Search
  • Follow NativePlanet
Share
» »ದೇವ ಕನ್ಯೆಯರೇ ಇಲ್ಲಿಗೆ ಇಳಿದು ಬರುತ್ತಿದ್ದರಂತೆ...!

ದೇವ ಕನ್ಯೆಯರೇ ಇಲ್ಲಿಗೆ ಇಳಿದು ಬರುತ್ತಿದ್ದರಂತೆ...!

By Sowmyabhai

ಭಾರತ ದೇಶಕ್ಕೆ ಉತ್ತರದಲ್ಲಿರುವ ಹಿಮಾಲಯದಲ್ಲಿ ಅನೇಕ ಸುಂದರವಾದ ದೃಶ್ಯಗಳು ಇವೆ. ವರ್ಷಗಳಲ್ಲಿ ಕೆಲವು ತಿಂಗಳು ಈ ಪ್ರದೇಶದಲ್ಲಿ ಬಾಹ್ಯ ಪ್ರಪಂಚದಿಂದ ಸಂಬಂಧಗಳು ಇಟ್ಟುಕೊಳ್ಳುವುದಿಲ್ಲ. ಆ ಸಮಯದಲ್ಲಿ ನಾವು ಹೋಗುವುದಕ್ಕೆ ಆಗುವುದು ಇಲ್ಲ. ಉಳಿದ ಕೆಲವು ತಿಂಗಳು ಅಲ್ಲಿನ ವಾತಾವರಣವು ಸಮತೋಲನವಾದಾಗ ಭೇಟಿ ನೀಡುತ್ತೇವೆ. ಮುಖ್ಯವಾಗಿ ಬೇಸಿಗೆಯ ಕಾಲದಲ್ಲಿ ಹಿಮಾಲಯ ಪರ್ವತಗಳು ಅತ್ಯಂತ ಸುಂದರವಾಗಿ ಆಕರ್ಷಿಸುತ್ತದೆ. ಇನ್ನು ಇಲ್ಲಿ ಚಳಿಗಾಲದಲ್ಲಿ ಮಂಜುಗಡ್ಡೆಯಾಗುವಷ್ಟು ಚಳಿ ಇರುವುದರಿಂದ ಈ ಸಮಯದಲ್ಲಿ ಹಿಮಾಲಯಕ್ಕೆ ತೆರಳಿ ಏನು ಮಾಡಬೇಕು?.

ಹಿಮಾಲಯದಲ್ಲಿ ಒಂದು ಪ್ರದೇಶ ಅಡಗಿದೆ. ಅದರ ಹೆಸರೇ ವ್ಯಾಲಿ ಆಫ್ ಫ್ಲವರ್ಸ್. ನಡಿಗೆಯೇ ಗೊತ್ತಾಗದೇ ಇರುವ ಸುಂದರವಾದ ಪ್ರಯಾಣವಿದು. ಪ್ರಕೃತಿ ಇಲ್ಲಿ ಹೂವಿನ ಸ್ವರ್ಗದ ತೋಟವನ್ನೇ ಕಣ್ಣುತುಂಬಿಕೊಳ್ಳಬಹುದು. ವ್ಯಾಲಿ ಆಫ್ ಫ್ಲಾವರ್ಸ್ ಉತ್ತರಾಖಂಢ ರಾಜ್ಯದ ಚೆಮೋಲಿ ಎಂಬ ಜಿಲ್ಲೆಯಲ್ಲಿದೆ. ಪ್ರಸಿದ್ಧ ಸಿಖ್‍ರ ಪ್ರಾರ್ಥನಾ ಸ್ಥಳವಾದ "ಹೇಮಕುಂಡ" ಈ ಕಣಿವೆಯಲ್ಲಿ ಅನೇಕ ನದಿಗಳು ಇವೆ. ಚಾರ್ ಧಾಮ್ ಯಾತ್ರೆ ಭಾಗವಾಗಿ ಬದ್ರಿನಾಥ ತೆರಳುವ ಮಾರ್ಗದಲ್ಲಿ ಗೋವಿಂದ ಮಠದಿಂದ ಸುಮಾರು 16 ಕಿ.ಮೀ ದೂರದಲ್ಲಿ ಟ್ರೆಕ್ಕಿಂಗ್ ಮಾಡುತ್ತಾ ತೆರಳಿದರೆ ಈ ಅದ್ಭುತವಾದ ಪ್ರದೇಶಕ್ಕೆ ಸೇರಿಕೊಳ್ಳಬಹುದು.

1.ದೇವಕನ್ಯೆಯರ ಆಟದ ಸ್ಥಳ

1.ದೇವಕನ್ಯೆಯರ ಆಟದ ಸ್ಥಳ

PC:Guptaele

ವ್ಯಾಲಿ ಆಫ್ ಫ್ಲವರ್ಸ್‍ಗೆ ತೆರಳುವ ಪ್ರಯಾಣವು ಸುಗಂಧಭರಿತವಾಗಿರುತ್ತದೆ. ಬಣ್ಣ ಬಣ್ಣದ ಹೂವುಗಳನ್ನು ಹೊಂದಿರುವ ಈ ಅದ್ಭುತವಾದ ಲೋಕವನ್ನು ದೇವಕನ್ಯೆಯರ ಆಟದ ಸ್ಥಳ ಎಂದೇ ಅಭಿವರ್ಣಿಸುತ್ತಾರೆ ಪ್ರಕೃತಿ ಪ್ರೇಮಿಗಳು.

2.ವಿವಿಧ ಹೂವುಗಳು

2.ವಿವಿಧ ಹೂವುಗಳು

PC:: Alosh Bennett

ದೇವ ಕನ್ಯೆಯರು ಇಲ್ಲಿ ವಿಹಾರ ಮಾಡುತ್ತಾರೋ ಇಲ್ಲವೋ ತಿಳಿದಿಲ್ಲ. ಆದರೆ ಇಲ್ಲಿ ಹೋದರೆ ಮಾತ್ರ ಅದರ ಸೌಂದರ್ಯಕ್ಕೆ ಗುಲಾಮರಾಗದೇ ಯಾರು ಇರಲಾರರು. ಬದ್ರಿನಾಥ ತೆರಳುವ ಯಾತ್ರಿಕರು ಇಲ್ಲಿ ಕೆಲವು ಕಾಲ ತಂಗಿ, ಅಲ್ಲಿನ ಮೃದುವಾದ ಸ್ಪರ್ಶ ಸುಖವನ್ನು ಸ್ವರ್ಗ ಲೋಕದಂತೆ ಅನುಭವಿಸುತ್ತಾರೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ದಿನದಿಂದ ದಿನಕ್ಕೆ ಮಾರ್ಪಟಾಗುವ ಇಲ್ಲಿನ ಬಣ್ಣ ಬಣ್ಣದ ಪ್ರಕೃತಿ ವೈವಿದ್ಯಕ್ಕೆ ಸಾಟಿಯೇ ಇಲ್ಲ.

3.ಕಣಿವೆ ಪ್ರದೇಶ

3.ಕಣಿವೆ ಪ್ರದೇಶ

PC:: Mahendra Pal Singh

ವ್ಯಾಲಿ ಆಫ್ ಫ್ಲವರ್ಸ್ ಭ್ಯೂಂದರ್ ಕಣಿವೆ, ಹೇಮಕುಂಡ್ ಕಣಿವೆ, ಪುಷ್ಪವತಿ ಕಣಿವೆಯನ್ನು ಕೂಡ ಇಲ್ಲಿ ಕಾಣಬಹುದು. 87.2 ಚದರ ಕಿ.ಮೀ ವ್ಯಾಪಿಸಿರುವ ಈ ಕಣಿವೆ ಪ್ರದೇಶವು ದಟ್ಟವಾದ ಹೂವಿನ ತೋಟವನ್ನು ಹೊಂದಿ ಅದ್ಭುತವಾದ ಹೂವುವಿನ ವನವಾಗಿ ಮಾರ್ಪಾಟಾಗಿದೆ.

4.ಪಾರ್ಕ್

4.ಪಾರ್ಕ್

PC: Guptaele

ಸುಮಾರು 8 ಕಿ.ಮೀ ಉದ್ದವು, 2 ಕಿ.ಮೀ ಅಗಲ ಇರುವ ಈ ಹೂವಿನ ತೋಟವು ಸುಮಾರು 1982ರಲ್ಲಿ ಇದನ್ನು ಪಾರ್ಕ್ ಎಂದು ಪ್ರಕಟಿಸಿದರು. ನಂದಾ ದೇವಿ ಬಯೋ ಸ್ಪಿಯರ್ ರಿಜರ್ವ್‍ಗೆ ಅಭಿಮುಖವಾಗಿ ಅದಕ್ಕೆ ಪೂರ್ತಿ ವಿಭಿನ್ನವಾದ ವಾತಾವರಣದಲ್ಲಿ ಇರುತ್ತದೆ.

5.ಜೀವ ವೈವಿಧ್ಯತೆಗೆ ವಿಶೇಷವಾದ ಬಿಂದು

5.ಜೀವ ವೈವಿಧ್ಯತೆಗೆ ವಿಶೇಷವಾದ ಬಿಂದು

PC: Guptaele

ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ ವಿಧವಾಗಿ ಹೂವಿನ ಕಣಿವೆಯನ್ನು ಹೊಂದಿರುವ ಈ ಪ್ರದೇಶವನ್ನು 2004 ರಲ್ಲಿ ಯುನೆಸ್ಕೋ ವರ್ಲ್ ಹೆರಿಟೇಜ್ ಸೈಟ್ ಆಗಿ ಗುರುತಿಸಲಾಯಿತು. ಜೀವ ವೈವಿಧ್ಯ ಪ್ರತ್ಯೇಕ ಬಿಂದುವಾಗಿ ಪರಿಗಣಿಸಿ ಉಳಿದ ಪ್ರದೇಶದಲ್ಲಿ ಕಾಣಿಸುವ ಹೂವುಗಳು ಇಲ್ಲಿ ಗಮನಿಸಬಹುದು.

6.ವಿವಿಧ ಬಗೆಯ ಹೂವಿನ ಜಾತಿಗಳು

6.ವಿವಿಧ ಬಗೆಯ ಹೂವಿನ ಜಾತಿಗಳು

PC:: Yoginipatil

ಇಂದಿನವರೆವಿಗೂ ಸುಮಾರು 650 ಬಗೆಯ ಹೂವಿನ ಜಾತಿಗಳನ್ನು ಗುರುತಿಸಲಾಗಿದೆ. ವೃಕ್ಷ ಶಾಸ್ತ್ರಕಾರರು ಅವುಗಳಲ್ಲಿ ಬ್ರಹ್ಮ ಕಮಲ, ಬ್ಲೂ ಪಾಪಿಲು, ನಾಗುಮಲ್ಲಿಗೆ, ಆರ್ಕಿಡ್‍ಗಳು, ಅನಿಮೋನೆಲ್‍ನಂತಹ ಎಷ್ಟೊ ವಿಧದ ಹೂವಿನ ವನಗಳನ್ನು ಇಲ್ಲಿ ಕಾಣಬಹುದು. ಇವುಗಳ ಜೊತೆ-ಜೊತೆಗೆ 45 ವಿಧವಾದ ಗಿಡ ಮೂಲಿಕೆಗಳು ಕೂಡ ಇಲ್ಲಿ ಗುರುತಿಸಿದ್ದಾರೆ. ಅನೇಕ ರೋಗಗಳಿಗೆ ಸ್ಥಳೀಯರು ಇವುಗಳನ್ನೇ ಉಪಯೋಗಿಸುತ್ತಾರೆ.

7.ಪ್ರಾಣಿ ಸಂಪತ್ತು

7.ಪ್ರಾಣಿ ಸಂಪತ್ತು

PC:: Gerwin Sturm

ವ್ಯಾಲಿ ಆಫ್ ಫ್ಲವರ್ಸ್ ಟ್ರೆಕ್ಕಿಂಗ್‍ನಲ್ಲಿ ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಹಿಮ ಚಿರತೆಗಳನ್ನು ಕಾಣಬಹುದು. ಕೆಂಪು ನರಿಗಳು, ಇಲಿಗಳು ಇನ್ನು ಅನೇಕ ಬಗೆಯ ಪ್ರಾಣಿಗಳು ಕಣ್ಣಿಗೆ ಕಾಣುತ್ತವೆ. ಆದರೆ ಪ್ರಸ್ತುತ ಇವೆಲ್ಲಾ ಅವಳಿವಿನಂಚಿನಲ್ಲಿರುವುದು ಅತ್ಯಂತ ವಿಷಾದವಾದ ಸಂಗತಿಯೇ ಆಗಿದೆ.

8.ಪಕ್ಷಿ ಸಂಪತ್ತು

8.ಪಕ್ಷಿ ಸಂಪತ್ತು

PC:: notjake

ಇಲ್ಲಿ ಎಷ್ಟೊ ಬಣ್ಣ ಬಣ್ಣದ ಪಕ್ಷಿಗಳು ಅವುಗಳ ನಾದಗಳು ಸಂಗೀತವನ್ನು ಪ್ರಯಾಣಿಕರಿಗೆ ನೀಡುತ್ತದೆ. ಮಂಜಿನ ಕಾಗೆಗಳು, ಬಂಗಾರದ ಕೋಗಿಲೆಗಳು, ಮಂಜಿನ ಪಾರಿವಾಳಗಳು, ಮೊಗಿಲೆತ್ತರದ ವೃಕ್ಷಗಳು ಇಲ್ಲಿ ಕಾಣಿಸುತ್ತವೆ. ಹೂವಿನ ಮಕರಂದವನ್ನು ಹೀರುತ್ತಾ ಪ್ರಯಾಣವನ್ನು ಸಾಗಿಸಬಹುದು.

9.ದೇವ ಕನ್ಯೆಯರೇ ಇಲ್ಲಿಗೆ ಇಳಿದು ಬರುತ್ತಿದ್ದರಂತೆ...!

9.ದೇವ ಕನ್ಯೆಯರೇ ಇಲ್ಲಿಗೆ ಇಳಿದು ಬರುತ್ತಿದ್ದರಂತೆ...!

ಇಲ್ಲಿ 1983ರಿಂದ ವಾಸವಿರುವುದಕ್ಕೆ ನಿಷೇಧವನ್ನು ಹೇರಿದ್ದಾರೆ. ಹಾಗೆಯೇ ಪಶುಗಳನ್ನು ತಂದು ಇಲ್ಲಿ ಮೇಯಲು ಬಿಡುವುದು ಕೂಡ ನಿಷೇಧಿಸಿದ್ದಾರೆ.

10.ದೇವ ಕನ್ಯೆಯರೇ ಇಲ್ಲಿಗೆ ಇಳಿದು ಬರುತ್ತಿದ್ದರಂತೆ...!

10.ದೇವ ಕನ್ಯೆಯರೇ ಇಲ್ಲಿಗೆ ಇಳಿದು ಬರುತ್ತಿದ್ದರಂತೆ...!

PC: Yogendra Joshi

ಇದು ಪ್ರವಾಸಿ ಪ್ರದೇಶವೇ ಆಗಿದ್ದರು ಕೂಡ, ಕೇವಲ ಟ್ರೆಕ್ಕಿಂಗ್‍ಗಳಿಗೆ ಮಾತ್ರವೇ ಅನುಮತಿಯನ್ನು ನೀಡುತ್ತಾರೆಯೇ ವಿನಃ ವಸತಿಗೆ ಅವಕಾಶ ನೀಡುವುದಿಲ್ಲ. ಹಾಗಾಗಿ ಪ್ರವಾಸಿಗರು ಅಥವಾ ಯಾತ್ರಿಕರು ಜೋಷಿಮಠದಲ್ಲಿ (ಸುಮಾರು 16 ಕಿ,ಮೀ) ಚಮೋಲಿಯಲ್ಲಿ (ಸುಮಾರು 48 ಕಿ.ಮೀ) ಗೆ ತೆರಳಬಹುದು.

11.ದೇವ ಕನ್ಯೆಯರೇ ಇಲ್ಲಿಗೆ ಇಳಿದು ಬರುತ್ತಿದ್ದರಂತೆ...!

11.ದೇವ ಕನ್ಯೆಯರೇ ಇಲ್ಲಿಗೆ ಇಳಿದು ಬರುತ್ತಿದ್ದರಂತೆ...!

PC:: Naveensylvan

ವ್ಯಾಲಿ ಆಫ್ ಫ್ಲವರ್ಸ್ ಪರಿಸರದಲ್ಲಿ ಯಾವುದೇ ರೀತಿಯ ಹೋಟೆಲ್ಸ್ ಆಗಲಿ, ರೆಸ್ಟೋರೆಂಟ್ ಆಗಲಿ ಇಲ್ಲ. ಕಾಫಿ ಡೇನಂತವು ಕೂಡ ಇರುವುದಿಲ್ಲ. ಹಾಗಾಗಿ ಪ್ರವಾಸಿಗರು ಟ್ರೆಕ್ಕಿಂಗ್‍ಗೆ ಹೋಗುವುದಕ್ಕಿಂತ ಮುಂಚೆ ಆಹಾರವನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು.

11.ದೇವ ಕನ್ಯೆಯರೇ ಇಲ್ಲಿಗೆ ಇಳಿದು ಬರುತ್ತಿದ್ದರಂತೆ...!

11.ದೇವ ಕನ್ಯೆಯರೇ ಇಲ್ಲಿಗೆ ಇಳಿದು ಬರುತ್ತಿದ್ದರಂತೆ...!

PC:: wikipedia

ಟ್ರೆಕ್ಕಿಂಗ್‍ಗೆ ಮೂರು ದಿನಗಳ ಕಾಲ ಅವಕಾಶವಿದೆ. ರಾತ್ರಿಯ ಸಮಯದಲ್ಲಿ ಕಣಿವೆಯಲ್ಲಿ ಸಂಚಾರ ಮಾಡುವುದು ನಿಷೇಧ. ವಾಹನಗಳಿಗೆ ಯಾವುದೇ ರೀತಿಯಲ್ಲಿ ಅನುಮತಿ ಇರುವುದಿಲ್ಲ. ಕೇವಲ ಟ್ರೆಕ್ಕಿಂಗ್ ಮೂಲಕ ಮಾತ್ರವೇ ಅಲ್ಲಿಗೆ ಸೇರಿಕೊಳ್ಳಬಹುದು. ವೃದ್ಧರು, ಚಿಕ್ಕ ಮಕ್ಕಳಿಗೆ ಮನುಷ್ಯರು ಹೊತ್ತುಕೊಂಡು ಹೋಗುವ ಬಂಡಿ ಅಲ್ಲಿ ಬಾಡಿಗೆಗೆ ದೊರೆಯುತ್ತವೆ.

13.ಎಲ್ಲಿಂದ ಪ್ರಾರಂಭಿಸಬೇಕು?

13.ಎಲ್ಲಿಂದ ಪ್ರಾರಂಭಿಸಬೇಕು?

PC: __sandip__

ಉತ್ತರಾಖಂಡ ರಾಜ್ಯದಲ್ಲಿ ತಪ್ಪದೇ ಮಾಡಬೇಕಾದ ಟ್ರೆಕ್ಕಿಂಗ್‍ನಲ್ಲಿ ವ್ಯಾಲಿ ಆಫ್ ಫ್ಲವರ್ಸ್ ಟ್ರೆಕ್ ಕೂಡ ಒಂದು. ಜೋಷಿ ಮಠ ಅಥವಾ ಗೋವಿಂದ ಮಠ ಅಥವಾ ಗಂಗುರಿಯಾ ನಿಂದ ಟ್ರೆಕ್ ಪ್ರಾರಂಭ ಮಾಡಬಹುದು.

14.ಗಂಗೂರಿಯಾ

14.ಗಂಗೂರಿಯಾ

PC: __sandip__

ಗಂಗೂರಿಯಾ ಪ್ರದೇಶದಲ್ಲಿ ಸ್ವಾಧಿಷ್ಟವಾದ ಭೋಜನಗಳು ದೊರೆಯುತ್ತವೆ. ಇಲ್ಲಿ ಆನೇಕ ಹೋಟೆಲ್‍ಗಳು, ಲಾಡ್ಜ್‍ಗಳು ವಸತಿಯನ್ನು ಕಲ್ಪಿಸುತ್ತವೆ. ಗಂಗೂರಿಯಾದಲ್ಲಿ ಸಿಖ್‍ರು ಗುರುದ್ವಾರವು ವಿಶೇಷವಾದುದು. ದೂರ ಪ್ರದೇಶದಿಂದ ನಡೆದುಕೊಂಡು ಅನೇಕ ಮಂದಿ ಸಿಕ್ಕರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಟ್ರೆಕ್ಕಿಂಗ್ ಆಹ್ಲಾಕರವಾಗಿ...ಸುವಾಸನೆಯುಕ್ತ ಪ್ರದೇಶದ ಮಧ್ಯೆ ಪ್ರಯಾಣ ಸಾಗುತ್ತದೆ. ಗಂಗೂರಿಯಾದಿಂದ ವ್ಯಾಲಿ ಆಫ್ ಫ್ಲವರ್ಸ್‍ಗೆ ಸುಮಾರು 3 ಕಿ.ಮೀ ದೂರದಲ್ಲಿದೆ.

14.ಜೋಷಿಮಠ

14.ಜೋಷಿಮಠ

PC: __sandip__

ಜೋಷಿಮಠ ಪಟ್ಟಣದಿಂದ ವ್ಯಾಲಿ ಆಫ್ ಫ್ಲವರ್ಸ್‍ಗೆ ಸುಮಾರು 20 ಕಿ.ಮೀ ದೂರದಲ್ಲಿದೆ. ಇಲ್ಲಿ ಆದಿ ಶಂಕರಾಚಾರ್ಯರ ಮಠ, ಕಲ್ಪವೃಕ್ಷ, ನರಸಿಂಹ ದೇವಾಲಯವೆಲ್ಲಾ ನೋಡಬಹುದು.

15.ಗೋವಿಂದ ಘಾಟ್

15.ಗೋವಿಂದ ಘಾಟ್

PC: Alokprasad

ಗೋವಿಂದ ಘಾಟ್‍ನಿಂದ ಆದರೆ ಸುಮಾರು 16 ಕಿ.ಮೀ ಟ್ರೆಕ್. ಹರಿದ್ವಾರದಿಂದ ಬದ್ರಿನಾಥ ಹೋಗುವ ದಾರಿಯಲ್ಲಿದೆ. ದೆಹಲಿ, ಬದ್ರಿನಾಥ, ಡೆಹ್ರಾಡೂನ್‍ನಿಂದ ಇಲ್ಲಿಗೆ ರಸ್ತೆ ಮಾರ್ಗದಲ್ಲಿದೆ. ದೆಹಲಿಯಿಂದ 500 ಕಿ.ಮೀ ಪ್ರಯಾಣ ಮಾಡಬೇಕಾಗುತ್ತದೆ.

16.ವ್ಯಾಲಿ ಆಫ್ ಫ್ಲವರ್ಸ್‍ಗೆ ತೆರಳುವ ಬಗೆ ಹೇಗೆ?

16.ವ್ಯಾಲಿ ಆಫ್ ಫ್ಲವರ್ಸ್‍ಗೆ ತೆರಳುವ ಬಗೆ ಹೇಗೆ?

PC:: Manis73

ವಾಯು ಮಾರ್ಗದ ಮೂಲಕ

ಡೆಹ್ರಾಡೂನ್‍ನಲ್ಲಿ ಜಾಲಿ ಗ್ರಾಂಟ್ ವಿಮಾನ ನಿಲ್ದಾಣವು ವ್ಯಾಲಿಗೆ ಸಮೀಪದಲ್ಲಿ ಸುಮಾರು 292 ಕಿ.ಮೀ ದೂರದಲ್ಲಿದೆ. ಆದರೆ ವಿಮಾನ ನಿಲ್ದಾಣದಿಂದ ಗೋವಿಂದ ಘಟ್‍ವರೆವಿಗೂ ಮಾತ್ರವೇ ರಸ್ತೆ ಮಾರ್ಗವಿದೆ. ಅಲ್ಲಿಂದ ಸುಮಾರು 16 ಕಿ.ಮೀ ದೂರದವರೆಗೆ ಟ್ರೆಕ್ಕಿಂಗ್ ಮಾಡಿದರೆ ಕಣಿವೆ ಆಫ್ ಫ್ಲವರ್ಸ್‍ಗೆ ಸೇರಿಕೊಳ್ಳಬಹುದು.

ರಸ್ತೆ ಮಾರ್ಗದ ಮೂಲಕ

ಸುಮಾರು 273 ಕಿ.ಮೀ ದೂರದಲ್ಲಿ ರಿಷಿಕೇಷ್ ರೈಲ್ವೆ ನಿಲ್ದಾಣವಿದೆ. ಸುಮಾರು 10 ಗಂಟೆಗಳ ಪ್ರಯಾಣಿಸಿ ಗೋವಿಂದ ಘಾಟ್ ಸೇರಿಕೊಳ್ಳಬಹುದು. ಅಲ್ಲಿನಿಂದ 16 ಕಿ.ಮೀ ಟ್ರೆಕ್ಕಿಂಗ್ ಮಾಡಿ ಹೂವಿನ ಸ್ವರ್ಗಕ್ಕೆ ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more