Search
  • Follow NativePlanet
Share
» » ವೈಕುಂಠ ಏಕಾದಶಿಯಂದು ವೈಕುಂಠ ದ್ವಾರದಲ್ಲಿ ಹೋಗೋದನ್ನು ಮಿಸ್ ಮಾಡಬೇಡಿ

ವೈಕುಂಠ ಏಕಾದಶಿಯಂದು ವೈಕುಂಠ ದ್ವಾರದಲ್ಲಿ ಹೋಗೋದನ್ನು ಮಿಸ್ ಮಾಡಬೇಡಿ

ವೈಕುಂಠ ಏಕಾದಶಿಯು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ವಿಷ್ಣುವಿನ ದೇವಾಲಯಗಳಲ್ಲಿ ಆಚರಿಸಲಾಗುವ ಒಂದು ಹಬ್ಬ ಎಂದೇ ಹೇಳಬಹುದು. ಸಾಮಾನ್ಯವಾಗಿ ಈ ವೈಕುಂಠ ಏಕಾದಶಿ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಬರುತ್ತದೆ. ಈ ಬಾರಿ ಡಿಸೆಂಬರ್ 18ಕ್ಕೆ ಬಂದಿದೆ. ಎಲ್ಲಾ ವಿಷ್ಣುವಿನ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲೂ ವೈಕುಂಠ ಏಕಾದಶಿಯನ್ನು ಅದ್ದೂರಿಯಾಗಿಯೇ ಆಚರಿಸಲಾಗುತ್ತಿದೆ.

ಎಲ್ಲಿದೆ ಇಸ್ಕಾನ್ ಮಂದಿರ

ಎಲ್ಲಿದೆ ಇಸ್ಕಾನ್ ಮಂದಿರ

PC:hemant meena

ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಾಲಯ ಉತ್ತರ ಬೆಂಗಳೂರಿನಲ್ಲಿದೆ. ವಿವಿಧ ಸಾರಿಗೆ ಮಾರ್ಗಗಳ ಮೂಲಕ ನಗರದ ಉಳಿದ ಭಾಗಗಳಿಗೆ ಇದು ಉತ್ತಮ ಸಂಪರ್ಕವನ್ನು ಹೊಂದಿದೆ.

ಮುನ್ನಾರ್‌ನಲ್ಲಿ ಇದನ್ನೆಲ್ಲಾ ಮಿಸ್ ಮಾಡಲೇ ಬಾರದು

ವೆಂಕಟೇಶ್ವರ ಸುಪ್ರಭಾತ

ವೆಂಕಟೇಶ್ವರ ಸುಪ್ರಭಾತ

PC: Iskconradhakrishnatemple

ಬೆಳಗ್ಗಿನ ಜಾವ ಮೂರು ಗಂಟೆಗೆ ಭಕ್ತರು ವೆಂಕಟೇಶ್ವರ ಸುಪ್ರಭಾತವನ್ನು ಪಠಿಸುತ್ತಾರೆ. ಈ ಮೂಲಕ ವೆಂಕಟೇಶ್ವರನ್ನು ಎಬ್ಬಿಸುತ್ತಾರೆ. ಆ ನಂತರ ದೂಪ, ದೀಪ, ವಸ್ತ್ರ, ಪುಷ್ಪ, ವ್ಯಂಜನದ ಮೂಲಕ ದೇವರ ಪೂಜೆ ಮಾಡುತ್ತಾರೆ.

ವೈಕುಂಠ ದ್ವಾರ ಸೇವೆ

ವೈಕುಂಠ ದ್ವಾರ ಸೇವೆ

PC: Arkrishna

ವೈಕುಂಠ ದ್ವಾರದಲ್ಲಿ ಲಕ್ಷ್ಮಿ ನಾರಾಯಣ ಅಲಂಕಾರದಲ್ಲಿ ಶ್ರೀ ರಾಧಾ ಕೃಷ್ಣಚಂದ್ರನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ಸೇವೆಯ ಶುಲ್ಕವು 500 ರೂ.

ಭೂತೋಚ್ಛಾಟನೆಗೆ ಹೆಸರುವಾಸಿಯಾಗಿರುವ ಕೇರಳದ ಚೊಟ್ಟನಿಕೆರ ದೇವಸ್ಥಾನದ ಬಗ್ಗೆ ತಿಳಿಯಿರಿ

ತುಳಸಿ ಹಾರ ಸೇವೆ

ತುಳಸಿ ಹಾರ ಸೇವೆ

PC: Iskconradhakrishnatemple

ವೈಕುಂಠ ಏಕಾದಶಿ ಮಂಗಳಕರ ದಿನದಂದು ಶ್ರೀ ಶ್ರೀನಿವಾಸ ಗೋವಿಂದರಿಗೆ ತುಳಸಿ ಹೂವುಗಳನ್ನು ಅರ್ಪಿಸಲಾಗುತ್ತದೆ. ಈ ಸೇವೆಯ ಶುಲ್ಕವು 1000 ರೂ.

ವಿಶೇಷ ನೈವೇದ್ಯ ಸೇವೆ

ವಿಶೇಷ ನೈವೇದ್ಯ ಸೇವೆ

PC: Iskconradhakrishnatemple

ಶ್ರೀ ಶ್ರೀನಿವಾಸ ಗೋವಿಂದ ಅವರಿಗೆ ವಿಶೇಷವಾಗಿ ತಯಾರಾದ ರುಚಿಕರವಾದ ಆಹಾರ ಪದಾರ್ಥಗಳ ನೈವೇದ್ಯವನ್ನು ಅಪರ್ಪಿಸಲಾಗುತ್ತದೆ. ಈ ಸೇವೆಯ ಶುಲ್ಕವು 2500 ರೂ.

ಚೆನ್ನೈ ಸುತ್ತಮುತ್ತ ನೋಡಲೇಬೇಕಾದ 10 ಪ್ರಮುಖ ತಾಣಗಳು

ವಿಶೇಷ ಅಲಂಕಾರ ಸೇವೆ

ವಿಶೇಷ ಅಲಂಕಾರ ಸೇವೆ

PC:Arkrishna

ಹೊಳೆಯುವ ಆಭರಣಗಳು, ಸೌಂದರ್ಯ ಉಡುಗೆ ಮತ್ತು ವರ್ಣಮಯ ಹೂವಿನ ಹೂಮಾಲೆಗಳೊಂದಿಗೆ ಶ್ರೀ ಶ್ರೀನಿವಾಸ ಗೋವಿಂದನ ಅಲಂಕಾರದ ಸೇವೆ ಮಾಡಲಾಗುತ್ತದೆ. ಈ ಸೇವೆಯ ಶುಲ್ಕವು 5000 ರೂ.

ಪ್ರಸಾದ ಸೇವೆ

ಪ್ರಸಾದ ಸೇವೆ

PC: Yuv103m

ವೈಕುಂಠ ಏಕಾದಶಿ ಮೇಲೆ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಉಚಿತ ಧಾನ್ಯದ ಪ್ರಸಾದವನ್ನು ವಿತರಿಸಲಾಗುತ್ತದೆ. ಈ ಸೇವೆಯ ಸೇವಾಶುಲ್ಕ ಈ ರೀತಿ ಇದೆ. 1008, 2508, 5008, 10008ರೂ.

ಇಲ್ಲಿ ಪ್ರತಿದಿನ ದೇವರ ಪ್ರಸಾದ ತಿನ್ನಲು ಬರುತ್ತವೆ ತೋಳಗಳು

ವೈಕುಂಠ ದ್ವಾರ

ವೈಕುಂಠ ದ್ವಾರ

ದೇವಾಲಯದ ಉತ್ತರ ಭಾಗದಲ್ಲಿ ವೈಕುಂಠ ದ್ವಾರ ಎನ್ನುವ ವಿಶೇಷ ಪ್ರವೇಶದ್ವಾರವನ್ನು ವರ್ಷದಲ್ಲಿ ಒಮ್ಮೆ ಈ ನಿರ್ದಿಷ್ಟ ದಿನದಂದು ತೆರೆಯಲ್ಪಡುತ್ತದೆ. ಈ ದಿನದಂದು ವೈಕುಂಠ ದ್ವಾರಕ್ಕೆ ಪ್ರವೇಶಿಸುವ ಯಾರಾದರೂ ಆಧ್ಯಾತ್ಮಿಕ ವಾಸಸ್ಥಾನವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

ಭಕ್ತರಿಗೆ ದರ್ಶನ

ಭಕ್ತರಿಗೆ ದರ್ಶನ

PC:Svpdasa

ಬೆಳಗ್ಗೆ 8ಗಂಟೆಯಿಂದ ರಾತ್ರಿ 11 ಗಂಟೆ ವರೆಗೆ ಭಕ್ತರಿಗೆ ದೇವರ ದರ್ಶನಕ್ಕಾಗಿ ದೇವಸ್ಥಾನ ತೆರೆದಿರುತ್ತದೆ. ಈ ದಿನದಂದು ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವೆಂಕಟೇಶ್ವರನ ದರ್ಶನ ಪಡೆಯುತ್ತಾರೆ. ಜೊತೆಗೆ ವೈಕುಂಠ ದ್ವಾರದ ಮೂಲಕ ಸಾಗುತ್ತಾರೆ.

13 ದ್ವೀಪಗಳನ್ನು ಹೊಂದಿರುವ ಈ ಸುಂದರ ಸರೋವರವನ್ನು ನೋಡಿದ್ದೀರಾ?

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Rangakuvara

ವಿಮಾನ ನಿಲ್ದಾಣ: ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಇದು 33 ಕಿಮೀ ದೂರದಲ್ಲಿದೆ.

ರೈಲು ನಿಲ್ದಾಣಗಳು: ಬೆಂಗಳೂರು ನಗರ ರೈಲು ನಿಲ್ದಾಣ ಸುಮಾರು 6.9 ಕಿ.ಮೀ ದೂರದಲ್ಲಿದೆ. ಹಾಗು ಯಶವಂತಪುರ ರೈಲು ನಿಲ್ದಾಣ 2.2 ಕಿ.ಮೀ ದೂರದಲ್ಲಿದೆ.

ಮೆಟ್ರೋ: ನೀವು ಮೆಟ್ರೋ ಮೂಲಕ ಚಲಿಸುವುದಾದರೆ ಮಹಾಲಕ್ಷ್ಮೀ ಲೇ ಔಟ್ ಇಲ್ಲವಾದಲ್ಲಿ ಸ್ಯಾಂಡಲ್‌ವುಡ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ನಡೆದುಕೊಂಡು ಹೋಗಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X