ಲಿ ಪ್ರತಿಷ್ಠಾಪಿಸಲಾಗಿರುವ ಸ್ವರ್ಣ ಕಾಳಭೈರವನ ದೇಗುಲ.

ಚಿತ್ರಕೃಪೆ: Arulraja

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ಭಿಕ್ಷಾಟನ ಮೂರ್ತಿ : ಬ್ರಹ್ಮನ ಒಂದು ತಲೆಯನ್ನು ಕಡಿದ ನಂತರ ಆ ಪಾಪದ ಪ್ರಾಯಶ್ಚಿತಕ್ಕಾಗಿ ಭೈರವನ ಇನ್ನೊಂದು ರೂಪವಾಗಿ ಭಿಕ್ಷಾಟನ ಮೂರ್ತಿಯಾಗಿ ಶಿವನು ಲೋಕದ ತುಂಬೆಲ್ಲ ಭಿಕ್ಷೆ ಬೇಡುತ್ತ ಅಲೆಯುತ್ತಾನೆ. ಈ ಸಂದರ್ಭದಲ್ಲಿ ಬ್ರಹ್ಮ ಕಪಾಲವನ್ನು ಭಿಕ್ಷೆ ಸಂಗ್ರಹಕ್ಕಾಗಿ ಬಳಸುತ್ತಾನೆ. ನಂತರ ವರಣಾಸಿಗೆ ತಲುಪಿದ ತರುವಾಯ ಅವನ ಪಾಪ ವಿಮೋಚನೆಯಾಗುತ್ತದೆ ಎಂದು ಹೇಳುತ್ತದೆ ಪುರಾಣ ಕಥೆ. ತಿರುವಣ್ಣಾಮಲೈನಲ್ಲಿರುವ ಅಣ್ಣಮಲೈಯಾರ್ ದೇವಾಲಯದಲ್ಲಿರುವ ಭಿಕ್ಷಾಟನ ಮೂರ್ತಿಯ ಪ್ರತಿಮೆ.

ಚಿತ್ರಕೃಪೆ: Redtigerxyz

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ಭೂಡಸಿದ್ಧನಾಥ ದೇವಾಲಯ : ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿರುವ ಭೂಡ್ ಗ್ರಾಮದ ಪ್ರಭಾವಿ ದೈವನಾಗಿ ಭೂಡಸಿದ್ಧನಾಥನನ್ನು ಆರಾಧಿಸಲಾಗುತ್ತದೆ. ಈ ದೈವ ಶಿವನ ಇನ್ನೊಂದು ರೂಪ. ಈ ಗ್ರಾಮದ ಕ್ಷೇತ್ರಪಾಲನಾಗಿ ಶಿವನನ್ನು ಪೂಜಿಸಲಾಗುತ್ತದೆ. ವಾರ್ಷಿಕ ಉತ್ಸವವು ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತದೆ. ಮೊದಲನೆಯ ದಿನ ಎತ್ತಿನ ಬಂಡಿಗಳ ಓಟದ ಸ್ಪರ್ಧೆ, ಎರಡನೆಯ ದಿನ ಕಟ್ಟಿಗೆ ಹಾಗೂ ಲೋಹದ ಕೋಲುಗಳು ಮತ್ತು ದಿಪಗಳು ಹಾಗೂ ಕೊನೆಯ ದಿನ ಕುಸುಂಬಾ ಎಂಬ ಒಂದು ರೀತಿಯ ಭಾಂಗ್ ಈ ಉತ್ಸವದ ಪ್ರಮುಖ ಆಕರ್ಷಣೆಗಳು.

ಚಿತ್ರಕೃಪೆ: Sujitkumarpatil

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ದಕ್ಷಿಣಮೂರ್ತಿ : ಶಿವನ ಈ ಅವತಾರ ಅತ್ಯಂತ ಸೌಮ್ಯ ಸ್ವಭಾವದ್ದಾಗಿದೆ. ಅಕ್ಷರಶಃ ದಕ್ಷಿಣಕ್ಕೆ ಮುಖ ಮಾಡಿದವ ಎಂಬರ್ಥ ಇದು ನೀಡುತ್ತದೆ. ಈ ರೂಪದಲ್ಲಿ ಶಿವನು ಯೋಗ, ಸಂಗೀತ ಹಾಗೂ ಬುದ್ಧಿ, ಜ್ಞಾನಗಳ ಗುರುವಾಗಿ ಸಕಲ ಭಕ್ತರಿಗೂ ಉತ್ತಮ ಆರೋಗ್ಯ, ಬುದ್ಧಿ ಹಾಗೂ ಶಿಕ್ಷಣ ಕರುಣಿಸುವ ಗುರುವಾಗಿ ಪೂಜಿಸಲ್ಪಡುತ್ತಾನೆ. ಶಿವನ ಪವಿತ್ರ 12 ಜ್ಯೋತಿರ್ಲಿಂಗಗಳ ಪೈಕಿ ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಶಿವ ದೇವಾಲಯವು ದಕ್ಷಿಣ ಮೂರ್ತಿಯನ್ನೊಳಗೊಂಡ ಏಕೈಕ ದೇವಾಲಯವಾಗಿದೆ. ಹೀಗಾಗಿ ಉತ್ತಮ ಶಿಕ್ಷಣ ಬಯಸುವ ಭಕ್ತಾದಿಗಳು ಇದಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Rammohan65

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ಗಜಾಂತಕ : ಗಜಾಸುರಸಂಹಾರ ಎಮ್ತಲೂ ಕರೆಯಲ್ಪಡುವ ಶಿವನ ಈ ರೂಪವು ಆತ ಗಜಾಸುರನನ್ನು ಸಂಹರಿಸುವ ದದೃಷ್ಟಿಯಿಂದ ಎತ್ತಿಕೊಂಡಿದ್ದಾಗಿದೆ. ತಮಿಳುನಾಡಿನ ಮೈಲಾಡುತುರೈನಿಂದ ಹತ್ತು ಕಿ.ಮೀ ದೂರದಲ್ಲಿರುವ ವುಳುವೂರ್ ಎಂಬ ಸ್ಥಳದಲ್ಲಿ ಗಜಾಸುರಸಂಹಾರ ರೂಪಿ ಶಿವನ ಪ್ರಮುಖ ದೇವಸ್ಥಾನವಿದೆ.

ಚಿತ್ರಕೃಪೆ: Ravichandar84

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ಹರಿಹರ : ವಿಷ್ಣು ಹಾಗೂ ಶಿವನ ಗುಣ ಹಾಗು ದೇಹ ಲಕ್ಷಣವಿರುವ ಆದರೆ ಶಿವನದೆ ಇನ್ನೊಂದು ರೂಪವಾದ ಹರಿಹರನನ್ನು ಹಿಂದುಗಳು ಪಾಲಿಸುತ್ತಾರೆ. ಶಿವ ಹಾಗು ವಿಷ್ಣು ಪರಬ್ರಹ್ಮ ಸ್ವರೂಪದ ಏಕ ದೈವವೆ ಆಗಿದ್ದು ಅದನ್ನು ಪ್ರತಿನಿಧಿಸಲು ಈ ರೀತಿಯಾಗಿ ಹರಿಹರನನ್ನು ಪೂಜಿಸಲಾಗಿದೆ ಎಂದು ಹಲವು ಪಂಡಿತೋತ್ತಮರ ಅಭಿಪ್ರಾಯವಾಗಿದೆ. ಹರಿಹರನ ಪ್ರಮುಖ ದೇವಾಲಯವಾಗಿ ಒಡಿಶಾ ರಾಜ್ಯದ ಭುವನೇಶ್ವರದಲ್ಲಿರುವ ಲಿಂಗರಾಜ ದೇವಾಲಯವನ್ನು ಉದಾಹರಿಸಬಹುದು.

ಚಿತ್ರಕೃಪೆ: Archbik

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ಜುಮಾದಿ : ಶಿವನ ಇನ್ನೊಂದು ರೂಪವಾಗಿದೆ ಈ ಅವತಾರ. ಈ ಅವತಾರದ ಶಿವನನ್ನು ಪ್ರಮುಖವಾಗಿ ಕರ್ನಾಟಕದ ತುಳುನಾಡು ಪ್ರದೇಶ ಹಾಗೂ ಕೇರಳದ ಭಾಗಗಳಲ್ಲಿ ಆರಾಧಿಸಲಾಗುತ್ತದೆ. ಇದು ಒಂದು ರೀತಿಯಲ್ಲಿ ಅರ್ಧನಾರೀಶ್ವರನ ಹಾಗೆ ಗಂಡು-ಹೆಣ್ಣಿನ ರೂಪವೆ ಆಗಿದೆ. ಒಂದೊಮ್ಮೆ ಧುಮಾಸುರನೆಂಬ ರಕ್ಕಸನು ಮನುಷ್ಯರನ್ನು ತಿನ್ನುತ್ತಿದ್ದನು. ಅವನಿಂದ ರಕ್ಷಣೆ ಕೋರಿ ಜನರು ಶಿವ ಪಾರ್ವತಿಯರಿಗೆ ಮೊರೆ ಹೋದರು. ಹೀಗಿರುವಾಗ ಒಮ್ಮೆ ಶಿವ ಪಾರ್ವತಿಯರು ನಡೆಯುತ್ತಿರುವಾಗ ಪಾರ್ವತಿಗೆ ವಿಪರೀತ ಹಸಿವಾಗಿ ಶಿವನು ಎಷ್ಟು ಕೊಟ್ಟರೂ ಅವಳ ಹಸಿವು ಮಾತ್ರ ಇಂಗಲಿಲ್ಲ. ನಂತರ ಶಿವ ತನ್ನನ್ನೆ ತಾನೆ ಅರ್ಪಿಸಿಕೊಂಡ. ಆದರೆ ಶಿವನನ್ನು ಪೂರ್ತಿಯಾಗಿ ನುಂಗಲಾರದೆ ಶಿವ-ಪಾರ್ವತಿಯರು ಒಬ್ಬರಿಗೊಬ್ಬರು ಸೇರ್ಪಡೆಗೊಂಡು ಒಂದೆ ರೂಪ ಹೊಂದಿ ಧುಮಾಸುರನನ್ನು ಕೊಂದರು. ಏಕೆಂದರೆ ಧುಮಾಸುರನನ್ನು ಏಕಕಾಲದಲ್ಲಿ ಗಂಡು ಹಾಗೂ ಹೆಣ್ಣು ಇರುವ ರುಪದಿಂದ ಮಾತ್ರ ಸಂಹರಿಸಲು ಸಾಧ್ಯ ಎಂಬ ವರದಾನವಿತ್ತು. ಉಡುಪಿಯ ಬೆಲ್ಲೆ ಹಳ್ಳಿಯಲ್ಲಿ ಜುಮಾದಿ ಶಿವ ರೂಪದ ರಂಗೋಲಿ.

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ಖಂಡೋಬ : ಶಿವನ ಇನ್ನೊಂದು ರುಪವಾದ ಖಂಡೋಬನನ್ನು ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಪೂಜಿಸಲಾಗುತ್ತದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಜೆಜುರಿಯು ಖಂಡೋಬನ ದೇವಸ್ಥಾನದಿಂದಾಗಿ ಜನಪ್ರೀಯವಾಗಿದೆ.

ಚಿತ್ರಕೃಪೆ: PratibhaS Pawar

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ಮೈಲಾರ : ಕರ್ನಾಟಕದ ಬಳ್ಳಾರಿ ಭಾಗದಲ್ಲಿ ಗೊರವರು, ಕುರುಬರು, ಉಪ್ಪಾರರು ನಡೆದುಕೊಳ್ಳುವ ಪ್ರಮುಖ ದೈವ ಮೈಲಾರ. ಮೈಲಾರ ಲಿಂಗೇಶ್ವರ ಶಿವನ ಇನ್ನೊಂದು ರೂಪ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಮೈಲಾರದಲ್ಲಿರುವ ಮೈಲಾರ ಲಿಂಗೇಶ್ವರ ದೇವಸ್ಥಾನ ಬಹು ಜನಪ್ರೀಯವಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಇಲ್ಲಿ ಭವಿಷ್ಯ ನುಡಿಯುವ ಕಾರ್ಣಿಕ ಉತ್ಸವವು ಬಹಳ ಅದ್ದೂರಿಯಿಂದ ನಡೆಯುತ್ತದೆ.

ಚಿತ್ರಕೃಪೆ: Manjunath Doddamani Gajendragad

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ನಟರಾಜ : ಶಿವ ಇನ್ನೊಂದು ಹಾಗೂ ಅಷ್ಟೆ ವಿಶಿಷ್ಟವಾದ ರೂಪ ಇದಾಗಿದೆ. ನೃತ್ಯಕ್ಕೆ ರಾಜನಾಗಿ ಇಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ತಮಿಳುನಾಡಿನ ಚಿದಂಬರಂನಲ್ಲಿರುವ ತಿಲ್ಲೈ ನಟರಾಜ ಮಂದಿರವು ನೃತ್ಯರೂಪಿ ಶಿವನಿಗೆ ಮುಡಿಪಾದ ಮುಖ್ಯ ದೇವಾಲಯವಾಗಿದೆ.

ಚಿತ್ರಕೃಪೆ: Karthik Easvur

ಶಿವನ ವಿವಿಧ ರೂಪಗಳು :

ಶಿವನ ವಿವಿಧ ರೂಪಗಳು :

ವೀರಭದ್ರ : ಹಿಂದೂ ಪೌರಾಣಿಕ ಕಥೆಯ ಪ್ರಕಾರ, ವೀರಭದ್ರ ಒಬ್ಬ ಶಕ್ತಿಶಾಲಿಯಾದ ಪರಮಶಿವನ ಕಡುಕೋಪದ ಪರಿಣಾಮವಾಗಿ ಉತ್ಪತ್ತಿಯಾದ ದೇವ. ಯಾವಾಗ ದಕ್ಷ ಪ್ರಜಾಪತಿಯು ನಡೆಸುತ್ತಿರುವ ಯಜ್ಞದಲ್ಲಿ ಶಿವನ ಮಡದಿಯಾದ ಸತಿಯು ತನ್ನ ಪತಿಯನ್ನು ಯಜ್ಞಕ್ಕೆ ಆಹ್ವಾನಿಸದ್ದಿದ್ದುದಕ್ಕೆ ಹೋಮಕುಂಡದಲ್ಲಿ ಸ್ವೈಚ್ಛೆಯಿಂದ ಬಿದ್ದು ಅಗ್ನಿಗೆ ಆಹುತಿಯಾದಳೋ ಆ ಒಂದು ಪ್ರಸಂಗವು ವೀರಭದ್ರನ ಜನ್ಮಕ್ಕೆ ಕಾರಣೀಭೂತವಾಯಿತು. ನಂತರ ಶಿವನ ಇನ್ನೊಂದು ರುಪವಾದ ವೀರಭದ್ರನು ದಕ್ಷನ ರುಂಡ ಚೆಂಡಾಡಿ ಶಿವನಿಗೆ ಒಪ್ಪಿಸುತ್ತಾನೆ. ಶಿವನ ಭಯಂಕರ ರುಪಗಳ ಪೈಕಿ ಇದೂ ಸಹ ಒಂದು. ಲೇಪಾಕ್ಷಿಯಲ್ಲಿರುವ ವೀರಭದ್ರನ ದೇವಸ್ಥಾನವು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ.

ಚಿತ್ರಕೃಪೆ: Balaji Srinivasan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X