Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಿ ಕಣಿವೆ » ಹವಾಮಾನ

ಅಂಬಿ ಕಣಿವೆ ಹವಾಮಾನ

ಅಂಬೆ ವ್ಯಾಲಿಗೆ ಭೇಟಿ ನೀಡಲು ನಿಮ್ಮ ಹವಾಮಾನ ಆದ್ಯತೆಯ ಆಧಾರದ ಮೇಲೆ ಚಳಿಗಾಲಕ್ಕಿಂತ ಮೊದಲು ಹಾಗೂ ವಸಂತ ಋತುವಿನಲ್ಲೂ ಬರಬಹುದು. ಈ ಎರಡೂ ಋತುಗಳಲ್ಲಿ ಪ್ರವಾಸಿಗರು ಅಂಬೆ ವ್ಯಾಲಿಗೆ ಭೇಟಿ ನೀಡಬಹುದಾಗಿದ್ದು ಅದ್ಭುತವಾದ ನಿಸರ್ಗ ವೀಕ್ಷಣೆಯನ್ನು ತಮ್ಮದಾಗಿಸಿಕೊಳ್ಳಬಹುದು.

ಬೇಸಿಗೆಗಾಲ

ಅಂಬೆ ವ್ಯಾಲಿ ಎತ್ತರದ ಸ್ಥಳದಲ್ಲಿರುವುದರಿಂದ ಬೇಸಿಗೆಯಲ್ಲಿ ನೆರೆಯ ಸ್ಥಳಗಳಿಗಿಂತ ಕೆಟ್ಟ ಬಿಸಿಲನ್ನು ಅನುಭವಿಸುತ್ತದೆ. ಹಗಲಿನಲ್ಲಿ ಇಲ್ಲಿನ ತಾಪಮಾನವು 35 ಡಿ. ಸೆಗಿಂತ ಹೆಚ್ಚು ದಾಖಲಾಗುತ್ತದೆ. ಈ ಸಂದರ್ಭದಲ್ಲಿ ಇಲ್ಲಿರುವ ಹವಾನಿಯಂತ್ರಣ ಕೊಠಡಿಗಳ ಸಹಾಯಪಡೆಯಬಹುದಾಗಿದೆ.

ಮಳೆಗಾಲ

ಮಳೆಗಾಲವು ಅತ್ಯಂತ ಸುಂದರ ಹಾಗೂ ಆಕರ್ಷಣೆ. ಅದಕ್ಕಿಂತ ಹೆಚ್ಚಾಗಿ ಆರಾಮದಾಯಕವಾಗಿರುತ್ತದೆ. ಈ ಸಮಯದಲ್ಲಿ ತಾಪಮಾನವು ಅತ್ಯಂತ ತಂಪಾಗಿದ್ದು, 18 ರಿಂದ 23 ಡಿ. ಸೆ ನಷ್ಟು ದಾಖಲಾಗುತ್ತದೆ. ಈ ಸಂದರ್ಭದಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಗಳಿರುತ್ತವೆ. ಅಂಬೆ ವ್ಯಾಲಿ 2300 ಅಡಿ ಎತ್ತರದಲ್ಲಿದ್ದು ನಿಮ್ಮನ್ನು ಮೋಡಗಳಿಗಿಂತ ಮೇಲಿರುವ ಅನುಭವವನ್ನು ನೀಡುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ಅಂಬೆ ವ್ಯಾಲಿ ಅತ್ಯಂತ ತಂಪಾಗಿದ್ದು ವ್ಯಾಲಿಯು ಅತ್ಯುತ್ತಮವಾಗಿ ಕಾಣಿಸುತ್ತದೆ. ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರ ಗುಂಪು ಹಾಗೂ ನಿವಾಸಿಗಳು ತಮ್ಮ ವಾರಾಂತ್ಯದ ಸಮಯವನ್ನು ಕಳೆಯಲು ಇಲ್ಲಿಗೆ ಆಗಮಿಸುತ್ತಾರೆ. ಚಳಿಗಾಲದಲ್ಲಿ ಇಲ್ಲಿನ ತಾಪಮಾನ 16 ಡಿ ಸೆ ತಲುಪಬಹುದು.