Search
  • Follow NativePlanet
Share
» »ಚಿತ್ರ ವಿಚಿತ್ರ ಶಿಲಾ ರಚನೆಗಳ ಅದ್ಭುತ ಉದ್ಯಾನ

ಚಿತ್ರ ವಿಚಿತ್ರ ಶಿಲಾ ರಚನೆಗಳ ಅದ್ಭುತ ಉದ್ಯಾನ

By Vijay

ಈ ಸ್ಥಳಕ್ಕೆ ತೆರಳಿದರೆ ಸಾಕು ವಿಶಾಲವಾದ ಭೂಮಿಯಲ್ಲಿ ಕಲ್ಲು ಬಂಡೆಗಳ ಚಿತ್ರ ವಿಚಿತ್ರ ರಚನೆಗಳು ಗಮನಸೆಳೆಯುತ್ತವೆ. ಪ್ರಕೃತಿಯ ಮಡಿಲಲ್ಲಿ ಎಂತೆಂತಹ ಸೋಜಿಗಗಳು ಅಡಗಿ ಕುಳಿತಿವೆಯಪ್ಪ ಎಂದು ಅನಿಸಲೂಬಹುದು. ಯಾರಪ್ಪ ಇಷ್ಟೊಂದು ಆಶ್ಚರ್ಯಕರವಾಗಿ ಈ ಕಲ್ಲು ಬಂಡೆಗಳನ್ನು ಕೆತ್ತಿದ್ದಾರೆ ಎಂಬ ಪ್ರಶ್ನೆಯೂ ಮೂಡಬಹುದು. ಇದು ಆಂಧ್ರಪ್ರದೇಶ ದಲ್ಲಿದೆ.

ನಿಮಗಿಷ್ಟವಾಗಬಹುದಾದ : ಉತ್ಸವ ರಾಕ್ ಗಾರ್ಡನ್, ಏನಿದರ ವಿಶೇಷ?

ಆದರೆ, ಇಲ್ಲಿರುವ ಪ್ರತಿಯೊಂದು ರಚನೆಗಳನ್ನು ನೋಡುತ್ತ ನೋಡುತ್ತ, ಅವುಗಳ ಹಿಂದಿನ ವಿಜ್ಞಾನ ತಿಳಿಯುತ್ತ ತಿಳಿಯುತ್ತ ಸಾಗುತ್ತಿದ್ದಂತೆ, ಆ ಪ್ರಕೃತಿ ಮಾತೆಯ ಮೇಲೆ ಧನ್ಯತಾ ಭಾವ ಉಂಟಾಗುವುದು ಸಹಜ. ಏಷ್ಟೆಲ್ಲ ಆಕರ್ಷಣೆಗಳನ್ನು ನಮಗೆ ಪ್ರಕೃತಿ ಒದಗಿಸಿದೆ ಎಂದು ಹೆಮ್ಮೆಯನ್ನೂ ಪಡಬಹುದು.

ಪ್ರಸ್ತುತ ಲೇಖನದಲ್ಲಿ ಈ ವಿಶಿಷ್ಟ ಶಿಲಾ ಉದ್ಯಾನದ ಕುರಿತು ತಿಳಿಸಲಾಗಿದೆ. ಇದರ ಕುರಿತು ಸಂಪೂರ್ಣ ಮಾಹಿತಿಗಳನ್ನು ಸ್ಲೈಡುಗಳ ಮೂಲಕ ಪಡೆದುಕೊಂಡು, ಸಾಧ್ಯವಾದರೆ ನೀವು ಒಮ್ಮೆ ಈ ತಾಣಕ್ಕೆ ಭೇಟಿ ನೀಡಲು ಪ್ರಯತ್ನಿಸಿ.

ವಿಸ್ಮಯಕರ ಶಿಲಾ ರಚನೆಗಳು:

ವಿಸ್ಮಯಕರ ಶಿಲಾ ರಚನೆಗಳು:

ಈ ಶಿಲಾರಚನೆಗಳು ಕಂಡುಬರುವುದು ಓರ್ವಕಲ್ ಅಥವಾ ಓರ್ವಕಲ್ಲು ಎಂಬ ಗ್ರಾಮದ ಹೊರವಲಯದಲ್ಲಿ. ಓರ್ವಕಲ್ ಗ್ರಾಮವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಬರುತ್ತದೆ.

ಚಿತ್ರಕೃಪೆ: Balamurugan Natarajan

ವಿಸ್ಮಯಕರ ಶಿಲಾ ರಚನೆಗಳು:

ವಿಸ್ಮಯಕರ ಶಿಲಾ ರಚನೆಗಳು:

ಕರ್ನೂಲ್ ಪಟ್ಟಣದಿಂದ ಕೇವಲ 22 ಕಿ.ಮೀ ಗಳಷ್ಟು ದೂರದಲ್ಲಿರುವ ಓರ್ವಕಲ್ಲನ್ನು ರಸ್ತೆಯ ಮುಖಾಂತರ ಸುಲಭವಾಗಿ ತಲುಪಬಹುದು. ಅಲ್ಲದೆ ಬಸ್ಸುಗಳ ಸೌಲಭ್ಯವೂ ಇದೆ. ಇನ್ನೂ ರೈಲಿನಲ್ಲಿ ಪ್ರಯಾಣಿಸಬೇಕಿದ್ದರೆ ಕರ್ನೂಲ್ ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ. ಮತ್ತೊಂದು ಆಯ್ಕೆ ಎಂದರೆ ಕರ್ನಾಟಕದ ಬಳ್ಳಾರಿ ಜಂಕ್ಷನ್ ರೈಲು ನಿಲ್ದಾಣ. ಇದು 164 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Adityamadhav83

ವಿಸ್ಮಯಕರ ಶಿಲಾ ರಚನೆಗಳು:

ವಿಸ್ಮಯಕರ ಶಿಲಾ ರಚನೆಗಳು:

ಓರ್ವಕಲ್ ಒಂದು ಗ್ರಾಮವಾಗಿದ್ದರೂ ಸಹ ತನ್ನಲ್ಲಿರುವ ಶಿಲಾ ರಚನೆಗಳಿಂದಾಗಿ ಹೆಸರುವಾಸಿಯಾಗಿದೆ. ಇದನ್ನು ಮನಗಂಡ ಆಂಧ್ರ ಪ್ರವಾಸೋದ್ಯಮ ಇಲಾಖೆ ಇಲ್ಲಿ ಶಿಲಾ ಉದ್ಯಾನವನ್ನೆ ನಿರ್ಮಿಸಿದೆ.

ಚಿತ್ರಕೃಪೆ: Veera.sj

ವಿಸ್ಮಯಕರ ಶಿಲಾ ರಚನೆಗಳು:

ವಿಸ್ಮಯಕರ ಶಿಲಾ ರಚನೆಗಳು:

ಸುಮಾರು ಸಾವಿರ ಎಕರೆಗಳಷ್ಟು ಪ್ರದೇಶದಲ್ಲಿ ಚಾಚಿರುವ ಈ ನೈಸರ್ಗಿಕ ಉದ್ಯಾನ ಸಾಕಷ್ಟು ತೆಲುಗು ಚಿತ್ರಗಳಿಗೆ ಸಾಕ್ಷಿಯಾಗಿದೆ. ಇತ್ತೀಚೆಗೆ ಬಿಡುಗಡೆಗೊಂಡ ಅತ್ಯಂತ ದುಬಾರಿ ಮೊತ್ತದ ಚಿತ್ರ ಎಂಬ ಖ್ಯಾತಿಗಳಿಸಿರುವ ಬಾಹುಬಲಿ ಚಿತ್ರದ ಹಲವಾರು ಸನ್ನಿವೇಶಗಳನ್ನು ಇಲ್ಲಿಯೆ ಚಿತ್ರೀಸಲಾಗಿದೆ.

ಚಿತ್ರಕೃಪೆ: Veera.sj

ವಿಸ್ಮಯಕರ ಶಿಲಾ ರಚನೆಗಳು:

ವಿಸ್ಮಯಕರ ಶಿಲಾ ರಚನೆಗಳು:

ಮೂಲತಃ ಇದು ಓರ್ವಕಲ್ ಸಮೂಹ ಶಿಲಾ ರಚನೆಗಳು ಎಂಬ ಹೆಸರನ್ನು ಪಡೆದಿದ್ದು ಇಗ್ನಿಯಸ್ ಪ್ರಕಾರದ ಶಿಲೆಗಳು ಇಲ್ಲಿ ರೂಪಗೊಂಡಿರುವುದನ್ನು ಕಾಣಬಹುದು. ಇಗ್ನಿಸ್ ಎಂಬ ಲ್ಯಾಟಿನ್ ಪದದಿಂದ ಶಿಲೆಯು ಈ ಹೆಸರು ಪಡೆದಿದೆ. ಇಗ್ನಿಸ್ ಎಂದರೆ ಬೆಂಕಿ ಎಂಬರ್ಥವಿದೆ.

ಚಿತ್ರಕೃಪೆ: Veera.sj

ವಿಸ್ಮಯಕರ ಶಿಲಾ ರಚನೆಗಳು:

ವಿಸ್ಮಯಕರ ಶಿಲಾ ರಚನೆಗಳು:

ಅಂದರೆ ಈ ಶಿಲೆಗಳು ಭೂಗರ್ಭದ ಲಾವಾ ರಸದಿಂದ ಉಂಟಾದ ಶಿಲಾ ರಚನೆಗಳಾಗಿವೆ. ಹೀಗಾಗಿ ಪದರು ಪದರುಗಳಲ್ಲಿ ರೂಪಗೊಂಡಿರುವ ಈ ಶಿಲೆಗಳು ನೋಡುಗರಿಗೆ ಆಕರ್ಷಕವಾಗಿ ಕಂಡುಬರುತ್ತವೆ.

ಚಿತ್ರಕೃಪೆ: Veera.sj

ವಿಸ್ಮಯಕರ ಶಿಲಾ ರಚನೆಗಳು:

ವಿಸ್ಮಯಕರ ಶಿಲಾ ರಚನೆಗಳು:

ಓರ್ವಕಲ್ಲಿನ ಶಿಲಾ ರಚನೆಗಳಲ್ಲಿ ಮುಖ್ಯವಾಗಿ ಕ್ವಾರ್ಟ್ಜ್ ಹಾಗೂ ಸಿಲಿಕಾ ಅಂಶಗಳಿವೆ. ಇದು ಗಾಜನ್ನು ತಯಾರಿಸಲು ಬೇಕಾದ ಮುಖ್ಯ ಕಚ್ಚಾ ವಸ್ತುಗಳು. ನೀರಿನ ಕೊಳಗಳ ಮಧ್ಯೆ ಅಲ್ಲಲ್ಲಿ ಒರ್ವಕಲ್ಲಿನ ಶಿಲಾ ರಚನೆಗಳು ನಿರ್ಮಿತವಾಗಿವೆ.

ಚಿತ್ರಕೃಪೆ: Veera.sj

ವಿಸ್ಮಯಕರ ಶಿಲಾ ರಚನೆಗಳು:

ವಿಸ್ಮಯಕರ ಶಿಲಾ ರಚನೆಗಳು:

ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಉಪಾಹರಗೃಹವೊಂದನ್ನು ಇಲ್ಲಿ ಕಾಣಬಹುದು. ಅಲ್ಲದೆ ಇಲ್ಲಿನ ನೀರಿನ ಕೊಳದಲ್ಲಿ ದೋಣಿ ವಿಹಾರದ ಸೌಲಭ್ಯವಿದ್ದು ಗುಹಾ ಸಂಗ್ರಹಾಲಯ ಹಾಗೂ ಪಿಕ್ನಿಕ್ ಮಾಡಲು ಅನುಕೂಲಕರವಾದ ಸ್ಥಳಗಳು ಇಲ್ಲಿರುವುದರಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Veera.sj

ವಿಸ್ಮಯಕರ ಶಿಲಾ ರಚನೆಗಳು:

ವಿಸ್ಮಯಕರ ಶಿಲಾ ರಚನೆಗಳು:

ಇನ್ನೊಂದು ವಿಶೇಷವೆಂದರೆ ಇಲ್ಲಿನ ಕಲ್ಲುಬಂಡೆಗಳಲ್ಲಿ ಪ್ರಾಚೀನ ಶಿಲಾಯುಗದ ವರ್ಣಕಲೆಯಿರುವ ಬಂಡೆಗಳನ್ನೂ ಸಹ ಕಾಣಬಹುದಾಗಿದ್ದು ಪುರಾತತ್ವ ಶಾಸ್ತ್ರಜ್ಞರಲ್ಲಿ ಕುತೂಹಲ ಕೆರಳಿಸುತ್ತದೆ.

ಚಿತ್ರಕೃಪೆ: Poreddy Sagar

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more