Search
  • Follow NativePlanet
Share
» »ಸಂತಾನವಾಗಬೇಕಾದರೆ ಈ ದೇವಾಲಯದಲ್ಲಿ ಕಳ್ಳತನ ಮಾಡಿದರೆ ಸಾಕಂತೆ.....

ಸಂತಾನವಾಗಬೇಕಾದರೆ ಈ ದೇವಾಲಯದಲ್ಲಿ ಕಳ್ಳತನ ಮಾಡಿದರೆ ಸಾಕಂತೆ.....

ಸಂತಾನವಾಗಬೇಕು ಎಂದು ಹಲವಾರು ದೇವಾಲಯಗಳಿಗೆ ದಂಪತಿಗಳು ಸುತ್ತುವುದು ಸಾಮಾನ್ಯವಾದ ಸಂಗತಿಯೇ. ಮದುವೆಯಾದ ಬಳಿಕ ಅಮ್ಮ.. ಎಂದು ಕರೆಸಿಕೊಳ್ಳದ್ದಿದ್ದರೆ ಸಮಾಜ ಹೇಗೆಲ್ಲಾ ನೋಡುತ್ತದೆ ಎಂಬುದರ ಬಗ್ಗೆ ನಿಮಗೆ ಗೊತ್ತು. ಮಕ್ಕಳ ಲಾಲನೆ, ಪಾಲನೆ, ವಂಶ ನಿ

ಸಂತಾನವಾಗಬೇಕು ಎಂದು ಹಲವಾರು ದೇವಾಲಯಗಳಿಗೆ ದಂಪತಿಗಳು ಸುತ್ತುವುದು ಸಾಮಾನ್ಯವಾದ ಸಂಗತಿಯೇ. ಮದುವೆಯಾದ ಬಳಿಕ ಅಮ್ಮ.. ಎಂದು ಕರೆಸಿಕೊಳ್ಳದ್ದಿದ್ದರೆ ಸಮಾಜ ಹೇಗೆಲ್ಲಾ ನೋಡುತ್ತದೆ ಎಂಬುದರ ಬಗ್ಗೆ ನಿಮಗೆ ಗೊತ್ತು. ಮಕ್ಕಳ ಲಾಲನೆ, ಪಾಲನೆ, ವಂಶ ನಿರ್ವಹಣೆಯ ಬಗ್ಗೆ ಯಾರಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ.

ಅದಕ್ಕೆ ದಂಪತಿಗಳು ಹಲವಾರು ಜ್ಯೋತಿಷ್ಯಿಗಳ ಮೊರೆ ಹೋಗುತ್ತಾರೆ. ಹಲವಾರು ವ್ರತಗಳನ್ನು ಆಚರಿಸಿ ಹಣವನ್ನು ಪೂಲು ಮಾಡಿಕೊಳ್ಳುತ್ತಾರೆ. ಹಾಗಾದರೆ ಕೇಳಿ ಉತ್ತರಖಂಡದಲ್ಲಿ ಒಂದು ವಿಚಿತ್ರವಾದ ದೇವಾಯವಿದೆ. ಅಲ್ಲಿ ನೀವು ಕಳ್ಳತನ ಮಾಡಿದರೆ ಸಂತಾನ ಭಾಗ್ಯ ಲಭಿಸುತ್ತದೆ ಎಂತೆ.

ಪ್ರಸ್ತುತ ಲೇಖನದ ಮೂಲಕ ಅಂತಹ ವಿಚಿತ್ರವಾದ ದೇವಾಲಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಪಡೆಯೋಣ.

ಹಿಂದೂ ಧರ್ಮ

ಹಿಂದೂ ಧರ್ಮ

ಇಲ್ಲಿ ಹೆಚ್ಚಾಗಿ ಹಿಂದೂ ಧರ್ಮದವರು ಭೇಟಿ ನೀಡುತ್ತಾರೆ. ಇಲ್ಲಿ ಹಲವಾರು ಶತಮಾನಗಳಿಂದ ವಾಸವಿರುವ ನೇಪಾಳಿ ಸಂತತಿಯವರು ಇಲ್ಲಿ ನೆಲೆಸಿದ್ದಾರೆ. ಜಧ್, ಮರ್ಚಾ, ಸೋಕಾ ಎಂಬ ಭಾರತ-ಟಿಬೆಟ್ ಸರಿಹದ್ದಿನಲ್ಲಿ ವಾಸಿಸುತ್ತಾರೆ. ಇವರೆಲ್ಲರನ್ನೂ ಸೇರಿ "ಬೋಟಿಯಾ" ಎಂದು ಕರೆಯುತ್ತಾರೆ.

ವಿಭಿನ್ನವಾದ ಆಚಾರ

ವಿಭಿನ್ನವಾದ ಆಚಾರ

ನಮ್ಮ ದೇಶದಲ್ಲಿರುವ ಒಂದು ವಿಭಿನ್ನವಾದ ದೇವಾಲಯದಲ್ಲಿನ ವಿಭಿನ್ನವಾದ ಆಚಾರದ ಬಗ್ಗೆ ಲೇಖನದ ಮೂಲಕ ನಾವು ತಿಳಿಯೋಣ.

ಆಧ್ಯಾತ್ಮಿಕವಾದ ವಾತಾವರಣ

ಆಧ್ಯಾತ್ಮಿಕವಾದ ವಾತಾವರಣ

ದೇವಾಲಯವೆಂದರೆ ಪೂಜೆಗಳು ಮಾಡುವುದು, ತೆಂಗಿನಕಾಯಿಯನ್ನು ಒಡೆಯುವುದು, ಪ್ರದಕ್ಷಿಣೆ ಮಾಡುವುದು, ಮಂಗಳಾತಿ ತೆಗೆದುಕೊಳ್ಳುವುದು ಇವೆಲ್ಲವೂ ಸಹಜವಾದುದು. ಇವುಗಳನ್ನು ಕಂಡರೆ ಸಾಮಾನ್ಯವಾಗಿ ಆಧ್ಯಾತ್ಮಿಕವಾದ ಭಕ್ತಿಯು ಪ್ರಾರಂಭವಾಗುತ್ತದೆ.

ಕಳ್ಳತನ

ಕಳ್ಳತನ

ಆದರೆ ದೇವರ ದರ್ಶನಕ್ಕೆ ಹೋದವರು ಕಳ್ಳತನ ಮಾಡಬೇಕು ಎಂದು ಅನಿಸುತ್ತದೆಯೇ? ನಿಜವಾಗಿಯೂ ಇಲ್ಲ ಅಲ್ಲವೇ?

ಕಳ್ಳತನ

ಕಳ್ಳತನ

ಆದರೆ ಈ ದೇವಾಲಯಕ್ಕೆ ಹೋದರೆ ಮಾತ್ರ ಕಳ್ಳತನವಂತೂ ಖಚಿತವಾಗಿ ಮಾಡಲೇಬೇಕಾಗಿದೆ.

ದೇವಿಯ ಕೃಪೆ

ದೇವಿಯ ಕೃಪೆ

ಇದು ನಂಬಲು ಅಸಾಧ್ಯವಾದರೂ ಕೂಡ, ವಿಭಿನ್ನವಾಗಿದ್ದರೂ ಕೂಡ ಇದು ಮಾತ್ರ ಅಕ್ಷರಶಃ ನಿಜ. ಇಲ್ಲಿ ಕಳ್ಳತನ ಮಾಡಿದರೆ ಮಾತ್ರ ದೇವಿಯ ಅನುಗ್ರಹ ಪಡೆಯಲು ಸಾಧ್ಯವಾಗುತ್ತದೆ.

ಕೋರಿಕೆಗಳು ಕೂಡ ತೀರುತ್ತದೆ ಎಂತೆ

ಕೋರಿಕೆಗಳು ಕೂಡ ತೀರುತ್ತದೆ ಎಂತೆ

ಈ ದೇವಾಲಯದಲ್ಲಿ ಕಳ್ಳತನ ಮಾಡಿದರೆ ತಾವು ಅಂದುಕೊಂಡಿರುವ ಕೋರಿಕೆಗಳನ್ನು ದೇವಿಯು ಪೂರ್ತಿಯಾಗುವಂತೆ ಅನುಗ್ರಹಿಸುತ್ತಾಳಂತೆ. ಅಸಲಿಗೆ ಈ ದೇವಾಲಯ ಎಲ್ಲಿದೆ ಎಂದು ಅಲೋಚಿಸುತ್ತಿದ್ದೀರಾ?

ಚೂಡಿಯಾಲ

ಚೂಡಿಯಾಲ

ಉತ್ತರಖಂಡದಲ್ಲಿನ ರೂರ್ಕಿ ಜಿಲ್ಲೆಯಲ್ಲಿನ ಚೂಡಿಯಾಲ ಎಂಬ ಗ್ರಾಮದಲ್ಲಿ ಈ ವಿಚಿತ್ರವಾದ ದೇವಾಲಯವಿದೆ.

ದರ್ಶನ ಮಾಡಿ

ದರ್ಶನ ಮಾಡಿ

ಈ ದೇವಾಲಯದಲ್ಲಿನ ತಾಯಿಯನ್ನು ದರ್ಶನ ಮಾಡಿದರೆ ಸಂತಾನ ಭಾಗ್ಯ ಲಭ್ಯವಾಗುತ್ತದೆ ಎಂತೆ. ಇದು ಚೂಡಾಮಣಿ ದೇವಿಯ ದೇವಾಲಯವಾಗಿದ್ದು, ಮಕ್ಕಳು ಇಲ್ಲದೇ ಇರುವವರಿಗೆ ಸಂತಾನ ನೀಡುವ ಮಹಿಮಾನ್ವಿತವಾದ ತಾಯಿಯಾಗಿದ್ದಾಳೆ.

ಹಲವಾರು ಮಂದಿಗೆ ಗಂಡು ಮಕ್ಕಳು

ಹಲವಾರು ಮಂದಿಗೆ ಗಂಡು ಮಕ್ಕಳು

ನಂಬಿದರೆ ನಂಬಿ ಬಿಟ್ಟರೆ ಬಿಡಿ. ಈ ದೇವಾಲಯದಲ್ಲಿನ ಚೂಡಮಣಿ ತಾಯಿಯನ್ನು ದರ್ಶನ ಮಾಡಿದರೆ ಹಲವಾರು ಮಂದಿಗೆ ಗಂಡು ಮಕ್ಕಳು ಆಗಿವೆ ಎಂತೆ.

ಹಣ ಮತ್ತು ಅಭರಣ

ಹಣ ಮತ್ತು ಅಭರಣ

ಆದರೆ ಸಂತಾನ ಬೇಕು ಎಂದು ಅಂದುಕೊಳ್ಳುವವರು ದೇವಾಲಯದಲ್ಲಿ ಕಳ್ಳತನ ಮಾಡಲೇಬೇಕಾಗಿದೆ. ಕಳ್ಳತನ ಎಂದ ಕೂಡಲೇ ಹಣ ಮತ್ತು ಅಭರಣಗಳು ಎಂದುಕೊಂಡಿದ್ದೀರಾ? ಅವು ಯಾವುದು ಅಲ್ಲ...

ಮರದ ಗೊಂಬೆ

ಮರದ ಗೊಂಬೆ

ಅಲ್ಲಿ ತಾಯಿಯ ಪಾದದ ಮೇಲೆ ಇರುವ ಮರದ ಗೊಂಬೆಯನ್ನು ಕಳ್ಳತನವನ್ನು ಮಾಡಬೇಕು. ಮರದ ಗೊಂಬೆಯನ್ನು ಕಳ್ಳತನ ಮಾಡಿದ ನಂತರ ಸಂತಾನವಾದ ತಕ್ಷಣ ಹಾಗೆಯೇ ಇದೇ ದೇವಾಲಯಕ್ಕೆ ತೆರಳಿ ಮರದ ಗೊಂಬೆಯನ್ನು ತಾಯಿಯ ಪಾದದ ಮೇಲೆ ಇಟ್ಟು ಬರಬೇಕು.

ಬೊಂಬೆ

ಬೊಂಬೆ

ತೆಗೆದುಕೊಂಡ ಮರದ ಗೊಂಬೆಯ ಜೊತೆಗೆ ಮತ್ತೊಂದು ಬೊಂಬೆಯನ್ನು ಮಾಡಿಸಿ ತಾಯಿಯ ಪಾದದ ಮೇಲೆ ಇಟ್ಟು ಹೋಗಬೇಕು.

ಆಶ್ಚರ್ಯ

ಆಶ್ಚರ್ಯ

ನೀವು ಎಂದೂ ಕೇಳಿರದ ಈ ವಿಷಯ ನಿಮಗೆ ಆಶ್ಚರ್ಯವೆನಿಸಬಹುದು. ಆದರೆ ಅವರವರ ನಂಬಿಕೆ ಅವರವರಿಗೆ ಬಿಟ್ಟಿದ್ದು ಅಲ್ಲವೇ?

ಉತ್ತರಾಖಂಡ

ಉತ್ತರಾಖಂಡ

ಹಾಗಾದರೆ ನೀವು ಎಂದಾದರೂ ಉತ್ತರ ಖಂಡಕ್ಕೆ ಭೇಟಿ ನೀಡಿದರೆ ತಪ್ಪದೇ ಈ ದೇವಾಲಯಕ್ಕೆ ತೆರಳಿ ತಾಯಿಯ ದರ್ಶನ ಮಾಡಿಕೊಳ್ಳಿ.

ಹೇಗೆ ತೆರಳಬೇಕು?

ಹೇಗೆ ತೆರಳಬೇಕು?

ಉತ್ತರ ಖಂಡಗೆ ತೆರಳಲು ಸಮೀಪದ ವಿಮಾನ ನಿಲ್ದಾಣಗಳೆಂದರೆ ಅವು ಡೆಹ್ರಡೂನ್ ವಿಮಾನ ನಿಲ್ದಾಣ, ಪನ್ನತ್ ನಗರ ವಿಮಾನ ನಿಲ್ದಾಣ, ನೈನಿ ಸಾಯ್‍ನಿ ವಿಮಾ ನಿಲ್ದಾಣವಾಗಿದೆ.

ಬೆಂಗಳೂರಿನಿಂದ ಉತ್ತರಖಂಡಕ್ಕೆ ಸುಮಾರು 2,265 ಕಿ.ಮೀ ದೂರದಲ್ಲಿದೆ. ಸುಮಾರು 37 ಗಂಟೆಯ ದೀರ್ಘ ರಸ್ತೆ ಪ್ರಯಾಣ ಮಾಡಬೇಕಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X