Search
  • Follow NativePlanet
Share
» »ಇಲ್ಲಿ ಮರಣ ಹೊಂದಿದರೆ ನೇರವಾಗಿ ಸ್ವರ್ಗಕ್ಕೆ....!

ಇಲ್ಲಿ ಮರಣ ಹೊಂದಿದರೆ ನೇರವಾಗಿ ಸ್ವರ್ಗಕ್ಕೆ....!

By Sowmyabhai

ಹಿಂದೂ ಸಂಪ್ರದಾಯಗಳನ್ನು ಆಚರಿಸುವ ಸಲುವಾಗಿ ಕೆಲವು ಕಾಲಗಳು ಇಲ್ಲಿ ಇದ್ದು ಅವುಗಳನ್ನು ಕಲಿತುಕೊಳ್ಳುತ್ತಾರೆ. ಸನಾತನ ಹಿಂದೂ ಧರ್ಮದಲ್ಲಿಯೂ ಈ ಪಟ್ಟಣದಲ್ಲಿ ಮರಣ ಹೊಂದಿವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂದು ಪೂರ್ತಿಯಾಗಿ ನಂಬಲಾಗುತ್ತದೆ. ಮರಣಿಸಿದ ವ್ಯಕ್ತಿಯ ಕುಟುಂಬ ಸಭ್ಯರಿಗೆ ಹಾಗು ಬಂಧುಗಳಿಗೆ ಗಂಗಾ ನದಿ ತೀರದಲ್ಲಿ ಕರ್ಮವನ್ನು ಆಚರಿಸಿದರೆ ಆವರ ಆತ್ಮವು ಶಾಂತಿಗೊಂಡು ಸ್ವರ್ಗ ಪ್ರಾಪ್ತಿಯಾಗಿತ್ತದೆ ಎಂದು ಹಿಂದೂಗಳು ಭಾವಿಸುತ್ತಾರೆ. ಇಂದಿಗೂ ಈ ಪ್ರದೇಶದಲ್ಲಿ ಸನಾತನ ಹಿಂದೂ ಧರ್ಮದ ಆಚಾರ ವ್ಯವಹಾರಗಳನ್ನು ಪ್ರತಿ ನಿತ್ಯ ಇಲ್ಲಿ ನಡೆಯುತ್ತಲೇ ಇರುತ್ತದೆ.

ಕಾಶಿ ಅಥವಾ ಬನಾರಸ್ ಪಟ್ಟಣ ಪರಮಶಿವನು ಸೃಷ್ಟಿ ಮಾಡಿದ ಪ್ರದೇಶವಾಗಿದೆ ಎಂದು ನಂಬಲಾಗಿದೆ. ಪ್ರಪಂಚದಲ್ಲಿ ಇದು ಒಂದು ಅತಿ ಪ್ರಾಚೀನವಾದ ನಗರ. ಭಾರತ ದೇಶದಲ್ಲಿನ ದೊಡ್ಡ ಮತ್ತು ಅತಿ ಪವಿತ್ರವಾದ ನದಿಯಾದ ಗಂಗಾ ನದಿ ವಾರಣಾಸಿ ಪಟ್ಟಣದಲ್ಲಿ ಪ್ರವಹಿಸುತ್ತದೆ. ಈ ಕಾರಣವಾಗಿ ಕೂಡ ಈ ಪಟ್ಟಣವು ಎಷ್ಟೋ ಪ್ರಸಿದ್ಧಿ ಹೊಂದಿದೆ. ಆದರೆ, ಹಿಂದೂ ಧರ್ಮದಲ್ಲಿ 7 ಪವಿತ್ರ ನಗರಗಳಲ್ಲಿ ಹೇಳಲಾಗುವ ಈ ಕಾಶಿ ಪಟ್ಟಣ ಎಲ್ಲದಕ್ಕಿಂತ ದೊಡ್ಡದ್ದು ಎಂದು ಹೇಳುತ್ತಾರೆ.

ಇಷ್ಟು ಪ್ರಖ್ಯಾತಿ ಹೊಂದಿರುವ ಈ ವಾರಣಾಸಿ ಪಟ್ಟಣದಲ್ಲಿ ಪ್ರಸಿದ್ಧಿ ಹೊಂದಿರುವ ಅನೇಕ ಮಂದಿ ಆಧ್ಯಾತ್ಮಿಕ ಗುರುಗಳು, ಸಾಧು-ಸಂತರು ತಮ್ಮ ಜೀವನದ ಅಂತಿಮ ಸಮಯವನ್ನು ಕಾಶಿಯಲ್ಲಿ ಕಳೆಯಲು ಇಷ್ಟ ಪಡುತ್ತಾರೆ. ಇಂದಿಗೂ ಈ ಆಚಾರದ ಮೇರೆಗೆ ಅನೇಕ ಮಂದಿ ತಮ್ಮ ಕೊನೆಯ ಜೀವನ ಕಾಲವು ಇಲ್ಲಿಯೇ ಇದ್ದು ಬಿಡುತ್ತಾರೆ.

ಕಾಶಿ ಪಟ್ಟಣದಲ್ಲಿ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಪರಮಶಿವನ ವಿಶ್ವನಾಥ ದೇವಾಲಯ ಎಲ್ಲದಕ್ಕಿಂತ ಮೊದಲ ಸ್ಥಾನದಲ್ಲಿದೆ. ಇಲ್ಲಿ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ. ಆ ನಂತರ ಮಾತ್ರವೇ ಅನ್ನಪೂರ್ಣ ದೇವಿ ದೇವಾಲಯವನ್ನು ಕೂಡ ಭೇಟಿ ನೀಡಬಹುದು. ವಾರಣಾಸಿಗೆ ವಿಮಾನ, ರೈಲ್ವೆ, ರಸ್ತೆ ಮಾರ್ಗದ ಮೂಲಕವು ಕೂಡ ಸೇರಿಕೊಳ್ಳಬಹುದು. ಇಲ್ಲಿಂದ ದೇಶದಲ್ಲಿನ ಪ್ರಧಾನವಾದ ಪ್ರದೇಶಕ್ಕೆ ವಿಮಾನಗಳು ಸಂಪರ್ಕ ಸಾಧಿಸುತ್ತದೆ.

1.ವಾರಣಾಸಿ

1.ವಾರಣಾಸಿ

ಪವಿತ್ರವಾದ ಗಂಗಾ ನದಿ ಪೂಜಿಸುವ ದೃಶ್ಯ. ಇದನ್ನು ಗಂಗಾ ಹಾರತಿ ಎಂದು ಹೇಳುತ್ತಾರೆ. ಇದು ಪ್ರತಿ ದಿನ ಸಂಜೆ ಕಂಗೊಳಿಸುತ್ತಿರುತ್ತದೆ. ಇದನ್ನು ಕಾಣಲು ಅನೇಕ ಮಂದಿ ಭಕ್ತರು ಸಂಜೆಯ ಸಮಯದಲ್ಲಿ ಗಂಗಾ ನದಿ ತೀರಕ್ಕೆ ಭೇಟಿ ನೀಡುತ್ತಾರೆ.

Arian Zwegers

2.

2.

ಗಂಗದಲ್ಲಿ ಸ್ನಾನ ತುಂಗ ಪಾನ ಎಂದೇ ಹೇಳಲಾಗುವ ಪವಿತ್ರ ಜಲದಲ್ಲಿ ಪಾಪಗಳನ್ನು ಕಳೆದುಕೊಳ್ಳಬಹುದು ಎಂದು ಅನೇಕ ಮಂದಿ ಭಕ್ತ ಜನಸಾಗರ ಇಲ್ಲಿ ಸ್ನಾನ ಆಚರಿಸುತ್ತಾರೆ. ಹಾಗಾಗಿಯೇ ಗಂಗಾ ಘಾಟ್‍ಗೆ ಯಾತ್ರಿಕರು ಭೇಟಿ ನೀಡುತ್ತಿರುತ್ತಾರೆ.

Davi1974d

3.

3.

ಬಹುಶಃ ಈ ವಿಧವಾದ ದೃಶ್ಯ ಎಲ್ಲಿಯೂ ಕಾಣಲಾಗದು. ದಹನ ಕ್ರಿಯೆಯಲ್ಲಿನ ಶವಗಳನ್ನು ಕೂಡ ಇಲ್ಲಿ ಕಾಣಬಹುದು.

Mandy

4.

4.

ಅಲ್ಲಲ್ಲಿ ಇಂತಹ ಘಾಟ್‍ನಲ್ಲಿ ಮರಣಿಸಿದವರಿಗೆ ದಹನ ಕ್ರಿಯೆಗಳು ನಡೆಯುತ್ತಿರುತ್ತದೆ. ಆದರೆ ಪ್ರತ್ಯೇಕವಾಗಿ0 ಮಣಿಕರ್ಣಿಕಾ ಘಾಟ್‍ಗೆ ಈ ಶವ ದಹನಗಳಿಗೆ ಪ್ರಸಿದ್ಧಿ.

Arian Zwegers

5.

5.

ಇಲ್ಲಿ ನಡೆಯುವ ಎಲ್ಲಾ ಪುರಾತನವಾದ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ.

Yosarian

6.

6.

ಗಂಗಾ ನದಿ ಘಾಟ್‍ನಲ್ಲಿ ಕರ್ಮಗಳ ಆಚರಿಸುತ್ತಿರುವ ಕುಟುಂಬ ಸಭ್ಯರು.

Arian Zwegers

7.

7.

ಗಂಗಾ ನದಿ ತರ್ಪಣಗಳು ಬಿಡುತ್ತಿರುವ ದಂಪತಿಗಳು.

Jorge Royan

8.

8.

ಶಿವಾಲಾ ಘಾಟ್‍ನಲ್ಲಿ ಪುಣ್ಯ ಸ್ನಾನಗಳು ಮಾಡುತ್ತಿರುವ ಯಾತ್ರಿಕರು.

Antoine Taveneaux

9.

9.

ಗಂಗಾ ನದಿ ತೀರದಲ್ಲಿನ ವಿವಿಧ ಘಾಟ್‍ಗಳು.

Tomer T

10.

10.

ಬೆಳಗಿನ ಸಮಯದಲ್ಲಿ ವಾರಣಾಸಿಯಲ್ಲಿ ಕಾಣುವ ದೃಶ್ಯಗಳು.

Arian Zwegers

11.

11.

ವಾರಣಾಸಿಯಲ್ಲಿ ಗಂಗಾ ನದಿಯಲ್ಲಿ ಪುಣ್ಯ ಸ್ನಾನಗಳು ಮಾಡುತ್ತಿರುವ ದೃಶ್ಯಗಳು.

Arian Zwegers

12.

12.

ವಾರಣಾಸಿಯಲ್ಲಿ ದರಭಂಗಾ ಪ್ಯಾಲೆಸ್ ಘಾಟ್ ಪ್ರದೇಶ.

McKay Savage

13.

13.

ಪುಣ್ಯ ಸ್ನಾನ ಮಾಡುವ ಸಲುವಾಗಿ ವಾರಣಾಸಿಯಲ್ಲಿನ ಮತ್ತೊಂದು ಪ್ರದೇಶವೇ ಅಸಿಘಾಟ್.

Nandanupadhyay

14.

14.

ಯಾತ್ರಿಕರು ಅಧಿಕವಾಗಿ ಸ್ನಾನಗಳು, ಕರ್ಮಗಳನ್ನು ಆಚರಿಸುತ್ತಾ ದಶಶ್ವಾಮೇದ ಘಾಟ್.

Ilya Mauter

15.

15.

ವಾರಣಾಸಿಯಲ್ಲಿನ ಲಲಿತಾ ಘಾಟ್‍ನಲ್ಲಿನ ಒಂದು ಸುಂದರವಾದ ದೃಶ್ಯ.

Ilya Mauter

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more